ಛೋಲೆ ಭಟುರೆ ಎಣ್ಣೆಯುಕ್ತ ಆಹಾರ. ತೂಕ ಹೆಚ್ಚಾಗುತ್ತೆ ಎನ್ನುವ ಕಾರಣಕ್ಕೆ ಅನೇಕರು ಅದ್ರಿಂದ ದೂರ ಇರ್ತಾರೆ. ಆದ್ರೆ ಇಲ್ಲೊಂದು ರೆಸ್ಟೋರೆಂಟ್ ಛೋಲೆ ಭಟುರೆ ವೇಟ್ ಲಾಸ್ ಮಾಡೋದಲ್ಲದೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಿದೆ.
ಫಿಟ್ನೆಸ್ ಹಾಗೂ ಆರೋಗ್ಯಕ ಜೀವನಕ್ಕೆ ಉತ್ತರ ಆಹಾರ ಸೇವನೆ ಮಾಡೋದು ಬಹಳ ಮುಖ್ಯ. ಹಣ್ಣು, ತರಕಾರಿ ಸೇರಿದಂತೆ ಪೌಷ್ಟಿಕಾಂಶದ ಆಹಾರ ಸೇವನೆ ಮಾಡುವಂತೆ ತಜ್ಞರು ಸಲಹೆ ನೀಡ್ತಾರೆ. ಎಣ್ಣೆಯಲ್ಲಿ ಕರಿದ ಆಹಾರ ತೂಕ ಹೆಚ್ಚಿಸುವ ಕಾರಣ ಅದ್ರಿಂದ ದೂರವಿರುವಂತೆ ವೈದ್ಯರು ಸೂಚನೆ ನೀಡ್ತಿರುತ್ತಾರೆ. ಆದ್ರೆ ಜನರು ಬಾಯಿರುಚಿಗೆ ಹೆಚ್ಚು ಆದ್ಯತೆ ನೀಡ್ತಾರೆ. ಇದು 100 ಪ್ರತಿಶತ ನೈಸರ್ಗಿಕ ಹಾಗೂ ಆರ್ಗನಿಕ್ ಎಂದಾಗ ಜನರು ಹೆಚ್ಚು ಸೇವನೆ ಮಾಡ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಅನೇಕ ಕಂಪನಿಗಳು ಆಹಾರ ಮಾರಾಟ ಮಾಡ್ತಿದೆ. ಈ ಮಧ್ಯೆ ಇಲ್ಲೊಂದು ಹೊಟೇಲ್ ಎಲ್ಲರ ಗಮನ ಸೆಳೆದಿದೆ.
ಚೋಲೆ ಭಟುರೆ (Chole Bhature) ದೆಹಲಿ ಜನರ ಫೆವರೆಟ್ ಆಹಾರ. ಅದೇನೇ ಬಿಸಿಲಿರಲಿ, ಚಳಿ ಇರಲಿ, ಮಳೆ ಬೀಳ್ತಿರಲಿ, ನಾವು ಹೊಟೇಲ್ ಗೆ ಹೋಗಿ ದೋಸೆ ಆರ್ಡರ್ ಮಾಡಿದಂತೆ ದೆಹಲಿ ಜನರು ಚೋಲೆ ಭಟುರೆ ಆರ್ಡರ್ ಮಾಡ್ತಾರೆ. ಚೋಲೆ ಭಟುರೆಗೆ ಕೆಲ ಹೊಟೇಲ್ (Hotel) ಗಳು ಪ್ರಸಿದ್ಧಿ ಪಡೆದಿವೆ. ಕೆಲ ಪ್ರಸಿದ್ಧ ಹೊಟೇಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡ್ತಿರುತ್ತವೆ. ಬಳಕೆದಾರರು ಎಲ್ಲೆಲ್ಲಿ ದಿ ಬೆಸ್ಟ್ ಚೋಲೆ ಭಟುರೆ ಸಿಗುತ್ತೆ ಅಂತ ಜನರಿಗೆ ತಿಳಿಸುವ ಪ್ರಯತ್ನ ಮಾಡ್ತಾರೆ. ಆದ್ರೆ ಈ ಹೊಟೇಲ್ ರುಚಿಗಲ್ಲ, ಹೊಟೇಲ್ ಮುಂದಿರುವ ಬೋರ್ಡ್ ನಿಂದಾಗಿ ಚರ್ಚೆಗೆ ಬಂದಿದೆ.
undefined
ರುಚಿ ರುಚಿ ಆಹಾರವಿದ್ರೂ ಒಬ್ಬರೂ ಬರ್ಲಿಲ್ಲ, ಭಾರತೀಯ ಬಾಣಸಿಗನಿಗೆ ನೆಟ್ಟಿಗರ ಬೆಂಬಲ
ಗ್ರಾಹಕರನ್ನು ಸೆಳೆಯಲು ರೆಸ್ಟೋರೆಂಟ್ (Restaurant) ಗಳಿ ಭಿನ್ನ ಆಫರ್ ಗಳನ್ನು ಆಗಾಗ ನೀಡ್ತಿರುತ್ತವೆ. ಒಂದಕ್ಕೆ ಒಂದು ಫ್ರೀ, ಬೈ ಟು ಗೆಟ್ ಒನ್ ಫ್ರೀ ಸೇರಿದಂತೆ ನಾನಾ ಆಫರ್ ಗಳನ್ನು ನೀವು ನೋಡ್ಬಹುದು. ಆದ್ರೆ ಈ ಹೊಟೇಲ್ ಆಫರ್ ನೀಡುವ ಬದಲು ತೂಕ ಇಳಿಸುವ ಭರವಸೆ ನೀಡಿದೆ.
@psychedelhic ಹೆಸರಿನ ಎಕ್ಸ್ ಖಾತೆಯಲ್ಲಿ ಈ ರೆಸ್ಟೋರೆಂಟ್ ಫೋಟೋ ವೈರಲ್ ಆಗಿದೆ. ಗೋಪಾಲ್ ಜಿ ಈ ಹೊಟೇಲ್ ಹೆಸರು. ಇದು ದೆಹಲಿಯ ಗೋವಿಂದಪುರಿಯಲ್ಲಿದೆ. ಈ ಹೊಟೇಲ್ ನಲ್ಲಿ ಚೋಲೆ ಭಟುರೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ದೂರದೂರುಗಳಿಂದ ಇಲ್ಲಿನ ಚೋಲೆ ಭಟುರೆ ತಿನ್ನಲು ಜನರು ಬರ್ತಾರೆ. ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಇಲ್ಲಿ ಬೋರ್ಡ್ ಹಾಕಲಾಗಿದೆ.
ಪೋಸ್ಟ್ ನಲ್ಲಿ ಏನಿದೆ? : ಗೋಪಾಲ್ ಜಿ ಅಂಗಡಿ ಮುಂದೆ ಹಾಕಿರುವ ಪೋಸ್ಟರ್ ನಲ್ಲಿ, ಚೋಲೆ ಭಟುರೆ ತಿನ್ನಿ, ತೂಕ ಇಳಿಸಿಕೊಳ್ಳಿ. ರೋಗಗಳಿಂದ ಮುಕ್ತಿ ಹೊಂದಿರೆ ಎಂದು ಬರೆಯಲಾಗಿದೆ. ಈ ಪೋಸ್ಟನ್ನು ಎಕ್ಸ್ ನಲ್ಲಿ ಹಂಚಿಕೊಂಡ ವ್ಯಕ್ತಿ, ದೆಹಲಿಯಲ್ಲಿ ಮಾತ್ರ ಇದನ್ನು ನಿರೀಕ್ಷಿಸಲು ಸಾಧ್ಯ. ಚೋಲೆ ಭಟುರೆ ತಿನ್ನಿ ತೂಕ ಇಳಿಸಿಕೊಳ್ಳಿ, ರೋಗದಿಂದ ದೂರವಿರಿ ಎಂದು ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. 60 ಸಾವಿರಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ವೀಕ್ಷಣೆ ಮಾಡಿದ್ದಾರೆ. ಅನೇಕರು ಇದನ್ನು ಲೈಕ್ ಮಾಡಿದ್ದಾರೆ. ಇದು ಆಸಕ್ತಿದಾಯಕವಾಗಿದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಚಿಕ್ಕಂದಿನಿಂದಲೂ ನಾನು ಇಲ್ಲಿಗೆ ಊಟಕ್ಕೆ ಹೋಗ್ತಿದ್ದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಕೆಲವರು ಈ ಅಂಗಡಿ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸಿಗುವ ಚೋಲೆ ಭಟುರೆ ನಿಷ್ಪ್ರಯೋಜಕ ಎಂದಿದ್ದಾರೆ.
ಅವಲಕ್ಕಿ ಅತ್ಯಂತ ಕೆಟ್ಟ ತಿಂಡಿ ಎಂದ ಯುವತಿಯನ್ನ ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಚೋಲೆ ಭಟುರೆಯನ್ನು ನಾನು ಆರನೇ ತರಗತಿಯಿಂದ ತಿನ್ನಲು ಶುರು ಮಾಡಿದ್ದೇನೆ. ಆಗ ಒಂದು ಪ್ಲೇಟ್ ಬೆಲೆ 7 ರೂಪಾಯಿ ಇತ್ತು. ಆದ್ರೀಗ 120 ರೂಪಾಯಿ ಆಗಿದೆ ಎಂದು ಮತ್ತೊಬ್ಬರು ಬೆಲೆ ಹೆಚ್ಚಳದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಬಾಬಾ ರಾಮ್ ದೇವ್ ಅವರ ಪತಂಜಲಿಯಿಂದ ಇವರು ಪ್ರಭಾವಿತರಾಗಿದ್ದಾರೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
Only in Delhi can you expect this 😂
Eat Chole Bhature, Lose Weight, Reduce Diseases 🫡🫡🫡 pic.twitter.com/ByIH4gsV5Y