ಅವಲಕ್ಕಿ ಅತ್ಯಂತ ಕೆಟ್ಟ ತಿಂಡಿ ಎಂದ ಯುವತಿಯನ್ನ ತರಾಟೆಗೆ ತೆಗೆದುಕೊಂಡ ನೆಟ್ಟಿಗರು

Poha: ಎಕ್ಸ್ ಖಾತೆಯಲ್ಲಿ ಪೋಹಾ (ಅವಲಕ್ಕಿ) ಫೋಟೋ (Poha Breakfast) ಹಂಚಿಕೊಂಡು ಇದು ಅತ್ಯಂತ ಕೆಟ್ಟ ತಿಂಡಿ (Breakfast Recipe) ಎಂದು ಬರೆದುಕೊಂಡಿದ್ದಾಳೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಯುವತಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. 

Netizens take class to girl who say poha is worst breakfast mrq

ಭಾರತ ಅಂದ್ರೆ ವೈವಿದ್ಯಮಯ ಸಂಸ್ಕೃತಿ (A diverse culture) ಇದರ ಜೊತೆಯಲ್ಲಿ ಭಾರತದ ಆಹಾರ ಪದ್ಧತಿ (Food Style) ಇಡೀ ವಿಶ್ವಕ್ಕೆ ಪರಿಚಯ. ಸ್ಥಳದಿಂದ ಸ್ಥಳಕ್ಕೆ ಇಲ್ಲಿಯ ಭಾಷೆ, ಸಂಸ್ಕೃತಿ, ಜೀವನಶೈಲಿ, ಆಹಾರ ಬದಲಾಗುತ್ತಿರುತ್ತದೆ. ಕೆಲವೊಂದು ತಿಂಡಿಗಳು ದೇಶದ ಎಲ್ಲಾ ಭಾಗಗಳಲ್ಲಿಯೂ ಸಿಗುತ್ತವೆ. ಇಡ್ಲಿ, ದೋಸೆ, ಸಮೋಸಾ, ಪರಾಟಾ, ಉಪ್ಪಿಟ್ಟು, ಪೋಹಾದಂತಹ ತಿಂಡಿಗಳು ಎವರ್‌ಗ್ರೀನ್. ಬಹುತೇಕರ ಎಲ್ಲರ ಮನೆಗಳಲ್ಲಿ ತಿಂಡಿ ಸಿದ್ಧವಾಗುತ್ತವೆ. ಯುವತಿಯೊಬ್ಬಳು ಎಕ್ಸ್ ಖಾತೆಯಲ್ಲಿ ಪೋಹಾ (ಅವಲಕ್ಕಿ) ಫೋಟೋ (Poha Breakfast) ಹಂಚಿಕೊಂಡು ಇದು ಅತ್ಯಂತ ಕೆಟ್ಟ ತಿಂಡಿ ಎಂದು ಬರೆದುಕೊಂಡಿದ್ದಾಳೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಯುವತಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. 

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಭಾಗದಲ್ಲಿ ಪೋಹಾ ಜನಪ್ರಿಯ ತಿಂಡಿಯಾಗಿದೆ. ಕರ್ನಾಟಕದ ಉತ್ತರ ಭಾಗದ ಎಲ್ಲಾ ಮನೆಗಳಲ್ಲಿಯೂ ಅವಲಕ್ಕಿ ಮಾಡುತ್ತಾರೆ. ಕಡಲೆಬೀಜ, ಉದ್ದಿನಬೇಳೆ ಸೇರಿದಂತೆ ಹಲವು ಸಾಮಾಗ್ರಿಗಳನ್ನು ಸೇರಿಸಿ ಅವಲಕ್ಕಿಯನ್ನು ಸಿದ್ಧಪಡಿಸಲಾಗುತ್ತದೆ. 

ರಾತ್ರಿ ಮಲಗುವ ಮುನ್ನ ಒಂದು ಬೆಳ್ಳುಳ್ಳಿ ಎಸಳು ತಿಂದ್ರೆ ದೇಹದಲ್ಲಾಗುವ ಬದಲಾವಣೆಗಳೇನು ಗೊತ್ತಾ?

ಪೋಹಾ ಪ್ರಿಯರ ನಡುವೆ ವಾದ-ಪ್ರತಿವಾದ

ಮುಸ್ಕಾನ್ ಎಂಬ ಯುವತಿ ಎಕ್ಸ್ ಖಾತೆಯಲ್ಲಿ ಇದಕ್ಕಿಂತ ಕೆಟ್ಟದಾದ ತಿಂಡಿ ಮತ್ತೊಂದು ಇದೆಯಾ ಎಂದು ಕೇಳಿದ್ದಾಳೆ. ಈ ಫೋಸ್ಟ್‌ಗೆ ಎರಡು ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ಪೋಹಾ ಪ್ರಿಯರು ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಯುವತಿಯ ಮಾತಿಗೆ ಸಮ್ಮತಿಯನ್ನು ಸೂಚಿಸಿದ್ದಾರೆ. 

ಮಟನ್ ಬೇಗ ಬೇಯಲ್ಲ ಅಂತ ಚಿಂತೆನಾ? ಬೇಯಿಸುವಾಗ ಈ ತಪ್ಪುಗಳನ್ನ ಮಾಡಬೇಡಿ!

ನೆಟ್ಟಿಗರು ಹೇಳಿದ್ದೇನು? 

ಓರ್ವ ಬಳಕೆದಾರ ನಿಮ್ಮ ಮಾತಿಗೆ ನನ್ನ ಸಮ್ಮತಿ ಇದೆ ಅಂದ್ರೆ ಮತ್ತೋರ್ವ ಬಳಕೆದಾರ ಇದೊಂದು ತುಂಬಾ ಒಳ್ಳೆಯ ತಿಂಡಿಯಾಗಿದ್ದು, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದಕ್ಕೆ ತೆಂಗಿನಕಾಯಿ ಚಟ್ನಿ ಅಥವಾ ಮೊಸರು ಜೊತೆ ತಿಂದ್ರೆ ಇದರ ರುಚಿ ಹೆಚ್ಚಾಗುತ್ತದೆ ಎಂದು ಸಲಹೆ ಸಹ ನೀಡಿದ್ದಾರೆ.

ಇನ್ನು ಕೆಲ ನೆಟ್ಟಿಗರು ಅಲ್ಲಿಯೇ ವಾದ-ಪ್ರತಿವಾದ ನಡೆಸಿದ್ದಾರೆ. ಕೆಲವರು ಪೋಹಾ ರೆಸಿಪಿಯನ್ನು ಹೇಳಿದ್ದಾರೆ. ಆಹಾರದಲ್ಲಿ ಹೆಚ್ಚು ಕಾರ್ಬ್ಸ್ ಬೇಕಿರೋರು ಪೋಹಾ ಸೇವಿಸಬಹುದು ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios