ನಟಿಯ ಹಾಟ್ ವಿಡಿಯೋ ಲೀಕ್ ; ಬಾಯ್‌ಫ್ರೆಂಡ್ ಆತ್ಮಹತ್ಯೆ

By Web DeskFirst Published Sep 17, 2018, 5:51 PM IST
Highlights

ಪ್ರಖ್ಯಾತ ತಮಿಳು ನಟಿಯೊಬ್ಬರು ತನ್ನ ಬಾಯ್ ಫ್ರೆಂಡ್ ಜತೆ ಇರುವ ಖಾಸಗಿ ಕ್ಷಣಗಳು ಲೀಕ್  ಆಗಿದೆ. ಇಡೀ ಕಾಲಿವುಡ್ ನಲ್ಲಿ ಈ ಸುದ್ದಿ ಸದ್ಯಕ್ಕೆ ಸದ್ದು ಮಾಡುತ್ತಿದೆ. ಆದರೆ ಇದರ ಹಿಂದೆ ಬೇರೆಯದ್ದೇ ಆದ ಕತೆ ಇದೆ? ಏನಪ್ಪಾ ಅಂತೀರಾ? ಅತ್ತ ಆಕೆಯ ಲವರ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚೆನ್ನೈ[ಸೆ.17] ಪೊಲೀಸರ ವಿರುದ್ಧ ಮಾತನಾಡಿದ್ದ ತಮಿಳು ಕಿರುತೆರೆ ಮತ್ತು ಹಿರಿತೆರೆ ನಟಿ ನಿಳನಿ ತಮ್ಮ ಬಾಯ್ ಫ್ರೆಂಡ್ ಜತೆ ಕಳದೆ ಖಾಸಗಿ ಕ್ಷಣಗಳ ಫೋಟೋ ಲೀಕ್ ಆಗಿದೆ.ಇನ್ನೊಂದೆಡೆ ನಿಳನಿ ಜತೆ ಲಿವಿಂಗ್ ಟು ಗೆದರ್ ನಲ್ಲಿ ಇದ್ದ ಲಲಿತ್ ಕುಮಾರ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಟಿವಿ ಸೀರಿಯಲ್ ಗೆ ಅಸಿಸ್ಟೆಂಟ್  ಡೈರಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಲಲಿತ್ ಕುಮಾರ್ ಚೆನ್ನೈ ಕೆಕೆ ನಗರದಲ್ಲಿ ವಾಸವಿದ್ದರು. ನಟಿ ನಿಳನಿ ಶೂಟಿಂಗ್ ಬೇರೆ ಕಡೆ ನಡೆಯುತ್ತಿದ್ದು ಲಲಿತ್ ಅಲ್ಲಿಗೆ ಹೋಗಿದ್ದಾರೆ. ಹೋಗಿ ಆಕೆಯನ್ನು ನಾವು ಮದುವೆಯಾಗೋಣ ಎಂದು ಕೇಳಿಕೊಂಡಿದ್ದಾರೆ.  ಇದಕ್ಕೆ ನಟಿ ಒಪ್ಪಿಲ್ಲ. ಇಬ್ಬರ ನಡುವೆ ದೊಡ್ಡ ವಾಗ್ಯುದ್ಧ ನಡೆದಿದಿಎ.

ಇದಾದ ಮೇಲೆ ಲಲಿತ್ ಕುಮಾರ್ ವಿರುದ್ಧ ನಟಿಮ ಪೊಲೀಸರಿಗೆ ದೂರು ನೀಡಿದ್ದಾರೆ. ನೊಂದಿದ್ದ ಲಲಿತ್ ಕುಮಾರ್ ಕೆಕೆ ನಗರ್ ಪೊಲೀಸ್ ಸ್ಟೇಶನ್ ಎದುರೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಇದೇ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನಟಿ ಮತ್ತು ಲಲಿತ್ ಕುಮಾರ್ ನಡುವಿನ ಖಾಸಗಿ ಕ್ಷಣಗಳು ಹರಿದಾಡುತ್ತಿವೆ. 

ಲೀಕ್ ಆದ ವಿಡಿಯೋದಲ್ಲಿ ಏನಿದೆ

"

 

click me!