ನಮ್ಮಪ್ಪ ಭಲೇ ರಸಿಕ; ನಾನು 9ನೇ ಮಗನೆಂದ ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್

By Sathish Kumar KHFirst Published Apr 23, 2024, 6:58 PM IST
Highlights

ನಮ್ಮಪ್ಪನ ಮೊದಲ ವೃತ್ತಿಯೇ ರಸಿಕತೆ ಇರಬೇಕು.. ಹೋಟ್ಲು, ಗದ್ದೆ ಇದ್ದರೂ 9 ಮಕ್ಕಳನ್ನು ಮಾಡಿದ್ದಾರೆ ಎಂದು ನಿರ್ದೇಶಕ ಹಾಗೂ ಗೀತೆ ರಚನೆಕಾರ ಯೋಗರಾಜ್ ಭಟ್ ಹೇಳಿಕೊಂಡಿದ್ದಾರೆ.

ಬೆಂಗಳೂರು (ಏ.23): ನನ್ನ ನಕ್ಷತ್ರ, ಕುಲ, ಗೋತ್ರ ಯಾವುದು ಅಂತಾ ನಂಗೆ ಗೊತ್ತಿಲ್ಲ. ಯಾವ ಫಿಲ್ಮ್ ನೊಡಿ, ಯಾವ ಮೂಡಲ್ಲಿ ಏನು ಮಾಡಿ ಮಕ್ಕಳು ಹುಟ್ಟಿಸಿದ್ದಾರೋ ತನ್ನ ತಂದೆ ತಾಯಿಯನ್ನೇ ಕೇಳಬೇಕು. ನಮ್ಮಪ್ಪನ ಮೊದಲ ವೃತ್ತಿಯೇ ರಸಿಕತೆ ಇರಬೇಕು.. ಹೋಟ್ಲು, ಗದ್ದೆ ಇದ್ದರೂ 9 ಮಕ್ಕಳನ್ನು ಮಾಡಿದ್ದಾರೆ ಎಂದು ನಟ, ನಿರ್ದೇಶಕ, ಗೀತೆ ರಚನೆಕಾರ ಯೋಗರಾಜ್ ಭಟ್ ಹೇಳಿಕೊಂಡಿದ್ದಾರೆ.

ಕೀರ್ತಿ ಇಎನ್‌ಟಿ ಕ್ಲಿನಿಕ್‌ ಯ್ಯೂಟ್ಯೂಬ್‌ ಚಾನೆಲ್‌ನಲ್ಲಿ ನಡೆಸಲಾದ ಸಂದರ್ಶನದಲ್ಲಿ ಯೋಗರಾಜ್ ಭಟ್ ಮುಕ್ತವಾಗಿ ಮಾತನಾಡಿದ್ದಾರೆ. ನಿಮ್ಮ ನಕ್ಷತ್ರ, ಕುಲ ಗೋತ್ರ ಯಾವುದು ಹೇಳಿ? ನೀವು ಹುಟ್ಟಿದ ದಿನಾಂಕ ನಕ್ಷತ್ರವನ್ನು ನೋಡಿ ಕೆಲವರು ಮಕ್ಕಳು ಮಾಡಿಕೊಳ್ಳುತ್ತಾರೆ ಎಂದು ಕೀರ್ತಿ ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಯೋಗರಾಜ್ ಭಟ್ ಅವರು, ಯಾವ ಫಿಲ್ಮ್ ನೊಡಿ, ಯಾವ ಮೂಡಲ್ಲಿ ಏನು ಮಾಡಿ ಮಕ್ಕಳು ಹುಟ್ಟಿಸಿದ್ದಾರೋ ತನ್ನ ತಂದೆ ತಾಯಿಯನ್ನೇ ಕೇಳಬೇಕು. ಈಗ ಅವರಿಬ್ಬರೂ ಇಲ್ಲ. ನಾನು ನಮ್ಮಪ್ಪನಿಗೆ 9ನೇ ಶಿಶು ನಾನು. ನಮ್ಮಪ್ಪನ ಮೊದಲ ವೃತ್ತಿಯೇ ರಸಿಕತೆ. ಅವರಿಗೆ ಹೋಟ್ಲು, ಗದ್ದೆ ಎಲ್ಲವೂ ಇದ್ದರೂ ಮಕ್ಕಳು ಮಾಡುವುದೇ ಅವರ ಮುಖ್ಯ ವೃತ್ತಿ ಆಗಿತ್ತು ಎನಿಸುತ್ತದೆ. ಆದರೆ, ಅಂದಿನವರಿಗೆ ಇದೇ ಪ್ರಮುಖ ವೃತ್ತಿ ಆಗಿತ್ತು ಎನಿಸುತ್ತದೆ ಎಂದು ಹೇಳಿದರು.
ರಮ್ಯಾ ಔಟ್ ಆಗುತ್ತಿದ್ದಂತೆ ಐಶ್ವರ್ಯ ರಾಜೇಶ್‌ ಎಂಟ್ರಿ; ಧನಂಜಯ್ ಜೋಡಿ ಸೂಪರ್ ಎಂದ ನೆಟ್ಟಿಗರು

ನಮ್ಮ ಒಡಹುಟ್ಟಿದವರಲ್ಲಿ ನಾವು ಒಟ್ಟು 5 ಮಂದಿ ಗಂಡು ಮಕ್ಕಳು. ಅದರಲ್ಲಿ ಬದುಕುಳಿದಿದ್ದು ಮೂವರು. ಇತ್ತೀಚೆಗೆ ಇಬ್ಬರು ಅಣ್ಣಂದಿರು ಕೂಡ ತೀರಿಕೊಂಡಿದ್ದು, ನಾನೊಬ್ಬ ಮಾತ್ರ ಇದ್ದೇನೆ. ಇನ್ನು ಅಕ್ಕಂದಿರು ಇದ್ದಾರೆ. ಅವರಲ್ಲಿ ಅಕ್ಕಂದಿರು ಕೂಡ ಕನ್ನಡ ಸಾಹಿತ್ಯಿಕವಾಗಿ ತುಂಬಾ ತಿಳಿದುಕೊಂಡಿದ್ದಾರೆ. ನಮ್ಮ ಅಕ್ಕಂದಿರು ಕನ್ನಡ ಅಧ್ಯಯನ ಮಾತ್ರವಲ್ಲದೇ ಬೇರೆ ಏನೇನೇನೋ ಸಾಹಿತ್ಯಿಕ ಪುಸ್ತಕಗಳು ಮನೆಯಲ್ಲಿದ್ದವು. ನಮ್ಮ ಇಡೀ ಕುಟುಂಬದಲ್ಲಿ ಕನ್ನಡ ಸಾಹಿತ್ಯಕ್ಕೆ ಕೊರತೆಯೇನಿರಲಿಲ್ಲ ಎಂದು ಯೋಗರಾಜ್ ಭಟ್ ತಿಳಿಸಿದರು.

ನಾನು ಈವರೆಗೆ ಸುಮಾರು 200 ಹಾಡುಗಳನ್ನು ಬರೆದಿದ್ದೇನೆ. ನನ್ನ ಸಿನಿಮಾಗಳಿಗೆ 40ರಿಂದ 50 ಹಾಡುಗಳನ್ನು ಬರೆದಿದ್ದೇನೆ. ಉಳಿದಂತೆ ಎಲ್ಲ ಹಾಡುಗಳನ್ನು ಬೇರೆ ಸಿನಿಮಾಗಳಿಗೆ ಬರೆದು ಕೊಟ್ಟಿದ್ದೇನೆ. ಎಲ್ಲ ಹಾಡುಗಳಿಗೂ ಕೂಡ ಇನ್ನೂ ಸ್ವಲ್ಪ ಸಮಯ ಕೊಟ್ಟಿದ್ದರೆ ಹಾಡುಗಳನ್ನು ಇನ್ನೂ ಸ್ವಲ್ಪ ಉತ್ತಮ ಮಾಡಬಹುದಾಗಿತ್ತು ಎಂದು ಎನಿಸುತ್ತದೆ. ಎಡಿಟ್ ಮಾಡಿದ ನಂತರವೂ ಮಿಸ್ಟೇಕ್ ಆಗಿರುವುದು ಕಂಡುಬಂದಿದೆ ಎಂದಿದ್ದಾರೆ.

ಸ್ವಂತ ಮನೆ ಕಟ್ಟಿಸಿ ಇದ್ದ ಸ್ವಲ್ಪ ದಿನಕ್ಕೆ ಮಾರಿಬಿಟ್ಟೆ, ಯಾರೊಂದಿಗೂ ಹೇಳಿಕೊಂಡಿಲ್ಲ: ಪಾಪ ಪಾಂಡು ಚಿದಾನಂದ ಭಾವುಕ

ಅತಿ ಕಡಿಮೆ ಸಮಯದಲ್ಲಿ ಹಾಡು ಬರೆದಿದ್ದು ಎಂದರೆ 8-10 ನಿಮಿಷಗಳಲ್ಲಿ ಬರೆದಿದ್ದೇನೆ. ಇನ್ನು ಕೆಲವೊಂದು ಬಾರಿ ಫೋನಿನಲ್ಲಿ ಮಾತನಾಡುವಾಗಲೇ ರಿಯಲ್‌ ಟೈಮ್‌ನಲ್ಲಿ ಹಾಡನ್ನು ಬರೆದಿದ್ದೇನೆ. ಕೆಲವೊಂದು ಬಾರಿ ಎಷ್ಟೇ ಪ್ರಯತ್ನ ಮಾಡಿದರೂ ಹಾಡು ಹುಟ್ಟುವುದಿಲ್ಲ. ಕೆಲವೊಂದಕ್ಕೆ ತುಂಬಾ ದಿನಗಳ ಕಾಲ ರಿಪೇರಿ ಮಾಡಿ ಮಾಡಿ ಹಾಡನ್ನು ಬರೆದಿದ್ದೇನೆ. ತುಂಬಾ ಫೋಕಸ್‌ ಆಗಿ ಹಾಡು ಬರೆಯುತ್ತಿದ್ದೇನೆ. ನಾವು ಹಾಡು ಬರೆದು ಕೊಟ್ಟಿರುವುದಕ್ಕೆ ದುಡ್ಡು ಕೊಡ್ತಾರೆ ಅಲ್ವಾ? ಅದಕ್ಕೆ ಫೋಕಸ್ ಕೂಡ ಹೆಚ್ಚಾಗಿ ಮಾಡಲೇಬೇಕು ಎಂದು ಯೋಗರಾಜ್ ಭಟ್ ಹೇಳಿಕೊಂಡಿದ್ದಾರೆ.

click me!