ಧೂಳೆಬ್ಬಿಸಿದ ಕೆಜಿಎಫ್: ರೀನಾ ಮನದಾಳದ ಮಾತು

Jan 7, 2019, 4:50 PM IST

ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ ಕೆಜಿಎಫ್. ಚಿತ್ರರಂಗದ ಇತಿಹಾಸದಲ್ಲೇ ಹೊಸ ಶಕೆ ಶುರು ಮಾಡಿದೆ ಕೆಜಿಎಫ್. ಯಾರೂ ನಿರೀಕ್ಷಿಸಿರದ ಮಟ್ಟಿದೆ ಧೂಳೆಬ್ಬಿಸಿದೆ. ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ ವುಡ್ಡನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. ಮೊದಲ ಚಿತ್ರವೇ ಸೂಪರ್ ಡೂಪರ್ ಹಿಟ್ ಆಗಿದೆ. ಹೊಸ ವರ್ಷದ ಹರುಷವನ್ನು, ಕೆಜಿಎಫ್ ಯಶಸ್ಸಿನ ಖುಷಿಯನ್ನು ಶ್ರೀನಿಧಿ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.