ಅಪ್ಪ ಶಾರುಖ್‌ ಬಗ್ಗೆ ಕೇಳಿದ ಪ್ರಶ್ನೆಗೇ ತಪ್ಪು ಉತ್ತರ ನೀಡಿದ ಮಗಳು ಸುಹಾನಾ

By Anusha KbFirst Published Dec 17, 2023, 10:57 AM IST
Highlights

ಸುಹಾನಾ ಖಾನ್ ಇತ್ತೀಚೆಗೆ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 15ರಲ್ಲಿ ಭಾಗವಹಿಸಿದ್ದರು, ತಮ್ಮ ಆರ್ಕೀಸ್ ತಂಡದೊಂದಿಗೆ ಈ ಶೋಗೆ ಆಗಮಿಸಿದ ಅವರು ತಮ್ಮ ತಂದೆ ಶಾರುಖ್ ಖಾನ್ ಬಗ್ಗೆ ಈ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ತಪ್ಪು ಉತ್ತರ ನೀಡುವ ಮೂಲಕ ನೆರೆದಿದ್ದ ವೀಕ್ಷಕರನ್ನು, ಹಾಗೂ ಕಾರ್ಯಕ್ರಮ ನಡೆಸಿಕೊಡುವ ಬಾಲಿವುಡ್ ದಿಗ್ಗಜ ನಟ ಅಮಿತಾಭ್ ಬಚ್ಚನ್‌ರನ್ನು ಅಚ್ಚರಿಗೆ ದೂಡಿದರು.

ಇತ್ತೀಚೆಗೆ ಆರ್ಕಿಸ್ ಸಿನಿಮಾ ಮೂಲಕ ಬಾಲಿವುಡ್‌ಗೆ ಚೊಚ್ಚಲ ಎಂಟ್ರಿ ಕೊಟ್ಟಿರುವ ಸ್ಟಾರ್ ಕಿಡ್‌, ಬಾಲಿವುಡ್ ಬಾದ್‌ಶಾ ಶಾರುಖ್‌ ಖಾನ್‌  ಹಾಗೂ ಇಂಟಿರಿಯರ್ ಡಿಸೈನರ್ ಗೌರಿ ದಂಪತಿ ಪುತ್ರಿ ಸುಹಾನಾ ಖಾನ್ ಇತ್ತೀಚೆಗೆ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 15ರಲ್ಲಿ ಭಾಗವಹಿಸಿದ್ದರು, ತಮ್ಮ ಆರ್ಕೀಸ್ ತಂಡದೊಂದಿಗೆ ಈ ಶೋಗೆ ಆಗಮಿಸಿದ ಅವರು ತಮ್ಮ ತಂದೆ ಶಾರುಖ್ ಖಾನ್ ಬಗ್ಗೆ ಈ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ತಪ್ಪು ಉತ್ತರ ನೀಡುವ ಮೂಲಕ ನೆರೆದಿದ್ದ ವೀಕ್ಷಕರನ್ನು, ಹಾಗೂ ಕಾರ್ಯಕ್ರಮ ನಡೆಸಿಕೊಡುವ ಬಾಲಿವುಡ್ ದಿಗ್ಗಜ ನಟ ಅಮಿತಾಭ್ ಬಚ್ಚನ್‌ರನ್ನು ಕೂಡ ಅಚ್ಚರಿಗೆ ತಳ್ಳಿದ್ದರು. ಅಪ್ಪನ ಬಗ್ಗೆ ಕೇಳಿದ ಈ ಪ್ರಶ್ನೆಗೆ ಈಕೆ ನೀಡಿದ ತಪ್ಪು ಉತ್ತರದಿಂದ ಅಮಿತಾಭ್ ಅಚ್ಚರಿಗೊಂಡು ಆಕೆಯನ್ನು ನೋಡುವ ದೃಶ್ಯ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ.

ಸುಹಾನಾಗೆ ಕೇಳಿದ ಪ್ರಶ್ನೆ ಏನು ?

ಕೌನ್ ಬನೇಗಾ ಕರೋಡ್‌ಪತಿ ಸೀಸನ್‌ನ ಸೂಪರ್ ಸೂಪರ್ ಸ್ಯಾಂಡೂಕ್ ವಿಭಾಗದಲ್ಲಿ ಅಮಿತಾಭ್ ಬಚ್ಚನ್ ಅವರು ಸುಹಾನಾಗೆ, ಶಾರುಖ್ ಖಾನ್ ಇದುವರೆಗೆ ಸ್ವೀಕರಿಸದ ಪ್ರಶಸ್ತಿ ಅಥವಾ ಗೌರವ ಯಾವುದು ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರದ ಆಯ್ಕೆಯಾಗಿ ಎ) ಪದ್ಮಶ್ರೀ, ಬಿ) ಲೀಜನ್ ಆಫ್ ಆನರ್, ಸಿ)L'Etoile d'Or ಡಿ) ವೊಲ್ಪಿ ಕಪ್ ಎಂದು ಆಯ್ಕೆಗಳನ್ನು ನೀಡಿದ್ದರು. ಆದರೆ ಇದಕ್ಕೆ ಸುಹಾನಾ ಖಾನ್ ತಪ್ಪಾಗಿ ಪದ್ಮಶ್ರೀ ಎಂದು ಉತ್ತರಿಸಿ ಅಮಿತಾಭ್ ಬಚ್ಚನ್ ಅವರನ್ನು ಬೆಚ್ಚಿ ಬೀಳಿಸಿದ್ದಳು. ಈ ಪ್ರಶ್ನೆಗ ಸರಿಯಾದ ಉತ್ತರ ಡಿ) ವೊಲ್ಫಿ ಕಪ್ ಆಗಿತ್ತು. 

ದಿ ಆರ್ಚೀಸ್‌ನಲ್ಲಿ ನಟಿಸಿರುವ ಈ ಸೆಲೆಬ್ರೆಟಿ ಕಿಡ್ಸ್‌ ಓದಿರೋದು ಎಷ್ಷು ಗೊತ್ತಾ?

ಸುಹಾನಾ ಹೀಗೆ ತಪ್ಪಾಗಿ ಉತ್ತರಿಸಿದ್ದನ್ನು ನೋಡಿ ಆರ್ಕೀಸ್ ಕೋ ಸ್ಟಾರ್ ವೇದಾಂಗ್ ರೈನಾ ಆಕೆ ಮೇಲೆ ಅಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪ್ರಶ್ನೆಗೆ ನೀನು ತಪ್ಪಾಗಿ ಉತ್ತರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.  ಅಲ್ಲದೇ ಅಮಿತಾಭ್ ಬಚ್ಚನ್ ಕೂಡ ಪ್ರತಿಕ್ರಿಯಿಸಿದ್ದು, ಅಪ್ಪನಿಗೆ ಏನು ಸಿಕ್ಕಿದೆ ಎಂಬುದು ಮಗಳಿಗೂ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ನಿನ್ನ ಎದುರಿಗೆ ಕುಳಿತು ಪ್ರಶ್ನೆ ಕೇಳುವ ವ್ಯಕ್ತಿ ನನ್ನ ತಂದೆಯ ಪಾತ್ರವನ್ನು ನಿರ್ವಹಿಸಿದ್ದರು ಅವರಿಗೆ ಸುಲಭವಾದ ಪ್ರಶ್ನೆಗಳನ್ನು ಕೇಳಲು ಹೇಳು ಎಂದು ಹೇಳಿ ಅಪ್ಪ ತನ್ನ ಮಗಳನ್ನು ಇಲ್ಲಿಗೆ ಕಳುಹಿಸಿದ್ದಾರೆ. ಈಗ ನಾನು ಸುಲಭದ ಪ್ರಶ್ನೆಯನ್ನೇ ಕೇಳಿದೆ. ಆದರೂ ನಿನಗೆ ಉತ್ತರ ಹೇಳಲು ಸಾಧ್ಯವಾಗಲಿಲ್ಲ ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ.

ಇದೇ ಶೋದಲ್ಲಿ ಅಮಿತಾಬ್ ಬಚ್ಚನ್ ಅವರು ಸುಹಾನಾಗೆ ಈ ಶೋಗೆ ಬರುವ ಮೊದಲು ನಿಮಗೆ ನಿಮ್ಮ ತಂದೆ ಶಾರುಖ್ ಖಾನ್ ನೀಡಿದ ಸಲಹೆ ಏನು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಸುಹಾನಾ, ನೀವು ನನ್ನ ತಂದೆಗೆ ಅಪ್ಪನ ಪಾತ್ರವನ್ನು ಮಾಡಿದ್ದೀರಿ ಎಂಬುದನ್ನು ನಿಮಗೆ ನೆನಪಿಸಿ, ಸುಲಭವಾದ ಪ್ರಶ್ನೆಗಳನ್ನು ಕೇಳಲು ಹೇಳು ಎಂದು ಹೇಳಿದರು ಎಂದು ಹೇಳಿದ್ದಾರೆ. ಅಂದಹಾಗೆ ಅಮಿತಾಭ್ ಬಚ್ಚನ್ ಅವರು, ಕಭಿ ಖುಷಿ  ಕಭಿ ಗಮ್ ಸಿನಿಮಾದಲ್ಲಿ ಶಾರುಖ್ ಖಾನ್ ತಂದೆಯ ಪಾತ್ರವನ್ನು ಮಾಡಿದ್ದರು. 

ಬಚ್ಚನ್ ಕುಟುಂಬದ ಮತ್ತೊಂದು ಕುಡಿ ಬಾಲಿವುಡ್‌ಗೆ: ತಾತ, ಮಾವಂಗೆ ಸಡ್ಡು ಹೊಡೀತಾನಾ ಅಗಸ್ತ್ಯ?

ಇದೇ ಶೋದಲ್ಲಿ ಅಮಿತಾಭ್ ಅವರು ಸುಹಾನಾಗೆ ಬಾಲಿವುಡ್‌ಗೆ ಅರ್ಕೀಸ್ ಸಿನಿಮಾ ಮೂಲಕ ಎಂಟ್ರಿ ಕೊಡುವ ಮೊದಲು ತಂದೆ ಶಾರುಖ್ ಖಾನ್ ಎಂತಹ ಸಲಹೆ ನೀಡಿದ್ದರು ಎಂದು ಕೇಳಿದ್ದಾರೆ, ಇದಕ್ಕೆ ಉತ್ತರಿಸಿದ ಆಕೆ ತಪ್ಪು ಉತ್ತರ ನೀಡಿರುವುದಕ್ಕೆ ನನಗೆ ಮುಜುಗರವಾಗುತ್ತಿದೆ , ನನ್ನ ತಂದೆ ತನಗೆ ಇಬ್ಬರ ಮಾತುಗಳನ್ನು ಕೇಳು ಎಂದಿದ್ದರು, ಒಂದು ನಿರ್ದೇಶಕರದ್ದು ಮತ್ತೊಂದು ನನ್ನ ಮನದ ಮಾತು  ಎಂದು ಹೇಳಿದ್ದರು ಎಂದು ಸುಹಾನಾ ಹೇಳಿದ್ದಾರೆ. 

ಸುಹಾನಾ ಅವರು ಝೋಯಾ ಅಖ್ತರ್ ಅವರ ನಿರ್ದೇಶನದ ಅರ್ಕೀಸ್‌ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಮಿಹಿರ್ ಅಹುಜಾ, ಅಗಸ್ತ್ಯ ನಂದಾ, ಡಾಟ್, ಖುಷಿ ಕಪೂರ್, ವೇದಾಂಗ್ ರೈನಾ, ಯುವರಾಜ್ ಮೆಂದಾ ಕೂಡ ಇದ್ದಾರೆ. 

“2005 mein Deviji, Shah Rukh Khan ji ko Padma Shree mila tha.”
The way Amitabh Bachchan schooled Suhana Khan 😭😂🤣 pic.twitter.com/G62O6X0RZn

— Anjali (@MsAnjaliB)

 

click me!