ಮಿಲೇನಿಯರ್​ ಮನೆಯಲ್ಲಿ UPS ಇಲ್ಲ ಅಂತ ಗೊತ್ತಿತ್ತು, ಸಿಸಿಟಿವಿನೂ ಇಲ್ವಾ? ಕಾಲೆಳೀತಿರೋ ನೆಟ್ಟಿಗರು

By Suchethana D  |  First Published Nov 17, 2024, 3:45 PM IST

ಅಮೃತಧಾರೆ ಸೀರಿಯಲ್​ನಲ್ಲಿ ಫೋನ್​ನಲ್ಲಿ ಬಾಂಬ್​ ಇಟ್ಟು ಹೋಗಿರೋದು ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ನೆಟ್ಟಿಗರ ಚರ್ಚೆಯೇ ಬೇರೆ!
 


ಸೀರಿಯಲ್​ಗಳಲ್ಲಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಕೆಲವೊಂದು ಕಪೋಕಲ್ಪಿತ ಘಟನೆಗಳನ್ನು ಸೃಷ್ಟಿ ಮಾಡುವುದು ಸಹಜವೇ. ಒಂದು ದೃಶ್ಯಕ್ಕೆ ಅನುಗುಣವಾಗಿ ಕೆಲವೊಮ್ಮೆ ವಾಸ್ತವಕ್ಕೆ ಹತ್ತಿರವಾಗಿರೋದನ್ನು ತೋರಿಸುವುದು ಉಂಟು. ಅದೇ ರೀತಿ ಇದೀಗ ಅಮೃತಧಾರೆ ಸೀರಿಯಲ್​ ವೀಕ್ಷಕರೂ ಆಡಿಕೊಳ್ಳುವಂತಾಗಿದೆ. ಮಧ್ಯಮ ವಯಸ್ಕರ ಪ್ರೀತಿಯ ಕಥಾಹಂದರವನ್ನು ತುಂಬಾ ನವೀರಾಗಿ ತೋರಿಸುತ್ತಿರೋ ಅಮೃತಧಾರೆ ಸೀರಿಯಲ್​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಸೀರಿಯಲ್​ ಇಂದಿಗೂ ಸದಾ ಟಾಪ್​ನ ಟಿಆರ್​ಪಿ ಉಳಿಸಿಕೊಂಡಿದ್ದು, ಇದೀಗ ರೋಚಕ ಘಟ್ಟವನ್ನು ತಲುಪಿದೆ.

ಮನೆಯೊಳಕ್ಕೆ ಇರುವ ಲ್ಯಾಂಡ್​ಲೈನ್​ನಲ್ಲಿ ಯಾರೋ ಬಾಂಬ್​ ಇಟ್ಟು ಹೋಗಿದ್ದಾರೆ. ಬೆದರಿಕೆ ಕರೆ ಇದಾಗಲೇ ಜೈದೇವ್​ ಮತ್ತು ಗೌತಮ್​ಗೆ ಬಂದಿದೆ. ಗೌತಮ್​ ಇದನ್ನು ತಮಾಷೆ ಎಂದುಕೊಂಡು ಸುಮ್ಮನಾಗಿದ್ದ. ಆದರೆ ಜೈದೇವ್​ ಕಳ್ಳನನ್ನು ಹಿಡಿದಿದ್ದಾನೆ. ಆತ ಫೋನ್​ನಲ್ಲಿ ಬಾಂಬ್​ ಇರುವ ವಿಷಯ ಬಾಯಿ ಬಿಟ್ಟಿದ್ದಾನೆ. ಅಷ್ಟೊತ್ತಿಗಾಗಲೇ ಭೂಮಿಕಾಗೆ ಅದೇ ಲ್ಯಾಂಡ್​ಲೈನ್​ಗೆ ಕರೆ ಬಂದಿದೆ.  ಆಕೆ ಅದನ್ನು ರಿಸೀವ್​ ಮಾಡಿದ್ದಾಳೆ. ಅಷ್ಟರಲ್ಲಿ ಬಂದಿರೋ ಜೈದೇವ್​ ಭೂಮಿಕಾಗೆ ವಿಷಯ ತಿಳಿಸಿ ಫೋನ್​ನಿಂದ ಕೈಯನ್ನು ತೆಗೆಯದಂತೆ ಎಚ್ಚರಿಸಿದ್ದಾನೆ. ಭೂಮಿಕಾ ಆತನಿಗೆ ದೂರ ಹೋಗುವಂತೆ ಹೇಳಿದರೂ, ಜೈದೇವ್​ ಅತ್ತಿಗೆಯ ಪ್ರಾಣವನ್ನು ಕಾಪಾಡುವುದಕ್ಕಾಗಿ ರಿಸ್ಕ್​ ತೆಗೆದುಕೊಂಡಿದ್ದಾನೆ. ನಂತರ ಜೈದೇವ್​ ಮತ್ತು ಭೂಮಿಕಾ ಸೇರಿ ಫೋನ್​ ಅನ್ನು ದೂರ ಎಸೆದು ಎಲ್ಲರನ್ನೂ ಕಾಪಾಡಿದ್ದಾನೆ. ಭೂಮಿಕಾ ಆಯ ತಪ್ಪಿ ಬಿದ್ದು ಏಟು ಮಾಡಿಕೊಂಡಿದ್ದಾಳೆ. ಮುಂದೇನಾಗುವುದೋ ಎನ್ನುವುದು ಸದ್ಯಕ್ಕಿರುವ ಕುತೂಹಲ.

Tap to resize

Latest Videos

undefined

ವಿಮೆಯ ಹಣಕ್ಕಾಗಿ ವಾಹನಗಳ ಮೇಲೆ ದಾಳಿ ಮಾಡ್ತಿತ್ತು ಈ ವಿಚಿತ್ರ ಕರಡಿ! ಹೀಗೊಂದು ಕುತೂಹಲದ ಘಟನೆ...

ಇದು ಸೀರಿಯಲ್​ ವಿಷಯವಾದ್ರೆ, ಮನೆಯೊಳಗೇ ಇದನ್ನೆಲ್ಲಾ ಮಾಡಿರುವವರು ಯಾರು ಎಂಬ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.  ಆದರೆ ಮಿಲೇನಿಯರ್​ ಮನೆಯಲ್ಲಿ ಸಿಸಿಟಿವಿ ಇಲ್ವಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಆಗಿತ್ತು. ಗೌತಮ್​ಗೆ ಕತ್ತಲು ಎಂದರೆ ಭಯ. ಆದ್ದರಿಂದ ಕರೆಂಟ್​ ಹೋದಾಗ ಹೆದರಿ ಭೂಮಿಕಾ ಹತ್ತಿರ ಹೋಗುತ್ತಿದ್ದ. ಭೂಮಿಕಾ ಮತ್ತು ಗೌತಮ್​ನನ್ನು ಒಂದು ಮಾಡಲು ಈ ದೃಶ್ಯ ತುರುಕಿದ್ದರೂ, ಹಾಸ್ಯಾಸ್ಪದ ಎನ್ನಿಸಿದ್ದು ಉಂಟು. ಮಿಲೇನಿಯರ್​ ಮನೆಯಲ್ಲಿ ಯುಪಿಎಸ್​ ಇಲ್ವಾ ಎಂದು ಹಲವರು ಪ್ರಶ್ನಿಸಿದ್ದರು. ಈಗಲೂ ಸಿಸಿಟಿವಿ ನೋಡಿದ್ರೆ ಯಾರು ಮಾಡಿದ್ದು ಎಂದು ಸುಲಭದಲ್ಲಿ ಗುರುತು ಹಿಡಿಯಬಹುದಲ್ವಾ ಎನ್ನುವುದು ಪ್ರಶ್ನೆ.

ಏಕೆಂದ್ರೆ, ಈ ಹಿಂದೆ ಗೌತಮ್​ ಭೂಮಿಕಾ ಅಕೌಂಟ್​ಗೆ 10 ಕೋಟಿ ರೂಪಾಯಿ ಹಾಕಿದ್ದ. ಇದನ್ನು ನೂರು ರೂಪಾಯಿ ಎನ್ನುವಂತೆ ಮಾತನಾಡಿದ್ದ. ಇಂಥ ಕೋಟ್ಯಧಿಪತಿ ಮನೆಯ ವಿಷಯದ ಶೂಟಿಂಗ್​ ಮಾಡುವಾಗ ನಿರ್ದೇಶಕರು ಸ್ವಲ್ಪ ತಲೆ ಉಪಯೋಗಿಸಿದರೆ ಒಳ್ಳೆಯದು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

ನನ್ನ ಅಕ್ಕನಿಗೆ ಬೆಂಕಿ ಹಚ್ಚಿ ಕೊಲ್ಲಲು ನೋಡಿದ್ರು: ಜಯಪ್ರದಾ ಕುಟುಂಬದ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ವಿಜಯಲಕ್ಷ್ಮಿ

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!