ಕನ್ನಡಪ್ರಭ ವಾರ್ತೆ ಬೀದರ್ / ಶಿವಮೊಗ್ಗ: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಹಾಕುವಂತೆ ಸೂಚಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಬೀದರ್ ಸಾಯಿ ಸ್ಪೂರ್ತಿಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲೊಪ್ಪದೆ ಸಿಇಟಿ ಗಣಿತ ಪರೀಕ್ಷೆಯಿಂದಲೇ ಹೊರಗುಳಿದಿದ್ದು, ಆತನ ಎಂಜಿ ನಿಯರಿಂಗ್ ಕನಸು ಭಗ್ನಗೊಂಡಿದೆ. ಹಾಗೆಯೇ ಶಿವಮೊಗ್ಗದಲ್ಲಿ ಜನಿವಾರಕ್ಕೆ ಕತ್ತರಿ ಹಾಕಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಇದು ಬ್ರಾಹ್ಮಣ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಏನಿದು ಜನಿವಾರ ಗದ್ದಲ?
ಜನಿವಾರ ಧರಿಸಿ ಬುಧವಾರ ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ ಬೀದರ್ ವಿದ್ಯಾರ್ಥಿ, ಗುರುವಾರದ ಗಣಿತ ಪರೀಕ್ಷೆಗೆ ಬಂದಾಗ ಜನಿವಾರ ನೋಡಿ ಪರೀಕ್ಷಾ ಸಿಬ್ಬಂದಿಯಿಂದ ಆಕ್ಷೇಪ, ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಪರೀಕ್ಷೆ ಬರೆಯಲು ನಿರಾಕರಣೆ. ಅಂಗಲಾಚಿದರೂ ಬಿಡದ ಸಿಬ್ಬಂದಿ ಪರೀಕ್ಷೆಯಿಂದಲೇ ದೂರ ಉಳಿದ ವಿದ್ಯಾರ್ಥಿ. ಎಂಜಿನಿಯರಿಂಗ್ ಪ್ರವೇಶಾವಕಾಶದಿಂದ ವಂಚಿತ

10:41 PM (IST) Apr 18
ಆರ್‌ಸಿಬಿಗೆ ತವರಿನ ಪಂದ್ಯಗಳು ನಿದ್ದೆ ಬಾರದ ರಾತ್ರಿಗಳಾಗುತ್ತಿದೆ. ತವರಿನ ಕಳೆದೆರಡು ಪಂದ್ಯ ಸೋತಿರುವ ಆರ್‌ಸಿಬಿ ಈ ಬಾರಿ ಅತೀವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿದೆ. ಆದರೆ 6 ವಿಕೆಟ್ ಕಳೆದುಕೊಂಡು ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ.
ಪೂರ್ತಿ ಓದಿ10:40 PM (IST) Apr 18
ರೈತರ ಅಭ್ಯುದಯದ ದೃಷ್ಟಿಯಿಂದ ಹಲವಾರು ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರಿಗೆ ಇಸ್ರೇಲ್ ಮಾದರಿ ಕೃಷಿಗೆ ಪೂರಕ ಸೌಲಭ್ಯಗಳನ್ನು ಒದಗಿಸುವುದು ಉತ್ತಮ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಪೂರ್ತಿ ಓದಿ10:40 PM (IST) Apr 18
ಪೊಲೀಸ್ ಠಾಣೆಯೊಳಗೆ ಆನೆ ಪ್ರವೇಶಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಪೂರ್ತಿ ಓದಿ10:31 PM (IST) Apr 18
ಮೈಸೂರು ಜಿಲ್ಲೆ ಅಭಿವೃದ್ಧಿಯಾದಂತೆ ಬೀದರ್ ಜಿಲ್ಲೆಯನ್ನೂ ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ ಅದಕ್ಕಾಗಿ ಸಾವಿರಾರು ಕೋಟಿ ರು.ಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಬೀದರ್ ಜಿಲ್ಲೆಗೆ ನೀಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಪೂರ್ತಿ ಓದಿ10:11 PM (IST) Apr 18
ಜಾಗತಿಕ ಭಾರತೀಯ ಪ್ರವಾಸಿ ಕಬಡ್ಡಿ ಲೀಗ್ ಟೂರ್ನಿಯ ಸಂಪೂರ್ಣ ತಂಡ ಹಾಗೂ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ.
ಪೂರ್ತಿ ಓದಿ09:51 PM (IST) Apr 18
ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಪಂದ್ಯ 20 ಓವರ್ ಬದಲು 14 ಓವರ್‌ಗೆ ಸೀಮಿತಗೊಳಿಸಲಾಗಿದೆ. ಆದರೆ ಆತಂಕ ಎಂದರೆ ತವರಿನಲ್ಲಿ ಮತ್ತೆ ಆರ್‌ಸಿಬಿ ಟಾಸ್ ಸೋತಿದೆ.
09:48 PM (IST) Apr 18
ಮಮತಾ ಸಾಗರ ಅವರ ಕವಿತೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕವಿತೆಯಲ್ಲಿನ ನಿರ್ಭಿಡೆಯಾದ ಹೆಣ್ಣಿನ ದನಿ ಮತ್ತು ಸಾಮಾಜಿಕ ನಿರೀಕ್ಷೆಗಳನ್ನು ಮುರಿದಿರುವುದು ಓದುಗರನ್ನು ತಲ್ಲಣಗೊಳಿಸಿದೆ. ಕವಿತೆಯ ಸತ್ಯ ಹೇಳುವ ಸ್ವಭಾವ ಮತ್ತು ಸ್ಟೀರಿಯೊಟೈಪ್‌ಗಳನ್ನು ಮುರಿಯುವ ಪ್ರವೃತ್ತಿಯೇ ಇದಕ್ಕೆ ಕಾರಣ.
ಪೂರ್ತಿ ಓದಿ09:14 PM (IST) Apr 18
ಜಾತಿ ಗಣತಿ ವರದಿ ತರಾತುರಿಯಲ್ಲಿ ಅಂಗೀಕಾರ ಮಾಡುವುದಿಲ್ಲ. ವರದಿಯ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ಮಾಡಿಯೇ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
09:05 PM (IST) Apr 18
ಲೇಡಿ ಡಾನ್ ಝಿಖ್ರಾ ಹೆಸರು ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇತ್ತ ಪೊಲೀಸರು ಈಕೆಯ ಹುಡುಕಾಟ ಚುರುಕುಗೊಳಿಸಿದ್ದಾರೆ. ದೆಹಲಿಯ 17ರ ಹರೆಯದ ಬಾಲಕನ ಹತ್ಯೆಯ ಶಂಕಿತ ಆರೋಪಿಯಾಗಿರುವ ಈ ಲೇಡಿ ಡಾನ್‌ಗಿದೆ ಗ್ಯಾಂಗ್‌ಸ್ಟರ್ ಕನೆಕ್ಷನ್.
ಪೂರ್ತಿ ಓದಿ09:04 PM (IST) Apr 18
ಮದುವೆ ವೇದಿಕೆಯಲ್ಲಿ ಮದುಮಗನಿಗೆ ಸ್ನೇಹಿತರು ಕ್ಯೂಆರ್ ಕೋಡ್ ಸ್ಕ್ಯಾನರ್ ಮೂಲಕ ಕ್ವಾಟ್ಲೆ ಕೊಟ್ಟ ಘಟನೆ. ಒಬ್ಬೊಬ್ಬರೇ ಬಂದು ಹಣ ಹಾಕಿ ಹೋಗುವ ಮೂಲಕ ವಿನೂತನವಾಗಿ ಕ್ವಾಟ್ಲೆ ಕೊಟ್ಟಿದ್ದಾರೆ. ಮದುಮಗ ಹಾಗೂ ಮದುಮಗಳ ಪ್ರತಿಕ್ರಿಯೆಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಪೂರ್ತಿ ಓದಿ08:47 PM (IST) Apr 18
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಪಂದ್ಯ ಆರಂಭವಾಗುವುದು ತಡವಾಗಿದ್ದು, ಪೂರ್ಣ 20 ಓವರ್‌ಗಳ ಪಂದ್ಯ ನಡೆಯುವುದು ಅನುಮಾನ. ಕನಿಷ್ಠ 5 ಓವರ್‌ಗಳ ಪಂದ್ಯವಾಡಲು ರಾತ್ರಿ 10.54ರವರೆಗೆ ಕಾಲಾವಕಾಶವಿದೆ.
ಪೂರ್ತಿ ಓದಿ08:44 PM (IST) Apr 18
ವಾಟ್ಸಾಪ್ ಆಪ್‌ನಲ್ಲಿ ಏನಾಗುತ್ತಿದೆ? ನಿಮ್ಮ ವಾಟ್ಸಾಪ್, ಇತರ ಸೋಶಿಯಲ್ ಮೀಡಿಯಾ ಆಪ್‌ಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು?
ಪೂರ್ತಿ ಓದಿ08:26 PM (IST) Apr 18
ಆನ್‌ಲೈನ್ ಮೂಲಕ ಚಾಟಿಂಗ್, ಬಳಿಕ ವಿಡಿಯೋ ಕಾಲ್, ಹೀಗೆ ಪ್ರೀತಿ ಶುರುವಾಗಿದೆ, ಗಾಢವಾಗಿದೆ. ಕೊನೆಗೆ 17ರ ವಯಸ್ಸಿನ ಭಾರತದ ಬಾಲಕಿ ತನ್ನ ಆನ್‌ಲೈನ್ ಪ್ರೀತಿಯ ಕೊರಿಯಾ ಹುಡುಗನ ಮದುವೆಯಾಗಲು ತೆರಳಿದ್ದಾಳೆ. ಆದರೆ ಆತನ ಭೇಟಿಯಾಗುತ್ತಿದ್ದಂತೆ ಭ್ರಮನಿರಸನಗೊಂಡ ಅದೇ ಸ್ಪೀಡ್‌ಲ್ಲಿ ವಾಪಾಸ್ ಆಗಿದ್ದಾಳೆ.
ಪೂರ್ತಿ ಓದಿ08:00 PM (IST) Apr 18
ಪ್ರವಾಸಿ ತಾಣದ ಹೋಟೆಲ್‌ವೊಂದರಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 5 ಮಂದಿ ಯುವತಿಯರನ್ನು ರಕ್ಷಿಸಲಾಗಿದ್ದು, ಅವರು ನೇಪಾಳ ಮತ್ತು ಜಾರ್ಖಂಡ್ ಮೂಲದವರು ಎಂದು ತಿಳಿದುಬಂದಿದೆ.
ಪೂರ್ತಿ ಓದಿ07:39 PM (IST) Apr 18
ಕೃತಕ ಬುದ್ಧಿಮತ್ತೆಯ ವ್ಯಾಪ್ತಿ ಹರಡುತ್ತಲೇ ಇದ್ದು, ಇನ್ನು ಹತ್ತೇ ವರ್ಷದಲ್ಲಿ ವೈದ್ಯಕೀಯ ಮತ್ತು ಶಿಕ್ಷಣ ಲೋಕಕ್ಕೂ ಕಾಲಿಡಲಿದೆ. ಅಂದು ಏನಾಗುತ್ತದೆ ಎನ್ನುವುದನ್ನು ಹೇಳಿದ್ದಾರೆ ಬಿಲ್ ಗೇಟ್ಸ್!
07:38 PM (IST) Apr 18
ಪ್ರವಾಸೋದ್ಯಮದ ಪಾಲಿಗೆ ಕೊಡಗು ಜಿಲ್ಲೆ ಚಿನ್ನದ ಮೊಟ್ಟೆ ಇಡೋ ಕೋಳಿ. ಹಾಗಾಗಿಯೇ ರಾಜ್ಯ ಸರ್ಕಾರ ಇತ್ತೀಚೆಗೆ ಕೊಡಗಿನ ಪದ್ಧತಿ, ಆಚಾರ ವಿಚಾರ ಇಲ್ಲಿನ ಬೆಳೆಗಳಿಗೂ ಉತ್ತೇಜನ ನೀಡಿ ಸಂಸ್ಕೃತಿ ಸಾರಲು ಕೂರ್ಗ್ ವಿಲೇಜ್ ಎಂಬ ಕಲ್ಪನೆಯನ್ನ ಹುಟ್ಟುಹಾಕಿ ಅದಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಕೂಡ ಮಾಡಿತ್ತು.
ಪೂರ್ತಿ ಓದಿ07:27 PM (IST) Apr 18
ತಿರುವನಂತಪುರಂ-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಈ ವರ್ಷಾಂತ್ಯದಲ್ಲಿ ಸಂಚರಿಸುವ ನಿರೀಕ್ಷೆ ಇದೆ. 16 ಬೋಗಿಗಳ ಹೈಸ್ಪೀಡ್ ರೈಲು ಇದಾಗಿದ್ದು, ಹಲವು ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಯಶವಂತಪುರ-ಮಂಗಳೂರು ರೈಲು ಸಂಚಾರವನ್ನು ಸೆಂಟ್ರಲ್‌ಗೆ ವಿಸ್ತರಿಸಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಪೂರ್ತಿ ಓದಿ07:26 PM (IST) Apr 18
ನಾರಾಯಣ ಮೂರ್ತಿ ಮೊಮ್ಮಗನ ವಯಸ್ಸು ಕೇವಲ 1 ವರ್ಷ ನಾಲ್ಕು ತಿಂಗಳು. ಆದರೆ ಆದಾಯ ಯಾವ ಸಿಇಒಗಿಂತ ಕಡಿಮೆ ಇಲ್ಲ. ಈ ವರ್ಷ ಈ ಪುಟ್ಟ ಕಂದ 3.3 ಕೋಟಿ ರೂಪಾಯಿ ಆದಾಯಗಳಿಸಿದ್ದಾನೆ. ಈ ಮಗು ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೇ ಜೇಬು ಗಟ್ಟಿ ಮಾಡಿದ್ದು ಹೇಗೆ?
ಪೂರ್ತಿ ಓದಿ07:05 PM (IST) Apr 18
ತುಟಿ ಬಳಿ ಮಚ್ಚೆ ಇದ್ಯಾ? ಹಾಗಿದ್ರೆ ನಿಮ್ಮ ವ್ಯಕ್ತಿತ್ವ, ಜೀವನದ ಆಗುಹೋಗು, ಭವಿಷ್ಯ ಎಲ್ಲವೂ ಹೀಗೆ ಇರುತ್ತದೆ ನೋಡಿ...
06:22 PM (IST) Apr 18
ಮೇ.1 ರಿಂದ ಸ್ಯಾಟಲೈಟ್ ಆಧಾರಿತ ಟೋಲ್ ಪಾವತಿ ವ್ಯವಸ್ಥೆ ಜಾರಿಯಾಗುತ್ತಿದೆ. ಇದರ ನಡುವೆ ಗೊಂದಲ ಹೆಚ್ಚಾಗಿದೆ. ಹಾಗಾದರೆ ಸದ್ಯ ಇರುವ ಫಾಸ್ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲವೇ? ಫಾಸ್ಟ್ಯಾಗ್ ಟೋಲ್ ಬೂತ್ ಇರೋದಿಲ್ವಾ? ಈ ಎಲ್ಲಾ ಗೊಂದಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ.
ಪೂರ್ತಿ ಓದಿ06:14 PM (IST) Apr 18
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) 35 ಪದವೀಧರ ಎಂಜಿನಿಯರ್ (ಸಿವಿಲ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 03, 2025 ರ ಮೊದಲು ಅರ್ಜಿ ಸಲ್ಲಿಸಬಹುದು.
ಪೂರ್ತಿ ಓದಿ06:13 PM (IST) Apr 18
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾಂಗ್ ಎಲ್ಲೋ ಕುಳಿತು ಸಿದ್ಧಪಡಿಸಿದ ಜಾತಿ ಗಣತಿ ವರದಿಯನ್ನು ಒಪ್ಪಬಾರದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ. ವರದಿಯಲ್ಲಿ ಸಹಿ ಹಾಕದೆ ಕಾಂತರಾಜು ಓಡಿ ಹೋಗಿದ್ದಾರೆ, ಜಯಪ್ರಕಾಶ್ ಹೆಗ್ಡೆ ವರದಿಯನ್ನು ನಕಲಿ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೂರ್ತಿ ಓದಿ05:35 PM (IST) Apr 18
ದಾಂಡೇಲಿಯ ಗಾಂಧಿನಗರದ ಮನೆಯೊಂದರಲ್ಲಿ ₹12 ಕೋಟಿ ಮೌಲ್ಯದ 500 ರೂ. ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಚಲನಚಿತ್ರ ಚಿತ್ರೀಕರಣಕ್ಕೆ ಮಾತ್ರ ಬಳಕೆ ಎಂದು ನಮೂದಿಸಿದ್ದ ನೋಟುಗಳ ಮೇಲೆ RBI ಸಹಿ, ಸೀರಿಯಲ್ ನಂಬರ್, ಗಾಂಧಿ ಚಿತ್ರ ಇದ್ದವು. ಪೊಲೀಸರು ಆರೋಪಿ ಅರ್ಷದ್ ಅಜುಂ ಖಾನ್‌ನನ್ನು ಬಂಧಿಸಿದ್ದಾರೆ.
ಪೂರ್ತಿ ಓದಿ05:35 PM (IST) Apr 18
ಇಂದು ಪ್ರೇಮ್ ಹುಟ್ಟುಹಬ್ಬದ ಅಂಗವಾಗಿ ರಿಲೀಸ್ ಆಗಿರುವ ಸ್ಪಾರ್ಕ್ ಸಿನಿಮಾದ ಪೋಸ್ಟರ್ ನೋಡಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅವರು ಕೆಂಡಾಮಂಡಲ ಆಗಿದ್ದಾರೆ. ಅವರ ಈ ಪರಿ ಕೋಪಕ್ಕೆ ಕಾರಣವೇನು? ನಡೆದಿದ್ದಾರೂ ಏನು?..
ಪೂರ್ತಿ ಓದಿ05:32 PM (IST) Apr 18
ಶಿವಮೊಗ್ಗದಲ್ಲಿ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ, ಬೀದರ್‌ನಲ್ಲಿ ಜನಿವಾರ ಧರಿಸಿ ಬಂದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಘಟನೆ ಜನಿವಾರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯಿಂದಾಗಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ತನಿಖೆಗೆ ಆದೇಶಿಸಿದೆ.
ಪೂರ್ತಿ ಓದಿ05:21 PM (IST) Apr 18
ಬಿಜೆಪಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಯಸ್ಸು 60. ಸ್ವೀಟ್ 60ಯಲ್ಲಿ ಘೋಷ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಂದು ಮದುವೆಯಾಗುತ್ತಿದ್ದಾರೆ. ದಿಲೀಪ್ ಘೋಷ್ ಪ್ರೀತಿ ಶುರುವಾಗಿದ್ದು ಹೇಗೆ? ಇಲ್ಲಿದೆ ರೋಚಕ ಲವ್ ಸ್ಟೋರಿ.
ಪೂರ್ತಿ ಓದಿ05:16 PM (IST) Apr 18
ರಘು ಹಾಸನ್ ನಿರ್ದೇಶಿಸಿ, ನಿರ್ಮಿಸಿರುವ ‘ನಾನು ಮತ್ತು ಗುಂಡ 2’ ಚಿತ್ರದ ಟೀಸರ್ ಅನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಪತ್ನಿ ಶೈಲಜಾ ಕಿರಗಂದೂರ್ ಬಿಡುಗಡೆ ಮಾಡಿದರು.
ಪೂರ್ತಿ ಓದಿ04:36 PM (IST) Apr 18
ಅನ್ಯಾಯವಾದವರಿಗೆ ರಕ್ಷಣೆ ಮತ್ತು ನ್ಯಾಯ ಸಿಗಬೇಕು. ಇವತ್ತಿನ ತಂತ್ರಜ್ಞಾನ ಬಳಸಿಕೊಂಡು ಕ್ರೈಮ್ ಆಗದಿರುವಂತಹ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯವನ್ನು ಯುದ್ಧಕಾಂಡ ಸಿನಿಮಾ ಹೊಂದಿದೆ.
04:30 PM (IST) Apr 18
ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ನಂ.1 ಶ್ರೀಮಂತ ದೇಗುಲ ಎನ್ನಿಸಿಕೊಂಡಿದೆ. ಮುಂದಿನ ಪಟ್ಟಿಯಲ್ಲಿ ಇರುವುದು ಯಾವ ದೇಗುಲ?
04:30 PM (IST) Apr 18
ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ. ಇದು ಬಾಲಿವುಡ್‌ನಿಂದ ಓಡಿ ಹೋದ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ನೀಡಿದ ಪ್ರತಿಕ್ರಿಯೆ. ಈ ಪ್ರತಿಕ್ರಿಯೆ ಭಾರಿ ವಿವಾದ ಸೃಷ್ಟಿಯಾಗಿದೆ. ಪ್ರತಿಭಟನೆ ಜೋರಾಗಿದೆ. ಫುಲೆ ಸಿನಿಮಾದಿಂದ ಆರಂಭಗೊಂಡ ವಿವಾದಕ್ಕೆ ಅನುರಾಗ್ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಪೂರ್ತಿ ಓದಿ04:24 PM (IST) Apr 18
ಆಸ್ತಿ ಕೈತಪ್ಪುತ್ತೆ ಎಂದು ಪತ್ನಿಯೇ ಲವರ್ ಜೊತೆ ಸೇರಿ ಪತಿಯನ್ನ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಸಮೀಪದ ಲಕ್ಯಾ ಕ್ರಾಸ್ ನಲ್ಲಿ ನಡೆದಿದೆ. ಮೃತನನ್ನ 55 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ.
ಪೂರ್ತಿ ಓದಿ04:22 PM (IST) Apr 18
ದಕ್ಷಿಣ ಭಾರತದಲ್ಲಿ ಓಡಾಡುವ ವಂದೇ ಭಾರತ್ ರೈಲಿನಲ್ಲಿ ಉತ್ತರ ಭಾರತದ ಆಹಾರಗಳನ್ನು ಮಾತ್ರ ನೀಡಲಾಗುತ್ತಿದೆ ಎಂದು ಮಲಯಾಳಂ ಲೇಖಕರು ಆರೋಪಿಸಿದ್ದಾರೆ. ಇಡ್ಲಿ, ದೋಸೆಗಳಂತಹ ದಕ್ಷಿಣ ಭಾರತದ ತಿನಿಸುಗಳು ಮೆನುವಿನಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆ ಆಯ್ತು, ಈಗ ಆಹಾರ ಹೇರಿಕೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿವೆ.
ಪೂರ್ತಿ ಓದಿ04:10 PM (IST) Apr 18
ನಟಿ ಅಥಿಯಾ ಶೆಟ್ಟಿ, ಕೆ ಎಲ್ ರಾಹುಲ್ ಅವರು ಮೊದಲ ಬಾರಿಗೆ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ.
ಪೂರ್ತಿ ಓದಿ04:03 PM (IST) Apr 18
ಮದುವೆಗೆ ದಿನ ಮೊದಲು ವಧುವೊಬ್ಬಳು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಮಂಗಳೂರಿನ ಬೋಳಾರ್‌ನಲ್ಲಿ ನಡೆದಿದೆ. 22 ವರ್ಷದ ಪಲ್ಲವಿ ಎಂಬ ವಧುವಿನ ಮದುವೆ ಏಪ್ರಿಲ್ 16 ರಂದು ನಿಗದಿಯಾಗಿತ್ತು.
ಪೂರ್ತಿ ಓದಿ03:42 PM (IST) Apr 18
ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ. ಈ ವಿವಾದದ ಬಗ್ಗೆ ಶಿಕ್ಷಣ ಸಚಿವರು ಮತ್ತು KEA ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಪೂರ್ತಿ ಓದಿ03:19 PM (IST) Apr 18
ಪಂಜಾಬ್‌ನಾದ್ಯಂತ ನಡೆದ 14ಕ್ಕೂ ಹೆಚ್ಚು ಗ್ರೇನೆಡ್ ದಾಳಿಗಳಲ್ಲಿ ಭಾಗಿಯಾದ ಹ್ಯಾಪಿ ಪ್ಯಾಸಿಯಾ ಅಲಿಯಾಸ್ ಹರ್‌ಪ್ರೀತ್ ಸಿಂಗ್‌ನನ್ನು ಅಮೆರಿಕದಲ್ಲಿ ಎಫ್‌ಬಿಐ ಬಂಧಿಸಿದೆ. ಭಾರತದಲ್ಲಿ ನಡೆದ ಹಲವಾರು ಇಂತಹ ದಾಳಿಗಳ ಜವಾಬ್ದಾರಿಯನ್ನು ಅವನು ವಹಿಸಿಕೊಂಡಿದ್ದಾನೆ ಎಂಬುದು ಭಾರತದ ತನಿಖಾ ಸಂಸ್ಥೆಗಳ ಆರೋಪವಾಗಿದೆ.
ಪೂರ್ತಿ ಓದಿ03:08 PM (IST) Apr 18
ಬೆಂಗಳೂರಿನಲ್ಲಿ 21 ವರ್ಷದ ಯುವಕನೊಬ್ಬ ಮಹಿಳೆಯರಿಗೆ ಖಾಸಗಿ ಅಂಗ ತೋರಿಸಿ ಲೈಂಗಿಕ ಕ್ರಿಯೆಗೆ ಕರೆಯುತ್ತಿದ್ದ. ಈತನ ಕಾಟ ತಾಳಲಾರದೆ ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಪೂರ್ತಿ ಓದಿ