ಉದಯ್‌ಪುರದಲ್ಲಿ ಹಿಂದೂ ವ್ಯಕ್ತಿ ಹತ್ಯೆ, ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ!

By Suvarna NewsFirst Published Jun 28, 2022, 9:11 PM IST
Highlights
  • ರಾಜಸ್ಥಾನದ ಕನ್ಹಯ್ಯ ಲಾಲ್ ಹತ್ಯೆ ಹಿನ್ನಲೆ
  • ಕಮಿಷನರ್ ಪ್ರತಾಪ್‌ ರೆಡ್ಡಿ ಹೈ ಅಲರ್ಟ್ ಘೋಷಣೆ
  • ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಸೂಚನೆ

ಬೆಂಗಳೂರು(ಜೂ.28): ಬಿಜೆಪಿ ನಾಯಕಿ ನೂಪುರ್ ಶರ್ಮಾ ಬೆಂಬಲಿಸಿದ ಕಾರಣಕ್ಕೆ ರಾಜಸ್ಥಾನದ ಉದಯ್‌ಪುರನ ಕನ್ಹಯ್ಯ ಕುಮಾರ್‌ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಖಂಡಿಸಿ ಉದಯ್‌ಪುರದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ದೇಶಾದ್ಯಂತ ಪ್ರತಿಭಟನೆ ಸುಳಿವು ಸಿಕ್ಕಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ಪೊಲೀಸ್ ಕಮಿಷನರ್ ನಗರದ ಎಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ಘಟನೆ ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.ಬೀಟ್ ಪೊಲೀಸರು ಅಲರ್ಟ್ ಆಗಿರಲು ಸೂಚಿಸಲಾಗಿದೆ.

Latest Videos

ಉದಯ್‌ಪುರ ಹಿಂದೂ ಯುವಕನ ಹತ್ಯೆ, ಮೋದಿ ಶಾ ರತ್ತ ಕೈತೋರಿಸಿದ ರಾಜಸ್ಥಾನ ಸಿಎಂ!

ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ಈಗಾಗಲೇ ಮುಸ್ಲಿಮರು ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ, ಗಲಭೆ ಸೃಷ್ಟಿಸಿದ್ದಾರೆ. ಈ ಘಟನೆ ತಣ್ಣಗಾಗುತ್ತಿದೆ ಎನ್ನುವಾಗಲೇ ಇದೀಗ ಉದಯ್‌ಪುರದ ಹಿಂದೂ ಟೈಲರ್‌ನನ್ನು ಮುಸ್ಲಿಮ್ ಯುವಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ನೂಪುರ್ ಶರ್ಮಾ ಬೆಂಬಲಿಸಿ ಆಕೆಯ ಫೋಟೋವನ್ನು ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡ ಕಾರಣಕ್ಕೆ ಮುಸ್ಲಿಮ್ ಯುವಕರು ಕನ್ಹಯ್ ಲಾಲ್ ಶಿರಚ್ಚೇದ ಮಾಡಿದ್ದಾರೆ. ಬಟ್ಟೆ ಅಂಗಡಿ ಇಟ್ಟುಕೊಂಡಿರುವ ಕನ್ಹಯ್ಯ ಲಾಲ್ ಕಳೆದ 10 ದಿನಗಳಿಂದ ಬೆದರಿಕೆ ಕರೆ ಸ್ವೀಕರಿಸುತ್ತಿದ್ದರು. ಹೀಗಾಗಿ ಪೊಲೀಸರಿಗೂ ದೂರು ನೀಡಿದ್ದ.

ಆದರೆ ಕನ್ಹಯ್ ಲಾಲ್ ರಕ್ಷಣೆ ನೀಡದ ಪೊಲೀಸರು ಎಚ್ಚರಿಕೆಯಿಂದ ಇರಲು ಸೂಚಿಸಿದ್ದರು. ಇತ್ತ ಆರೋಪಿಗಳ ಹೆಸರು ಸೂಚಿಸಿದ್ದರೂ ಅವರ ವಿರುದ್ಧ ಕ್ರಮವಾಗಲಿ, ಎಚ್ಚರಿಕೆಯನ್ನಾಗಲಿ ಪೊಲೀಸರು ನೀಡಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಇತ್ತ ಸೋಮವಾರ ಅಂಗಡಿ ತೆರೆದ ಬೆನ್ನಲ್ಲೇ ಬಟ್ಟೆ ಹೊಲಿಯುವ ಸೋಗಿನಲ್ಲಿ ಬಂದ ಮುಸ್ಲಿಮ್ ಯುವಕರು ರುಂಡ ಕತ್ತರಿಸಿದ್ದಾರೆ.

ಈ ವಿಡಿಯೋವನ್ನು ಮಾಡಿ ಹರಿಬಿಟ್ಟ ಮುಸ್ಲಿಮ್ ಯುವಕರು, ಪ್ರಧಾನಿ ಮೋದಿ ಹಾಗೂ ಹಿಂದೂ ಸಮುದಾಯಕ್ಕೂ ಎಚ್ಚರಿಕೆ ನೀಡಿದ್ದಾರೆ. ಈ ಹತ್ಯೆ ಖಂಡಿಸಿ ಉದಯ್‌ಪುರ ಉದ್ರಿಕ್ತಗೊಂಡಿದೆ. ಉದಯ್‌ಪುರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. 600ಕ್ಕೂ ಹೆಚ್ಚು ಪೊಲೀಸರ ನಿಯೋಜಿಲಾಗಿದೆ.

ಹಿಂದೂ ಯುವಕನ ತಲೆ ಕತ್ತರಿಸಿದ ಇಬ್ಬರು ಹಂತಕರ ಬಂಧನ, ಭಾರಿ ಪ್ರತಿಭಟನೆ!

ಕೆಲವು ಪ್ರದೇಶಗಳಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ಪಡೆಯುವ ಸಾಧ್ಯತೆಯನ್ನು ಅರಿತ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ದೇಶಾದ್ಯಂತ ಪ್ರಮುಖ ನಗರ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಬಿಜೆಪಿ ನಾಯಕಿ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳ ಆರೋಪ ಹೊತ್ತಿದ್ದಾರೆ. ನೂಪುರ್ ಹೇಳಿಕೆ ಖಂಡಿಸಿ ದೇಶಾದ್ಯಂತ ಭಾರಿ ಹಿಂಸಾಚಾರವೇ ನಡೆದು ಹೋಗಿದೆ. ಮುಸ್ಲಿಮ್ ಸಮುದಾಯ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಕೋಮುಸಂಘರ್ಷವೇ ನಡೆದು ಹೋಗಿದೆ. ನೂಪರ್ ಬೆಂಬಲಿಸಿದ ಕಾರಣಕ್ಕೆ ಇದೀಗ ಕನ್ಹಯ್ ಲಾಲ್ ಕೊಲೆಯಾಗಿದ್ದಾರೆ.  ಹಿಂದೂ ಸಂಘಟನೆಗಳು ಕೊಲೆ ಖಂಡಿಸಿ ಆಕ್ರೋಶ ವ್ಯಕ್ತಪಡಿದೆ. ತಕ್ಷಣವೇ ತಪ್ಪಿತಸ್ಥರನ್ನು ಗಲ್ಲಿಗೇರಿಲು ಆಗ್ರಹಿಸಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಅಶಾಂತಿ ವಾತಾವರಣಕ್ಕೆ ಇಂತವರೆ ಕಾರಣ ಎಂದು ಆರೋಪಿಸಿದ್ದಾರೆ.
 

click me!