ಬೆಂಗಳೂರು: ಮಲಗುವ ವಿಚಾರಕ್ಕೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕಾರ್ಮಿಕನ ಹತ್ಯೆ

By Kannadaprabha News  |  First Published Oct 1, 2024, 9:19 AM IST

ಆರೋಪಿಯು ಸೆ.24ರಂದು ಮಧ್ಯಾಹ್ನ ಶ್ರೀನಗರದ 11ನೇ ಮುಖ್ಯ ರಸ್ತೆಯ ನಿರ್ಮಾಣ ಹಂತದ ಕಟ್ಟಡದ ಮೂರನೇ ಮಹಡಿಯಲ್ಲಿ ಅಜಿತ್ ಎಂಬ ಕಾರ್ಮಿಕನ ತಲೆ ಮೇಲೆ ಹಾಲೋ ಬ್ರಿಕ್ಸ್‌ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. 
 


ಬೆಂಗಳೂರು(ಅ.01):  ಇತ್ತೀಚೆಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ವಿಚಾರಕ್ಕೆ ನಡೆದ ವೇಳೆ ಕಾರ್ಮಿಕನ ತಲೆ ಮೇಲೆ ಹಾಲೋ ಬ್ರಿಕ್ಸ್ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಪರಾರಿಯಾಗಿದ್ದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಿರಿನಗರದ ಈರಣ್ಣನಗುಡ್ಡೆ ಕಸ್ತೂರಿ ಬಾ ಕಾಲೋನಿ ನಿವಾಸಿ ಹರೀಶ್ ಅಲಿಯಾಸ್ ಅಮಾವಾಸೆ(38) ಬಂಧಿತ. 

ಆರೋಪಿಯು ಸೆ.24ರಂದು ಮಧ್ಯಾಹ್ನ ಶ್ರೀನಗರದ 11ನೇ ಮುಖ್ಯ ರಸ್ತೆಯ ನಿರ್ಮಾಣ ಹಂತದ ಕಟ್ಟಡದ ಮೂರನೇ ಮಹಡಿಯಲ್ಲಿ ಅಜಿತ್(27) ಎಂಬ ಕಾರ್ಮಿಕನ ತಲೆ ಮೇಲೆ ಹಾಲೋ ಬ್ರಿಕ್ಸ್‌ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tap to resize

Latest Videos

ಬೆಂಗಳೂರು: ಪಾರ್ಟಿ ವೇಳೆ ಕಾಲು ತುಳಿದಿದ್ದಕ್ಕೆ ಇರಿದು ಕೊಲೆ

ಪ್ರಕರಣದ ಹಿನ್ನೆಲೆ: 

ತಮಿಳುನಾಡಿನ ಅಜಿತ್, ತುಮಕೂರಿನ ಕೊರಟಗೆರೆ ಮೂಲದ ಹರೀಶ್ ಇಬ್ಬರೂ ನಿರ್ಮಾಣ ಕಟ್ಟಡಗಳಲ್ಲಿ ಕೆಲಸಕ್ಕೆ ದ್ದರು. ಸೆ.24ರಂದು ಶ್ರೀನಗರದ ಡಾ| ನರೇಂದ್ರ ಕುಮಾರ್ ಎಂಬುವವರನಿರ್ಮಾಣ ಹಂತದ ಕಟ್ಟಡದಲ್ಲಿ ಅಜಿತ್ ಮತ್ತು ಹರೀಶ್ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಇಬ್ಬರು ಮಧ್ಯಾಹ್ನ ಮದ್ಯ ಸೇವಿಸಿದ್ದಾರೆ. ಈ ವೇಳೆ ವೇಳೆ ಅಜಿತ್ ಕಟ್ಟಡದ ಮೊದಲ ಮಹಡಿಯಲ್ಲಿ ಕುಳಿತು ಊಟ ಮಾಡುವಾಗ, ಅಲ್ಲಿಗೆ ಬಂದಿರುವ ಹರೀಶ್, ಇಲ್ಲಿ ನಾನು ಕುಳಿತು ಕೊಳ್ಳಬೇಕು ಎಂದಿದ್ದಾನೆ. ಈ ವೇಳೆ ಅಜಿತ್ ಮೇಲೆ ಎದ್ದು ಮೂರನೇ ಮಹಡಿಗೆ ತೆರಳಿ ಊಟಕ್ಕೆ ಕುಳಿತ್ತಿದ್ದಾನೆ. ಅಲ್ಲಿಗೂ ಬಂದಿರುವ ಹರೀಶ್, ಇಲ್ಲಿ ನಾನು ಮಲಗಬೇಕು. ಈ ಜಾಗದಿಂದ ಮೇಲೇಳು ಎಂದಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಹರೀಶ್, ಸಿಮೆಂಟ್ ಇಟ್ಟಿಗೆತೆಗೆದು ಅಜಿತ್‌ ಹತ್ಯೆಗೈದಿದ್ದ.

ಈ ಹಿಂದೆಯೂ ಜೈಲು ಸೇರಿದ್ದ ಆರೋಪಿ 

ಆರೋಪಿ ಹರೀಶ್ ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. 2014ರಲ್ಲಿ ಕೊರಟಗೆರೆಯಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಸೆಷನ್ಸ್‌ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದೆ. ಬಳಿಕ ಆರೋಪಿಯು ಹೈಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಇದಕ್ಕೂ ಮುನ್ನ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 200-2011ರ ಅವಧಿಯಲ್ಲಿ ಮೂರು ಕೊಲೆಗೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪ್ರಕರಣಗಳು ದಾಖಲಾಗಿ ರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!