ವಿಮೆ ಮೊತ್ತ ಪಡೆಯಲು ಹತ್ಯೆ ನಾಟಕ ಪ್ಲಾನ್, 4 ಕೋಟಿ ರೂ ಆಸೆಗೆ ಬಿದ್ದ ಗೆಳೆಯರು ಕೊಂದೇ ಬಿಟ್ಟರು!

By Suvarna NewsFirst Published Dec 15, 2022, 6:28 PM IST
Highlights

4 ಕೋಟಿ ರೂಪಾಯಿ ವಿಮೆ. ಈ ಹಣ ಪಡೆಯಲು ಅಶೋಕ್ ಭಲೆರಾವ್ ಭರ್ಜರಿ ಪ್ಲಾನ್ ಮಾಡಿದ್ದ. ಗೆಳೆಯರ ಬಳಿ ತನನ್ನು ಹತ್ಯೆ ಮಾಡಿದಂತೆ ನಟಿಸಲು ಸೂಚಿಸಿದ್ದ. ಇದರಂತೆ ಎಲ್ಲಾ ಪ್ಲಾನ್ ಸಿದ್ದವಾಗಿತ್ತು. ಆದರೆ ಹಣದ ಆಸೆಗೆ ಬಿದ್ದ ಗೆಳೆಯರು ನಾಟಕವನ್ನು ರಿಯಲ್ ಮಾಡಿದರು. 

ನಾಸಿಕ್(ಡಿ.15): ಹಣ ಪಡೆಯಲು ಅದೆಂತಾ ಕೀಳು ಮಟ್ಟಕ್ಕೂ ಇಳಿಯುತ್ತಾರೆ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಇಲ್ಲೊಬ್ಬ ತನ್ನದೇ ವಿಮೆ ಮೊತ್ತ ಪಡೆಯಲು ಹತ್ಯೆಯ ನಾಟಕವಾಡಿದ್ದಾನೆ.  ಗೆಳೆಯರು ಬಳಿ ಅಪರಿಚಿತರು ಹತ್ಯೆ ಮಾಡಿದಂತೆ ನಾಟಕವಾಡಲು ಸೂಚಿಸಿದ್ದ. ಸಾವಿನಿಂದ ಬರುವ 4 ಕೋಟಿ ವಿಮೆಯಲ್ಲಿ ಒಂದೆರಡು ಲಕ್ಷ ನೀಡುವುದಾಗಿ ಭರವಸೆ ನೀಡಿದ್ದ. ಖಾತೆ, ಪಾಸ್‌ವರ್ಡ್, ಚೆಕ್ ಬುಕ್ ಸೇರಿದಂತೆ ಎಲ್ಲವನ್ನು ಸಂಗ್ರಹಿಸಿದ ಗೆಳೆಯರು ಅಂತಿಮ ಹಂತದಲ್ಲಿ ಪ್ಲಾನ್ ಬದಲಿಸಿದ್ದಾರೆ. ಗೆಳೆಯರು ನಾಟಕ ಆಡೋ ಬದಲು ಅಸಲಿ ಆಟವಾಡಿದ್ದಾರೆ.  ಗೆಳೆಯನ್ನು ಕೊಂದೇ ಬಿಟ್ಟಿದ್ದಾರೆ. ಬಳಿಕ ಗೆಳೆಯನ ಖಾತೆಯಲ್ಲಿದ್ದ ಹಣವನ್ನೇ ಲಪಾಟಿಸಿದ್ದಾರೆ. ಈ ಹತ್ಯೆ ನಡೆದಿರುವುದು 2018-19ರಲ್ಲಿ. ಇದೀಗ ತನಿಖೆಯಲ್ಲಿ ರಹಸ್ಯ ಬಯಲಾಗಿದೆ.

ಮಹಾರಾಷ್ಟ್ರದ ನಾಸಿಕ್ ನಿವಾಸಿ 46  ವರ್ಷದ ಅಶೋಕ್ ಭಲೇರಾವ್ ತನ್ನ ವಿಮೆ ಮೊತ್ತ ಇನ್ನೂ ಮೆಚ್ಯೂರಿಟಿಗೆ ಬಂದಿಲ್ಲ. ಪ್ರತಿ ತಿಂಗಳು ಕಂತು ಕಟ್ಟುತ್ತಿದ್ದ. ಆದರೆ ವಿಮೆದಾರ ಸಾವನ್ನಪ್ಪಿದರೆ 4 ಕೋಟಿ ಸಿಗಲಿದೆ. ಈ 4 ಕೋಟಿ ರೂಪಾಯಿ ಪಡೆಯಲು ಯಾರೋ ಹತ್ಯೆ ಮಾಡಿದ್ದಾರೆ ಎಂದು ಬಿಂಬಿಸಲು ಮುಂದಾದ. ಇದಕ್ಕಾಗಿ ಅಶೋಕ್ ಭಲೇರಾವ್ ಇಬ್ಬರು ಗೆಳೆಯರನ್ನು ಸಂಪರ್ಕಿಸಿ ಎಲ್ಲಾ ಪ್ಲಾನ್ ತಿಳಿಸಿದ್ದ. ಗೆಳೆಯರಿಗೆ ಒಂದೆರಡು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದ.

ವೈದ್ಯೆ ಪತ್ನಿಯನ್ನು ಕೊಂದು 400 KM ದೂರದಲ್ಲಿ ಹೂತು ಹಾಕಿದ ಡಾಕ್ಟರ್

ಆರಂಭದಲ್ಲೇ ಅಶೋಕ್ ಭಲೇರಾವ್ ಪ್ಲಾನ್ ಪ್ರಕಾರ ನಾಟಕ ಆಡಲು ಇಬ್ಬರು ಗೆಳೆಯರು ಒಪ್ಪಿಕೊಂಡಿದ್ದಾರೆ. ಬಳಿಕ ಗೆಳೆಯನ ಹತ್ಯೆ ನಾಟಕ ಪ್ಲಾನ್‌ ಹಾಗೂ ಬಳಿಕ ವಿಮೆ ಹಣ ಪಡೆಯಲು ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಅಂತಿಮವಾಗಿ ಹಿಟ್ ಅಂಡ್ ರನ್ ರೀತಿಯ ಪ್ಲಾನ್ ಸಿದ್ದಪಡಿಸಿ ಅಶೋಕ್ ಭಲೇರಾವ್ ಸತ್ತಿದ್ದಾನೆ ಅನ್ನೋದು ಬಿಂಬಿಸುವುದು ಪ್ಲಾನ್ ಆಗಿತ್ತು. ಇಂದಿರನಗರದ ಜಾಗಿಂಗ್ ಟ್ರಾಕ್ ಸಮೀದಲ್ಲಿ ಅಪಘಾತವಾಗಿದೆ ಅನ್ನೋದು ಬಿಂಬಿಸಿ ವಿಮೆ ಹಣ ಪಡೆಯಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ.  ಈ ವೇಳೆ ಅಶೋಕ್ ಭಲೇರಾವ್‌ಗೆ ಗೊತ್ತಿಲ್ಲದ್ದಂತೆ ಗೆಳೆಯರು ಪ್ಲಾನ್ ಬದಲಿಸಿದ್ದಾರೆ. ನಕಲಿ ಹಿಟ್ ಅಂಡ್ ರನ್ ಕೇಸ್ ಬದಲು ಇದನ್ನೇ ಅಸಲಿ ಮಾಡಲು ಗೆಳೆಯರು ಮುಂದಾಗಿದ್ದಾರೆ.

ಪ್ಲಾನ್ ಪ್ರಕಾರ ಇಂದಿರಾನಗರ ಜಾಗಿಂಗ್ ಟ್ರಾಕ್ ಸಮೀಪದಲ್ಲಿ ಗೆಳೆಯರು ಅಸಲಿ ಹಿಟ್ ಅಂಡ್ ರನ್ ಮಾಡಿದ್ದಾರೆ. ಸಿಸಿಟಿವಿ ಇಲ್ಲದ ಪ್ರದೇಶದಲ್ಲಿ ಕೃತ್ಯ ನಡೆಸಿದ್ದಾರೆ. ಹಿಟ್ ಅಂಡ್ ರನ್ ಹೊಡೆತಕ್ಕೆ ಅಶೋಕ್ ಭಲೇರಾವ್ ಮೃತಪಟ್ಟಿದ್ದಾನೆ. ಎಲ್ಲವೂ ಬಹಳ ನಾಜೂಕಾಗಿ ಮಾಡಿ ಮುಗಿಸಲಾಗಿತ್ತು. ನಾಟಕವಾಡಲು ಗೆಳೆಯರಿಗೆ ಹೇಳಿದ್ದ ಅಶೋಕ್ ಭಲೇರಾವ್ ಹತ್ಯೆಯಾಗಿದ್ದ. ಪೊಲೀಸರ ಹಿಟ್ ಅಂಡ್ ರನ್ ಕೇಸ್ ದಾಖಲಿಸಿದ್ದರು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

 

ಜೈಲಲ್ಲಿದ್ದ ಮೊದಲ ಪತಿ: 2ನೇ ಪತಿ ಜತೆ ಜಾಲಿಯಾಗಿದ್ದ ‘ಮೃತ’ ಮಹಿಳೆ..!

2018-19ರಲ್ಲಿ ಈ ಹತ್ಯೆ ನಡೆದಿದೆ. ಆದರೆ ಅಶೋಕ್ ಭಲೇರಾವ್ ಖಾತೆಯಲ್ಲಿದ್ದ ಹಣವೂ ಮಾಯವಾಗಿದೆ. ಈ ಕುರಿತು ಅಶೋಕ್ ಸಹೋದರ ಪೊಲೀಸರ ಬಳಿ ಈ ಪ್ರಕರಣ ತನಿಖೆಯನ್ನು ಮರುಪರಿಶೀಲಿಸಬೇಕು. ಖಾತೆಯ ಹಣ ವಿಮೆ ಹಣದಲ್ಲಿ ಕೆಲ ಮೋಸದಾಟ ನಡೆದಿದೆ ಎಂದು ಸೂಚಿಸಿದ್ದರು. ಸಹೋದರ ಮಾತಿನಂತೆ ಅಶೋಕ್ ಖಾತೆ ಸೇರಿದಂತೆ ಇತರ ಡಿಜಿಟಲ್ ಮಾಹಿತಿಯನ್ನು ಪೊಲೀಸರು ಜಾಲಾಡಿದ್ದಾರೆ. ಈ ವೇಳೆ ಅಶೋಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಮಾಹಿತಿ ಆಧರಿಸಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈ ಇಬ್ಬರು ಮತ್ತೆ ನಾಲ್ವರ ಹೆಸರು ಬಾಯ್ಬಿಟ್ಟಿದ್ದಾರೆ. ಒಟ್ಟು 6 ಮಂದಿಯನ್ನು ಬಂಧಿಸಿದ ಪೊಲೀಸರಿಗೆ ಅಚ್ಚರಿ ಕಾದಿದೆ. ವಿಮೆ ಮೊತ್ತ ಪಡೆಯಲು ಗೆಳೆಯನ್ನೇ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.  
 

click me!