ಬೆಂಗಳೂರು; ಬಡ್ಡಿ ಆಸೆ ತೋರಿಸಿ ಬಹುಕೋಟಿ ವಂಚನೆ, ಯಾವ ಕಂಪನಿ?

By Suvarna NewsFirst Published Jun 22, 2021, 5:09 PM IST
Highlights

* ಬೆಂಗಳೂರಿನಲ್ಲಿ ಮತ್ತೊಂದು ಚೈನ್ ಲಿಂಕ್ ದೋಖಾ ಪ್ರಕರಣ
* ಶೇಕಡಾ 25 ರಷ್ಟು ಲಾಭದ ಆಸೆ ತೋರಿಸಿ ಕೋಟಿ ಕೋಟಿ  ವಂಚನೆ
* ಸಿಸಿಬಿ ಪೊಲೀಸರಿಂದ ಕಿಂಗ್ ಪಿನ್ ಡಿಎಸ್ ರಂಗನಾಥ್ ವಶಕ್ಕೆ
* ಸುಮಾರು ಎರಡು ಸಾವಿರ ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ‌ ಮಾಡಿರೋದು ಬೆಳಕಿಗೆ

ಬೆಂಗಳೂರು(ಜೂ. 22)  ಬೆಂಗಳೂರಿನಲ್ಲಿ ಮತ್ತೊಂದು ಚೈನ್ ಲಿಂಕ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ.  ಶೇಕಡಾ 25 ರಷ್ಟು ಲಾಭದ ಆಸೆ ತೋರಿಸಿ ಕೋಟಿ ಕೋಟಿ ವಂಚನೆ ಮಾಡಲಾಗಿದೆ. ಸಿಸಿಬಿ ಪೊಲೀಸರಿಂದ ಕಿಂಗ್ ಪಿನ್ ಡಿಎಸ್ ರಂಗನಾಥ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಸುಮಾರು ಎರಡು ಸಾವಿರ ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ‌ ಮಾಡಿರುವುದು ಬೆಳಕಿಗೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಕಂಪನಿ ಬಗ್ಗೆ ಪ್ರಚಾರ ಮಾಡಿಕೊಂಡು ಆನ್ ಲೈನ್ ನಲ್ಲೇ ರಿಜಿಸ್ಟರ್, ಆನ್ ಲೈನ್ ನಲ್ಲೇ ಹೂಡಿಕೆ, ಆನ್ ಲೈನ್ ನಲ್ಲೇ ಮೀಟಿಂಗ್ ಮಾಡಲಾಗುತ್ತಿತ್ತು.

ಬಣ್ಣದ ಮಾತಿನಿಂದ ಮರುಳು ಮಾಡುವ ಯುವತಿಯರ ಜಾಲ

ರಿಜಿಸ್ಟರ್ ಮಾಡ್ಕೊಂಡು ಹಣ ಹೂಡಿಕೆ ಮಾಡಿಸುತ್ತಿದ್ದ.  ವಂಚನೆ ನಡೆಸುತ್ತಿದ್ದ ಡಿಜಿಟೆಕ್ ಕಂಪನಿಯ ವಿರುದ್ದ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಎಫ್ ಐ ಅರ್ ದಾಖಲಿಸಿಕೊಳ್ಳಲಾಗಿದೆ. ಸಾರ್ವಜನಿರಿಂದ ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚಣೆಗೆ ಇಳಿದರು ಸದ್ಯ ದೋಖಾ ಕಂಪನಿಯ ಕಿಂಗ್ ಪಿನ್ ಡಿಎಸ್ ರಂಗನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

 

click me!