ಕಿರುತೆರೆ ಖ್ಯಾತ ನಟಿ ಕೃಷ್ಣಾ ಮುಖರ್ಜಿ ಸೀರಿಯಲ್ ಸೆಟ್ನಲ್ಲಿ ತಮಗಾಗಿರುವ ಭಯಾನಕ ಅನುಭವವನ್ನು ತೆರೆದಿಟ್ಟಿದ್ದಾರೆ. ನಿರ್ಮಾಪಕರ ವಿರುದ್ಧ ನಟಿ ಹೇಳಿದ್ದೇನು?
ಕಾಸ್ಟಿಂಗ್ ಕೌಚ್ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್ ಕೌಚ್ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಈ ಬಗ್ಗೆ ಭಯಾನಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದು, ಇದೀಗ ಕಿರುತೆರೆ ನಟಿ ಕೃಷ್ಣಾ ಮುಖರ್ಜಿ(Krishna Mukherjee) ಈ ವಿಷಯ ಬಿಚ್ಚಿಟ್ಟಿದ್ದಾರೆ.
ಜನಪ್ರಿಯ ಟಿವಿ ಶೋ `ಯೇ ಹೈ ಮೊಹಬತೇನ್’ ಮೂಲಕ ಖ್ಯಾತಿ ಪಡೆದ ನಟಿ ಕೃಷ್ಣಾ ಮುಖರ್ಜಿ ನಿರ್ಮಾಪಕರು, ನಿರ್ದೇಶಕರು ತಮ್ಮೊಟ್ಟಿಗೆ ಅನುಚಿತವಾಗಿ ವರ್ತಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ‘ಶುಭ ಶಗುನ್’ ಹೆಸರಿನ ಧಾರಾವಾಹಿಯಲ್ಲಿ ಕೃಷ್ಣಾ ನಟಿಸುತ್ತಿದ್ದ ನಟಿ, ಈಗ ಅದರಿಂದ ಹೊರಕ್ಕೆ ಬಂದಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಕಾರಣ, ಲೈಂಗಿಕ ಕಿರುಕುಳ! ಹೌದು. ನಟಿ ಈಗ ನಿರ್ಮಾಪಕ ಕುಂದನ್ ಸಿಂಗ್ ಅವರ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ.
ಗುಟ್ಕಾದಿಂದ ಹಾದಿ ತಪ್ಪಿಸಲಾರೆನೆಂದ ಅಕ್ಷಯ್ ಔಟ್: ಶಾರುಖ್, ಅಜಯ್ ಡೋಂಟ್ ಕೇರ್- ಟೈಗರ್ ಎಂಟ್ರಿ!
‘ಇದನ್ನು ಬರೆಯುವಾಗ ನನ್ನ ಕೈಗಳು ನಡುಗುತ್ತಿವೆ. ಆದರೂ ನಾನು ಬರೆಯಲೇಬೇಕು. ನಾನು ಇವರಿಂದ ಖಿನ್ನತೆಗೆ ಒಳಗಾಗಿದ್ದೇನೆ. ನಾವು ನಮ್ಮ ಭಾವನೆಗಳನ್ನು ಹಿಡಿದಿಟ್ಟು, ನಮ್ಮ ಒಳ್ಳೆಯ ಜೀವನವನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ತೋರಿಸುತ್ತೇವೆ. ಆದರೆ, ಇದು ರಿಯಾಲಿಟಿ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಪೋಸ್ಟ್ ಮಾಡಬೇಡ ಎಂದು ನನ್ನ ಕುಟುಂಬದವರು ಹೇಳುತ್ತಲೇ ಇದ್ದರು. ಆದರೆ ನಾನೇಕೆ ಹೆದರಬೇಕು? ಇದು ನನ್ನ ಹಕ್ಕು ಮತ್ತು ನನಗೆ ನ್ಯಾಯ ಬೇಕು. ನಾನು ತುಂಬ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇನೆ. ಕಳೆದ ಒಂದೂವರೆ ವರ್ಷ ನನಗೆ ಸುಲಭವಾಗಿರಲಿಲ್ಲ. ನಾನು ಖಿನ್ನತೆಗೆ ಒಳಗಾಗಿದ್ದೆ. ನಾನು ಒಬ್ಬಂಟಿಯಾಗಿರುವಾಗ ಅಳುತ್ತಿದ್ದೆ. ನಾನು ‘ದಂಗಲ್’ ಟಿವಿಗಾಗಿ ‘ಶುಭ್ ಶಗುನ್’ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ ಬಳಿಕ ಇದೆಲ್ಲಾ ಶುರುವಾಯಿತು” ಎಂದು ಆಕೆ ಬರೆದುಕೊಂಡಿದ್ದಾರೆ.
‘ಪ್ರೊಡಕ್ಷನ್ ಹೌಸ್ ಹಾಗೂ ನಿರ್ಮಾಪಕ ಕುಂದನ್ ಸಿಂಗ್ ಅವರು ನನಗೆ ಕಿರುಕುಳ ನೀಡಿದ್ದಾರೆ. ನನಗೆ ಅಂದು ಅನಾರೋಗ್ಯ ಆಗಿತ್ತು. ಜೊತೆಗೆ ಅವರು ಸಂಭಾವನೆಯನ್ನೂ ಕೊಡುತ್ತಿರಲಿಲ್ಲ. ಹೀಗಾಗಿ ನಾನು ಶೂಟ್ ಮಾಡಲ್ಲ ಎಂದೆ. ಇದಕ್ಕಾಗಿ ಅವರು ಮೇಕಪ್ ರೂಂನಲ್ಲಿ ನನ್ನನ್ನು ಲಾಕ್ ಮಾಡಿದ್ದರು. ನಾನು ಬಟ್ಟೆ ಬದಲಿಸುವಾಗ ಬಾಗಿಲು ಮುರಿಯುವ ರೀತಿಯಲ್ಲಿ ಬಾಗಿಲು ಬಡಿಯುತ್ತಿದ್ದರು. ಕಳೆದ ಒಂದೂವರೆ ವರ್ಷ ನನಗೆ ಸುಲಭದ್ದಾಗಿರಲಿಲ್ಲ. ಈ ಧಾರಾವಾಹಿಗೆ ಒಪ್ಪಿಕೊಂಡಿದ್ದು ನನ್ನ ಜೀವನದ ಅತ್ಯಂತ ಕೆಟ್ಟ ನಿರ್ಧಾರ. ಮೊದಲಿಗೆ ಇಷ್ಟವಿರಲಿಲ್ಲ. ಬಳಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರೊಡಕ್ಷನ್ ಹೌಸ್ ಮತ್ತು ನಿರ್ಮಾಪಕ ಕುಂದನ್ ಸಿಂಗ್ ನನಗೆ ಹಲವು ಬಾರಿ ಕಿರುಕುಳ ನೀಡಿದ್ದಾರೆಎಂದು ನೋವು ತೋಡಿಕೊಂಡಿದ್ದಾರೆ.
ಮಗು ಬೇಕು, ಮದ್ವೆ-ಹೆರಿಗೆ ಸಾಕಪ್ಪಾ ಸಾಕು! ಅಂಡಾಣು ಫ್ರೀಜ್ಗೆ ಮುಂದಾದ ಮತ್ತೋರ್ವ ಬಾಲಿವುಡ್ ನಟಿ