ತಾಯಿ ಮಕ್ಕಳ ವಿರುದ್ಧ ಸಿಡಿಮಿಡಿಗೊಳ್ಳುವುದು ಸಹಜ. ಬೈಗುಳ, ಗದರಿಸುವುದು ಇದ್ದಿದ್ದೇ. ಆದರೆ ಇಲ್ಲೊಬ್ಬ ತಾಯಿ ಬೈಗಳದಿಂದ ಆಕ್ರೋಶಗೊಂಡಿದ್ದಾನೆ. ನಿನಗೇನು ಹುಚ್ಚಾ ಎಂದು ತಾಯಿ ಬೈದಿದ್ದಾಳೆ. ಇಷ್ಟಕ್ಕೆ ಸಿಟ್ಟಿಗೆದ್ದ ಮಗ, ತಾಯಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾನೆ.
ಗುರುಗ್ರಾಂ(ಮಾ.11) ತಾಯಿ ಹಾಗೂ ಮಗನ ನಡುವೆ ಜಗಳವಾಗಿದೆ. ನಿನಗೇನು ಹುಚ್ಚಾ ಎಂದು ತಾಯಿ ಬೈದಿದ್ದಾಳೆ. ಇಷ್ಟೇ ನೋಡಿ ಆಗಿದ್ದು. ತಾಯಿ ಬೈಗುಳ ಮಾತಿಗೆ ಮಗ ರೊಚ್ಚಿಗೆದ್ದಿದ್ದಾನೆ. ತಾಯಿಗೆ ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ಗುರುಗ್ರಾಂನಲ್ಲಿ ನಡೆದಿದೆ. 59 ವರ್ಷದ ಮಹಿಳೆ ರಾನು ಶಾ ತೀವ್ರ ಸುಟ್ಟಗಾಯಗಳಿಂದ ಮೃತಪಪಟ್ಟಿದ್ದಾಳೆ. ಇತ್ತ ಕೆಲಸದ ನಿಮಿತ್ತ ಕೋಲ್ಕತಾಗೆ ತೆರಳಿದ ತಂದೆ ಮರಳಿ ಬಂದಾಗ ಮನೆ ಸ್ಮಶಾನ ಮೌನವಾಗಿದೆ. 27 ವರ್ಷದ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಗುರುಗ್ರಾಂ ಸೆಕ್ಟರ್ 24ರ ವಿಪುಲ್ ಗ್ರೀನ್ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಈ ಕುಟುಂಬ ವಾಸವಾಗಿತ್ತು. ತಂದೆ ಕೆಲದ ನಿಮಿತ್ತ ಕೋಲ್ಕತಾಗೆ ತೆರಳಿದ್ದರು. ಮನೆಯಲ್ಲಿ ತಾಯಿ ಹಾಗೂ ಮಗ ಇಬ್ಬರೇ ಇದ್ದರು. ಶನಿವಾರ(ಮಾ.09) ಇಬ್ಬರಿ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ಮಾಡಿದ್ದಾರೆ. ಮಗನ ಆಕ್ರೋಶ ನೋಡಿ ತಾಯಿ ಸುಮ್ಮನಾಗಿದ್ದಾರೆ. ಆದರೆ ರಾತ್ರಿ ವೇಳೆ ಅಪಾರ್ಟ್‌ಮೆಂಟ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ.
undefined
ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕುಡುಕ ಮಗನನ್ನು ಕೊಂದು ಆತ್ಮಹತ್ಯೆಯ ಕತೆ ಕಟ್ಟಿದ ತಂದೆ!
ತಕ್ಷಣವೇ ಪಕ್ಕದ ಮನೆ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿ ನೀಡಿದ್ದಾರೆ. ಪೊಲೀಸರು ಅಗ್ನಿಶಾಮದಳದ ಜೊತೆ ಆಗಮಿಸಿದ್ದಾರೆ. ನೇರವಾಗಿ ಹೊಗೆ ಬರುತ್ತಿರುವ ಅಪಾರ್ಟ್‌ಮೆಂಟ್ ಬ್ಲಾಕ್‌ಗೆ ತೆರಲಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆದಿತ್ತು. ಒಳ ಪ್ರವೇಶಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಕಾರಣ ತಾಯಿ ಬೆಂಕಿಯಲ್ಲಿ ಬೆಂದು ಹೋಗಿದ್ದರೆ, ಮಗ ಒಂದೆಡೆ ಕುಳಿತಿದ್ದ. ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಮಹಿಳೆಯನ್ನು ಪೊಲೀಸರು ಆಸ್ಪತ್ರೆ ಸಾಗಿಸಿದ್ದಾರೆ. ತೀವ್ರ ಸುಟ್ಟಗಾಯಗಳಿಂದ ಮಹಿಳೆ ಬದುಕುಳಿಯಲಿಲ್ಲ.
ಇತ್ತ 27ರ ಹರೆಯದ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಪುತ್ರ ಮಾನಸಿಕ ಅಸ್ವಸ್ಥನಾಗಿರುವುದು ಪತ್ತೆಯಾಗಿದೆ. ಇಷ್ಟೇ ಅಲ್ಲ ಘಟನೆ ಕುರಿತು ವಿವರಿಸಲು ಯುವಕನಿಗೆ ಸಾಧ್ಯವಾಗುತ್ತಿಲ್ಲ. ತಾಯಿ ಜೊತೆಗೆ ಜಗಳ ಮಾಡಿರುವುದನ್ನು ಒಪ್ಪಿಕೊಂಡಿರುವ ಯುವಕ ಇನ್ನುಳಿದ ಘಟನೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ದೂರವಾದ ಪತ್ನಿಗೆ ಬುದ್ಧಿ ಕಲಿಸಲು ಸುಪಾರಿ ನೀಡಿ ಮಗನನ್ನೇ ಕೊಂದ ಅಪ್ಪ
ಇತ್ತ ಬಾಗಿಲುಗಳು ತೆರೆದಿದ್ದರೂ ಮಹಿಳೆ ಯಾರ ಸಹಾಯಕ್ಕಾಗಿ ಅಥವಾ ಮನೆಯಿಂದ ಹೊರಗೋಡುವ ಪ್ರಯತ್ನ ಮಾಡಲಿಲ್ಲವೇಕೆ ಅನ್ನೋ ಅನುಮಾನಗಳನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಮಗನೇ ಮಾಡಿರುವ ಕೊಲೆಯೇ ಅಥವಾ ಅಚಾನಕ್ಕಾಗಿ ಸಂಭವಿಸಿದ ಕೃತ್ಯವೇ ಅನ್ನೋದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿರುವ ಪೊಲೀಸರು ಚಿಕಿತ್ಸೆ ನೀಡುತ್ತಿದ್ದಾರೆ.