ಗರ್ಲ್‌ ಫ್ರೆಂಡ್‌ ಮೋಸ ಮಾಡಿದ್ಳೆಂದು ಗಂಟಲು ಸೀಳಿ, ಮೃತದೇಹದೊಂದಿಗೆ ವಿಡಿಯೋ ಪೋಸ್ಟ್‌ ಮಾಡಿದ..!

By BK AshwinFirst Published Nov 16, 2022, 10:23 AM IST
Highlights

ದೆಹಲಿ ಬರ್ಬರ ಹತ್ಯೆ ಪ್ರಕರಣ ಮಾಸುವ ಮುನ್ನ ಮಧ್ಯ ಪ್ರದೇಶದಲ್ಲಿ ನಡೆದಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಗರ್ಲ್‌ಫ್ರೆಂಡ್‌ ಮೋಸ ಮಾಡಿದಳೆಂದು ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. 

ದೆಹಲಿಯಲ್ಲಿ ಶ್ರಧ್ದಾಳನ್ನು (Shraddha Walkar) ಅಫ್ತಾಬ್‌ (Aftab Poonawala) ಬರ್ಬರವಾಗಿ ಹತ್ಯೆ ನಡೆದಿರುವ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಈ ಘಟನೆ ಮಾಸುವ ಮುನ್ನವೇ ಮಧ್ಯಪ್ರದೇಶದ (Madhya Pradesh) ಜಬಲ್ಪುರದ (Jabalpur) ಮೂಲದ ಎಂದು ಹೇಳಲಾದ ವ್ಯಕ್ತಿಯೊಬ್ಬ ಮಹಿಳೆ (Women) ತನಗೆ ಮೋಸ ಮಾಡಿದಳು ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಕತ್ತು ಸೀಳಿ (Slit Throat) ಕೊಂದಿದ್ದಾನೆ. ಈ ಹತ್ಯೆ (Murder) ನಡೆದು ಹಲವು ದಿನಗಳು ಕಳೆದಿವೆ ಎಂದು ಹೇಳಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಬಲ್‌ಪುರ ಮೂಲದ ಮೇಖ್ಲಾ ರೆಸಾರ್ಟ್‌ನಲ್ಲಿ 25 ವರ್ಷದ ಶಿಲ್ಪಾ ಝಾರಿಯಾಳನ್ನು (Shilpa Jharia) ಕೊಂದು, ಆಕೆ ಸಾಯುವ ಮುನ್ನವೇ ರಕ್ತಸಿಕ್ತ ದೇಹದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಆರೋಪಿ ಪೋಸ್ಟ್ ಮಾಡಿದ್ದಾನೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆಗಿರುವ ಆಘಾತಕಾರಿ ವಿಡಿಯೋದಲ್ಲಿ ಆತ ನಂಬಿಕೆಗೆ ದ್ರೋಹ ಮಾಡಬೇಡಿ ಎಂದಿದ್ದಾನೆ. ಹಾಗೆ, ಸ್ವರ್ಗದಲ್ಲಿ ಮತ್ತೆ ಸಿಗೋಣ ಎಂದೂ ಹೇಳಿದ್ದಾನೆ. ಹಾಸಿಗೆಯಲ್ಲಿ ಮಲಗಿರುವ ರಕ್ತಸಿಕ್ತ ಮಹಿಳೆಯನ್ನು ಆತ ತೋರಿಸಿದ್ದು, ಗಂಟಲು ಸೀಳಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. 

ಇದನ್ನು ಓದಿ: Shraddha Murder Case: ಗೆಳತಿ ಹೆಣ ಇಟ್ಕೊಂಡೇ ಬೇರೆ ಹುಡ್ಗೀರ ಜತೆ ಅಫ್ತಾಬ್‌ ರಾಸಲೀಲೆ..!.

ತನ್ನನ್ನು ಪಾಟ್ನಾದ ವ್ಯಾಪಾರಿ ಎಂದು ಗುರುತಿಸಿಕೊಂಡಿರುವ ಈತನನ್ನು ಅಭಿಜಿತ್‌ ಎಂದು ಹೇಳಲಾಗಿದ್ದು, ಆತ ಜಿತೇಂದ್ರ ಕುಮಾರ್‌ನನ್ನು ತನ್ನ ಬ್ಯುಸಿನೆಸ್‌ ಪಾರ್ಟ್‌ನರ್‌ ಎಂದು ಹೆಸರಿಸುತ್ತಾನೆ ಮತ್ತು ಕೊಲೆಯಾದ ಮಹಿಳೆ ಆತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ವೈರಲ್‌ ವಿಡಿಯೋದಲ್ಲಿ ಆತ ಆರೋಪಿಸಿದ್ದಾನೆ. ಮಹಿಳೆಯ ಗಂಟಲು ಸೀಳಿದ ಸ್ವಲ್ಪ ಸಮಯದಲ್ಲೇ ಆತ ವಿಡಿಯೋ ಮಾಡಿದ್ದು, ಆ ವೇಳೆಗೆ ಆಕೆ ಇನ್ನೂ ಮೃತಪಟ್ಟಿರಲಿಲ್ಲ ಎಂದು ಹೇಳಲಾಗಿದೆ. 

ಜಿತೇಂದ್ರ ಅವರಿಂದ ಸುಮಾರು ₹ 12 ಲಕ್ಷ ಸಾಲ ಪಡೆದು ಜಬಲ್‌ಪುರಕ್ಕೆ ಮಹಿಳೆ ಪರಾರಿಯಾಗಿದ್ದಾಳೆ ಎಂದು ಅಭಿಜಿತ್ ಹೇಳಿಕೊಂಡಿದ್ದಾನೆ. ಹಾಗೂ, ಜಿತೇಂದ್ರ ಕುಮಾರ್‌ 
ಸೂಚನೆ ಮೇರೆಗೆ ಹತ್ಯೆ ಮಾಡಿದ್ದೇನೆ ಎಂದೂ ಆತ ಹೇಳಿದ್ದಾನೆ. ಜಿತೇಂದ್ರ ಅವರ ಸಹಾಯಕ ಸುಮಿತ್ ಪಟೇಲ್ ಎಂಬಾತನ ಹೆಸರನ್ನೂ ಸಹ ಆತ ವಿಡಿಯೋದಲ್ಲಿ ಹೇಳಿದ್ದಾನೆ. 

ಇದನ್ನೂ ಓದಿ: Delhi Shraddha Murder Case: ಶ್ರದ್ಧಾ ಕೊಂದ ಬಳಿಕ ಮತ್ತೊಬ್ಬಳನ್ನು ಮನೆಗೆ ಕರೆತಂದಿದ್ದ ಅಫ್ತಾಬ್
 
ಜಿತೇಂದ್ರ ಮತ್ತು ಸುಮಿತ್ ಇಬ್ಬರನ್ನೂ ಬಿಹಾರದಿಂದ ಬಂಧಿಸಲಾಗಿದ್ದು, ಸದ್ಯ ಜಬಲ್‌ಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೂ, ಈ ಸಂಬಂಧ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯಾಂಕಾ ಶುಕ್ಲಾ ಮಾತನಾಡಿದ್ದು, ಅಭಿಜಿತ್ ಪಾಟ್ನಾದಲ್ಲಿರುವ ಜಿತೇಂದ್ರ ಅವರ ಮನೆಯಲ್ಲಿ ಒಂದು ತಿಂಗಳ ಕಾಲ ತಂಗಿದ್ದನು 
ಬಿಹಾರ ಅಲ್ಲದೆ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನ ವಿವಿಧ ಭಾಗಗಳಿಗೆ ಅಭಿಜಿತ್‌ನನ್ನು ಪತ್ತೆ ಹಚ್ಚಲು ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ ಎಂದೂ ಅವರು ಹೇಳಿದರು.

ಕೊಲೆಯ ವಿವರಗಳನ್ನು ಹಂಚಿಕೊಂಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವೇಶ್ ಬಘೇಲ್, ಆರೋಪಿಗಳು ನವೆಂಬರ್ 6 ರಂದು ಮೇಖ್ಲಾ ರೆಸಾರ್ಟ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದ. ಆ ರಾತ್ರಿ ಅವನು ತನ್ನ ಕೋಣೆಯಲ್ಲಿ ಒಬ್ಬನೇ ಇದ್ದನು. ಮರುದಿನ, ಮಹಿಳೆ ಮಧ್ಯಾಹ್ನ ಅವನನ್ನು ರೆಸಾರ್ಟ್‌ಗೆ ಭೇಟಿಯಾಗಲು ಬಂದಳು ಮತ್ತು ಅವರು ಊಟಕ್ಕೆ ಆರ್ಡರ್ ಮಾಡಿದ್ದರು. ಸುಮಾರು ಒಂದು ಗಂಟೆಯ ನಂತರ, ಆರೋಪಿ ಒಬ್ಬನೇ ಹೋಟೆಲ್‌ ಕೋಣೆಯಿಂದ ಬೀಗ ಹಾಕಿ ಹೊರ ಹೋಗಿದ್ದಾನೆ ಎಂದು ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಪಡಿಸಿದವು ಎಂದು ಶಿವೇಶ್ ಬಘೇಲ್ ಹೇಳಿದ್ದಾರೆ. 

ಇದನ್ನೂ ಓದಿ: Delhi Shraddha Murder Case: ಮಹಿಳಾ ಹಕ್ಕು ಹೋರಾಟದ ಸೋಗು, ಗರ್ಲ್‌ಫ್ರೆಂಡನ್ನು 35 ಪೀಸ್‌ ಮಾಡಿದ ಪಾತಕಿ ಅಫ್ತಾಬ್‌

ಸಂತ್ರಸ್ಥೆಯ ಇನ್ಸ್ಟಾಗ್ರಾಮ್‌ ಅಕೌಂಟ್ ಮೂಲಕ ಈ ವಿಡಿಯೋ ಮಾಡಲಾಗಿದೆ. ಹಾಗೂ, ಆರೋಪಿ ಪಾಟ್ನಾದವನು ಅಲ್ಲ, ಗುಜರಾತ್ ಮೂಲದವನು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. 

click me!