Shraddha Murder Case: ಗೆಳತಿ ಹೆಣ ಇಟ್ಕೊಂಡೇ ಬೇರೆ ಹುಡ್ಗೀರ ಜತೆ ಅಫ್ತಾಬ್ ರಾಸಲೀಲೆ..!
ಶ್ರದ್ಧಾ ಹತ್ಯೆಗೈದ ಪಾತಕಿಯ ಇನ್ನಷ್ಟು ಕ್ರೌರ‍್ಯ ಬೆಳಕಿಗೆ ಬಂದಿದ್ದು, ಮನೆಗೇ ಯುವತಿಯರ ಕರೆತಂದು ರಾಸಲೀಲೆ ನಡೆಸುತ್ತಿದ್ದ ಎಂದು ಬೆಳಕಿಗೆ ಬಂದಿದೆ. ಶ್ರದ್ಧಾ ಮೃತದೇಹ ಮನೆಯಲ್ಲಿದ್ದಾಗಲೇ ಈ ರೀತಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ನವದೆಹಲಿ: ಮದುವೆಯಾಗಲು (Marriage) ಒತ್ತಾಯಿಸಿದಳು ಎನ್ನುವ ಕಾರಣಕ್ಕೆ ತನ್ನ ಪ್ರೇಯಸಿ ಶ್ರದ್ಧಾಳನ್ನು (Shraddha Walkar) ಹತ್ಯೆಗೈದು 35 ತುಂಡು ಮಾಡಿದ್ದ ದೆಹಲಿಯ ಅಫ್ತಾಬ್ ಪೂನಾವಾಲಾನ (Aftab Poonawala) ಮತ್ತಷ್ಟು ಲೈಂಗಿಕ ಹಪಾಹಪಿ, ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಪ್ರೇಯಸಿ ದೇಹವನ್ನು ಕತ್ತರಿಸಿ ಫ್ರಿಜ್‌ನಲ್ಲಿ (Refrigerator) ಇಟ್ಟಿದ್ದ ಸಮಯದಲ್ಲೂ ಅಫ್ತಾಬ್ ಮತ್ತಷ್ಟು ಯುವತಿಯರ (Girl Friends) ಜೊತೆ ಡೇಟಿಂಗ್ (Dating) ನಡೆಸಿ, ಅವರನ್ನು ಮನೆಗೆ ಕರೆತಂದು ಲೈಂಗಿಕ ಚಟುವಟಿಕೆ ನಡೆಸಿದ್ದ ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದು ಆತನ ಕುರಿತು ಸಾರ್ವಜನಿಕರಲ್ಲಿ ಅಹಸ್ಯ ಭಾವನೆ ಹುಟ್ಟುವಂತೆ ಮಾಡಿದೆ.
ಶ್ರದ್ಧಾ ಹತ್ಯೆಯಾದ 15-20 ದಿನಗಳಲ್ಲಿ ಅಫ್ತಾಬ್ ‘ಬಂಬಲ್’ (Bumble) ಡೇಟಿಂಗ್ ಆ್ಯಪ್‌ನಲ್ಲೇ ಮತ್ತಷ್ಟು ಯುವತಿಯರ ಸ್ನೇಹ ಬೆಳೆಸಿದ್ದು ಪತ್ತೆಯಾಗಿದೆ. ಈ ಪೈಕಿ ಹಲವರನ್ನು ಮನೆಗೆ ಕರೆತಂದು ಲೈಂಗಿಕ ಸಂಪರ್ಕ ಬೆಳೆಸಿದ್ದೆ ಎಂಬ ವಿಷಯವನ್ನು ಸ್ವತಃ ಅಫ್ತಾಬ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಯುವತಿಯರನ್ನು ಹೀಗೆ ಮನೆಗೆ ಕರೆ ತರುವಾಗ ಶ್ರದ್ಧಾಳ ದೇಹವನ್ನು ಫ್ರಿಜ್‌ನಿಂದ ಕಪಾಟಿಗೆ ವರ್ಗಾಯಿಸುತ್ತಿದ್ದೆ ಎಂದು ಪೊಲೀಸರ ಮುಂದೆ ಅಫ್ತಾಬ್ ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಆತ ಎಷ್ಟು ಜನ ಯುವತಿಯೊಂದಿಗೆ ನಂಟು ಬೆಳೆಸಿಕೊಂಡಿದ್ದ ಎಂಬ ಬಗ್ಗೆ ಬಂಬಲ್ ಆ್ಯಪ್‌ನಿಂದ ಮಾಹಿತಿ ಕೋರಲು ಪೊಲೀಸರು ನಿರ್ಧರಿಸಿದ್ದಾರೆ.
ಅಫ್ತಾಬ್‌ಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ಸಾಕ್ಷಿ..!
ಈ ಮಧ್ಯೆ, ಶ್ರದ್ಧಾಳನ್ನು ಕೊಲೆ ಮಾಡುವ ವೇಳೆ ಅಫ್ತಾಬ್ ಕೈಗೆ ಗಾಯವಾಗಿತ್ತು. ಆ ಗಾಯಕ್ಕೆ ಚಿಕಿತ್ಸೆ ನೀಡಿದ್ದ ವೈದ್ಯರನ್ನು ದೆಹಲಿ ಒಲೀಸರು ಪತ್ತೆ ಹಚ್ಚಿದ್ದಾರೆ. ಮೇ ತಿಂಗಳ ಕೊನೆಯ ವಾರದಲ್ಲಿ ಅಫ್ತಾಬ್‌ಗೆ 5 - 6 ಹೊಲಿಗೆ ಹಾಕಲಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪೊಲೀಸರು ಅಫ್ತಾಬ್ ಮನೆಯಲ್ಲಿ ಔಷಧಿಯ ಚೀಟಿಯನ್ನು ಪತ್ತೆಹಚ್ಚಿದ್ದರು ಅದರ ನೆರವಿನಿಂದ ವೈದ್ಯರನ್ನು ಅವರು ಪತ್ತೆಹಚ್ಚಿದ್ದು, ಅವರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಈಗ ಶ್ರದ್ಧಾ ಕೊಲೆ ಪ್ರಕರಣದಲ್ಲಿ ಆ ವೈದ್ಯರನ್ನೇ ಪ್ರಮುಖ ಸಾಕ್ಷಿಯನ್ನಾಗಿ ಬಳಸಿಕೊಳ್ಳಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Delhi Shraddha Murder Case: ಶ್ರದ್ಧಾ ಕೊಂದ ಬಳಿಕ ಮತ್ತೊಬ್ಬಳನ್ನು ಮನೆಗೆ ಕರೆತಂದಿದ್ದ ಅಫ್ತಾಬ್
ಶ್ರದ್ಧಾ ಇನ್‌ಸ್ಟಾದಿಂದ ಮೆಸೇಜು:
ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕವೂ, ಅಫ್ತಾಬ್ ಆಕೆಯ ಇನ್ಸಾ$್ಟಗ್ರಾಂ ಖಾತೆಯಿಂದ ಆಕೆಯ ಸ್ನೇಹಿತರಿಗೆ ಸಂದೇಶ ರವಾನಿಸುತ್ತಿದ್ದ ಮತ್ತು ಆಕೆಯ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನೂ ಪಾವತಿಸುವ ಮೂಲಕ ಶ್ರದ್ಧಾ ಬದುಕಿದ್ದಾಳೆ ಎಂದು ಬಿಂಬಿಸುವ ಯತ್ನ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಲವ್ ಜಿಹಾದ್?
ಈ ನಡುವೆ ಶ್ರದ್ಧಾ ಹತ್ಯೆ ಪ್ರಕರಣವನ್ನು ಲವ್ ಜಿಹಾದ್ ಕೋನದಲ್ಲೂ ತನಿಖೆ ನಡೆಸಬೇಕೆಂದು ಕೋರಿ ತಾವು ದೆಹಲಿ ಪೊಲೀಸರಿಗೆ ಪತ್ರ ಬರೆಯುವುದಾಗಿ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಹೇಳಿದ್ದಾರೆ.
ಇದನ್ನೂ ಓದಿ: Delhi Shraddha Murder Case: ಮಹಿಳಾ ಹಕ್ಕು ಹೋರಾಟದ ಸೋಗು, ಗರ್ಲ್‌ಫ್ರೆಂಡನ್ನು 35 ಪೀಸ್ ಮಾಡಿದ ಪಾತಕಿ ಅಫ್ತಾಬ್
ಅಫ್ತಾಬ್ ಗಲ್ಲಿಗೇರಿಸಿ ಎಂದ ಶ್ರದ್ಧಾ ತಂದೆ
ಲವ್ ಜಿಹಾದ್ ಕೂಡ ನನ್ನ ಪುತ್ರಿ ಶ್ರದ್ಧಾ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ನನಗಿದೆ. ದೆಹಲಿ ಪೊಲೀಸರು ತನಿಖೆಯನ್ನು ಸರಿಯಾದ ದಿಶೆಯಲ್ಲೇ ಮುಂದುವರೆಸುತ್ತಾರೆ ಎಂಬ ವಿಶ್ವಾಸವಿದೆ. ನನ್ನ ಮಗಳ ಹತ್ಯೆಗೈದ ಆಫ್ತಾಬ್‌ನಿಗೆ ಗಲ್ಲುಶಿಕ್ಷೆ ನೀಡಿ ಎಂದು ಆಗ್ರಹಿಸುತ್ತೇನೆ ಎಂದು ಶ್ರದ್ಧಾ ತಂದೆ ವಿಕಾಸ್ ಹೇಳಿದ್ದಾರೆ.
ಹೊಸ ಹುಡುಗಿ ಕಾರಣಕ್ಕೆ ಶ್ರದ್ಧಾ ಹತ್ಯೆ
ಆಫ್ತಾಬ್ ಬೇರೊಂದು ಯುವತಿ ಜತೆ ಮೆಸೇಜು ಮಾಡುತ್ತಿರುವುದನ್ನು ನೋಡಿ ಶೃದ್ಧಾ ಆರಂಭಿಸಿದ ಜಗಳ ಆಕೆಯ ಹತ್ಯೆಯಲ್ಲಿ ಕೊನೆಗೊಂಡಿತು. ಶ್ರದ್ಧಾಳ ಎದೆಯ ಮೇಲೆ ಕುಳಿತು ಆಕೆಯ ಕತ್ತು ಹಿಸುಕಿ ಕೊಂದಿದ್ದೆ ಎಂದು ವಿಚಾರಣೆ ವೇಳೆ ಹಂತಕ ಆಫ್ತಾಬ್ ಬಾಯಿ ಬಿಟ್ಟಿದ್ದಾನೆ.
ಇದನ್ನೂ ಓದಿ: ದೇಶವನ್ನು ಬೆಚ್ಚಿ ಬೀಳಿಸಿದ ಭೀಕರ ಹತ್ಯೆ ಪ್ರಕರಣಗಳು..!
ರಕ್ತದ ಕಲೆ ಅಳಿಸುವ ಬಗ್ಗೆ ಗೂಗಲ್ ಮಾಡಿದ ಹಂತಕ
ಶ್ರದ್ಧಾ ಕೊಂದ ಬಳಿಕ ಆಕೆಯ ರಕ್ತದ ಕಲೆಯನ್ನು ಅಳಿಸುವ ವಿಧಾನದ ಬಗ್ಗೆ, ದೇಹವನ್ನು ಕತ್ತರಿಸುವ ಮೊದಲು, ಮಾನವನ ದೇಹ ರಚನೆ ಬಗ್ಗೆ, ಹತ್ಯೆ ಬಳಿಕ ಸಾಕ್ಷ್ಯ ಹೇಗೆ ನಾಶಪಡಿಸುವುದು ಹೇಗೆ ಎಂದು ಅಫ್ತಾಬ್ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದ.
ಛತ್ತರ್‌ಪುರ್ ಅರಣ್ಯದಲ್ಲಿ ದೇಹದ 13 ಭಾಗಗಳು ಪತ್ತೆ
ಹತ್ಯೆ ಬಳಿಕ ಶ್ರದ್ಧಾಳ ದೇಹದ ಭಾಗಗಳನ್ನು ಎಸೆದ ದಕ್ಷಿಣ ದೆಹಲಿಯ ಛತ್ತÜರ್‌ಪುರ್ ಅರಣ್ಯ ಪ್ರದೇಶಕ್ಕೆ ಪೊಲೀಸರು ಹಂತಕ ಆಫ್ತಾಬ್ ಪೂನಾವಾಲಾನನ್ನು ಕರೆದುಕೊಂಡು ಹೋಗಿದ್ದು, ಸುಮಾರು 3 ಗಂಟೆಗಳ ಬಳಿಕ ಆಕೆಯ ದೇಹದ ಭಾಗಗಳನ್ನು ಎಸೆದ ನಿರ್ದಿಷ್ಟಪ್ರದೇಶವನ್ನು ಪತ್ತೆ ಮಾಡಿದ್ದಾರೆ. ಅರಣ್ಯದಲ್ಲಿ ಇಡೀ ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಸ್ಥಳದಲ್ಲಿ ದೇಹದ 13 ಭಾಗಗಳು ಪತ್ತೆಯಾಗಿವೆ. ಇವುಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಬಳಿಕ ಇವು ಶ್ರದ್ಧಾಳದ್ದೇ ಭಾಗಗಳೇ ಎಂಬುದರ ಬಗ್ಗೆ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮದ್ವೆ ಆಗು ಎಂದಿದ್ದೇ ತಪ್ಪಾಯ್ತು: ಗೆಳತಿಯ ಕೊಂದು 35 ಪೀಸ್ ಮಾಡಿದ ಪಾಪಿ