ನಮ್ಮ ಹೆಚ್.ಡಿ.ರೇವಣ್ಣ ಸಾಹೇಬ್ರು ದೇವರಂತೋರು, ಕಂಪ್ಲೇಂಟ್‌ ಕೊಟ್ಟಿರೋ ನನ್ ಸೊಸೆ ನಡತೆಯೇ ಸರಿಯಿಲ್ಲ

By Sathish Kumar KHFirst Published Apr 29, 2024, 3:54 PM IST
Highlights

ಹಾಸನದಲ್ಲಿ ರೇವಣ್ಣ ಸಾಹೇಬ್ರು, ಭವಾನಿ ಅಮ್ಮಾ ದೇವರಂತೋರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ, ದೂರು ಕೊಟ್ಟಿರುವ ನನ್ನ ಸೊಸೆ ನಡತೆಯೇ ಸರಿಯಾಗಿಲ್ಲ ಎಂದು ದೂರುದಾರ ಮಹಿಳೆ ಅತ್ತೆ ತಿಳಿಸಿದ್ದಾರೆ.

ಹಾಸನ (ಏ.29): ನಮ್ಮ ಕಷ್ಟ, ಸುಖವನ್ನ ಭವಾನಿ ಅಮ್ಮಾ ನೋಡಿಕೊಂಡಿದ್ದಾರೆ. ಆದರೆ, ಈಗ ರೇವಣ್ಣ ಸಾಹೇಬ್ರು ಆಗೂ ಪ್ರಜ್ವಲ್ ಸಾಹೇಬ್ರ ಬಗ್ಗೆ ಆರೋಪ ಮಾಡಲಾಗಿದೆ. ಆದರೆ, ಇಲ್ಲಿ ದೂರು ಕೊಟ್ಟ ನನ್ನ ಸೊಸೆಯ ನಡತೆಯೇ ಸರಿಯಿಲ್ಲ. ಐದು ವರ್ಷದ ಹಿಂದಿನ ಘಟನೆ ಮುಚ್ಚಿಟ್ಟು ಈಗ ದೂರು ಕೊಡುವುದರ ಉದ್ದೇಶವೇ ಬೇರೆಯಾಗಿದೆ ಎಂದು ದೂರುದಾರ ಮಹಿಳೆಯ ಅತ್ತೆ ಆರೋಪ ಮಾಡಿದ್ದಾರೆ.

ಹೊಳೆನರಸೀಪುರದಲ್ಲಿ ಪ್ರಜ್ವಲ್, ರೇವಣ್ಣ ವಿರುದ್ಧ ದೂರು ಹಿನ್ನೆಲೆಯಲ್ಲಿ ದೂರುದಾರ ಮಹಿಳೆ ವಿರುದ್ಧ ಆಕೆಯ ಸಂಬಂಧಿಕರಿಂದಲೇ ಹಾಸನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ಧಿಗೋಷ್ಠಿ ನಡೆಸಿದ್ದಾರೆ. ದೂರುದಾರ ಮಹಿಳೆಯ ಅತ್ತೆ ಗೌರಮ್ಮ ಹಾಗೂ ದೂರುದಾರ ಮಹಿಳೆಗೆ ಪರಿತರಿರುವ ಶಿಲ್ಪ, ವೇಧ, ಜ್ಯೋತಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ನಮ್ಮ ಕಷ್ಟ-ಸುಖವನ್ನ ಭವಾನಿ ಅಮ್ಮಾ ನೋಡಿದ್ದಾರೆ. ದೂರುದಾರರ ನಡೆತೆ ಕೂಡ ಸರಿ ಇರಲಿಲ್ಲ. ಅವರಿಗೆ ಯಾವ ದೌರ್ಜನ್ಯ ಆಗಿಲ್ಲ. ಕಳೆದ 5 ವರ್ಷದಿಂದ ಏನು ಮಾಡುತ್ತಿದ್ದರು? ಈಗ ಏಕೆ ದೂರು ನೀಡಿದ್ದಾರೆ. ಗೌಡರ ಮನೆಯಲ್ಲಿ ಅವರು ಏನು ಮಾಡಿಲ್ಲ. ಕಷ್ಟವೆಂದು ಹೋದವರಿಗೆ ಸಹಾಯ ಮಾಡಿದ್ದಾರೆ. ಗೌಡರ ಮನೆಯವರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಹೇಳಿದರು.

ಸಂಸದ ಪ್ರಜ್ವಲ್‌ನಿಂದ 16ರಿಂದ 50 ವರ್ಷದ 300ಕ್ಕೂ ಅಧಿಕ ‌ಮಹಿಳೆಯರ ಮೇಲೆ ಅತ್ಯಾಚಾರ; ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ

ನಮ್ಮ ಸಾಹೇಬರ ಮನೆಯಲ್ಲಿ ದೌರ್ಜನ್ಯ ನಡೆದಿದೆ ಎಂದಾರೆ ಕಳೆದ 5 ವರ್ಷದಿಂದ ಮಹಿಳೆ ಏಕೆ ದೂರು ನೀಡಿಲ್ಲ. ಈಗ ಏಕೆ ಬಂದಿದ್ದಾರೆ. ಇಲ್ಲಿ ದೂರು ನೀಡಿರುವವಳದ್ದೇ ತಪ್ಪು ನಡೆದಿದೆ. ಗೌಡರ ಮನೆಗೆ ಕಪ್ಪು ಚುಕ್ಕಿ ತರಬೇಕು ಅಂತ ಈ ರೀತಿ ಮಾಡಿದ್ದಾಳೆ. ಇಷ್ಟು ವರ್ಷ ಯಾವುದೇ ಕಪ್ಪು ಚುಕ್ಕಿ ಇಲ್ಲದೇ ರಾಜಕೀಯ ಮಾಡಿದ್ದಾರೆ. ಇನ್ನು ಭವಾನಿ ಅಕ್ಕ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ. ಮೇಡಂ, ಸಾಹೇಬ್ರು ನಮಗೆ ದೇವರಿದ್ದಂತೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಜ್ವಲ್ ರೇವಣ್ಣ ಎಲ್ಲ ದಾಖಲೆ ಮುರಿದಿದ್ದಾರೆ, ಹಾಸನದಲ್ಲಿ 3000ಕ್ಕೂ ಅಧಿಕ ವಿಡಿಯೋಗಳು ಹರಿದಾಡ್ತಿವೆ; ಅಲ್ಕಾ ಲಂಬಾ

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ಸತ್ಯವಾಗಿಲ್ಲ. ಟೆಕ್ನಾಲಜಿ ಬಳಸಿ ಏನು ಬೇಕಾದ್ರು ಮಾಡಿರಬಹುದು. ಈಗ ರೇವಣ್ಣ ಸಾಹೇಬರ ಮೇಲೆ ದೂರು ನೀಡಿದ ಮಹಿಳೆ ಕಳೆದ 5 ವರ್ಷದ ಹಿಂದೆಯೇ ಅವರ ಮನೆಯನ್ನು ಬಿಟ್ಟು ಹೋಗಿದ್ದಾಳೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ಆಗಿದ್ದರೆ ಕಳೆದ 5 ವರ್ಷಗಳ ಹಿಂದೆಯೇ ದೂರು ನೀಡಬೇಕಿತ್ತು. ಅದನ್ನು ಬಿಟ್ಟು ಈಗ ದೂರು ಕೊಟ್ಟಿರುವುದರ ಹಿಂದಿನ ಉದ್ದೇಶ ಬೇರೆಯೇ ಇದೆ ಎಂದು ದೂರುದಾರ ಮಹಿಳೆ ವಿರುದ್ಧ ಆರೋಪ ಮಾಡಿದ್ದಾರೆ.

click me!