ಕೊಪ್ಪಳ: ಶೀಲ ಶಂಕಿಸಿ ಪತ್ನಿ ಕೊಂದು ಅವಸರದಲ್ಲಿ ಮೃತದೇಹ ದಹನ..!

By Kannadaprabha News  |  First Published Sep 9, 2024, 3:42 PM IST

ಪತ್ನಿಯ ಶೀಲದ ಬಗ್ಗೆ ಶಂಕಿಸಿ, ಮಕ್ಕಳಾಗದ ಕಾರಣ ಅವಳೊಂದಿಗೆ ಜಗಳ ಮಾಡಿ, ಅವಳನ್ನು ಸೆ. 7ಕ್ಕೆ ತಡರಾತ್ರಿ ಸುಮಾರಿಗೆ ತನ್ನ ಮನೆಯ ಬೆಡ್ ರೂಮಿನಲ್ಲಿ ಕಟ್ಟಿಗೆಯಿಂದ ಮುಖಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದಾನೆ. ಬಳಿಕ ಕುಟುಂಬದೊಂದಿಗೆ ಸೇರಿಕೊಂಡು ಕೊಲೆ ಮಾಡಿದ ವಿಷಯವನ್ನು ಮುಚ್ಚಿಟ್ಟು, ಮೃತಳ ತಂದೆ-ತಾಯಿಗೆ ಸುಳ್ಳು ಹೇಳಿ, ಮೃತದೇಹವನ್ನು ಅವಸರದಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟಿದ್ದಾನೆ ಎನ್ನಲಾಗಿದೆ.


ಕುಕನೂರು(ಸೆ.09):  ತಾಲೂಕಿನ ಅರಕೇರಿ ಗ್ರಾಮದಲ್ಲಿ ಶೀಲದ ಮೇಲೆ ಸಂಶಯಪಟ್ಟು ಗಂಡ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಆರಕೇರಿ ಗ್ರಾಮದಲ್ಲಿ ಸೆ. 7ಕ್ಕೆ ತಡರಾತ್ರಿ (1 ಗಂಟೆಗೆ) ಈ ಘಟನೆ ನಡೆದಿದೆ. ಮಹಿಳೆ ಗೀತಾ (27) ಅವರನ್ನು ಪತಿ ದೇವರೆಡ್ಡೆಪ್ಪ ಮಲ್ಲಾರೆಡ್ಡೆಪ್ಪ ಭಾವಿಕಟ್ಟಿ ಕೊಲೆಗೈದಿದ್ದಾನೆ.

ಪತ್ನಿಯ ಶೀಲದ ಬಗ್ಗೆ ಶಂಕಿಸಿ, ಮಕ್ಕಳಾಗದ ಕಾರಣ ಅವಳೊಂದಿಗೆ ಜಗಳ ಮಾಡಿ, ಅವಳನ್ನು ಸೆ. 7ಕ್ಕೆ ತಡರಾತ್ರಿ ಸುಮಾರಿಗೆ ತನ್ನ ಮನೆಯ ಬೆಡ್ ರೂಮಿನಲ್ಲಿ ಕಟ್ಟಿಗೆಯಿಂದ ಮುಖಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದಾನೆ. ಬಳಿಕ ಕುಟುಂಬದೊಂದಿಗೆ ಸೇರಿಕೊಂಡು ಕೊಲೆ ಮಾಡಿದ ವಿಷಯವನ್ನು ಮುಚ್ಚಿಟ್ಟು, ಮೃತಳ ತಂದೆ-ತಾಯಿಗೆ ಸುಳ್ಳು ಹೇಳಿ, ಮೃತದೇಹವನ್ನು ಅವಸರದಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟಿದ್ದಾನೆ ಎನ್ನಲಾಗಿದೆ.

Latest Videos

undefined

ಕೊಪ್ಪಳ: ಕುಷ್ಟಗಿ ಬಳಿ ಬೈಕ್‌ಗೆ ಗುದ್ದಿದ ಲಾರಿ, ಸ್ಥಳದಲ್ಲೇ ಇಬ್ಬರ ದುರ್ಮರಣ

ಕೊಲೆ ಮಾಡಿದವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಮೃತಳ ಸಹೋದರ ಸಿದ್ದಾರೆಡ್ಡಿ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಲೆಗೈದ ಆರೋಪಿ ದೇವರಡ್ಡೆಪ್ಪ ಹಾಗೂ ಆತನ ತಂದೆ ಮಲ್ಲಾರೆಡ್ಡೆಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

click me!