ಕಾರು ಚಾಲಕನ ಕೈ-ಕಾಲು ಕಟ್ಟಿ ನೇಣಿಗೆ, ಮಾಜಿ DCM ಸವದಿ ಸಹೋದರನ ಡ್ರೈವರ್ ಭೀಕರ ಹತ್ಯೆ

By Ramesh BFirst Published Mar 13, 2022, 7:03 PM IST
Highlights

* ಕಾರು ಚಾಲಕನ ಕೈ-ಕಾಲು ಕಟ್ಟಿ ನೇಣು ಬಿಗಿದ ದುಷ್ಕರ್ಮಿಗಳು
* ಮಾಜಿ DCM ಸವದಿ ಸಹೋದರನ ಡ್ರೈವರ್ ಭೀಕರ ಹತ್ಯೆ
* ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ನಡೆದ ಘಟನೆ

ಬೆಳಗಾವಿ, (ಮಾ.13): ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸಹೋದರನ ಕಾರು ಚಾಲಕನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ನಡೆದಿದೆ.

ಲಕ್ಷ್ಮಣ ಸವದಿ ಸಹೋದರ ಪರಪ್ಪ ಸವದಿ ಅವರ ಕಾರು ಚಾಲಕನಾಗಿದ್ದ 25 ವರ್ಷದ ಸಿದ್ಧಾರೂಢ ಶಿರಗುಪ್ಪ ಹತ್ಯೆಯಾದ ವ್ಯಕ್ತಿ. ದರೂರು ಗ್ರಾಮದ ಸಿದ್ಧಾರೂಢ ಶಿರಗುಪ್ಪನನ್ನು ಅಥಣಿ ಬಳಿ ಕೈ-ಕಾಲು ಕಟ್ಟಿ ನೇಣು ಬಿಗಿದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Greater Noida ಕುಡಿಯೋದ್ ಬಿಡು ಎಂದಿದ್ದಕ್ಕೆ ಅಕ್ಕನಿಗೆ ಗುಂಡಿಕ್ಕಿ ಕೊಂದ!

ಕಳೆದ ರಾತ್ರಿ ಸಿದ್ಧಾರೂಢ, ಪರಪ್ಪ ಸವದಿ ಜತೆ ಉಗಾರ ಗ್ರಾಮಕ್ಕೆ ತೆರಳಿದ್ದ. ತಡ ರಾತ್ರಿ 11 ಗಂಟೆ ಸುಮಾರಿಗೆ ಅಥಣಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ಕಾರು ಚಾಲಕನ್ನು ಹಿಡಿದು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ತಾಯಿ ಬೈದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಗ
ಬೆಂಗಳೂರು(ಮಾ.13): ತಾಯಿ ಬೈದಿದ್ದಕ್ಕೆ ಮಗ ಆತ್ಮಹತ್ಯೆಗೆ(Suicide) ಶರಣಾದ ಘಟನೆ ಸುಂಕದಕಟ್ಟೆ ಬಳಿಯ ಶ್ರೀನಿವಾಸ್ ನಗರದ ಪೈಪ್ ಲೈನ್ ರಸ್ತೆಯ ಮನೆಯಲ್ಲಿ ಇಂದು(ಭಾನುವಾರ) ನಡೆದಿದೆ. ಸಂಜಯ್(22) ಎಂಬಾತನೇ ಆತ್ಮಹತ್ಯೆಗೆ ಮಾಡಿಕೊಂಡವನಾಗಿದ್ದಾನೆ. 

ಕಳೆದ ಮೂರು ದಿನಗಳಿಂದ ಸಂಜಯ್ ಮನೆಗೆ ಬಂದಿರಲಿಲ್ಲ. ಯಾವುದೇ ಕೆಲಸಕ್ಕೆ ಹೋಗದೇ ಸಂಜಯ್‌ ಅಲೆದಾಡುತ್ತಿದ್ದ, ಹೀಗಾಗಿ ತಂದೆ ತಾಯಿ(Mother) ಮಗನಿಗೆ ಬೈದು ಬುದ್ದಿವಾದ ಹೇಳಿದ್ದರು ಎಂದು ಹೇಳಲಾಗುತ್ತಿದೆ. ಬುದ್ದಿವಾದ ಹೇಳಿದಕ್ಕೆ ಸಂಜಯ್ ತನ್ನ ತಾಯಿಯನ್ನೇ ಬೈದು ಕತ್ತು ಹಿಸುಕೋದಕ್ಕೆ ಹೋಗಿದ್ದನಂತೆ. ಈ ವೇಳೆ ತಂದೆ(Father) ತಡೆದು ಮಗನಿಗೆ ಹೊಡೆದಿದ್ದರು. ಹೀಗಾಗಿ ಎಲ್ಲರೂ ನನಗೆ ಬೈದಿದ್ದಾರೆ ಎಂದು ಬೇಜರಾಗಿದ್ದನಂತೆ.  ಬಳಿಕ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೇಲ್‌ನಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ. 

ಸಿಗಲಿಲ್ಲ ಸಿಂಧುತ್ವ: ಕೆಎಸ್‌ಆರ್‌ಟಿಸಿ ಡ್ರೈವರ್‌ ಆತ್ಮಹತ್ಯೆ
ಬೀದರ್‌: ಕೆಎಸ್‌ಆರ್‌ಟಿಸಿ‌ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ನಡೆದಿದೆ.

ಸಾರಿಗೆ ಬಸ್ ಚಾಲಕ ಓಂಕಾರ್ ಶೇರಿಕರ್ (40) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಲ್ಲಿ ಕೆಎಸ್‌ಆರ್‌ಟಿಸಿ ಡಿಪೋನಲ್ಲಿ ಡ್ರೈವರ್ ಆಗಿದ್ದರು.

ಎಸ್‌ಟಿ ಜಾತಿ ಪ್ರಮಾಣ ಪತ್ರದ ಸಿಂಧುತ್ವ ನೀಡದೇ ಅಧಿಕಾರಿಗಳಿಂದ ವಿಳಂಬ ಮಾಡಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 8 ಲಕ್ಷ ರೂ.ವರೆಗೂ ಖರ್ಚು‌ ಮಾಡಿದ್ದರೂ‌ ಸಿಂಧುತ್ವ ನೀಡದೇ ಅಧಿಕಾರಿಗಳು ಸತಾಯಿಸಿದ್ದರಿಂದ ಓಂಕಾರ್‌ ಅವರು ಬೇಸತ್ತು ಹೋಗಿದ್ದರು.

ಕಂದಾಯ ಇಲಾಖೆ ಅಧಿಕಾರಿಗಳ ಬೇಜವಬ್ದಾರಿತನ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳುತ್ತಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪತ್ನಿ, ನಾಲ್ಕು ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 

ಬೆಳಗಾವಿ ಡಿಸಿಸಿ ಬ್ಯಾಂಕ್‍ ದೋಚಿದ್ದ ಪ್ರಕರಣ ಬೇಧಿಸಿದ ಪೊಲೀಸರು
ಬೆಳಗಾವಿ,ಮಾ.13- ನಕಲಿ ಕೀ ಬಳಸಿ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್‍ನ ಮುರುಗೋಡು ಶಾಖೆಯಲ್ಲಿ 6 ಕೋಟಿಗೂ ಅಕ ಮೌಲ್ಯದ ಹಣ ಮತ್ತು ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.ಬ್ಯಾಂಕ್ ಸಿಬ್ಬಂದಿಯೇ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಕಳವಾದ ಹಣ, ಚಿನ್ನಾಭರಣವನ್ನು ಸಿಬ್ಬಂದಿಯೊಬ್ಬರ ಹೊಲದಲ್ಲಿ ಹೂತಿಡಲಾಗಿತ್ತು ಎನ್ನಲಾಗಿದೆ.

ಮಾರ್ಚ್ 5ರ ರಾತ್ರಿ ಮುರುಗೋಡು ಶಾಖೆಯಲ್ಲಿ ಬರೋಬ್ಬರಿ 6 ಕೋಟಿಗೂ ಅಕ ಮೌಲ್ಯದ ಹಣ, ಚಿನ್ನಾಭರಣವನ್ನು ನಕಲೀ ಕೀ ಬಳಸಿ ಕಳವು ಮಾಡಿದ್ದರು. 4.37 ಕೋಟಿ ನಗದು, 1.63 ಕೋಟಿ ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ಯಲಾಗಿತ್ತು. ತೀವ್ರ ತನಿಖೆ ನಡೆಸಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು, ವಿವರಗಳನ್ನು ಸದ್ಯದಲ್ಲೇ ಬಹಿರಂಗಪಡಿಸಲಿದ್ದಾರೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಪ್ರಮಾಣದ ವಹಿವಾಟು ನಡೆಸುವ ಬ್ಯಾಂಕ್ ಆಗಿದೆ. ಮುರುಗೋಡು ಶಾಖೆಯಲ್ಲೂ ಕೂಡ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ಕೃಷಿ ಸಾಲ, ಚಿನ್ನಾಭರಣಗಳನ್ನು ಅಡಮಾನವಿಟ್ಟುಕೊಂಡು ಸಾಲ ನೀಡಲಾಗುತ್ತದೆ.

ಅಪಾರ ಪ್ರಮಾಣದ ಚಿನ್ನಾಭರಣ ಅಡವಿಟ್ಟುಕೊಂಡು ಸಾಲ ನೀಡಿರುವ ಮಾಹಿತಿ ಪಡೆದ ಸಿಬ್ಬಂದಿಯೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

click me!