ಚಿತ್ರದುರ್ಗದಲ್ಲಿ ಸಿನಿಮೀಯ ಶೈಲಿಯಲ್ಲಿ ಉದ್ಯಮಿ ಮನೆಗೆ ನುಗ್ಗಿ ರಾಬರಿ ನಡೆಸಿದ್ದ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.18): ಸಿನಿಮೀಯ ಶೈಲಿಯಲ್ಲಿ ಮನೆಗೆ ನುಗ್ಗಿ ರಾಬರಿ ನಡೆಸಿದ್ದ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಕಳೆದೊಂದು ವಾರದಿಂದ ಆತಂಕಗೊಂಡಿದ್ದ ಜಿಲ್ಲೆಯ ಜನರ ಆತಂಕ ದೂರ ವಾಗಿದೆ. ಆರೋಪಿಗಳ ಹಿನ್ನೆಲೆ ಬಗೆದಷ್ಟು ಬಯಲಾಗ್ತಿರೋದಕ್ಕೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
undefined
ಜುಲೈ 8ರಂದು ನಗರದ ಬ್ಯಾಂಕ್ ಕಾಲೋನಿ ಬಳಿ ಇರುವ ಉದ್ಯಮಿ ನಜೀರ್ ಅಹ್ಮದ್ ಮನೆಗೆ ನುಗ್ಗಿ, ಮನೆಯಲ್ಲಿದ್ದ ಏಳು ಮಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಖದೀಮರು ರಾಬರಿ ನಡೆಸಿದ್ದರು. ಪಿಸ್ತೂಲು ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಕೊಲೆ ಬೆದರಿಕೆ ಹಾಕಿ, 12 ತೊಲ ಬಂಗಾರವನ್ನು ದೋಚಿ, 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಇಬ್ಬರನ್ನು ಅಪಹರಿಸಿದ್ದರು. ತಮ್ಮ ಜೊತೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಹಣ ಸುಲಿಗೆ ಮಾಡಿದ್ದರು. ಆದ್ರೆ ದಾವಣಗೆರೆಯಲ್ಲಿ ಆರೋಪಿಗಳಿಗೆ ಹಣ ಕೊಟ್ಟವರು ಪೊಲೀಸರಿಗೆ ಮಾಹಿತಿ ನೀಡಿದ್ದರ ಪರಿಣಾಮ ಚಿತ್ರದುರ್ಗ ಹಾಗು ದಾವಣಗೆರೆ ಪೊಲೀಸರ ಉತ್ತಮ ಕಾರ್ಯಾಚರಣೆಯಿಂದ ಆರೋಪಿಗಳ ಕಾರ್ ಚೇಸ್ ಮಾಡಿ ಹಣ ಹಾಗೂ ಆರೋಪಿಗಳ ಬಳಿ ಬಂಧಿತರಾಗಿದ್ದವರನ್ನು ಕಾಪಾಡುವಲ್ಲಿ ಯಶಸ್ವಿ ಆದರು.
ಇದನ್ನೂ ಓದಿ:ಸಿನೆಮಾ ಸ್ಟೈಲ್‌ನಲ್ಲಿ ಉದ್ಯಮಿ ಮನೆ ದರೋಡೆ, ಮನೆ ಮಂದಿಯನ್ನು ತಂತಿಯಿಂದ ಕಟ್ಟಿ 50 ಲಕ್ಷ ದೋಚಿದ ಕಳ್ಳರು!
ಆ ದಿನ ಓರ್ವ ಆರೋಪಿ ಮಾತ್ರ ಪೊಲೀಸರ ಕೈಗೆ ಸಿಕ್ಕಿದ್ದನು. ದರೋಡೆಕೋರ ಗಾಂಜಾ ಸೇವನೆ ಮಾಡಿದ್ದರ ಪರಿಣಾಮ ಅವನನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ವಿಚಾರಣೆ ನಡೆಸಿದಾಗ ಘಟನೆಯ ಪೂರ್ಣ ಅಂಶವನ್ನು ತಿಳಿಸಿದ್ದಾನೆ.
ಇನ್ನೂ ಈ ಖತರ್ನಾಕ್ ಕಳ್ಳರ ಗ್ಯಾಂಗ್ ಹಿಡಿಯೋದಕ್ಕೆ ನಮ್ಮ ಕೋಟೆನಾಡಿನ ಪೊಲೀಸರು ಸಖತ್ ಕಷ್ಟ ಪಟ್ಟಿದ್ದಾರೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಮೊದಲನೇ ಆರೋಪಿ ಸಾಕಿಬ್ ವಿಚಾರಣೆ ನಡೆಸಿದಾಗ ಇನ್ನುಳಿದ ಇಬ್ಬರು ಆರೋಪಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉದ್ಯಮಿ ನಜೀರ್ ಅಹ್ಮದ್ ಮೂಲತಃ ಗದಗ ಜಿಲ್ಲೆಯವರು. ಆರೋಪಿ ಸಾಕೀಬ್ ಗೆ ನಜೀತ್ ಓರ್ವ ಶ್ರೀಮಂತ ಸಾಕಷ್ಟು ಹಣ ಅವರ ಬಳಿಯಿದೆ ಎಂದ ಮಾಹಿತಿ ಸಿಕ್ಕಿತ್ತು.
Belagavi Crime: 6ನೇ ತರಗತಿಯಿಂದಲೇ ಲವ್, ಪ್ರಿಯಕರನ ಜತೆ ಸೇರಿ ಭೀಮನ ಅಮವಾಸ್ಯೆ ದಿನ
ಇದನ್ನೇ ಅಧಾರವಾಗಿಟ್ಟುಕೊಂಡ ಆರೋಪಿ ಗ್ಯಾಂಗ್ ಕಟ್ಟಿಕೊಂಡು ಚಿತ್ರದುರ್ಗಕ್ಕೆ ರಾಬರಿ ಮಾಡಲು ಆಗಮಿಸಿದ್ದ ಎಂಬ ಮಾಹಿತಿ ದೊರಕಿದೆ. ಇಷ್ಟೇ ಅಲ್ಲದೇ ಮತ್ತೋರ್ವ ಆರೋಪಿ ಸಮ್ಮು ವಿರುದ್ದ ರಾಜ್ಯದ ನಾನಾ ಠಾಣೆಯಲ್ಲಿ 20ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಅವುಗಳು ಕೂಡ ದರೋಡೆ, ಮನೆ ಕಳ್ಳತನ, ಕೊಲೆ ಪ್ರಕರಣಗಳಾಗಿವೆ ಅಂತಾರೆ ಎಸ್ಪಿ.
ಒಟ್ಟಾರೆಯಾಗಿ ಉದ್ಯಮಿ ನಜೀರ್ ಮನೆಯಲ್ಲಿ ನಡೆದಿದ್ದ ಸಿನಿಮಾ ಶೈಲಿಯ ರಾಬರಿ ಕೇಸ್ ಇಡೀ ಜಿಲ್ಲೆಯ ಜನರ ನಿದ್ದೆಗೆಡಿಸಿತ್ತು. ಆದ್ರೆ ಪೊಲೀಸರ ಅತ್ಯುತ್ತಮ ಕೆಲಸದಿಂದ ಆರೋಪಿಗಳ ಬಂಧನವಾಗಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಿ ನಮ್ಮ ಜಿಲ್ಲೆಯ ಖಾಲಿ ಪಡೆಗೆ ನಮ್ಮದೊಂದು ಸಲಾಂ.