ಜುಗ್ಗುರಾಜ್ ಕೊಲೆ ಪ್ರಕರಣದಲ್ಲಿ ಚಾಮರಾಜಪೇಟೆ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಕೆಲವೊಂದು ಕೆಲವೊಂದು ಸ್ಪೋಟಕ ಅಂಶಗಳನ್ನ ಪತ್ತೆಯಾಗಿದೆ. ಮೇ 24 ರಂದು ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಗ್ಗುರಾಜ್ ಎಂಬಾತನ ಕೊಲೆಯಾಗಿತ್ತು.
ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಅ.13): ಇಡೀ ಬೆಂಗಳೂರು ನಗರವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣವಿದು. ಹಿಂದೆ ಮುಂದೆ ಯೋಚಿಸದೆ ಕೆಲಸಕ್ಕಿಟ್ಟುಕೊಂಡರೆ ಸಾವಿನ ಜೊತೆ ವಾಸ ಮಾಡ್ಬೇಕು. ಅದಕ್ಕೆ ಉದಾಹರಣೆಯಾಗಿದ್ದು ವೃದ್ಧ ಜುಗ್ಗುರಾಜ್ ಕೊಲೆ ಪ್ರಕರಣ. ಜುಗ್ಗುರಾಜ್ ಕೊಲೆ ಪ್ರಕರಣದಲ್ಲಿ ಚಾಮರಾಜಪೇಟೆ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಕೆಲವೊಂದು ಕೆಲವೊಂದು ಸ್ಪೋಟಕ ಅಂಶಗಳನ್ನ ಪತ್ತೆಯಾಗಿದೆ. ಮೇ 24 ರಂದು ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಗ್ಗುರಾಜ್ ಎಂಬಾತನ ಕೊಲೆಯಾಗಿತ್ತು. ಕೈ ಕಾಲು ಕಟ್ಟಿ ಮನೆಯಲ್ಲಿದ್ದ ಹತ್ತು ಕೇಜಿಗೂ ಹೆಚ್ಚು ಚಿನ್ನ ಹಾಗು ಅರವತ್ತು ಲಕ್ಷ ನಗದು ದೋಚಿದ್ರು ಇದರಲ್ಲಿ ಪ್ರಮುಖ ಆರೋಪಿ , ಬಿಜುರಾಮ್ ,ಪೂರನ್ , ದೇವೇಂದ್ರ ಸೇರಿ ನಾಲ್ವರನ್ನ ಪೊಲೀಸರು ಬಂಧಿಸಿದ್ರು . ಆರು ತಿಂಗಳ ಹಿಂದೆ ಮನೆ ಕೆಲಸಕ್ಕೆ ಬಂದಿದ್ದವನು ಹಣದಾಸೆಗೆ ಮಾಲೀಕನನ್ನೇ ಹೊಡೆದು ಕೊಂದಿದ್ದ . ಸದ್ಯ ಈ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 16 ಸಾವಿರ ಸಂಬಳಕ್ಕಿದ್ದ ಬಿಜುರಾಮ್ ಮನೆಗೆ ಸ್ವಲ್ಪವೇ ಹಣ ಕಳಿಸುತ್ತಿದ್ದ. ಹಣ ಯಾವುದಕ್ಕೂ ಸಾಕಾಗೋದಿಲ್ಲ ಎಂದು ಬಿಜುರಾಮ್ ನ ಪತ್ನಿ ಆಗಾಗ ಪತಿ ಜೊತೆ ಜಗಳವಾಡ್ತಿದ್ದಳು. ಕೊಬೆಗೆ ಐದು ಲಕ್ಷ ಹಣ ತಂದು ಕೊಡು ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದಳು.
ಇದೇ ವಿಚಾರವಾಗಿ ಜುಗ್ಗುರಾಜ್ ನ ಪುತ್ರ ಆನಂದ್ ಬಳಿ ಐದು ಲಕ್ಷ ಹಣ ಕೇಳಿದ್ದಾನೆ . ಅವರು ನಿರಾಕರಿಸಿದಾಗ ತನ್ನ ಸ್ನೇಹಿತ ದೇವೇಂದ್ರನಿಗೆ ಕರೆ ಮಾಡಿ ಪತ್ನಿಯ ವಿಚಾರ ಹಾಗು ತಾನಿದ್ದ ಮನೆ ಮಾಲೀಕನ ಶ್ರೀಮಂತಿಕೆಯ ವಿಚಾರ ಹೇಳಿದ್ದ. ಈ ವೇಳೆ ನೀನು ಮನೆಯಲ್ಲಿರುವ ಚಿನ್ನಾಭರಣವನ್ನ ಕಳ್ಳತನ ಮಾಡು ಸೇಲ್ ಮಾಡೋ ಜವಾಭ್ಧಾರಿ ನಂದು ಎಂದಿದ್ದ. ಇದಕ್ಕೆ ಒಪ್ಪಿಕೊಂಡಿದ್ದ ಬಿಜೋರಾಮ್ , ತಾನೊಬ್ಬನಿಗೆ ಕಷ್ಟ ಯಾರನ್ನಾದ್ರು ಕಳಿಸು ಎಂದಾಗ ಎಂದಾಗ ಪೂರನ್ ಎಂಬಾತನ ಜೊತೆ ಮತ್ತೊಬ್ಬನನ್ನ ಕಳಸಿಕೊಟ್ಟಿದ್ದ. ಮೊದಲು ಪ್ಲಾಸ್ಟಿಕ್ ಹಗ್ಗವನ್ನ ಖರೀದಿಸಿ 24 ರ ರಾತ್ರಿ ಹತ್ತೂವರೆಗೆ ಮಾಲೀಕ ಒಬ್ಬನೇ ಇರುವುದನ್ನ ನೋಡಿದ್ದಾನೆ.
ಇತ್ತ ಸೆಕ್ಯೂರಿಟಿ ಗಾರ್ಡ್ ಕೂಡ ಮಲಗಿ ಬಿಟ್ಟಿದ್ದ . ನೇರವಾಗಿ ಒಳಗೆ ನುಗ್ಗಿ ಖಾರದ ಪುಡಿಯನ್ನ ತಂದು ಜುಗ್ಗುರಾಜ್ ಕಣ್ಣಿಗೆ ಎರಚಿದ್ದ. ನಂತರ ಪ್ಲಾಸ್ಟಿಕ್ ಹಗ್ಗದಿಂದ ಕೈಕಾಲು ಬಿಗಿದು ಹಲ್ಲೆ ನಡೆಸಿ ಹತ್ತು ಕೆಜಿ ಚಿನ್ನ ಅರವತ್ತು ಲಕ್ಷ ನಗದನ್ನ ಹೊತ್ತೊಯ್ದಿದ್ರು. ನಂತರ ಪೊಲೀಸರಿಗೆ ಅನುಮಾನ ಬರದಂತೆ ನಗರದಲ್ಲೇ ಉಳಿದುಕೊಂಡಿದ್ದರುಮಾಧ್ಯಮಗಳಲ್ಲಿ ಬಿಜೋರಾಮ್ ಫೊಟೊ ಬರುತ್ತಿದ್ದಂತೆ ಅಲರ್ಟ್ ಆಗಿ ಬಿಜೋರಾಮ್ ಎಲ್ಲೂ ಕಾಣಿಸದೆ ಇರೋ ರೀತಿಯಲ್ಲಿ ನೋಡಿಕೊಳ್ಳಲು ದೇವೇಂದ್ರ ನಿರ್ದೇಶನ ನೀಡಿದ್ದ. ಹೀಗಾಗಿ ಗೋವಾಗೆ ಪರಾರಿಯಾಗಲು ನಿರ್ಧರಿಸಿದ್ರು. ಗೋವಾಗೆ ಹೋಗುವ ಮುಂಚೆ ಸಿಮ್ ಸಮೇತ ಮೊಬೈಲ್ ನ್ನ ಎಸೆದು ಗೋವಾಗೇ ಹೋಗಿ ಚಿನ್ನಾಭರಣವನ್ನ ಹಂಚಿಕೊಂಡಿದ್ರು.
undefined
ಚಾಮರಾಜಪೇಟೆ ಜುಗುರಾಜ್ ಹತ್ಯೆ ಪ್ರಕರಣ: ನಾಲ್ವರ ಬಂಧನ, 8.75 ಕೆ.ಜಿ ಚಿನ್ನಾಭರಣ ವಶ!
ಮತ್ತಿಬ್ಬರು ಆರೋಪಿಗಳಾದ ಪೂರನ್ ,ಓಂ ರಾಮ್ ಜೊತೆ ನಾಲ್ಕು ಬ್ಯಾಗ್ ಗಳಲ್ಲಿ ಚಿನ್ನಾಭರಣ ತುಂಬಿಕೊಂಡು ಹೋಗಿದ್ದ ಆರೋಪಿ ಬಿಜೋರಾಮ್ ನನ್ನ ಕೊನೆಗೂ ಚಾಮರಾಜಪೇಟೆ ಪೊಲೀಸರು ಬಂಧಿಸಿ ಕರೆ ತಂದಿದ್ದರು. ಸದ್ಯ ಈಕೇಸಿನಲ್ಲಿ ಚಾರ್ಚ್ ಶೀಟ್ ಸಲ್ಲಿಕೆಯಾಗಿದೆ.