Bengaluru Crime: ಸ್ನೇಹಿತನ ಹತ್ಯೆ ಮಾಡಿದ್ದ ಆಟೋ ಚಾಲಕನ ಬಂಧನ

By Kannadaprabha News  |  First Published Feb 11, 2022, 4:27 AM IST

*   ಮನೆಗೆ ಕರೆಸಿಕೊಂಡು ಗೆಳೆಯ ವಿಶ್ವನಾಥ್‌ನನ್ನು ಕೊಂದಿದ್ದ ಆರೋಪಿ
*   ಮಹಿಳೆಯ ಮೊಬೈಲ್‌ ಕಸಿಯಲು ಯತ್ನಿಸಿದ ಕಳ್ಳರಿಗೆ ಧರ್ಮದೇಟು
*   ಮದ್ಯ ಸೇವನೆಗಾಗಿ ಬೈಕ್‌ ಕದಿಯುತ್ತಿದ್ದವನ ಬಂಧನ


ಬೆಂಗಳೂರು(ಫೆ.11):  ವೈಯಕ್ತಿಕ ವಿಚಾರವಾಗಿ ಮನಸ್ತಾಪ ಹಿನ್ನೆಲೆಯಲ್ಲಿ ಸ್ನೇಹಿತನನ್ನು ತನ್ನ ಮನೆಗೆ ಕರೆಸಿಕೊಂಡು ಹತ್ಯೆಗೈದು(Murder) ಪರಾರಿಯಾಗಿದ್ದ ಆಟೋ ಚಾಲಕನನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು(Police) ತಿಳಿಸಿದ್ದಾರೆ.

ನರಸಿಂಹಸ್ವಾಮಿ ಬಡಾವಣೆ ನಿವಾಸಿ ಆಟೋ ಚಾಲಕ ರವಿಕುಮಾರ್‌ (42) ಬಂಧಿತ(Accused). ತನ್ನ ಮನೆಗೆ ಬುಧವಾರ ಕರೆಸಿಕೊಂಡು ತನ್ನ ಗೆಳೆಯ ವಿದ್ಯಾರಣ್ಯಪುರದ ವಿಶ್ವನಾಥ್‌ನನ್ನು ಆರೋಪಿ ಕೊಂದಿದ್ದ. ಈ ಘಟನೆ ಬಳಿಕ ತುಮಕೂರಿನಲ್ಲಿ(Tumakuru) ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

undefined

ಬೆಂಗಳೂರು:  ಅಪ್ಸರೆಯರ ಬಳಿ ಮಸಾಜ್ ಮಾಡಿಸಿಕೊಳ್ಳಲು ಕಳ್ಳತನವೇ ಕುಲಕಸುಬು ಮಾಡಿಕೊಂಡಿದ್ದರು

ರವಿ ಹಾಗೂ ವಿಶ್ವನಾಥ್‌ ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದರು. ಇದೇ ಗೆಳೆತನದಲ್ಲೇ ವಿಶ್ವನಾಥ್‌ಗೆ ರವಿ ಆಟೋ ಬಾಡಿಗೆಗೆ ಕೊಡಿಸಿದ್ದ. ಆದರೆ ಇತ್ತೀಚಿಗೆ ವೈಯಕ್ತಿಕ ವಿಷಯವಾಗಿ ಅವರಿಬ್ಬರಲ್ಲಿ ಮನಸ್ತಾಪ ಮೂಡಿತ್ತು. ಆಗ ತನ್ನ ಪತ್ನಿ ಮತ್ತು ಮಗಳ ಬಗ್ಗೆ ವಿಶ್ವನಾಥ್‌ ಕೆಟ್ಟದಾಗಿ ಮಾತನಾಡಿದ ಎಂದು ಕೆರಳಿದ ರವಿ, ಸ್ನೇಹಿತನ ಹತ್ಯೆಗೆ ನಿರ್ಧರಿಸಿದ್ದ. ಅಂತೆಯೇ ಬುಧವಾರ ಮಾತುಕತೆ ನೆಪದಲ್ಲಿ ಮನೆಗೆ ಕರೆಸಿಕೊಂಡು ಆರೋಪಿ ಈ ಸ್ನೇಹಿತನ ಹತ್ಯೆ ಎಸಗಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮಹಿಳೆಯ ಮೊಬೈಲ್‌ ಕಸಿಯಲು ಯತ್ನಿಸಿದ ಕಳ್ಳರಿಗೆ ಧರ್ಮದೇಟು

ಮೈಸೂರು ರಸ್ತೆ ಸಮೀಪ ಮಹಿಳೆಯೊಬ್ಬರ ಮೊಬೈಲ್‌ ಕಸಿಯಲು ಯತ್ನಿಸಿದ ಇಬ್ಬರು ಕಿಡಿಗೇಡಿಗಳನ್ನು ಸಾರ್ವಜನಿಕರು ಹಿಡಿದು ಜೆ.ಜೆ.ನಗರ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ.

ಕೆಂಗೇರಿ ಸಮೀಪ ಭೀಮನಕುಪ್ಪೆಯ ಮುಬಾರಕ್‌ ಪಾಷ, ಬನಶಂಕರಿ ಎರಡನೇ ಹಂತದ ಸೈಯದ್‌ ಮುಜಾಹೀದ್‌ ಹಾಗೂ ಎಚ್‌ಬಿಆರ್‌ ಲೇಔಟ್‌ ಕಾಸೀಫ್‌ ಖಾನ್‌ ಬಂಧಿತರಾಗಿದ್ದು, ಆರೋಪಿಗಳಿಂದ 86 ಮೊಬೈಲ್‌ಗಳು ಹಾಗೂ ಒಂದು ಸ್ಕೂಟರ್‌ ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಮೈಸೂರು ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಂದ ಪಾಷ ಮತ್ತು ಸೈಯದ್‌ ಮೊಬೈಲ್‌ ಎಗರಿಸಲು ಯತ್ನಿಸಿದ್ದರು. ಆ ವೇಳೆ ಆಕೆ ರಕ್ಷಣೆಗೆ ಜೋರಾಗಿ ಕಿರುಚಿಕೊಂಡಾಗ ಜನರು ಜಮಾಯಿಸಿ ಆರೋಪಿಗಳನ್ನು ಹಿಡಿದಿದ್ದಾರೆ. ಬಳಿಕ ಗೂಸಾ ಕೊಟ್ಟು ಹೊಯ್ಸಳ ಸಿಬ್ಬಂದಿಗೆ ಒಪ್ಪಿಸಿದ್ದರು. ಠಾಣೆಗೆ ಕರೆದು ತಂದು ಇಬ್ಬರನ್ನು ತೀವ್ರವಾಗಿ ವಿಚಾರಿಸಿದಾಗ ಮೊಬೈಲ್‌(Mobile) ಕಳ್ಳನ ಸಂಗತಿ ಬಾಯ್ಬಿಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ಸೇವನೆಗಾಗಿ ಬೈಕ್‌ ಕದಿಯುತ್ತಿದ್ದವನ ಬಂಧನ

ಮದ್ಯ(Alcohol) ಸೇವನೆಗೆ ಹಣ ಹೊಂದಿಸಲು ದ್ವಿಚಕ್ರ ವಾಹನಗಳನ್ನು(Bike) ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ(Arrest).

ಗೌರಿಬಿದನೂರು ತಾಲೂಕಿನ ಅಲಂದರ್‌ ಆಲಿ ಬಂಧಿತನಾಗಿದ್ದು, ಆರೋಪಿಯಿಂದ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಂಗಾಪುರದ ಲಕ್ಕಪ್ಪ ಲೇಔಟ್‌ನಲ್ಲಿ ಅರವಿಂದ್‌ ಎಂಬುವರಿಗೆ ಸೇರಿದ ಸ್ಕೂಟರ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ವಿದ್ಯಾರಣ್ಯಪುರ ಸಮೀಪ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅನುಮಾನದ ಮೇರೆಗೆ ಅಲಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Mangaluru: ಪಿಯು ಹುಡುಗಿಯರ ಬೆದರಿಸಿ ವೇಶ್ಯಾವಾಟಿಕೆ: 10 ಜನರ ಬಂಧನ

ತನ್ನೂರಿನಲ್ಲಿ ಪಂಚರ್‌ ಅಂಗಡಿ ನಡೆಸುತ್ತಿದ್ದ ಅಲಿ, ಇತ್ತೀಚಿಗೆ ವಿಪರೀತ ಮದ್ಯ ವ್ಯಸನಿ ಆಗಿದ್ದ. ಈ ಚಟಕ್ಕೆ ಹಣ ಹೊಂದಿಸುವ ಸಲುವಾಗಿ ಬೈಕ್‌ ಕಳ್ಳತನಕ್ಕಿಳಿದಿದ್ದಾನೆ. ಗೌರಿಬಿದನೂರಿನಲ್ಲಿ ಕಳವು(Theft) ಮಾಡಿದ್ದ ಬೈಕ್‌ ಅನ್ನು ನಗರದಲ್ಲಿ ಮಾರಾಟ ಮಾಡಿ ಹಣ ಪಡೆಯಲು ಆಲಿ ಬಂದಿದ್ದ. ಆಗ ಲಕ್ಕಪ್ಪ ಲೇಔಟ್‌ನಲ್ಲಿ ಮತ್ತೊಂದು ಸ್ಕೂಟರ್‌ ಕದ್ದು ಸಿಕ್ಕಿಬಿದ್ದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಮನೆಗಳವು ಮಾಡಿದ್ದ ಆರೋಪಿಗಳ ಬಂಧನ

ಇತ್ತೀಚಿಗೆ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕಿಯೊಬ್ಬರ ಮನೆ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಇಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
 

click me!