ಮಾಜಿ ಪ್ರೇಮಿಯನ್ನು 6 ಪೀಸ್‌ ಮಾಡಿ ಕೊಂದ ಪಾತಕಿ: ಯುಪಿ ಪೊಲೀಸರಿಂದ ಆರೋಪಿಗೆ ಗುಂಡೇಟು..!

By BK AshwinFirst Published Nov 21, 2022, 7:48 PM IST
Highlights

ಆರೋಪಿಯನ್ನು ಮಹಿಳೆಯ ತಲೆ ಹುಡುಕಲು ಸ್ಥಳವೊಂದಕ್ಕೆ ಕರೆದುಕೊಂಡು ಹೋದಾಗ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಎನ್‌ಕೌಂಟರ್‌ನಲ್ಲಿ ಯುಪಿ ಪೊಲೀಸರು ಆರೋಪಿಗೆ ಸಹ ಗುಂಡು ಹೊಡೆದಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಶ್ರದ್ಧಾ (Shraddha Walkar) ಹತ್ಯೆ (Murder) ನಡೆದ ರೀತಿಗೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಅಫ್ತಾಬ್‌ (Aftab Pooawala) ವಿರುದ್ಧವೂ ಬಹುತೇಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ಕೇಸ್‌ ಬೆಳಕಿಗೆ ಬಂದ ಬೆನ್ನಲ್ಲೇ ಇದೇ ರೀತಿಯ ಹಲವು ಪ್ರಕರಣಗಳು (Case) ಬೆಳಕಿಗೆ ಬರುತ್ತಲೇ ಇದೆ. ದೆಹಲಿ (Delhi) ಬಳಿಕ, ಈಗ ಉತ್ತರ ಪ್ರದೇಶದಲ್ಲೂ (Uttar Pradesh) ಮಹಿಳೆಯೊಬ್ಬರನ್ನು ಕೊಲೆ ಮಾಡಿ 6 ತುಂಡು (pieces) ಮಾಡಿ ಬಾವಿಗೆ (Well) ಬಿಸಾಡಿರುವ ಘಟನೆ ನಡೆದಿದೆ. ಈ ಸಂಬಂಧ ಯುಪಿಯ ಅಜಂಗಢದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ಇನ್ನು, ಆರೋಪಿಯನ್ನು ಮಹಿಳೆಯ ತಲೆ ಹುಡುಕಲು ಸ್ಥಳವೊಂದಕ್ಕೆ ಕರೆದುಕೊಂಡು ಹೋದಾಗ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಎನ್‌ಕೌಂಟರ್‌ನಲ್ಲಿ ಯುಪಿ ಪೊಲೀಸರು ಆರೋಪಿಗೆ ಸಹ ಗುಂಡು ಹೊಡೆದಿದ್ದಾರೆ. ಆರೋಪಿಯನ್ನು ಪ್ರಿನ್ಸ್ ಯಾದವ್‌ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶನಿವಾರ ಯಾದವ್‌ನನ್ನು ಬಂಧಿಸಲಾಗಿದ್ದು, ಆತ ಘಟನಾ ಸ್ಥಳದಲ್ಲಿ ನಾಡ ಬಂದೂಕನ್ನು ಬಚ್ಚಿಟ್ಟಿದ್ದ. ಹಾಗೂ, ಸ್ಥಳಕ್ಕೆ ಹೋದ ನಂತರ ಪೊಲೀಸ್‌ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಆತ ಪೊಲೀಸರತ್ತ ಗುಂಡಿನ ದಾಳಿ ನಡೆಸಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: Shraddha Murder Case: ಕತ್ತರಿಸಿಟ್ಟಿದ್ದ ರುಂಡದ ಮೇಲೂ ಹಲ್ಲೆ..! ಶ್ರದ್ಧಾ ರುಂಡದ ಜತೆ ಮಾತುಕತೆ ನಡೆಸುತ್ತಿದ್ದ ಅಫ್ತಾಬ್‌
 
ಕೆಲ ಸ್ಥಳೀಯರು ಪಶ್ಚಿಮಿ ಗ್ರಾಮದ ಬಾವಿಯಲ್ಲಿ ಮೃತದೇಹವೊಂದನ್ನು ಪತ್ತೆಹಚ್ಚಿದ ನಂತರ ನವೆಂಬರ್‌ 15ರಂದು ಈ ಘಟನೆ ಬೆಳಕಿಗೆ ಬಂದಿದೆ. ಆ ಮಹಿಳೆಯನ್ನು ಆರಾಧನಾ ಎಂದು ಗುರುತಿಸಲಾಗಿದ್ದು, ಆಕೆಯ ಮೃತದೇಹ ಅರೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ, ಘಟನೆ ನಡೆದು 2- 3 ದಿನಗಳಾಗಿರಬಹುದು ಎಂದೂ ಅಜಂಗಢದ ಎಸ್‌ಪಿ ಅನುರಾಗ್‌ ಆರ್ಯ ಮಾಹಿತಿ ನೀಡಿದ್ದರು. 

ದೆಹಲಿಯಲ್ಲಿ ಶ್ರದ್ಧಾಳನ್ನು ಅಫ್ತಾಬ್‌ 35 ತುಂಡು ಮಾಡಿ ಆಕೆಯ ಮೃತದೇಹವನ್ನು 300 ಲೀಟರ್‌ ಫ್ರಿಡ್ಜ್‌ನಲ್ಲಿಟ್ಟು 18 ದಿನಗಳ ಕಾಲ ವಿವಿಧೆಡೆ ಆಕೆಯ ದೇಹದ ತುಂಡುಗಳನ್ನು ಬಿಸಾಡಿದ್ದ. ಈ ಬೆಚ್ಚಿಬೀಳಿಸುವ ಘಟನೆ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.  

ಇದನ್ನೂ ಓದಿ: Shraddha Murder Case: ಗೆಳತಿ ಹೆಣ ಇಟ್ಕೊಂಡೇ ಬೇರೆ ಹುಡ್ಗೀರ ಜತೆ ಅಫ್ತಾಬ್‌ ರಾಸಲೀಲೆ..!

ಉತ್ತರ ಪ್ರದೇಶದ ಘಟನೆಯ ವಿವರ..
ಪ್ರಿನ್ಸ್ ಯಾದವ್‌ ತನ್ನ ಪೋಷಕರು, ಸಮಬಂಧಿ ಸರ್ವೇಶ್‌ ಹಾಗೂ ಇತರ ಕುಟುಂಬ ಸದಸ್ಯರೊಂದಿಗೆ ಆರಾಧನಾಳನ್ನು ಕೊಲ್ಲಲು ಪ್ಲ್ಯಾನ್‌ ಮಾಡಿದ್ದ. ಸುಮಾರು 20 ವರ್ಷದ ಆಸುಪಾಸಿನಲ್ಲಿದ್ದ ಮಹಿಳೆ ಯಾದವ್‌ನ ಗರ್ಲ್‌ಫ್ರೆಂಡ್‌ ಆಗಿದ್ದರು. ಆದರೆ, ಆಕೆ ಬೇರೊಂದು ಮದುವೆಯಾಗುತ್ತಾಳೆ. ಈ ಹಿನ್ನೆಲೆ ತನ್ನನ್ನು ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ಯಾದವ್‌ ಆಕ್ರೋಶಗೊಂಡು ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

ಆರಾಧನಾ ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ಇಶಾಖ್‌ ಪುರ್‌ ಗ್ರಾಮದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಯಾದವ್‌ ಸಂತ್ರಸ್ಥೆಯೊಂದಿಗೆ ಅಫೇರ್‌ ಹೊಂದಿದ್ದ, ಆಕೆ ಈ ವರ್ಷ ಬೇರೆಯವನನ್ನು ಮದುವೆಯಾಗಿದ್ದಳು. ನವೆಂಬರ್ 9 ರಂದು ಆರಾಧನಾಳನ್ನು ಯಾದವ್‌ ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿದ್ದ.

ಇದನ್ನೂ ಓದಿ: ಗರ್ಲ್‌ ಫ್ರೆಂಡ್‌ ಮೋಸ ಮಾಡಿದ್ಳೆಂದು ಗಂಟಲು ಸೀಳಿ, ಮೃತದೇಹದೊಂದಿಗೆ ವಿಡಿಯೋ ಪೋಸ್ಟ್‌ ಮಾಡಿದ..!

ಅಲ್ಲಿಗೆ ಹೋದ ಬಳಿಕ ಸರ್ವೇಶ್‌ ನೆರವಿನೊಂದಿಗೆ ಸ್ಥಳೀಯ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಆಕೆಯ ಕತ್ತು ಹಿಸುಕಿ ಸಾಯಿಸಿದ್ದಾರೆ. ನಂತರ, ಇಬ್ಬರೂ ಸೇರಿಕೊಂಡು ಆಕೆಯ ಮೃತದೇಹವನ್ನು 6 ಪೀಸ್‌ ಮಾಡಿ ಪಾಲಿಥೀನ್‌ ಬ್ಯಾಗ್‌ನಲ್ಲಿ ಪ್ಯಾಕ್‌ ಮಾಡಿ ಬಾವಿಗೆ ಎಸೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ಇನ್ನು, ಆಕೆಯ ತಲೆಯನ್ನು ಕೆಲ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಕೊಳವೊಂದಕ್ಕೆ ಎಸೆದಿದ್ದರು ಎಂದೂ ತಿಳಿದುಬಂದಿದೆ. ಈ ಮಧ್ಯೆ, ಈ ಪ್ರಕರಣದಲ್ಲಿ ಪೊಲೀಸರು ಈವರೆಗೆ ಹರಿತ ಆಯುಧ, ಒಂದು ನಾಡ ಬಂದೂಕು ಹಾಗೂ ಒಂದು ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದೂ ಹೇಳಲಾಗಿದೆ. ಮಹಿಳೆಯನ್ನು ಕೊಲೆ ಮಾಡಲು ಸಹಾಯ ಮಾಡಿದ ಸರ್ವೇಶ್‌, ಪ್ರಮೀಳಾ ಯಾದವ್‌, ಸುಮನ್‌, ರಾಜಾರಾಂ, ಕಲಾವತಿ, ಮಂಜು, ಶೀಲಾ ಎಲ್ಲರೂ ನಾಪತ್ತೆಯಾಗಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. 
ಇದನ್ನೂ ಓದಿ: Nidhi Gupta Murder Case: ಇಸ್ಲಾಂ ಸೇರದ್ದಕ್ಕೆ ನಾಲ್ಕನೇ ಅಂತಸ್ತಿಂದ ನೂಕಿ ಕೊಂದ..!

click me!