ಸಂಸದ ಪ್ರಜ್ವಲ್ ರೇವಣ್ಣನ ಪ್ರಕರಣಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ನೇರ ಕಾರಣ. ಅವರಿಗೆ ಎಲ್ಲ ವಿಚಾರ ಗೊತ್ತಿದ್ದರೂ ಟಿಕೆಟ್ ನೀಡಿ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ಬೆಂಗಳೂರು (ಏ.30): ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪ್ರಧಾನಿ ಕಾರ್ಯಾಲಯಕ್ಕೂ ಗೊತ್ತಿತ್ತು. ಪ್ರಧಾನಿಮಂತ್ರಿಗಳು ಇದಕ್ಕೆ ನೇರ ಕಾರಣ. ಎಲ್ಲವನ್ನೂ ಮುಚ್ಚಿತ್ತು ಅವರೇ ಇದು ಮಹಾ ಅಪರಾಧ. ಪ್ರಚಾರಕ್ಕೆ ಹೋಗಿ ಕೆಲಸ ಮಾಡಿದ್ದಾರೆ. ಇದು ಮನುಕುಲಕ್ಕೆ ಮಾಡಿರುವ ದೊಡ್ಡ ಅವಮಾನ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗಿಂತ ಮೊದಲೇ ಡಿ.ಕೆ.ಬ್ರದರ್ಸ್‌ಗೆ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಸಿಕ್ಕಿತ್ತು ಎಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ. ಆದರೆ, ನಮಗೆ ಮೊದಲೇ ಈ ವಿಚಾರ ಗೊತ್ತಿದ್ದರೆ ಇಷ್ಟೊತ್ತಿಗೆ ಆಚೆ ಬರ್ತಾ ಇತ್ತು. ಹಾಸದಲ್ಲಿ ಗುಸುಗುಸು ಚರ್ಚೆ ಇತ್ತು. ಅವರು ಆರೋಪ ಮಾಡ್ತಿದ್ದಾರೆ ಅಷ್ಟೆ. ನಮಗೆ ಗೊತ್ತಿತ್ತು ಅಂತ ಬಿಜೆಪಿ ಹಾಗೂ ರೇವಣ್ಣನವರೇ ಒಪ್ಪಿಕೊಂಡಿದ್ದಾರೆ. ಸಂತ್ರಸ್ಥೆಯರ ಹಾಸನ ಜಿಲ್ಲೆಯ ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಿದೆ. ಸಂತ್ರಸ್ತರರನ್ನ ರಕ್ಷಣೆ ಮಾಡೋದು ಸರ್ಕಾರದ ಕೆಲಸವಾಗಿದೆ ಎಂದರು.
ಕೇಂದ್ರ ಸರ್ಕಾರ ತಲುಪಿದ ಪ್ರಜ್ವಲ್ ರೇವಣ್ಣ ಕಾಮಕಾಂಡ; ಮಹಿಳೆಯರ ಅವಮಾನ ಸಹಿಸೊಲ್ಲವೆಂದ ಅಮಿತ್ ಶಾ!
ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣ ದೇಶದ ಅತಿ ದೊಡ್ಡ ಪ್ರಕರಣವಾಗಿದೆ. ಪ್ರಧಾನಮಂತ್ರಿ, ಪ್ರಧಾನಿ ಕಾರ್ಯಾಲಯಕ್ಕೂ ಗೊತ್ತಿತ್ತು. ಇದಕ್ಕೆ ನೇರ ಕಾರಣ ಪ್ರಧಾನಿಮಂತ್ರಿಗಳು. ಎಲ್ಲವನ್ನೂ ಮುಚ್ಚಿತ್ತು ಅವರೇ ಇದು ಮಹಾ ಅಪರಾಧ. ಪ್ರಚಾರಕ್ಕೆ ಹೋಗಿ ಕೆಲಸ ಮಾಡಿದ್ದಾರೆ. ಮನುಕುಲಕ್ಕೆ ಇದು ದೊಡ್ಡ ಅವಮಾನ. ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾರೆ. ನೇಹಾ ಪ್ರಕರಣವನ್ನ ದೊಡ್ಡ ಮಟ್ಟಿದೆ ತೆಗದುಕೊಂಡು ಹೋದ್ರು. ಈ ಪ್ರಕರಣವನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ರಧಾನ ಮಂತ್ರಿಗಳು ತಿರುಚುವ ಕೆಲಸ ಮಾಡುತ್ತಿದ್ದಾರೆ. ಇದು ಹಳೆಯ ವೀಡಿಯೋ ಅನ್ನೋದಾದ್ರೆ ಅವರು ಹೆಣ್ಣು ಮಕ್ಕಳಿಗೆ ನೀಡುವ ಅಗೌರವ ಎಂದು ಕಿಡಿಕಾರಿದರು.
Prajwal Revanna Sex Scandal: ಜಾಮೀನು ಕೋರಿ ಪ್ರಜ್ವಲ್, ಎಚ್.ಡಿ.ರೇವಣ್ಣ ಕೋರ್ಟ್ ಮೊರೆ?
ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದಾಗ್ಲೂ ಇದೇ ವಿಚಾರ, ಬಾಂಬೇ ಬ್ಲೂ ಬಾಯ್ಸ್ ವಿಚಾರದಲ್ಲೂ ಇದೇ ವಿಚಾರ ಬಂದಿತ್ತು. ಅನೇಕ ವಿಚಾರಗಳನ್ನ ಮುಚ್ಚಿಡುವ ಕೆಲಸ ಆಗುತ್ತಿದೆ. ಆ ಕುಟುಂಬಕ್ಕೆ ಗೌರವ ಇತ್ತು. ರೇವಣ್ಣ A1 ಆರೋಪಿ ವಿಚಾರದ ಬಗ್ಗೆ ಮಾತನಾಡಿ, ಸರ್ಕಾರ ಎಸ್ ಐಟಿ ರಚನೆ ಮಾಡಿದೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ಹೆಣ್ಣು ಮಕ್ಕಳನ್ನ ಯಾವ ರೀತಿ ನಡೆಸಿಕೊಂಡಿದ್ದಾರೆ. ಷಡ್ಯಂತ್ರ ನಡೆಸುತ್ತಿದ್ದಾರೆ ಅಂತ ರೇವಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅವರೇ ಹೇಳಿದ್ರಲ್ಲ ಇದು ಹಳೇ ವೀಡಿಯೋ ಅಂತ. ಬಿಜೆಪಿಯವರು ಸ್ವಂತ ರಾಜಕಾರಣಕ್ಕ 500ಕ್ಕೂ ಹೆಚ್ಚು ಮಹಿಳೆಯರ ಮಾನ ಹಾನಿ ಆಗಿದೆ. ಇದು ದೇಶದಲ್ಲೇ ದೊಡ್ಡ ಹಗರಣ. ನಮ್ಮ ಕರ್ನಾಟಕಕ್ಕೆ ಆಗಿರುವ ಅವಮಾನ. ಯಾರಿಗೆ ಅನ್ಯಾಯ ಆಗಿಸ್ಯೋ ಅವರಿಗೆ ನ್ಯಾಯ ಕೊಡಿಸಬೇಕು. ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಕೊಡ್ಬೇಕು ಎಂದು ಹೇಳಿದರು.