ಪತ್ನಿ ಶೀಲಶಂಕಿಸಿ ಕೊಲೆಗೆ ಯತ್ನಿಸಿದ ದುರಳ ಗಂಡ; ಸಲ್ಮಾ ಸಾವು ಬದುಕಿನ ಹೋರಾಟ!

By Ravi Janekal  |  First Published Aug 14, 2023, 11:42 AM IST

ಪತ್ನಿಯ ಶೀಲಶಂಕಿಸಿ ಆಕೆಯ ಮೇಲೆ ಟಿನ್ನರ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.


ಚಳ್ಳಕೆರೆ (ಆ.14): ಪತ್ನಿಯ ಶೀಲಶಂಕಿಸಿ ಆಕೆಯ ಮೇಲೆ ಟಿನ್ನರ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬುಕ್ಕಾಂಬೂದಿ ಗ್ರಾಮದ ದಾದಾಪೀರ್‌ ಎಂಬುವವರು ಈ ಬಗ್ಗೆ ದೂರು ನೀಡಿ, ನನ್ನ ಹಿರಿಯ ಮಗಳು ಸಲ್ಮಾಳನ್ನು 2017ರಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಸಿದ್ದಾಪುರ ಗ್ರಾಮದ ಮುನ್ನಸಾಬ್‌ ಎಂಬುವವರ ಪುತ್ರ ಎಂ.ಅಮೀರ್‌ಗೆ ವಿವಾಹ ಮಾಡಿಕೊಟ್ಟಿದ್ದು, ಎರಡು ಮಕ್ಕಳು ಇರುತ್ತವೆ. ಇತ್ತೀಚಿಗೆ ನನ್ನ ಅಳಿಯ ಎಂ.ಅಮೀರ್‌ ತನ್ನ ಪತ್ನಿ ಸಲ್ಮಾಳ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ. ಬಗ್ಗೆ ನಾನು, ಕುಟುಂಬದವರು, ಗ್ರಾಮಸ್ಥರು ಹೋಗಿ ಸಂಬಂಧಿಕರ ಸಮ್ಮುಖದಲ್ಲಿ ಬುದ್ದಿವಾದ ಹೇಳಿದ್ದೆವು. ಆದರೂ ಸಲ್ಮಾಳಿಗೆ ಕಿರುಕುಳ ನೀಡುತ್ತಿದ್ದ.

Latest Videos

undefined

ಬೆಂಗಳೂರು: ಅನೈತಿಕ ಸಂಬಂಧದ ಶಂಕೆ, ಪತ್ನಿಯ ಕೊಂದು ಅತ್ತೆಗೆ ಕರೆ ಮಾಡಿದ..!

ಆ.12ರ ಶನಿವಾರ ರಾತ್ರಿ ಈ ಕುರಿತು ನಮಗೆ ಮಾಹಿತಿ ದೊರೆತಿದ್ದು, ನಾವು ಗ್ರಾಮಕ್ಕೆ ಭೇಟಿ ನೀಡುವಷ್ಟರಲ್ಲಿ ಸಲ್ಮಾಳ ಅತ್ತೆ, ಮಾವ ಆಕೆಯನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದ್ಯೊಯ್ದಿದ್ದರು. ನಾವು ಅಲ್ಲಿಗೆ ಭೇಟಿ ನೀಡದಾಗ ಸಲ್ಮಾಳ ಕೈ,ಕಾಲು, ದೇಹಕ್ಕೆ ಸುಟ್ಟಗಾಯಗಳಾಗಿದ್ದು, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ವೈದ್ಯರ ಸಲಹೆಯಂತೆ ಆಕೆಯನ್ನು ಮಣಿಪಾಲ್‌ ಆಸ್ಪತ್ರೆಗೆ ದಾಖಲು ಮಾಡಿದ್ದು, ಆಕೆಯ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ಪಿಎಸ್‌ಐ ಕೆ.ಸತೀಶ್‌ನಾಯ್ಕ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಜೂಜಾಡುತ್ತಿದ್ದ ನಾಲ್ವರ ವಶ

ಚಳ್ಳಕೆರೆ: ತಾಲೂಕಿನ ನಾರಾಯಣಪುರ ಗ್ರಾಮದ ಚೆಕ್‌ಡ್ಯಾಂ ಬಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ಅವರಿಂದ ಜೂಜಾಟದ ಹಣ 3050ರೂಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಠಾಣಾಧಿಕಾರಿ ದೇವರಾಜು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಖಚಿತ ಮಾಹಿತಿ ಮೇರೆಗೆ ನಾರಾಯಣಪುರದ ಚೆಕ್‌ಡ್ಯಾಂಗೆ ಭೇಟಿ ನೀಡಿದ ಸಂದರ್ಭದಲ್ಲಿ ನಲ್ಲೂರಹಳ್ಳಿಯ ನರಸಿಂಹಮೂರ್ತಿ, ಶ್ರೀನಿವಾಸ್‌, ನಾರಾಯಣಪುರದ ತಿಮ್ಮರಾಯ, ತಿಪ್ಪೇಸ್ವಾಮಿ ಎಂಬುವವರು ಜೂಜಾಟದಲ್ಲಿ ತೊಡಗಿದ್ದು, ಅವರನ್ನು ವಶಕ್ಕೆ ಪಡೆದು ಮಂಜುನಾಥ ಮುಡುಕೆ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಶೀಲ ಶಂಕಿಸಿ ಪ್ರಿಯತಮೆಯ ಕೊಂ​​ದಿ​ದ್ದ ಪ್ರೇಮಿಯ ಬಂಧನ: ತಿಂಗಳ ಬಳಿಕ ಸಿಕ್ಕಿಬಿ​ದ್ದ ಕೊಲೆಗಾರ

ಏಳು ಜನ ಕಳ್ಳರ ಬಂಧನ

ಚಳ್ಳಕೆರೆ: ತಾಲೂಕಿನ ತಳಕು ಪೊಲೀಸ್‌ ಠಾಣಾ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮದ ಚಂದ್ರಣ್ಣ ಎಂಬುವವರ ಜಮೀನಿನಲ್ಲಿ ಆಗಸ್ಟ್‌ 8ರಂದು ಟಗರುಗಳು ಕಳ್ಳತನವಾಗಿದ್ದು, ಅವುಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ತಳಕು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಇನ್ಸ್‌ಪೆಕ್ಟರ್‌ ಕೆ.ಸಮೀವುಲ್ಲಾ, ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿ, ಉಪವಿಭಾಗದ ಡಿವೈಎಸ್ಪಿಯವರ ಮಾರ್ಗದರ್ಶನದಲ್ಲಿ ತಳಕು ಪಿಎಸ್‌ಐಗಳಾದ ಗಾದಿಲಿಂಗ, ಲೋಕೇಶ್‌ ಮತ್ತು ಸಿಬ್ಬಂದಿ ಅನುಮಾನಸ್ಪವಾಗಿ ಓಡಾಡುತ್ತಿದ್ದ ಮಲ್ಲೂರಹಳ್ಳಿಯ ಹೇಮಣ್ಣ ಎಂಬುವವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದೇ ಗ್ರಾಮದ ನಾಗೇಶ್‌(24), ಓ.ತಿಪ್ಪೇಸ್ವಾಮಿ(40), ರಾಮಸಾಗರದ ಎನ್‌.ರುದ್ರಮುನಿ (35), ಹಿರೇಹಳ್ಳಿ ಗ್ರಾಮದ ಎಂ.ಒ. ಕುಮಾರ(32), ರವಿ(22) ಸೇರಿ ಟಗರುಗಳನ್ನು ಕದ್ದು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

click me!