ದೆಹಲಿ: ಸಿಗರೇಟ್‌ ಖರೀದಿಸಲು ₹10 ನೀಡದಕ್ಕೆ ಯುವಕನ ಹತ್ಯೆ, ನಾಲ್ವರ ಬಂಧನ

By Suvarna NewsFirst Published Jun 10, 2022, 4:32 PM IST
Highlights

ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಆನಂದ್ ಪರ್ಬತ್ ಪೊಲೀಸ್ ಠಾಣೆಗೆ ಸಮೀಪವಿರುವ ಲೇನ್‌ನಲ್ಲಿ ಅಪರಿಚಿತ ಶವದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿತ್ತು.

ನವದೆಹಲಿ (ಜೂ. 10): ಸಿಗರೇಟ್ ಖರೀದಿಸಲು ₹10 ನೀಡಲು ನಿರಾಕರಿಸಿದ್ದಕ್ಕಾಗಿ  ಮಧ್ಯ ದೆಹಲಿಯ ಆನಂದ್‌ ಪರ್ಬತ್‌ನಲ್ಲಿ 17 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಂದ ನಾಲ್ವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.  ಬಂಧಿತರಲ್ಲಿ ಒಬ್ಬ ಮೃತನ ನೆರೆಹೊರೆಯವನು ಎಂದು ಪೊಲೀಸರು ತಿಳಿಸಿದ್ದಾರೆ.  ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಆನಂದ್ ಪರ್ಬತ್ ಪೊಲೀಸ್ ಠಾಣೆಗೆ ಸಮೀಪವಿರುವ ಲೇನ್‌ನಲ್ಲಿ ಅಪರಿಚಿತ ಶವದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ ಪರಿಶೀಲನೆ ನಡೆಸಿದಾಗ ಹೊಟ್ಟೆಯ ಮೇಲ್ಭಾಗದಲ್ಲಿ ಚೂರಿಯಿಂದ ಇರಿದಿರುವುದು ಪತ್ತೆಯಾಗಿದೆ. 

ಅಪರಾಧ ನಡೆದ ಸ್ಥಳದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳು ಪತ್ತೆಯಾಗಿಲ್ಲ ಮತ್ತು ಸ್ಥಳೀಯ ವಿಚಾರಣೆಯ ಮೂಲಕ ಮೃತ ವ್ಯಕ್ತಿಯ ಗುರುತು ತಕ್ಷಣವೇ ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿ, ಪ್ರಕರಣ ಭೇದಿಸಲು ತಂಡ ರಚಿಸಲಾಗಿತ್ತು.

Latest Videos

“ಸ್ಥಳೀಯ ಗುಪ್ತಚರ ಮೂಲಕ, ಮೃತರನ್ನು ಆನಂದ್ ಪರ್ಬತ್‌ನ ಬಲ್ಜೀತ್ ನಗರದ ನಿವಾಸಿ 17 ವರ್ಷದವರು ಎಂದು ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆಯ ನಂತರ ಮೃತದೇಹವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ" ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ, ಕೇಂದ್ರ) ಶ್ವೇತಾ ಚೌಹಾಣ್ ತಿಳಿಸಿದ್ದಾರೆ.

ಸಿಸಿಟವಿಯಲ್ಲಿ ದೃಶ್ಯ ಸೆರೆ: ತನಿಖಾ ತಂಡವು ಸ್ಥಳೀಯರನ್ನು ವಿಚಾರಣೆಗೊಳಪಡಿಸಿದೆ ಮತ್ತು ಯುವಕನ ಶವ ಪತ್ತೆಯಾದ ಸ್ಥಳದ ಸುತ್ತಲೂ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡಿದೆ ಎಂದು ಡಿಸಿಪಿ ತಿಳಿಸಿದ್ದಾರೆ.  ಪೊಲೀಸರಿಗೆ ಗಲಾಟೆಯ ಮತ್ತು ನಂತರದ ಕೊಲೆಯ ವೀಡಿಯೊ ತುಣುಕಗಳು ಸಿಸಿಟಿವಿಯಲ್ಲಿ ಲಭ್ಯವಾಗಿವೆ. 

ಇದನ್ನೂ ಓದಿ: ಮಂಗಳಮುಖಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಅರೆಸ್ಟ್

ನಾಲ್ವರು ಶಂಕಿತರನ್ನು ಕಾರ್ಖಾನೆಯ ಕೆಲಸಗಾರ ಪ್ರವೀಣ್ ಅಲಿಯಾಸ್ ರವಿ (20), ವಾಣಿಜ್ಯ ವಾಹನ ಚಾಲಕ ಅಜಯ್ ಅಕಾ ಬಚಕಂಡ (23), ಟೈಲರ್ ಸೋನು ಕುಮಾರ್ (20) ಮತ್ತು ಪಾದರಕ್ಷೆ ಮಾರಾಟಗಾರ ಜತಿನ್ ಅಲಿಯಾಸ್ ಧಂಚಾ (24) ಎಂದು ಗುರುತಿಸಲಾಗಿದೆ. ನಾಲ್ವರು ಆರೋಪಿಗಳನ್ನು ಸೋಮವಾರ ಮತ್ತು ಮಂಗಳವಾರದ ನಡುವೆ ಬಂಧಿಸಲಾಯಿತು.

ವಿಚಾರಣೆ ವೇಳೆ, ಡಿಸಿಪಿ ಚೌಹಾಣ್, ಬಂಧಿತರು ಭಾನುವಾರ (ಜೂನ್ 5) ತಡರಾತ್ರಿ ವಿಜಯ್ ಮೆಟ್ಟಿಲುಗಳ ಮೇಲೆ ಕುಳಿತಿದ್ದರು ಬಗ್ಗೆ ಆರೋಪಿಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ವಿಜಯ್ ಅದೇ ನೆರೆಹೊರೆಯಲ್ಲಿ ವಾಸಿಸುತ್ತಿದ್ದರಿಂದ ಸೋನು ಕುಮಾರ್‌ಗೆ ಪರಿಚಯವಿತ್ತು. ಹೀಗಾಗಿ ಸಿಗರೇಟ್ ಖರೀದಿಸಲು ₹10 ನೀಡುವಂತೆ ವಿಜಯ್‌ಗೆ ಕೇಳಿದ್ದಾನೆ.

"ವಿಜಯ್ ಹಣ ನೀಡಲು ನಿರಾಕರಿಸಿದ ನಂತರ ಅವರ ನಡುವೆ ಜಗಳವಾಗಿದೆ. ಸೋನು ಮತ್ತು ಆತನ ಸಹಚರರು ವಿಜಯ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ. ನಂತರ, ಅವರು ₹150 ಇದ್ದ ಅವರ ವಾಲೆಟನ್ನ ತೆಗೆದುಕೊಂಡು ಪರಾರಿಯಾಗಿದ್ದಾರೆ, ,'' ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದನ್ನೂ ಓದಿ: ವಿದ್ಯಾರ್ಥಿನಿಯೊಂದಿಗೆ ಕಳೆದ ಮಧುರ ಕ್ಷಣಗಳ ಫೋಟೊ ವೈರಲ್‌: ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ..!

click me!