ಕಳ್ಳನ ಹಿಡಿಯಲು ಹೋಗಿದ್ದ ಪೊಲೀಸರ ಕಾರು ಅಪಘಾತ; ಸಿಬ್ಬಂದಿ ಗಂಭೀರ ಗಾಯ

By Ravi Janekal  |  First Published Sep 29, 2024, 1:02 PM IST

ಕಳ್ಳನನ್ನು ಹಿಡಿಯಲು ಚೇಸ್ ಮಾಡುವ ವೇಳೆ ತುಮಕೂರು ಜಿಲ್ಲೆಯ ಮಧುಗಿರಿ ಪೊಲೀಸ್ ಠಾಣೆ ಸೇರಿದ ಪೊಲೀಸ್ ವಾಹನ ಅಪಘಾತಕ್ಕೀಡಾದ ಘಟನೆ ಆಂಧ್ರ ಪ್ರದೇಶದ ಮಣೂರು ಬಳಿ ಘಟನೆ ನಡೆದಿದೆ.


ತುಮಕೂರು (ಸೆ.29): ಕಳ್ಳನನ್ನು ಹಿಡಿಯಲು ಚೇಸ್ ಮಾಡುವ ವೇಳೆ ತುಮಕೂರು ಜಿಲ್ಲೆಯ ಮಧುಗಿರಿ ಪೊಲೀಸ್ ಠಾಣೆ ಸೇರಿದ ಪೊಲೀಸ್ ವಾಹನ ಅಪಘಾತಕ್ಕೀಡಾದ ಘಟನೆ ಆಂಧ್ರ ಪ್ರದೇಶದ ಮಣೂರು ಬಳಿ ಘಟನೆ ನಡೆದಿದೆ.

ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ತಕ್ಷಣ ಆಂಧ್ರದ ಧರ್ಮವರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ವಾಹನದಲ್ಲಿ ಮಧುಗಿರಿ ಪೊಲೀಸ್ ಠಾಣೆಯ ಪ್ರಕಾಶ್,ಮುದ್ದರಾಜು ಹಾಗೂ ರಮೇಶ್ ತಲೆ, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. 

Latest Videos

undefined

ತುಮಕೂರು: ನೆಲಹಾಳ್‌ ಕ್ರಾಸ್ ಬಳಿ ಹೈವೇಯಲ್ಲಿ ಕಾರು ಅಡ್ಡಗಟ್ಟಿ 1 ಕೋಟಿ ಹಣ ದೋಚಿದ ಕಳ್ಳರು

ಘಟನೆ ಹಿನ್ನೆಲೆ

ನಿನ್ನೆ ಮಧುಗಿರಿ ಪಟ್ಟಣದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ. ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಗೆ ಪೊಲೀಸ್ ಎಂದು ಪರಿಚಯಿಸಿಕೊಂಡ ಖದೀಮ. ನಗರದಲ್ಲಿ ಸರಗಳ್ಳತನ ಹೆಚ್ಚಾಗಿದೆ. ಮಾಂಗಲ್ಯ ಸರ ಜೋಪಾನವಾಗಿ ತೆಗೆದುಕೊಂಡು ಹೋಗಿ ಎಂದು ಕವರ್ ಕೊಟ್ಟಿದ್ದ ಕಳ್ಳ.  ಖದೀಮನ ಮಾತನ್ನ ನಂಬಿ ಮಾಂಗಲ್ಯ ಬಿಚ್ಚಿದ್ದ ಮಹಿಳೆ. ಖದೀಮ ಕೊಟ್ಟಿದ್ದ ಕವರ್‌ನಲ್ಲಿ ಮಾಂಗಲ್ಯ ಸರ ಹಾಕಿದ ಮಹಿಳೆ ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಕವರ್‌ನಲ್ಲಿ ಚಿನ್ನದ ಸರ ತೆಗೆದು ಅದರಲ್ಲಿ ಕಲ್ಲು ಹಾಕಿ ಕೊಟ್ಟಿದ್ದ ಕಳ್ಳ. 70 ಗ್ರಾಂ ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದ. ಮಹಿಳೆ ಮನೆಗೆ ಹೋಗಿ ನೋಡಿದಾಗ ಕವರ್‌ನಲ್ಲಿ ಚಿನ್ನದ ಮಾಂಗಲ್ಯ ಸರದ ಬದಲು ಕಲ್ಲು ಕಂಡಿದೆ. ಇದರಿಂದ ಶಾಕ್ ಆದ ಮಹಿಳೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.  

 

ತುಮಕೂರು‌: ಯುವಕರ ಮೇಲೆ ಲಾಂಗು ಮಚ್ಚಿನಿಂದ ದಾಳಿ ಪ್ರಕರಣ, ಮೂವರ ಬಂಧನ

ಸರ ಕದ್ದ ಬಳಿಕ ಕಳ್ಳ ಸೀದಾ ಆಂಧ್ರ ಪ್ರದೇಶಕ್ಕೆ ಪರಾರಿಯಾಗಿರುವುದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳ್ಳನ ಜಾಡು ಹಿಡಿದು ಆಂಧ್ರ ಪ್ರದೇಶಕ್ಕೆ ಹೊರಟಿದ್ದ ಮಧುಗಿರಿ ಪೊಲೀಸರು. ಕಳ್ಳನನ್ನು ಸೆರೆಹಿಡಿಯುವ ದಾವಂತದಲ್ಲಿ ವೇಗವಾಗಿ ಹೊರಟಿದ್ದ ಪೊಲೀಸ್ ವಾಹನ. ಈ ವೇಳೆ ಕಾರಿನ ಸ್ಟೇರಿಂಗ್ ಲಾಕ್ ಆಗಿ ಪಲ್ಟಿ ಹೊಡೆದಿದೆ. ಇನ್ನೇನು ಖದೀಮ ಸಿಕ್ಕೇ ಬಿಟ್ಟ ಎನ್ನುವಷ್ಟರಲ್ಲಿ ನಡೆದಿರುವ ಭೀಕರ ಅಪಘಾತ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೈ, ತಲೆ ಭಾಗಗಳಿಗೆ ಗಾಯಗಳಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಧರ್ಮವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!