ತುಮಕೂರು: ನೆಲಹಾಳ್‌ ಕ್ರಾಸ್ ಬಳಿ ಹೈವೇಯಲ್ಲಿ ಕಾರು ಅಡ್ಡಗಟ್ಟಿ 1 ಕೋಟಿ ಹಣ ದೋಚಿದ ಕಳ್ಳರು

By Girish Goudar  |  First Published Sep 29, 2024, 11:07 AM IST

ತಮಿಳುನಾಡಿನ ಸೇಲಂ ನಗರದ ಬೆಳ್ಳಿ ಆಭರಣ ವರ್ತಕ ಅನಿಲ್‌ ಮಹದೇವ್‌ ಗೆ ಸೇರಿದ ಹಣ ಮತ್ತು ಬೆಳ್ಳಿಯನ್ನ ದರೋಡೆ ಮಾಡಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳ್ಳಿ ಗಟ್ಟಿ ಖರೀದಿಸಿ ಕಾರಿನಲ್ಲಿ ಸೇಲಂಗೆ ಕೊಂಡೊಯ್ಯುತ್ತಿದ್ದರು ಎಂದು ತಿಳಿದು ಬಂದಿದೆ. 
 


ತುಮಕೂರು(ಸೆ.29):  ಕಾರು ಅಡ್ಡಗಟ್ಟಿ ಒಂದು ಕೋಟಿ ಹಣವನ್ನ ಕಳ್ಳರು ದೋಚಿದ ಘಟನೆ ತುಮಕೂರು ತಾಲ್ಲೂಕಿನ ನೆಲಹಾಳ್‌ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿನ್ನೆ(ಶನಿವಾರ) ನಡೆದಿದೆ. ಶನಿವಾರ ಬೆಳಗಿನ ಜಾವ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು 350 ಕೆ.ಜಿ ಬೆಳ್ಳಿ ಗಟ್ಟಿ, 1 ಕೋಟಿ ಹಣ ದರೋಡೆ ಮಾಡಿದ್ದಾರೆ. 

ತಮಿಳುನಾಡಿನ ಸೇಲಂ ನಗರದ ಬೆಳ್ಳಿ ಆಭರಣ ವರ್ತಕ ಅನಿಲ್‌ ಮಹದೇವ್‌ ಗೆ ಸೇರಿದ ಹಣ ಮತ್ತು ಬೆಳ್ಳಿಯನ್ನ ದರೋಡೆ ಮಾಡಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳ್ಳಿ ಗಟ್ಟಿ ಖರೀದಿಸಿ ಕಾರಿನಲ್ಲಿ ಸೇಲಂಗೆ ಕೊಂಡೊಯ್ಯುತ್ತಿದ್ದರು ಎಂದು ತಿಳಿದು ಬಂದಿದೆ. 

Tap to resize

Latest Videos

undefined

ಹೈವೇಯಲ್ಲೇ ಸಿನಿಮೀಯ ಶೈಲಿಯಲ್ಲಿ ಚಿನ್ನದ ವ್ಯಾಪಾರಿ ದರೋಡೆ: ಡ್ಯಾಶ್‌ಕ್ಯಾಮ್‌ನಲ್ಲಿ ದೃಶ್ಯ ಸೆರೆ

ಅನಿಲ್‌ ಅವರ ಮಗ ಬಾಲಾಜಿ, ಸ್ನೇಹಿತರಾದ ಗಣೇಶ್‌, ವಿನೋದ್‌ ಜತೆಯಲ್ಲಿದ್ದರು. ನೆಲಹಾಳ್ ಬಳಿ ಮೂರು ಕಾರುಗಳಲ್ಲಿ ಬಂದ ಏಳೆಂಟು ಕಳ್ಳರು ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ತಕ್ಷಣ ಕಾರಿನಿಂದ ಇಳಿದು ಬಾಲಾಜಿ, ಗಣೇಶ್‌, ವಿನೋದ್‌ ಕಳ್ಳರಿಂದ ಎಸ್ಕೇಪ್‌ ಆಗಿದ್ದಾರೆ. 

ಅನಿಲ್‌ ಅವರನ್ನು ಕಾರು ಸಮೇತ ಅಪಹರಿಸಿಕೊಂಡು ಹೋಗಿದ್ದ ಕಳ್ಳರು, ಸ್ವಲ್ಪ ದೂರ ಕರೆದೊಯ್ದು ಕೋರ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ಜೇನಹಳ್ಳಿ ಬಳಿ ಅನಿಲ್‌ ಮತ್ತು ಕಾರನ್ನು ಬಿಟ್ಟು ಪರಾರಿಯಾಗಿರುವ ಕಳ್ಳರು‌. ಹಣ ಮತ್ತು ಬೆಳ್ಳಿ ಗಟ್ಟಿಗಳೊಂದಿಗೆ ಪರಾರಿಯಾಗಿದ್ದಾರೆ. 

ಈ ಸಂಬಂಧ ಅನಿಲ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಅನಿಲ್‌ ತಮಿಳುನಾಡಿನ ಸೇಲಂನಲ್ಲಿ ಹತ್ತು ವರ್ಷದಿಂದ ಬೆಳ್ಳಿ ಆಭರಣ ಮಾರಾಟ ಮಳಿಗೆ ವ್ಯಾಪಾರ ಮಾಡುತ್ತಿದ್ದಾರೆ.  
ಕಳ್ಳರು ಎಲ್ಲಿಂದ ಬಂದಿದ್ದರು, ಬೆಳ್ಳಿ ಗಟ್ಟಿ ಸಾಗಿಸುತ್ತಿರುವ ಮಾಹಿತಿ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!