ರಾತ್ರಿ ಶೆಡ್ಡಿನಲ್ಲಿ ಕಿರಣ್ ಮತ್ತು ಮಹದೇವ್ ಪಾನಮತ್ತರಾಗಿ ನಟ ದರ್ಶನ್ ವಿಚಾರವಾಗಿ ಮಾತನಾಡುತ್ತಾ ಡಿ ಬಾಸ್, ಡಿ ಬಾಸ್ ಎಂದು ಕೂಗಾಡಲು ಆರಂಭಿಸಿದ್ದಾರೆ. ಇದಕ್ಕೆ ವೆಂಕಟಸ್ವಾಮಿ, ದಾಖಲಿಸಿದ್ದಾರೆ. ಅಕ್ಕಪಕ್ಕದಲ್ಲಿ ಮನೆಗಳಿವೆ ಏಕೆ ಕೂಗಾಡುತ್ತಿದ್ದೀರಿ ಎಂದು ಕೇಳಿದ್ದಾರೆ. ನಮ್ಮ ಡಿ ಬಾಸ್ ಬಗ್ಗೆ ನಿನಗೆ ಏನು ಗೊತ್ತು, ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಇಬ್ಬರು ವೆಂಕಟಸ್ವಾಮಿ ಜೊತೆ ಜಗಳ ತೆಗೆದು ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾರೆ.
ರಾಮನಗರ(ಸೆ.29): ಚಿತ್ರನಟ ದರ್ಶನ್ ಅಭಿಮಾನಿಗಳಾದ ಗಾರೆ ಕೆಲಸಗಾರರಿಬ್ಬರು ಮೇಸ್ತ್ರಿ ಕುತ್ತಿಗೆಗೆ ಚಾಕು ಇರಿದು ಗಾಯಗೊಳಿಸಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ಸೂಲಿಕೆರೆ ಪಾಳ್ಯದ ಲೇಬರ್‌ಶೆಡ್‌ನಲ್ಲಿ ನಡೆದಿದೆ. ರಾಮನಗರ ತಾಲೂಕಿನ ಕಸಬಾ ಹೋಬಳಿ ದೊಡ್ಡಮಣ್ಣುಗುಡ್ಡೆ ಗ್ರಾಮದ ನಿವಾಸಿ ವೆಂಕಟಸ್ವಾಮಿ ಗಾಯಗೊಂಡಿದ್ದು, ಐಜೂರು ಬಡಾವಣೆ ನಿವಾಸಿಗಳಾದ ಕಿರಣ್, ಮಹದೇವ ದುಷ್ಕೃತ್ಯ ಎಸಗಿದವರು.
ವೆಂಕಟಸ್ವಾಮಿಯು ಗ್ರಾಮದ ಸುರೇಶ್ ಎನ್ನುವರ ಗುತ್ತಿಗೆ ತೆಗೆದುಕೊಂಡಿದ್ದ ಜಾಗದಲ್ಲಿ ಮೇಸ್ತ್ರಿ ಕೆಲಸ ಮಾಡಲು ಗ್ರಾಮದ ಕಾಳಯ್ಯ ಅವರೊಂದಿಗೆ ಕೆಂಗೇರಿ ಹೋಬಳಿ ಸೂಲಿಕೆರೆ ಪಾಳ್ಯಕ್ಕೆ ತೆರಳಿದ್ದಾರೆ. ಅವರ ಜೊತೆಯಲ್ಲಿ ಪರಿಚಯವಿರುವ ಕಿರಣ್ ಹಾಗೂ ಮಹದೇವ ಅವರನ್ನು ಕೆಲಸಕ್ಕಾಗಿ ಕರೆದುಕೊಂಡು ಹೋಗಿದ್ದಾರೆ. ಆ ಸ್ಥಳದಲ್ಲಿಯೇ ಶೆಡ್ ನಿರ್ಮಾಣ ಮಾಡಿಕೊಂಡು ಎಲ್ಲರೂ ವಾಸವಾಗಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್‌ಗೆ ಮತ್ತೊಂದು ಸಂಕಟ, ಬೇಲ್ ಸಿಗೋದು ಡೌಟು
ಸೆ.26ರಂದು ರಾತ್ರಿ ಶೆಡ್ಡಿನಲ್ಲಿ ಕಿರಣ್ ಮತ್ತು ಮಹದೇವ್ ಪಾನಮತ್ತರಾಗಿ ನಟ ದರ್ಶನ್ ವಿಚಾರವಾಗಿ ಮಾತನಾಡುತ್ತಾ ಡಿ ಬಾಸ್, ಡಿ ಬಾಸ್ ಎಂದು ಕೂಗಾಡಲು ಆರಂಭಿಸಿದ್ದಾರೆ. ಇದಕ್ಕೆ ವೆಂಕಟಸ್ವಾಮಿ, ದಾಖಲಿಸಿದ್ದಾರೆ. ಅಕ್ಕಪಕ್ಕದಲ್ಲಿ ಮನೆಗಳಿವೆ ಏಕೆ ಕೂಗಾಡುತ್ತಿದ್ದೀರಿ ಎಂದು ಕೇಳಿದ್ದಾರೆ.
ನಮ್ಮ ಡಿ ಬಾಸ್ ಬಗ್ಗೆ ನಿನಗೆ ಏನು ಗೊತ್ತು, ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಇಬ್ಬರು ವೆಂಕಟಸ್ವಾಮಿ ಜೊತೆ ಜಗಳ ತೆಗೆದು ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾರೆ. ಆಗ ಸ್ಥಳಕ್ಕೆ ಬಂದ ಕಾಳಯ್ಯ ಜಗಳ ಬಿಡಿಸಿ ವೆಂಕಟಸ್ವಾಮಿ ಅವರನ್ನು ರಾಮೋಹಳ್ಳಿ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ವೆಂಕಟ ಸ್ವಾಮಿ ಪತ್ನಿ ಶಾಂತರವರು ಕಿರಣ್ ಮತ್ತು ಮಹದೇವ ವಿರುದ್ಧ ಕುಂಬಳ ಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.