ರಾಮನಗರ: ಮ್ಯಾಟ್ರಿಮೋನೀಲಿ ಫೇಕ್ ಐಡಿ ಸೃಷ್ಟಿಸಿ 2.75 ಲಕ್ಷ ಸುಲಿಗೆ, ಕಂಗಾಲಾದ ಯುವತಿ..!

By Kannadaprabha NewsFirst Published Sep 29, 2024, 6:43 AM IST
Highlights

ಮ್ಯಾಟ್ರಿಮೋನಿಯಲ್ಲಿ ಫೇಕ್ ಐಡಿಯಲ್ಲಿ ಯಾರದ್ದೋ ಫೋಟೋ ಹಾಕಿ ಯಶವಂತ್ ಖಾತೆ ತೆರೆದಿರುವುದು ಯುವತಿ ಮನೆಯವರಿಗೆ ಗೊತ್ತಾಗಿದೆ. ಆನಂತರವೂ ಆತ ಪದೇ ಪದೇ ಫೋನ್ ಮಾಡಿ ಹಣ ಕಳುಹಿಸು, ಇಲ್ಲದಿದ್ದರೆ ನಿನ್ನ ಫೋಟೋ ತಿರುಚಿ ಹಾಕುತ್ತೇನೆಂದು ಬ್ಲ್ಯಾಕ್‌ಮೇಲ್ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಕುಂಬಳಗೋಡು ಠಾಣೆಯಲ್ಲಿ ದೂರು ನೀಡಿದ ಯುವತಿಯ ತಂದೆ 

ರಾಮನಗರ(ಸೆ.29): ಫೋಟೋ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆಂದು ಬೆದರಿಸಿ 2.75 ಲಕ್ಷ ಸುಲಿಗೆ ಮಾಡಿರುವ ಬಗ್ಗೆ ಕುಂಬಳಗೋಡು ಠಾಣೆಯಲ್ಲಿ ದೂರುದಾಖ ಲಾಗಿದೆ. ಕೆಂಗೇರಿ ರಾಮಸಂದ್ರದ ವಿನಾಯಕ ಬಡಾವಣೆಯ ನಿವಾಸಿಯೊಬ್ಬರ ಪುತ್ರಿಗೆ ಮೈಸೂರಿನ ಇಲವಾಲ ನಿವಾಸಿ ಯಶವಂತ್ ಬೆದರಿಸಿ ಹಣ ಸುಲಿದಿದ್ದಾನೆ. ಯುವತಿ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದಾರೆ. 

ಕಳೆದ ವರ್ಷ ಜೂನ್‌ನಲ್ಲಿ ಎಸ್.ಸಿ. ಮ್ಯಾಟ್ರಿಮೋನಿಯಲ್ಲಿ ವರನನ್ನು ಹುಡುಕಲು ಯುವತಿ ಪ್ರೊಫೈಲ್ ಹಾಕಿದ್ದರು. ಮ್ಯಾಟ್ರಿಮೊನಿಯಲ್ಲಿ ಸಿ.ಯಶವಂತ್ ಎಂಬಾತ ಪರಿಚಿತನಾಗಿ ದ್ದಾನೆ. ತಾನು ಬಿಬಿಎಂಪಿಯಲ್ಲಿ ರೆವಿನ್ಯೂ ಇನ್‌ಸ್ಪೆಕ್ಟ‌ರ್ ಎಂದು ಹೇಳಿಕೊಂಡಿದ್ದಾನೆ. ಬಳಿಕ ಯುವತಿಗೆ ಕರೆ ಮಾಡಿ, ನಿಮ್ಮನ್ನು ನೋಡಲು ಪೋಷಕರನ್ನು ಕರೆ ತರುವೆ ಎಂದು ನಂಬಿಸಿದ್ದಾನೆ. ಬಳಿಕ 3 ತಿಂಗಳಾದರೂ ಆತ ಬಂದಿಲ್ಲ. ಹಾಗಾಗಿ ಯುವತಿ ಮನೆಯವರು ಆತನ ಸಂಬಂಧ ತಿರಸ್ಕರಿಸಿದ್ದಾರೆ.

Latest Videos

ಬೆಂಗಳೂರು: ಮಾಜಿ ಪ್ರೇಮಿಯ ಮೊಬೈಲ್‌ ಸುಲಿಗೆಗೆ ಲೇಡಿ ಸುಪಾರಿ..!

ನಂತರ ಯುವತಿಗೆ ಮತ್ತೆ ಕರೆ ಮಾಡಿ ಪುಸಲಾಯಿಸಿ ನಂಬಿಸಿರುವ ಯಶವಂತ್, ವೇತನ ಬಂದಿಲ್ಲವೆಂದು ಸಬೂಬು ಹೇಳಿ ₹2.75 ಲಕ್ಷ ಖಾತೆಗೆ ಹಾಕಿಸಿಕೊಂಡಿದ್ದಾನೆ. ಹಣ ವಾಪಸ್ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. 
ಮ್ಯಾಟ್ರಿಮೋನಿಯಲ್ಲಿ ಫೇಕ್ ಐಡಿಯಲ್ಲಿ ಯಾರದ್ದೋ ಫೋಟೋ ಹಾಕಿ ಯಶವಂತ್ ಖಾತೆ ತೆರೆದಿರುವುದು ಯುವತಿ ಮನೆಯವರಿಗೆ ಗೊತ್ತಾಗಿದೆ. ಆನಂತರವೂ ಆತ ಪದೇ ಪದೇ ಫೋನ್ ಮಾಡಿ ಹಣ ಕಳುಹಿಸು, ಇಲ್ಲದಿದ್ದರೆ ನಿನ್ನ ಫೋಟೋ ತಿರುಚಿ ಹಾಕುತ್ತೇನೆಂದು ಬ್ಲ್ಯಾಕ್‌ಮೇಲ್ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಯುವತಿಯ ತಂದೆ ಕುಂಬಳಗೋಡು ಠಾಣೆಯಲ್ಲಿ ದೂರು ನೀಡಿದ್ದಾರೆ.

click me!