ರೌಡಿಶೀಟರ್‌ ಆನಂದ್‌ ಹತ್ಯೆ: 11 ಮಂದಿ ಬಂಧನ

By Kannadaprabha NewsFirst Published Oct 29, 2021, 6:50 AM IST
Highlights

*   ಆನ್‌ಲೈನ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌: ಮೂವರ ಸೆರೆ
*  ಅ.24ರ ರಾತ್ರಿ ಆನಂದ್‌ ಮೇಲೆ ದಾಳಿ ಮಾಡಿ ಕೊಚ್ಚಿ ಕೊಲೆಗೈದಿದ್ದ ಖದೀಮರು
*  ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
 

ಬೆಂಗಳೂರು(ಅ.29):  ಕೆಲ ದಿನಗಳ ಹಿಂದೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ ಆನಂದ್‌ನನ್ನು ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದು(Murder) ಪರಾರಿಯಾಗಿದ್ದ 11 ಮಂದಿಯನ್ನು ಪೀಣ್ಯ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ನೆಲಗದರನಹಳ್ಳಿ ನಿವಾಸಿಗಳಾದ ಉಮೇ​ಶ್‌ ಅಲಿ​ಯಾಸ್‌ ಮಿಕಾ, ನಾಗೇಶ್‌ ಅಲಿ​ಯಾಸ್‌ ನಾಗ, ವಿನಯ್‌, ಚಂದನ್‌, ನಾಗ​ರಾಜು, ನವೀನ್‌ ಕುಮಾ​ರ್‌, ಮೋಹಿತ್‌ ಅಲಿ​ಯಾಸ್‌ ಜಾಕಿ, ಗಿರೀಶ್‌, ಕುಮಾ​ರ್‌, ಮಂಜು​ನಾಥ, ನಾಗ ಬಂಧಿ​ತ​ರು.(Arrest)

ಬೆಂಗ್ಳೂರಲ್ಲಿ ನೈಜೀರಿಯನ್‌ ಡ್ರಗ್ಸ್‌ ಹಾವಳಿ: ನಡುರಸ್ತೆಯಲ್ಲೇ ಮಾದಕ ವಸ್ತು ಮಾರಾಟ..!

ಕೊಲೆಯಾದ ರೌಡಿ ಶೀಟರ್‌(Rowdysheeter) ಆನಂದ್‌ ಆರು ವರ್ಷದ ಹಿಂದೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಅಲ್ಲಿಂದಲೇ ತನ್ನ ಸಹಚರರಿಂದ ಪೀಣ್ಯ ಠಾಣೆ ರೌಡಿಶೀಟರ್‌ ವಸಂತ ಎಂಬಾತನನ್ನು ಚಿತ್ರದುರ್ಗದ(Chitradurga) ಹಿರಿಯೂರು ಬಳಿ ಕೊಲೆ ಮಾಡಿಸಿದ್ದ. ಬಳಿಕ ವಸಂತನ ಸಹೋದರ ನಾಗೇಶ್‌ ಅಲಿಯಾಸ್‌ ನಾಗ, ಆನಂದ್‌ ಮೇಲೆ ದ್ವೇಷ ಕಾರುತ್ತಿದ್ದ.

ತಿಂಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದ ಆನಂದ್‌ ಹಾಸನದ ಚನ್ನರಾಯಪಟ್ಟಣದಲ್ಲಿ ನೆಲೆಸಿದ್ದ. ಅ.23ರಂದು ಬೆಂಗಳೂರಿನ(Bengaluru) ಶಿವಪುರದ ಮನೆಗೆ ಬಂದಿದ್ದ. ಈ ವೇಳೆ ಸಹಚರರು ಏರಿಯಾದಲ್ಲಿ ಪಟಾಕಿ ಸಿಡಿಸಿ, ಬಿರಿಯಾನಿ ಹಂಚಿದ್ದರು. ಸ್ವಾಗತ ಕೋರುವ ವಿಡಿಯೋವನ್ನು(Video) ಸಾಮಾಜಿಕ ಜಾಲತಾಣಕ್ಕೆ(Social Media) ಹರಿಬಿಡಲಾಗಿತ್ತು. ಈ ಮೂಲಕ ವಿಷಯ ತಿಳಿದ ನಾಗೇಶ್‌, ಅ.24ರ ರಾತ್ರಿ ಆನಂದ್‌ ಮನೆಯಿಂದ 100 ಮೀಟರ್‌ ಅಂತರದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದು ಹೋಗುವಾಗ ದಾಳಿ ಮಾಡಿ ಕೊಚ್ಚಿ ಕೊಲೆಗೈದಿದ್ದರು. ಬಳಿಕ ಆರೋಪಿಗಳು(Accused) ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆದಿದ್ದರು. ಅ.27ರಂದು ಬೆಂಗಳೂರಿಗೆ ಬರುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಉದ್ಯಮಿ ಕಾರಿಗೆ ಬೆಂಕಿ: ದಿ.ಮುತ್ತಪ್ಪ ರೈ ಪರ ವಕೀಲರು ಸೇರಿ ಮೂವರ ಸೆರೆ

ಆನ್‌ಲೈನ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌: ಮೂವರ ಸೆರೆ

ಟಿ20 ವಿಶ್ವಕಪ್‌ ಕ್ರಿಕೆಟ್‌(T20 World Cup) ಪಂದ್ಯಾವಳಿ ವೇಳೆ ಆನ್‌ಲೈನ್‌ ಮೂಲಕ ಬೆಟ್ಟಿಂಗ್‌ನಲ್ಲಿ(Betting) ತೊಡಗಿದ್ದ ಮೂವರನ್ನು ಪ್ರತ್ಯೇಕವಾಗಿ ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ.

ಓಂ ಪ್ರಕಾಶ್‌, ಸತ್ಪಾಲ್‌ ಸಿಂಗ್‌ ಹಾಗೂ ಗೇವರ್‌ ಚಂದ್‌ ಬಂಧಿತರಾಗಿದ್ದು, ಆರೋಪಿಗಳಿಂದ .3.5 ಲಕ್ಷ ನಗದು ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿನ ವಿಶ್ವಕಪ್‌ ಟೂರ್ನಿಯ ನ್ಯೂಜಿಲೆಂಡ್‌-ಪಾಕಿಸ್ತಾನ, ವೆಸ್ಟ್‌ ಇಂಡೀಸ್‌ ಮತ್ತು ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ಮತ್ತು ಬಾಂಗ್ಲಾದೇಶ ನಡುವೆ ನಡೆದ ಪಂದ್ಯಾವಳಿ ವೇಳೆ ಆರೋಪಿಗಳು ಬೆಟ್ಟಿಂಗ್‌ನಲ್ಲಿ ತೊಡಗಿದ್ದರು. ಇದಕ್ಕೆ ಲಾರ್ಡ್ಸ್ ಎಕ್ಸ್‌ಚೆಂಜ್‌ ಡಾಟ್‌ ಕಾಂ, ಜೆಟ್‌ ಎಕ್ಸ್‌ಚೆಂಜ್‌, ಸ್ಕೈ ಎಕ್ಸ್‌ ಚೆಂಜ್‌ ಡಾಟ್‌ ಕಾಂ ಎಂಬ ಆ್ಯಪ್‌ಗಳನ್ನು ಬಳಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ(Raid) ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!