ವಿಂಡೀಸ್‌ ಮಾಜಿ ಕ್ರಿಕೆ​ಟಿಗ ಎವರ್ಟನ್‌ ವೀಕ್ಸ್‌ ನಿಧ​ನ

Suvarna News   | Asianet News
Published : Jul 03, 2020, 08:03 AM ISTUpdated : Jul 03, 2020, 08:15 AM IST
ವಿಂಡೀಸ್‌ ಮಾಜಿ ಕ್ರಿಕೆ​ಟಿಗ ಎವರ್ಟನ್‌ ವೀಕ್ಸ್‌ ನಿಧ​ನ

ಸಾರಾಂಶ

ವಿಂಡೀಸ್ ದಿಗ್ಗಜ ಕ್ರಿಕೆಟಿಗ ಸರ್‌.ಎ​ವ​ರ್ಟನ್‌ ವೀಕ್ಸ್‌(95) ಬುಧ​ವಾರ(ಜು.02) ನಿಧ​ನ​ರಾ​ಗಿ​ದ್ದಾರೆ. ವಿಂಡೀಸ್ ಸ್ಪೋಟಕ ಬ್ಯಾಟ್ಸ್‌ಮನ್ ನಿಧನಕ್ಕೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬ್ರಿಡ್ಜ್‌ಟೌನ್‌(ಜು.03): ವೆಸ್ಟ್‌ಇಂಡೀಸ್‌ನ ಮಾಜಿ ಕ್ರಿಕೆ​ಟಿಗ ಸರ್‌.ಎ​ವ​ರ್ಟನ್‌ ವೀಕ್ಸ್‌ ಬುಧ​ವಾರ ನಿಧ​ನ​ರಾ​ಗಿ​ದ್ದಾರೆ. ಅವ​ರಿಗೆ 95 ವರ್ಷ ವಯ​ಸ್ಸಾ​ಗಿತ್ತು. 

ವಿಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಸಾಲಿ​ನಲ್ಲಿ ಸ್ಥಾನ ಪಡೆ​ದಿದ್ದ ವೀಕ್ಸ್‌ 1948ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾ​ರ್ಪಣೆ ಮಾಡಿ​ದ್ದರು. ಅದೇ ವರ್ಷ ಸತತ 5 ಶತಕಗಳನ್ನು ಬಾರಿಸಿ ವಿಶ್ವದಾಖ​ಲೆ ಬರೆ​ದಿ​ದ್ದರು. ಜಮೈಕಾದಲ್ಲಿ ಇಂಗ್ಲೆಂಡ್ ವಿರುದ್ಧ ಎವರ್ಟನ್(141) ಚೊಚ್ಚಲ ಶತಕ ಬಾರಿಸಿದ್ದರು. ಇದಾದ ಬಳಿಕ ಭಾರತ ವಿರುದ್ಧ ಕ್ರಮವಾಗಿ 128, 194, 162 ಹಾಗೂ 101 ರನ್ ಚಚ್ಚುವ ಮೂಲಕ ವಿಶ್ವದಾಖಲೆ ಬರೆದಿದ್ದರು. 

ಐಸಿಸಿ ಅಧ್ಯಕ್ಷ ಸ್ಥಾನ​ದಿಂದ ಕೆಳ​ಗಿಳಿದ ಶಶಾಂಕ್‌ ಮನೋಹರ್

48 ಟೆಸ್ಟ್‌ಗಳನ್ನು ಆಡಿದ್ದ ವೀಕ್ಸ್‌, 58.61ರ ಸರಾ​ಸ​ರಿ​ಯಲ್ಲಿ 4455 ರನ್‌ ಗಳಿ​ಸಿ​ದ್ದರು. ಗಾಯದ ಸಮಸ್ಯೆಯಿಂದಾಗಿ ಅವರ ವೃತ್ತಿಜೀವನ ಬೇಗ ಅಂತ್ಯವಾಯಿತು.  ದಿಗ್ಗಜ ಆಟಗಾರನ ನಿಧನಕ್ಕೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ. ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಕ್ರಿಕೆಟಿಗರು ಎವರ್ಟನ್ ನಿಧನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!