ಕರ್ನಾಟಕದ ಅಳಿಯ ಸೂರ್ಯಕುಮಾರ್ ಯಾದವ್ ಎಷ್ಟು ಶ್ರೀಮಂತ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

By Naveen Kodase  |  First Published Sep 16, 2024, 1:54 PM IST

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರ ಒಟ್ಟು ಸಂಪತ್ತು ಎಷ್ಟು? ಐಪಿಎಲ್‌ನಿಂದ ಗಳಿಸುವ ಸಂಭಾವನೆ ಎಷ್ಟು ಎನ್ನುವುದನ್ನು ತಿಳಿಯೋಣ ಬನ್ನಿ


ಬೆಂಗಳೂರು; 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನು ವೀಕ್ಷಿಸಿದವರಿಗೆ ಸೂರ್ಯಕುಮಾರ್ ಯಾದವ್ ಎಂತಹ ಆಟಗಾರ ಎನ್ನುವುದು ಕಣ್ಣಮುಂದೆ ಬರುತ್ತದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಚುಟುಕು ವಿಶ್ವಕಪ್ ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಬಾರಿಸಿದ ಚೆಂಡನ್ನು ಪವಾಡಸದೃಶ ರೀತಿಯಲ್ಲಿ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್, ಪಂದ್ಯದ ಫಲಿತಾಂಶದ ದಿಕ್ಕನ್ನೇ ಬದಲಿಸಿಬಿಟ್ಟಿದ್ದರು. 

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮಟ್ಟಿಗೆ ಸದ್ಯ ಭಾರತದ ನಂ.1 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಕರ್ನಾಟಕದ ಅಳಿಯ ಎನ್ನುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಸೂರ್ಯಕುಮಾರ್ ಯಾದವ್ ಪತ್ನಿ ದೇವಿಕಾ ಶೆಟ್ಟಿ ಪೂರ್ವಜರು ಮಂಗಳೂರು ಮೂಲದವರು. ಟಿ20 ವಿಶ್ವಕಪ್ ಗೆದ್ದು ತವರಿಗೆ ಬಂದ ಸೂರ್ಯಕುಮಾರ್ ಯಾದವ್, ಪತ್ನಿಯ ಜತೆಗೂಡಿ ಉಡುಪಿ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್, ಭಾರತ ಟಿ20 ತಂಡದ ನಾಯಕರಾಗಿ ನೇಮಕವಾಗಿದ್ದಾರೆ. 

Latest Videos

undefined

ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡಲಿಳಿದರೆಂದರೇ ಎದುರಾಳಿ ಬೌಲರ್‌ಗಳ ಎದೆಯಲ್ಲಿ ಒಂದು ಕ್ಷಣ ನಡುಕ ಹುಟ್ಟಿಬಿಡುತ್ತದೆ. ಮೈದಾನದ ನಾನಾ ಮೂಲೆಗಳಿಗೆ ಬೌಂಡರಿಗಟ್ಟುವುದು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗಿರುವ ತಾಕತ್ತು. ಈ ಕಾರಣಕ್ಕಾಗಿಯೇ ಸೂರ್ಯಕುಮಾರ್ ಯಾದವ್ 2024ನೇ ಸಾಲಿನ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ತನ್ನ ಫೇವರೇಟ್‌ ಕ್ಯಾಪ್ಟನ್ ಆರಿಸಿದ ಯುವರಾಜ್ ಸಿಂಗ್! ಆದ್ರೆ ಕೊಹ್ಲಿ, ಧೋನಿ, ರೋಹಿತ್ ಇವರ್ಯಾರು ಅಲ್ಲ!

ಸೂರ್ಯಕುಮಾರ್ ಯಾದವ್ ಕೊಂಚ ತಡವಾಗಿಯೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರೂ, ಕ್ರಿಕೆಟ್‌ ಜತೆಗೆ ತಮ್ಮ ಬ್ರ್ಯಾಂಡ್‌ ವ್ಯಾಲ್ಯೂ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲೂ ದಿಟ್ಟ ಹೆಜ್ಜೆ ಹಾಕಲಾರಂಭಿಸಿದ್ದಾರೆ. ಮೈದಾನದಲ್ಲಿ 360 ಡಿಗ್ರಿಯಲ್ಲಿ ಬ್ಯಾಟ್ ಬೀಸುವ ಸೂರ್ಯಕುಮಾರ್ ಯಾದವ್, ಹಲವಾರು ಬ್ರ್ಯಾಂಡ್‌ಗಳ ಬ್ರ್ಯಾಂಡ್ ಅಂಬಾಸಿಡರ್ ಎನಿಸಿದ್ದಾರೆ. ಬನ್ನಿ ನಾವಿಂದು ಸೂರ್ಯಕುಮಾರ್ ತಾದವ್ ಅವರ ಆದಾಯವೆಷ್ಟು ಎನ್ನುವುದನ್ನು ತಿಳಿಯೋಣ.

ಬಿಸಿಸಿಐ ಕಾಂಟ್ರ್ಯಾಕ್ಟ್‌: 

ಸೂರ್ಯಕುಮಾರ್ ಯಾದವ್ 2023-24ನೇ ಸಾಲಿನ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ 'ಬಿ' ಗ್ರೇಡ್ ಪಡೆದುಕೊಂಡಿದ್ದು, ವಾರ್ಷಿಕ 3 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾರೆ.

ಮುಂಬೈ ಇಂಡಿಯನ್ಸ್‌ ಜತೆಗಿನ ಕಾಂಟ್ರ್ಯಾಕ್ಟ್‌:

ಸೂರ್ಯಕುಮಾರ್ ಯಾದವ್ 2012ರಲ್ಲಿ ಮುಂಬೈ ಇಂಡಿಯನ್ಸ್‌ ಮೂಲಕವೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ತಾವಾಡಿದ ಮೊದಲ ಐಪಿಎಲ್‌ನಲ್ಲಿ ಮುಂಬೈ ಪರ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು. ಇದಾದ ಬಳಿಕ 2014ರಲ್ಲಿ 70 ಲಕ್ಷ ರುಪಾಯಿಗೆ ಸೂರ್ಯ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದರು.. ಕೆಕೆಆರ್ ಪರ 4 ಐಪಿಎಲ್ ಸೀಸನ್ ಆಡಿದ್ದ ಸೂರ್ಯ, 2018ರಲ್ಲಿ ಮತ್ತೆ 3.2 ಕೋಟಿ ರುಪಾಯಿಗೆ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿದ್ದರು. ಇದಾದ ಬಳಿಕ ಸೂರ್ಯ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಪ್ರತಿ ಸೀಸನ್‌ಗೆ 8 ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

"ನನ್ನ ಅಪ್ಪ ಹುಲಿಯನ್ನು ಕೊಂದು, ಅದರ ರಕ್ತ ಮೈಮೇಲೆ ಎರಚಿದ್ದರು": ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಅಚ್ಚರಿಯ ಮಾತು!

ಟೀಂ ಇಂಡಿಯಾ ಪರ ಪ್ರತಿ ಪಂದ್ಯದ ಸಂಭಾವನೆ

ಸೂರ್ಯಕುಮಾರ್ ಯಾದವ್, ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಮಾತ್ರವಲ್ಲದೇ ಪ್ರತಿ ಟೆಸ್ಟ್ ಪಂದ್ಯವನ್ನಾಡಿದರೆ 15 ಲಕ್ಷ ರುಪಾಯಿ, ಪ್ರತಿ ಏಕದಿನ ಪಂದ್ಯಕ್ಕೆ 6 ಲಕ್ಷ ರುಪಾಯಿ ಹಾಗೂ ಪ್ರತಿ ಟಿ20 ಪಂದ್ಯಕ್ಕೆ ತಲಾ 3 ಲಕ್ಷ ರುಪಾಯಿಗಳ ಸಂಭಾವನೆ ಪಡೆದುಕೊಳ್ಳುತ್ತಾರೆ.

ಬ್ರ್ಯಾಂಡ್ ಎಂಡೋರ್ಸ್‌ಮೆಂಟ್:

ಭಾರತದ ಜನಪ್ರಿಯ ಕ್ರಿಕೆಟಿಗರಾಗಿರುವ ಸೂರ್ಯಕುಮಾರ್ ಯಾದವ್, ಹಲವು ಕಂಪನಿಗಳ ಬ್ರ್ಯಾಂಡ್‌ ಪ್ರಚಾರ ರಾಯಭಾರಿಯಾಗಿದ್ದಾರೆ. ಸೂರ್ಯ ರೀಬಾಕ್, ಜಿಯೋ ಸಿನಿಮಾ, ರಾಯಲ್ ಸ್ಟ್ಯಾಗ್, ಪಿಂಟೊಲಾ. ಡ್ರೀಮ್‌11, ಬೌಲ್ಟ್ ಆಡಿಯೋ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಎಂಡೋರ್ಸ್‌ಮೆಂಟ್ ಮಾಡುವ ಮೂಲಕ ಕೋಟ್ಯಾಂತರ ರುಪಾಯಿ ಪಡೆದುಕೊಳ್ಳುತ್ತಾ ಬಂದಿದ್ದಾರೆ.

ಸೂರ್ಯಕುಮಾರ್ ಯಾದವ್ ಒಟ್ಟ ನೆಟ್‌ ವರ್ತ್‌ ಎಷ್ಟು?

ಸ್ಪೋರ್ಟ್ಸ್‌ಕೀಡಾ ವರದಿಯ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರ ಒಟ್ಟು ನೆಟ್‌ವರ್ತ್ ಸರಿಸುಮಾರು 55 ಕೋಟಿ ರುಪಾಯಿಗಳಾಗಿವೆ. 34 ವರ್ಷದ ಸೂರ್ಯಕುಮಾರ್ ಯಾದವ್ ಬಳಿಕ ಐಶಾರಾಮಿ ಅಪಾರ್ಟ್‌ಮೆಂಟ್ ಹಾಗೂ ವಿಲಾಸಿ ಕಾರುಗಳ ಕಲೆಕ್ಷನ್‌ಗಳಿವೆ
 

click me!