ಬಿಸಿಸಿಐ ಕೇವಲ 2 ರೀಟೈನ್ ಅವಕಾಶ ಕೊಟ್ಟರೆ ಧೋನಿ ಪಾಡು ಏನು? ಚೆನ್ನೈ ಫ್ರಾಂಚೈಸಿಯ ದಿಟ್ಟ ನಿರ್ಧಾರ

By Naveen Kodase  |  First Published Sep 15, 2024, 4:37 PM IST

2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ


ಮುಂಬೈ: ಮುಂಬರುವ 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಯೊಂದಕ್ಕೆ ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎನ್ನುವ ಕುರಿತಂತೆ ಬಿಸಿಸಿಐ ಸಾಕಷ್ಟು ಲೆಕ್ಕಾಚಾರ ಹಾಕುತ್ತಿದೆ. ಈಗಾಗಲೇ ಬಿಸಿಸಿಐ, ಎಲ್ಲಾ ಫ್ರಾಂಚೈಸಿಗಳ ಜತೆ ಮೊದಲ ಸುತ್ತಿನ ಮಾತುಕತೆ ಕೂಡಾ ನಡೆಸಿವೆ. ಎಲ್ಲಾ ಫ್ರಾಂಚೈಸಿಗಳು ತಮಗೆ ಎಷ್ಟು ಆಟಗಾರರು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎನ್ನುವ ಮನವಿಯನ್ನು ಬಿಸಿಸಿಐ ಮುಂದಿಟ್ಟಿವೆ. 

ಮಾಧ್ಯಮಗಳ ವರದಿಯ ಪ್ರಕಾರ ಕೆಲವು ಫ್ರಾಂಚೈಸಿಗಳು ಗರಿಷ್ಠ 8 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಬಿಸಿಸಿಐ ಮುಂದೆ ಬೇಡಿಕೆಯಿಟ್ಟಿವೆ. ಇನ್ನೂ ಕೆಲವು ಫ್ರಾಂಚೈಸಿಗಳು ಒಂದೇ ಒಂದು ಆಟಗಾರನೂ ರೀಟೈನ್ ಮಾಡಿಕೊಳ್ಳುವುದು ಬೇಡ ಎನ್ನುವ ವಾದವನ್ನು ಮುಂದಿಟ್ಟಿವೆ. ಅಂತಿಮವಾಗಿ ಬಿಸಿಸಿಐ 4-5 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗುತ್ತಿವೆ. ಆದರೆ ಈ ಕುರಿತಂತೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ. ಇನ್ನು ಇದೆಲ್ಲದರ ನಡುವೆ ಬಿಸಿಸಿಐ, ನಿವೃತ್ತಿಹೊಂದಿದ ಆಟಗಾರರನ್ನು 'ಅನ್‌ಕ್ಯಾಪ್ಡ್‌' ಆಟಗಾರರ ವಿಭಾಗಕಕ್ಕೆ ಸೇರಿಸುವ ವಿಚಾರದಲ್ಲಿ ಬ್ಯುಸಿಯಾದಂತೆ ಕಂಡು ಬರುತ್ತಿದೆ.

Latest Videos

undefined

ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಆಟಗಾರರನ್ನು ಅನ್‌ಕ್ಯಾಪ್ಡ್‌ ಆಟಗಾರರ ಲಿಸ್ಟ್‌ಗೆ ಸೇರಿಸುವ ಈ ಹಿಂದಿನ ರೂಲ್ಸ್‌ ಅನ್ನು ಮತ್ತೆ ಜಾರಿಗೆ ತರಬೇಕು ಎಂದು ಬಿಸಿಸಿಐ ಬಳಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಒತ್ತಾಯಿಸಿದೆ ಎಂದು ವರದಿಯಾಗಿದೆ. ಹೀಗಾದಲ್ಲಿ ಧೋನಿಯನ್ನು ಅನ್‌ಕ್ಯಾಪ್ಡ್‌ ಆಟಗಾರನ ಲೆಕ್ಕದಲ್ಲಿ ಕಡಿಮೆ ಮೊತ್ತಕ್ಕೆ ತಮ್ಮ ತಂಡದಲ್ಲೇ ಉಳಿಸಿಕೊಳ್ಳುವ ಲೆಕ್ಕಾಚಾರ ಸಿಎಸ್‌ಕೆ ಫ್ರಾಂಚೈಸಿಯದ್ದಾಗಿದೆ.

ಕ್ರಿಕ್‌ಬಜ್ ವೆಬ್‌ಸೈಟ್ ವರದಿಯ ಪ್ರಕಾರ, ರೀಟೈನ್ ರೂಲ್ಸ್‌ ಅನ್ನು ಸೆಪ್ಟೆಂಬರ್ ಕೊನೆಯ ವಾರದೊಳಗೆ ಘೋಷಿಸುವ ಸಾಧ್ಯತೆಯಿದೆ. ತಮ್ಮ ರೀಟೈನ್ ಆಟಗಾರರ ಹೆಸರನ್ನು ಘೋಷಿಸಲು ಆಗಸ್ಟ್‌ ಮೊದಲ ವಾರದವರೆಗೆ ಡೆಡ್‌ಲೈನ್ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಧೋನಿಯನ್ನು ಇನ್ನೂ ಒಂದು ವರ್ಷ ಆಡುವಂತೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿಎಸ್‌ಕೆ ಫ್ರಾಂಚೈಸಿಯ ಮನವಿಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗುತ್ತಿದೆ.

ಒಂದೇ ತಿಂಗಳಿಗೆ ಕೀನ್ಯಾ ಕ್ರಿಕೆಟ್‌ ಕೋಚ್‌ ಹುದ್ದೆ ಕಳೆದುಕೊಂಡ ದೊಡ್ಡ ಗಣೇಶ್‌?

ಧೋನಿಯನ್ನು ಚೆನ್ನೈ ತಂಡದಲ್ಲೇ ಉಳಿಸಿಕೊಳ್ಳುವುದು ಸಿಎಸ್‌ಕೆ ಫ್ರಾಂಚೈಸಿಯ ಅತಿಮುಖ್ಯ ಆಧ್ಯತೆಗಳಲ್ಲಿ ಒಂದು ಎನಿಸಿಕೊಂಡಿದೆ. ಹೀಗಾಗಿ ಒಂದು ವೇಳೆ ಬಿಸಿಸಿಐ ಕೇವಲ ಎರಡು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರೂ, ಆ ಪೈಕಿ ಒಂದು ರೀಟೈನ್ ಧೋನಿ ಆಗಿರುತ್ತಾರೆ ಎಂದು ವರದಿಯಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ 5 ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಶತಾಯಗತಾಯ ತಂಡದಲ್ಲೇ ಉಳಿಸಿಕೊಳ್ಳಲು ಸಿಎಸ್‌ಕೆ ಫ್ರಾಂಚೈಸಿ ರಣತಂತ್ರ ಹೆಣೆಯುತ್ತಿದೆ.

click me!