
ಅನಂತಪುರ: ರಿಕಿ ಭುಯಿ ಶತಕ ಸಿಡಿಸಿದರೂ, ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾರತ 'ಎ' ವಿರುದ್ಧ ಭಾರತ 'ಡಿ' ಸೋಲುವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಸ್ಪಿನ್ನರ್‌ಗಳಾದ ಶಮ್ಸ್ ಮುಲಾನಿ ಹಾಗೂ ತನುಷ್ ಕೋಟ್ಯಾನ್ ಆಕರ್ಷಕ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ 'ಎ' 186 ರನ್‌ಗಳ ಗೆಲುವು ದಾಖಲಿಸಿ, ಟ್ರೋಫಿ ಎತ್ತಿಹಿಡಿಯುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಸತತ 2ನೇ ಸೋಲು ಅನುಭವಿಸಿದ ಭಾರತ 'ಡಿ', ಟ್ರೋಫಿ ರೇಸ್ ನಿಂದ ಹೊರಬಿತ್ತು.
ಗೆಲ್ಲಲು 488 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಭಾರತ 'ಡಿ', 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 62 ರನ್ ಗಳಿಸಿತ್ತು. 4ನೇ ಹಾಗೂ ಅಂತಿಮ ದಿನವಾದ ಭಾನುವಾರ 2ನೇ ಇನ್ನಿಂಗ್ನಲ್ಲಿ 301 ರನ್‌ಗೆ ಆಲೌಟ್ ಆಯಿತು. ರಿಕಿ ಭುಯಿ 113 ರನ್ ಗಳಿಸಿದರು. ತನುಷ್ ಕ್ರೋಟಾನ್ 4 ಹಾಗೂ ಶಮ್ಸ್ ಮುಲಾನಿ 3 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಸ್ಕೋರ್:
ಭಾರತ 'ಎ' 290 ಹಾಗೂ 380/3 ಡಿಕ್ಲೇರ್.
ಭಾರತ 'ಡಿ' 183 ಹಾಗೂ 301
ಭಾರತ ಬಿ-ಭಾರತ ಸಿ ನಡುವಿನ ಪಂದ್ಯ ಡ್ರಾ
ಅನಂತಪುರ: ಭಾರತ 'ಬಿ' ವಿರುದ್ಧದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಭಾರತ 'ಸಿ', ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಮೊದಲ ಇನ್ನಿಂಗ್ನಲ್ಲಿ 525 ರನ್ ಕಲೆಹಾಕಿದ್ದ ಭಾರತ 'ಸಿ', ಆ ಬಳಿಕ ಭಾರತ 'ಬಿ'ಯನ್ನು 332 ರನ್‌ಗೆ ಕಟ್ಟಿಹಾಕಿತು. 3ನೇ ದಿನದಂತ್ಯಕ್ಕೆ 7 ವಿಎಕಟ್‌ಗೆ 309 ರನ್ ಗಳಿಸಿದ್ದ ಭಾರತ 'ಬಿ', ಭಾನುವಾರ ಆ ಮೊತ್ತಕ್ಕೆ ಕೇವಲ 23 ರನ್ ಸೇರಿಸಿತು. ವೇಗಿ ಅಬ್ದುಲ್ ಕಾಂಬೋಜ್ 69ಕ್ಕೆ 8 ವಿಕೆಟ್ ಕಿತ್ತರು. 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 'ಸಿ' 4 ವಿಕೆಟ್‌ಗೆ 128 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಸ್ಕೋರ್: ಭಾರತ 'ಸಿ' 525 ಹಾಗೂ 128/4, ಭಾರತ 'ಡಿ' 332
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.