ಸಚಿನ್ ತೆಂಡುಲ್ಕರ್ ಸಾಧನೆಗೆ 10 ವರ್ಷ; ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ!

By Suvarna NewsFirst Published Feb 24, 2020, 3:54 PM IST
Highlights

ಕ್ರಿಕೆಟ್‌ನ ಬಹುತೇಕ ಎಲ್ಲಾ ದಾಖಲೆಗಳು ಆರಂಭವಾವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಿಂದ. ಏಕದಿನ ಕ್ರಿಕೆಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ದ್ವಿಶತಕ ಸಿಡಿಸಿದ ದಾಖಲೆಯೂ ಸಚಿನ್ ಹೆಸರಿಗಿದೆ.  ಸಚಿನ್ ಬಳಿಕ ಹಲವು ದ್ವಿಶತಕ ದಾಖಲಾಗಿದೆ. ಇದೀಗ  ಸಚಿನ್ ಸಾಧನೆಗೆ 10 ವರ್ಷದ ಸಂಭ್ರಮ. 
 

ಬೆಂಗಳೂರು(ಫೆ.24): ಬರೋಬ್ಬರಿ 10 ವರ್ಷಗಳ ಹಿಂದೆ ಕ್ರಿಕೆಟ್ ಜಗತ್ತಿನಲ್ಲಿ ಇತಿಹಾಸ ನಿರ್ಮಾಣವಾಗಿತ್ತು. ಯಾರೂ ಊಹಿಸಿದ ದಾಖಲೆಯೊಂದು ನಿರ್ಮಾಣವಾಗಿತ್ತು. ಹೌದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದರು. ಇದೀಗ ಈ ಸಾಧನೆಗೆ 10 ವರ್ಷ ತುಂಬಿದೆ.

ಇದನ್ನೂ ಓದಿ: ಕ್ರೀಡಾ ಕ್ಷೇತ್ರದ 'ಆಸ್ಕರ್' ಲಾರೆಸ್ ಪ್ರಶಸ್ತಿ ಜಯಿಸಿದ ಸಚಿನ್ ತೆಂಡುಲ್ಕರ್..!

ಫೆಬ್ರವರಿ 24, 2010,  ಗ್ವಾಲಿಯರ್‌ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ 147 ಎಸೆತದಲ್ಲಿ 200 ರನ್ ಪೂರೈಸಿದ್ದರು. ಇದು ಏಕದಿನ ಕ್ರಿಕೆಟ್‌ನ ಮೊದಲ ದ್ವಿಶತಕ. ಬಳಿಕ ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್, ನ್ಯೂಜಿಲೆಂಡ್‌ನ  ಮಾರ್ಟಿನ್ ಗಪ್ಟಿಲ್ ಹಾಗೂ  ಪಾಕಿಸ್ತಾನದ ಫಕರ್ ಜಮಾನ್ ಡಬಲ್ ಸೆಂಚುರಿ ಸಾಧನೆ ಮಾಡಿದ್ದಾರೆ. ಆದರೆ ಸಚಿನ್ ದ್ವಿಶತಕ ಯಾವ ಅಭಿಮಾನಿಯೂ ಮರೆಯಲಾರ.

ಪರೀಕ್ಷೆ ಎದುರಿಸುವ ವಿದ್ಯಾರ್ಥಿ ಹಾಗೂ ಪೋಷಕರಿಗೆ ಸಚಿನ್ ಸರಳ ಟಿಪ್ಸ್!

ಏಕದಿನದಲ್ಲಿ 200 ರನ್ ಪೂರೈಸಿದ ಜಗತ್ತಿನ ಮೊದಲ ಕ್ರಿಕೆಟಿಗ. ಅದು ಭಾರತದ ಸೂಪರ್‌ಮ್ಯಾನ್ ಎಂದು ವೀಕ್ಷಕ ವಿರಣೆ ಮಾಡುತ್ತಿದ್ದ ರವಿ ಶಾಸ್ತ್ರಿ ಸಚಿನ್ ಸಾಧನೆಯನ್ನು ವರ್ಣಿಸಿದ್ದರು. 

 

in 2010, created history by becoming the 1st batsman to score a 200 in ODIs. 🇮🇳👏

Relive the knock 👉 https://t.co/yFPy4Q1lQB pic.twitter.com/F1DtPmo2Gm

— BCCI (@BCCI)

ಸಚಿನ್ ಐತಿಹಾಸಿಕ ಸಾಧನೆಯ ದಿನವೇ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಸಚಿನ್ ತೆಂಡುಲ್ಕರ್ ಹೆಸರು ಪ್ರಸ್ತಾಪಿಸಿದ್ದಾರೆ. ಭಾರತೀಯರು ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಗೆ ಚೀಯರ್ ಅಪ್ ಮಾಡುತ್ತಾರೆ. ಬಾಲಿವುಡ್ ಸಿನಿಮಾಗಳನ್ನ ನೋಡುತ್ತಾ ಖುಷಿ ಪಡುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ. 
 

ಫೆಬ್ರವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!