
ಬೆಂಗಳೂರು(ಏ.24): ಐಪಿಎಲ್ ಸಮರದಲ್ಲಿ ಧೋನಿ ಅದ್ಭುತ ಬ್ಯಾಟಿಂಗ್‌ನಿಂದ ಅಬ್ಬರಿಸ್ತಿದ್ದಾರೆ. ತಮ್ಮ ಹಳೆಯ ಖದರ್‌ಗೆ ಮರಳಿದ್ದಾರೆ. ಮೈದಾನದಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಸುತ್ತಿದ್ದಾರೆ. ಈ ವಯಸ್ಸಲ್ಲೂ ಧೋನಿಯ ಸಿಕ್ಸ್ ಹಿಟ್ಟಿಂಗ್ ಸಾಮರ್ಥ್ಯಕ್ಕೆ ಕ್ರಿಕೆಟ್ ಜಗತ್ತು ಬೆರಗಾಗಿದೆ. ಆದ್ರೆ, ಧೋನಿಯ ಬ್ಯಾಟಿಂಗ್ ಹಿಂದಿನ ಶಕ್ತಿ ಏನು ಗೊತ್ತಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ....
ಈ ಬಾರಿಯ IPLನಲ್ಲಿ ಧೋನಿ ಆರ್ಭಟ..!
ಈ ಬಾರಿಯ IPLನಲ್ಲಿ ಭಾರತೀಯ ಯಂಗ್‌ಸ್ಟರ್ಸ್‌ಗಳ ಅಬ್ಬರ ಜೋರಾಗಿದೆ. ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರರು, ಜಬರ್ದಸ್ತ್ ಪ್ರದರ್ಶನ ನೀಡ್ತಿದ್ದಾರೆ. ಆದ್ರೆ, ಮತ್ತೊಂದೆಡೆ ಸೀನಿಯರ್ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಹುಲ್ ಕೂಡ ಮಿಂಚುತ್ತಿದ್ದಾರೆ. ಅದರಲ್ಲೂ ಮಾಜಿ ನಾಯಕ ಧೋನಿಯ ಆರ್ಭಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಹೌದು, ಕಳೆದೆರೆಡು ಸೀಸನ್‌ಗಳಲ್ಲಿ ಧೋನಿ ಬ್ಯಾಟಿಂಗ್ನಲ್ಲಿ ಸೈಲೆಂಟಾಗಿದ್ರು. ಆದ್ರೆ, ಈ ಸಲ ಫುಲ್ ವೈಲೆಂಟಾಗಿದ್ದಾರೆ. ತಮ್ಮ ಹಳೆಯ ಖದರ್‌ಗೆ ಮರಳಿದ್ದಾರೆ. ಕ್ರೀಸ್‌ಗಿಳಿಯುತ್ತಿದ್ದಂತೆ ಮೈದಾನದಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಸುತ್ತಿದ್ದಾರೆ. ಅಭಿಮಾನಿಗಳಿಗೆ ಮಸ್ತ್ ಎಂಟರ್ಟೇನ್ಮೆಂಟ್ ನೀಡ್ತಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್‌ಗೆ 51ನೇ ಜನ್ಮದಿನದ ಸಂಭ್ರಮ; ಹರಿದು ಬಂತು ಶುಭಾಶಯಗಳ ಮಹಾಪೂರ
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ಸ್ ಸಿಕ್ಸ್ ಬಾರಿಸಿದ್ದ ಧೋನಿ, ಕೇವಲ 4 ಎಸೆತಗಳಲ್ಲಿ 20 ರನ್ ಚಚ್ಚಿದ್ರು. ಆ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಲಕ್ನೋ ವಿರುದ್ಧದ ಪಂದ್ಯದಲ್ಲೂ ಅದೇ ಆಟ ರಿಪೀಟ್ ಮಾಡಿದ್ರು. ಜಸ್ಟ್ 9 ಎಸೆತಗಳಲ್ಲಿ 28 ರನ್ ಸಿಡಿಸಿದ್ರು. ಈ ವಯಸ್ಸಲ್ಲೂ ಧೋನಿಯ ಸಿಕ್ಸ್ ಹಿಟ್ಟಿಂಗ್ ability ಕಂಡು ಕ್ರಿಕೆಟ್ ಜಗತ್ತು ಬೆರಗಾಗಿದೆ. ಧೋನಿ ಜೊತೆ ಆಡಿದ ಟೀಂ ಇಂಡಿಯಾದ ಹಲವು ಆಟಗಾರರು ಈಗಾಗಲೇ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಆದ್ರೆ, ಧೋನಿ ಮಾತ್ರ 42ನೇ ವಯಸ್ಸಿನಲ್ಲೂ ಫುಲ್ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ.
ಧೋನಿ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ..?
ಧೋನಿಯ ಫಿಟ್ನೆಸ್ ಸೀಕ್ರೆಟ್ ಅಂದ್ರೆ, ಅದು ಸ್ಟ್ರಿಕ್ಟ್ ಡಯಟ್. ಹೌದು, ಆಹಾರದ ವಿಷ್ಯದಲ್ಲಿ ಧೋನಿ ತುಂಬಾ ಕಟ್ಟುನಿಟ್ಟು. ಕರಿಯರ್ ಆರಂಭದ ಕೆಲ ವರ್ಷಗಳಲ್ಲಿ ಧೋನಿ ಸಿಕ್ಕಾಪಟ್ಟೆ FOODIE ಆಗಿದ್ರು. ಬಟರ್ ಚಿಕನ್, ನಾನ್ ಮತ್ತು ಮಿಲ್ಕ್ಶೇಕ್, ಚಾಕ್ಲೇಟ್, ಸಾಫ್ಟ್ ಡ್ರಿಂಕ್ಸ್ ಹೆಚ್ಚಾಗಿ ಸೇವಿಸ್ತಿದ್ರು. ಆದ್ರೆ, 30 ದಾಟಿದ ನಂತರ ಧೋನಿ ತನ್ನಿಷ್ಟದ ತಿಂಡಿಗಳನ್ನೆಲ್ಲಾ ತ್ಯಜಿಸಿದ್ದಾರೆ. ಪ್ರೋಟಿನ್ಯುಕ್ತ ಆಹಾರವನ್ನ ಮಾತ್ರ ಸೇವಿಸ್ತಾರೆ.
ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಆಯ್ಕೆ ಮಾಡಿದ ಇರ್ಫಾನ್ ಪಠಾಣ್..! ಯಾರಿಗೆಲ್ಲಾ ಸಿಕ್ಕಿದೆ ಸ್ಥಾನ?
ಹತ್ತು ತಿಂಗಳ ಪಕ್ಕಾ ರೈತ, ಎರಡು ತಿಂಗಳು ಕ್ರಿಕೆಟರ್..!
ಯೆಸ್, ಇನ್ನು ಧೋನಿಯ ಮಸಲ್ ಪವರ್ ಹಿಂದಿನ ಕಾರಣ ಕೃಷಿ. ಧೋನಿ ಜಿಮ್ನಲ್ಲಿ ಕಾಲಕಳೆಯೋದಕ್ಕಿಂತ ಹೆಚ್ಚಾಗಿ ರಾಂಚಿಯಲ್ಲಿರೋ ತಮ್ಮ ಹೊಲದಲ್ಲಿ ಕಾಲ ಕಳೆಯುತ್ತಾರೆ. ಹೊರಜಗತ್ತಿನ ಬಗ್ಗೆ ತಲೆಕೆಡಿಸಿಕೊಲ್ಳದೇ, ಪಕ್ಕಾ ರೈತನಂತೆ ಬೆವರು ಹರಿಸ್ತಾರೆ. ಕೆಲಸದವರ ಸಹಾಯವಿಲ್ಲದೇ ಪ್ರತಿಯೊಂದನ್ನೂ ತಾವೇ ಮಾಡ್ತಾರೆ. ಮನೆಗೆ ಬೇಕಾದ ಪ್ರತಿಯೊಂದು ಹಣ್ಣು, ತರಕಾರಿಯನ್ನ ತಮ್ಮ ತೋಟದಲ್ಲೇ ಬೆಳೆಯುತ್ತಾರೆ.
ಒಟ್ಟಿನಲ್ಲಿ ಹತ್ತು ತಿಂಗಳು ರೈತನಾಗಿರೋ ಧೋನಿ, ಎರಡು ತಿಂಗಳು ಮಾತ್ರ ಕ್ರಿಕೆಟರ್ ಆಗಿರ್ತಾರೆ. ಅದೇನೆ ಇರಲಿ, ಧೋನಿ ಇನ್ನು ಕೆಲ ವರ್ಷಗಳ ಕಾಲ ಹಿಂಗೆ ಫಿಟ್ ಆ್ಯಂಡ್ ಫೈನ್ ಆಗಿರಲಿ, ಅಭಿಮಾನಿಗಳನ್ನ ರಂಜಿಸ್ತಾ ಇರಲಿ ಅನ್ನೋದೆ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.