ಬೆತ್ತಲಾಗಿ ನ್ಯೂಸ್ ಪೇಪರ್‌ ಹಿಡಿದು ಕುಳಿತ ವಿದ್ಯಾ ಬಾಲನ್; 'ಡರ್ಟಿ ಪಿಕ್ಚರ್' ಎಂದು ಕಾಲೆಳೆದ ನೆಟ್ಟಿಗರು

By Shruthi KrishnaFirst Published Mar 7, 2023, 1:07 PM IST
Highlights

ಬಾಲಿವುಡ್ ನಟಿ ವಿದ್ಯಾ ಬಾಲನ್ ಹಾಟ್ ಫೋಟೋ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಬೆತ್ತಲಾಗಿ ನ್ಯೂಸ್ ಪೇಪರ್ ಹಿಡಿದು ಕುಳಿತಿರುವ ವಿದ್ಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬಾಲಿವುಡ್ ಖ್ಯಾತ ನಟ ವಿದ್ಯಾ ಬಾಲನ್ ಹೆಚ್ಚಾಗಿ ಸೀರಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸೀರೆ ಎಂದರೆ ವಿದ್ಯಾ ಅವರಿಗೆ ತುಂಬಾ ಇಷ್ಟ. ಈ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದರು. ಇದೀಗ ವಿದ್ಯಾ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ನ್ಯೂಸ್ ಪೇಪರ್ ನಲ್ಲಿ ಖಾಸಗಿ ಅಂಗ ಮುಚ್ಚಿಕೊಂಡಿರುವ ವಿದ್ಯಾ ಬಾಲನ್ ಫೋಟೋ ನೋಡಿ ಪಡ್ಡೆಯುವಕರು ನಿದ್ದೆಗೆಟ್ಟಿದ್ದಾರೆ. ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿದ್ಯಾ ಏಕಾಏಕಿ ಸೀರೆ ಬಿಚ್ಚೆಸೆದು ನ್ಯೂಸ್ ಪೇಪರ್ ಅಡ್ಡ ಇಟ್ಟುಕೊಂಡಿರುವುದನ್ನು ನೋಡಿ ಅಭಿಮಾನಿಗಳು ಕಂಗಾಲಾಗಿದ್ದಾರೆ. 

ವಿದ್ಯಾ ಬಾಲನ್ ಅವರ ಈ ಹಾಟ್ ಫೋಟೋವನ್ನು ಸೆರೆ ಹಿಡಿದಿದ್ದು ಖ್ಯಾತ ಸೆಲೆಬ್ರಿಟಿ ಛಾಯಾಗ್ರಾಹಕ ಡಬ್ಬೂ ರತ್ನಾನಿ. ಪ್ರತಿವರ್ಷ ಡಬ್ಬೂ ರತ್ನಾನಿ ತಮ್ಮ ಕ್ಯಾಲೆಂಡರ್ ಗಾಗಿ ಸೆಲೆಬ್ರಿಟಿಗಳ ಫೋಟೋಶೂಟ್ ಮಾಡಿಸುತ್ತಾರೆ. ಫೋಟೋಶೂಟ್‌ಗಾಗಿ ವಿದ್ಯಾ ಬಾಲನ್ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಒಂದು ಕೈಯಲ್ಲಿ ನ್ಯೂಸ್ ಪೇಪರ್ ಹಿಡಿದಿದ್ದಾರೆ ಮತ್ತೊಂದು ಕೈಯಲ್ಲಿ ಮಗ್ ಹಿಡಿದಿದ್ದಾರೆ. ಬಟ್ಟೆ ಇಲ್ಲದೆ ನ್ಯೂಸ್ ಪೇಪರ್ ಅಡ್ಡ ಹಿಡಿದು ಕುಳಿತಿರುವ ವಿದ್ಯಾ ಬಾಲನ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

Latest Videos

ನೆಟ್ಟಿಗರು ವಿದ್ಯಾ ಬಾಲನ್ ಫೋಟೋಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದು ಓವರ್ ಎಡಿಟ್ ಆಗಿದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಇಷ್ಟು ಹಾಟ್ ಆಗಬೇಕಿತ್ತಾ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಇವರನ್ನೆಲ್ಲಾ ರೋಲ್ ಮಾಡೆಲ್ ಅಂತ ಹೇಳೋಕೆ ಆಗುತ್ತಾ ಎಂದು ಹೇಳುತ್ತಿದ್ದಾರೆ. ಇನ್ನು ಅನೇಕರು ವಿದ್ಯಾ ನಟನೆಯ ಡರ್ಟಿ ಪಿಕ್ಚರ್ಸ್ ಗೆ ಹೋಲಿಕೆ ಮಾಡುತ್ತಿದ್ದಾರೆ. ಅಭಿಮಾನಿಗಳು ಸಿಕ್ಕಾಪಟ್ಟೆ ಹಾಟ್ ಆಗಿದೆ ಎಂದು ಬೆಂಕಿ ಮತ್ತು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತ ಪಡಿಸುತ್ತಿದ್ದಾರೆ.

ವಿದ್ಯಾ ಬಾಲನ್ ಸಿನಿಮಾಗಳ ವಿರುದ್ಧ ಸೈಫ್ ತಾಯಿ ಅಸಮಾಧಾನ; ನಂಬಿಕೆ ಇಲ್ಲದ ನಿರ್ದೇಶಕರು ಎಂದ ಶರ್ಮಿಳಾ

 ಡಬ್ಬೂ ರತ್ನಾನಿ ಈ ವರ್ಷ  ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್‌ನಿಂದ ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಅವರಿಗೆ ಫೋಟೋಶೂಟ್ ಮಾಡಿದ್ದಾರೆ. ಸ್ಟಾರ್ ಗಳ ಜೊತೆಗೆ ಶೆಹನಾಜ್ ಗಿಲ್ ಅವರಂತಹ ಕೆಲವು ಹೊಸ ಮುಖಗಳನ್ನು ತನ್ನ ಕ್ಯಮರಾದಲ್ಲಿ ಸೆರೆಹಿಡಿದಿದ್ದಾರೆ.

ಮೊಡವೆ ಬರ್ಬಾರ್ದು ಅಂತ 10 ಲೀಟರ್‌ ನೀರು ಕುಡಿದ ವಿದ್ಯಾ ಬಾಲನ್; ವಾಂತಿ ಮಾಡಿದ ಕಥೆ ಇದು

ನಟಿ ವಿದ್ಯಾ ಬಾಲನ್ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಪರಿಣೀತಾ, ಇಷ್ಕಿಯಾ, ನೋ ಒನ್ ಕಿಲ್ಡ್ ಜೆಸ್ಸಿಕಾ, ಕಹಾನಿ, ದಿ ಡರ್ಟಿ ಪಿಕ್ಚರ್‌ನಂತಹ ಅನೇಕ ಮೆಚ್ಚುಗೆ ಪಡೆದ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈ ಸಿನಿಮಾಗಳು ವಿದ್ಯಾ ಅವರಿಗೆ ಅತೀ ಹೆಚ್ಚು ಖ್ಯಾತಿತಂದು ಕೊಟ್ಟ ಸಿನಿಮಾಗಳಾಗಿವೆ. ವಿದ್ಯಾ ಇತ್ತೀಚೆಗೆ ನಟಿಸಿದ ಬಯೋಪಿಕ್ ಶಕುಂತಲಾ ದೇವಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿಲ್ಲ. ಸದ್ಯ ಎರಡು ಸಿನಿಮಾಗಳಲ್ಲಿ ವಿದ್ಯಾ ಬ್ಯುಸಿಯಾಗಿದ್ದಾರೆ. 

click me!