ದುಡ್ಡಿಗಾಗಿ ಬೆಡ್‌ರೂಮ್ ದೃಶ್ಯಗಳಲ್ಲಿ ಕಾಣಿಸಿಕೊಂಡ್ರಾ ತಮನ್ನಾ? ಮಿಲ್ಕಿ ಬ್ಯೂಟಿ ಅಪ್‌ಸೆಟ್ ಆಗಿದ್ದೇಕೆ?

By Shruthi KrishnaFirst Published Jul 5, 2023, 1:13 PM IST
Highlights

ದುಡ್ಡಿಗಾಗಿ ಬೆಡ್‌ರೂಮ್ ದೃಶ್ಯಗಳಲ್ಲಿ ನಟಿಸಿದ್ದಾರೆ ಎನ್ನುವ ಟ್ರೋಲ್‌ಗಳಿಗೆ ನಟಿ ತಮನ್ನಾ ಅಸಮಾದಾನ ಹೊರಹಾಕಿದ್ದಾರೆ. ಮಹಿಳೆಯರನ್ನು ಪ್ರಶ್ನೆ ಮಾಡ್ತೀರಿ ಆದರೆ ಪುರುಷರನ್ನು ಹೊಗಳುತ್ತೀರಾ ಎಂದು ತಮನ್ನಾ ಹೇಳಿದ್ದಾರೆ. 

ನಟಿ ತಮನ್ನಾ ಭಾಟಿಯಾ ಸದ್ಯ ಲಸ್ಟ್ ಸ್ಟೋರಿ 2 ಮತ್ತು ಜೀ ಕರ್ದಾ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ಎರಡು ಸಿನಿಮಾಗಳಲ್ಲೂ ಸಮಂತಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ತಮನ್ನಾ ತನ್ನ 18 ವರ್ಷಗಳ ವೃತ್ತಿ ಜೀವನದ ನೋ ಕಿಸ್ಸಿಂಗ್ ನಿಯಮವನ್ನು ಬ್ರೇಕ್ ಮಾಡಿದ್ದಾರೆ. ತಮನ್ನಾ ಅವರನ್ನು ಈ ಪರಿ ಹಾಟ್ ದೃಶ್ಯಗಳಲ್ಲಿ ನೋಡಿ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ. ಮಿಲ್ಕಿ ಬ್ಯೂಟಿಯ ಬೆಡ್‌ರೂಮ್ ದೃಶ್ಯಗಳ ಫೋಟೋಗಳು ಮತ್ತು ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಖತ್ ಟ್ರೋಲ್ ಕೂಡ ಆಗುತ್ತಿದೆ. ಈ ಬಗ್ಗೆ ತಮನ್ನಾ ಅಸಮಾಧಾನ ಹೊರಹಾಕಿದ್ದಾರೆ. 

ಲಸ್ಟ್ ಸ್ಟೋರಿ 2 ನಲ್ಲಿ ತಮನ್ನಾ ನಟ ವಿಜಯ್ ವರ್ಮಾ ಜೊತೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ವರ್ಮಾ ಮತ್ತು ತಮನ್ನಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಪ್ರೀತಿಯಲ್ಲಿದ್ದಾರೆ. ಹಾಗಾಗಿ ತೆರೆಮೇಲೂ ಕೂಡ ಇಬ್ಬರೂ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ಅಲ್ಲದೇ ವಿಜಯ್‌ಗೊಸ್ಕರ್ ಹಾಟ್ ದೃಶ್ಯಗಳನ್ನು ಮಾಡಲು ಒಪ್ಪಿಕೊಂಡಿರುವುದಾಗಿ ಸ್ವತಃ ತಮನ್ನಾ ಹೇಳಿಕೊಂಡಿದ್ದಾರೆ. ತಮನ್ನಾ ಮಾತಿಗೆ ವಿಜಯ್ ಕೂಡ ಧನ್ಯವಾದ ತಿಳಿಸಿದ್ದಾರೆ. 

Latest Videos

ಆದರೆ ತಮನ್ನಾ ದೃಶ್ಯಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ತಮನ್ನಾ ಅವರನ್ನು ಈ ರೀತಿಯ ದೃಶ್ಯಗಳಲ್ಲಿ ನೋಡಿ ಬೇಸರ ಹೊರಹಾಕುತ್ತಿದ್ದಾರೆ. ಇನ್ನು ಅನೇಕರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ತನ್ನ ವೃತ್ತಿ ಜೀವನದ ಅಂತ್ಯದ ವೇಳೆಗೆ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಣಕ್ಕಾಗಿ ಲಿಪ್‌ಲಾಕ್ ದೃಶ್ಯಗಳಲ್ಲಿ, ಬೆಡ್‌ರೂಮ್ ಸೀನ್‌ಗಳನ್ನು ಮಾಡುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. 

ಕುಟುಂಬದ ಜೊತೆ 'ಲಸ್ಟ್ ಸ್ಟೋರಿ' ನೋಡಿದ ಅನುಭವ ಬಿಚ್ಚಿಟ್ಟ ನಟಿ ತಮನ್ನಾ

ಟ್ರೋಲ್‌ಗಳಿಂದ ಸಮಂತಾ ಸಿಕ್ಕಾಪಟ್ಟೆ ಅಪ್‌ಸೆಟ್ ಆಗಿದ್ದಾರೆ ಎನ್ನಲಾಗಿದೆ. ಈ ಕಾಲದಲ್ಲೂ ಕೆಲವರು ಅಪ್‌ಡೇಟ್ ಆಗಲ್ಲ ಎಂದು ತಮನ್ನಾ ಹೇಳಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ತಮನ್ನಾ, ಟ್ರೋಲ್‌ಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತೆರೆಮೇಲೆ ಲಿಪ್‌ಕಿಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಾಗ ಜನರು ಕೇವಲ ನಟಿಯರ ಹೆಸರನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಆದರೆ ಪುರುಷರನ್ನು ಹೊಗಳುತ್ತಾರೆ. ಈ ಜನರು ಪ್ರಗತಿಶೀಲ ಮತ್ತು ಸಕಾರಾತ್ಮಕ ಚಿಂತನೆಯ ಪ್ರಕ್ರಿಯೆಯನ್ನು ಹೊಂದಿರುವುದಿಲ್ಲ. ಇಂಥ ಕೆಟ್ಟ ಕಾಮೆಂಟ್‌ಗಳಿಂದ ನೋವಾಗಿದೆ' ಎಂದು ತಮನ್ನಾ ಹೇಳಿದ್ದಾರೆ. 

ಫಸ್ಟ್ ಟೈಂ ತೆರೆ ಮೇಲೆ ಕಿಸ್ ಮಾಡಿದ್ದು ನಿಮಗೆಯೇ: ತಮನ್ನಾ ಮಾತಿಗೆ ಬಾಯ್‌ಫ್ರೆಂಡ್ ವಿಜಯ್ ರಿಯಾಕ್ಷನ್ ಹೀಗಿತ್ತು!

ತಮನ್ನಾ ದಕ್ಷಿಣ ಭಾರತದಲ್ಲಿ ಭೋಲಾ ಶಂಕರ, ಜೈಲರ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬೋಲ ಶಂಕರ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಿದ್ದಾರೆ. ಸದ್ಯದಲ್ಲೇ ಆ ಸಿನಿಮಾ ರಿಲೀಸ್ ಆಗಲಿದೆ. ಮತ್ತೆ ತೆಲುಗು ಅಭಿಮಾನಿಗಳ ಮುಂದೆ ಬರಲಿದ್ದಾರೆ ತಮನ್ನಾ.  

click me!