ಬೋಲ್ಡ್​ ಆಗಿ ಕಾಣಲು ಹೋಗಿ ಎಡವಟ್ಟು ಮಾಡಿಕೊಂಡ Taapsee Pannu

By Suvarna NewsFirst Published Mar 22, 2023, 12:32 PM IST
Highlights

ಚಿತ್ರಗಳಿಗಿಂತಲೂ ಹೆಚ್ಚು ವಿವಾದಗಳಿಗೆ ಹೆಸರಾಗಿರುವ ನಟಿ ತಾಪ್ಸಿ ಪನ್ನು ಬೋಲ್ಡ್​ ಆಗಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಏನದು?
 

ತಾಪ್ಸಿ ಪನ್ನು (Taapsee Pannu) ತಮ್ಮ ಚಿತ್ರಗಳಿಗಿಂತಲೂ ಹೆಚ್ಚು ವಿವಾದಗಳಿಂದ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇತ್ತೀಚೆಗೆ, ತಾಪ್ಸಿ ತಮ್ಮ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಮಾಡಿರುವ ಒಂದು ಎಡವಟ್ಟಿನಿಂದ  ತೀವ್ರವಾಗಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.  ಇತ್ತೀಚೆಗೆ ನಡೆದ 'ಲ್ಯಾಕ್ಮೆ ಫ್ಯಾಷನ್ ವೀಕ್' (LFW) ನಲ್ಲಿ, ತಾಪ್ಸಿ ಪನ್ನು ಬೋಲ್ಡ್ ನೆಕ್‌ಲೈನ್‌ನೊಂದಿಗೆ ಹಾಟ್ ಕೆಂಪು ಉಡುಪಿನಲ್ಲಿ ರಾಂಪ್ ವಾಕ್ ಮಾಡಿದರು. ಈ ಡ್ರೆಸ್ ಜೊತೆಗೆ, ಅವರು ಹೆವಿ ಡಿಸೈನರ್ ನೆಕ್‌ಪೀಸ್ ಅನ್ನು ಧರಿಸಿದ್ದರು. ಈ ನೆಕ್​ಪೀಸ್​ನಿಂದಲೇ ಅವರು ಈಗ ಭಾರಿ ಟ್ರೋಲ್​ಗೆ ಒಳಗಾಗಿದ್ದಾರೆ. ಅದಕ್ಕೆ ಕಾರಣ, ದೇಹವೆಲ್ಲಾ ಕಾಣುವ ಡ್ರೆಸ್​ ತೊಟ್ಟು ಅದರ ಮೇಲೆ  ಲಕ್ಷ್ಮಿದೇವಿಯ ವಿಗ್ರಹ ಇರುವ ನೆಕ್​ಲೆಸ್​ ಧರಿಸಿರುವುದು!  ಈ ಕೆಂಪು ಬಣ್ಣ ಯಾವಾಗಲೂ ನನಗೆ ಇಷ್ಟ ಎಂದು ತಾಪ್ಸಿ ಬರೆದಿದ್ದಾರೆ. ಆದರೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಾಪ್ಸಿ ಪನ್ನು ಬೋಲ್ಡ್ ಡ್ರೆಸ್‌ನಲ್ಲಿ (Bold Dress) ಮಾ ಲಕ್ಷ್ಮಿ ವಿಗ್ರಹವಿರುವ ನೆಕ್ಲೇಸ್ ಧರಿಸಿರುವುದು ಜನರಿಗೆ ಇಷ್ಟವಾಗಲಿಲ್ಲ ಮತ್ತು ಅವರು ತಾಪ್ಸಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.  ಇದು ಹಿಂದೂ ಧರ್ಮಕ್ಕೆ 'ಅಪಮಾನ' ಎಂದು ಕರೆದ್ದಾರೆ. ಇದು ಅಶ್ಲೀಲ ಫೋಟೋ. ದೇಹಪೂರ್ತಿ ಕಾಣಿಸುವ ಡ್ರೆಸ್​ನ ಜೊತೆ ಹಿಂದೂ ಧರ್ಮಿಯರು ಅತ್ಯಂತ ಭಕ್ತಿಯಿಂದ ಪೂಜಿಸುವ ಲಕ್ಷ್ಮೀದೇವಿ (LakshmiDevi) ಫೋಟೋ ಇರುವ ನೆಕ್​ಲೆಸ್​ ಧರಿಸಿರುವುದು ಖಂಡನಾರ್ಹ ಎಂದಿದ್ದಾರೆ. ಭಾರತೀಯ ಮಹಿಳೆಯರಿಗೆ ಅವರದ್ದೇ ಆದ ಘನತೆ ಇದೆ. ಅವರನ್ನು ದೇವತೆಗಳಿಗೆ ಹೋಲಿಸಲಾಗುತ್ತದೆ. ಇಂಥ ಅಶ್ಲೀಲ ಬಟ್ಟೆ ಧರಿಸಿ ಲಕ್ಷ್ಮಿಯನ್ನು ಅಪಮಾನ ಮಾಡಿರುವ ನೀವು ಹೆಣ್ಣೇ ಅಲ್ಲ ಎಂದು ಇನ್ನು ಕೆಲವರು ಕೆಂಡಾಮಂಡಲವಾಗಿದ್ದಾರೆ. ಇದಕ್ಕೂ ಮುನ್ನ ತಾಪ್ಸಿ ಪನ್ನು ತಮ್ಮ ಬೋಲ್ಡ್ ಚಿತ್ರಗಳನ್ನು ಹಂಚಿಕೊಂಡಿದ್ದರು. ಕೆಲವು ದಿನಗಳ ಹಿಂದೆ ತಾಪ್ಸಿ ಪನ್ನು ನೀಲಿ ಬಣ್ಣದ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಈ ಚಿತ್ರಗಳನ್ನು ಹಂಚಿಕೊಂಡಿದ್ದರು.
 
ತಾಪ್ಸಿ ಪನ್ನು ಹೊಟ್ಟೆಗೆ ಏನು ತಿನ್ನುತ್ತಾರೆ? ನಟಿಯ ಫಿಟ್‌ನೆಸ್ secrets!

Latest Videos

ತಾಪ್ಸಿ ಪನ್ನು ಅವರು ಕೆಲಸದ ಬಗ್ಗೆ ಹೇಳುವುದಾದರೆ, ಇವರು ಶೀಘ್ರದಲ್ಲೇ 'ವೋ ಲಡ್ಕಿ ಹೈ ಕಹಾನ್' ಚಿತ್ರದಲ್ಲಿ ಪ್ರತೀಕ್ ಗಾಂಧಿ ಎದುರು ಕೆಲಸ ಮಾಡಲಿದ್ದಾರೆ. 2024 ರಲ್ಲಿ ಅವರ ಚಿತ್ರ ಫಿರ್ ಆಯಿ ಹಸೀನ್ ದಿಲ್ರುಬಾ ಬಿಡುಗಡೆಯಾಗಲಿದೆ. ಇದಲ್ಲದೆ, ಅವರು ರಾಜ್‌ಕುಮಾರ್ ಹಿರಾನಿ ಅವರ 'ಡಾಂಕಿ' ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ತಾಪ್ಸಿ ಕೊನೆಯದಾಗಿ 'ಬ್ಲರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಫಿಟ್​ನೆಸ್​ (Fitness) ಕಾಯ್ದುಕೊಳ್ಳುವ ತಾರೆಯರಲ್ಲಿ ತಾಪ್ಸಿ ಕೂಡ ಒಬ್ಬರು. ಇತ್ತೀಚಿಗೆ ಅವರು ತಮ್ಮ ಫಿಟ್​ನೆಸ್​ ರಹಸ್ಯ ಬಯಲು ಮಾಡಿದ್ದರು. ತಾಪ್ಸಿ ಪನ್ನು ದಿನವೂ ಬೆಳಗ್ಗೆ ಸೂರ್ಯ ನಮಸ್ಕಾರ ಮಾಡುವುದು ಮಿಸ್ ಮಾಡುವುದಿಲ್ಲ. ಏಕೆಂದರೆ ಸೂರ್ಯ ನಮಸ್ಕಾರ ಮಾಡುವುದರಿಂದ ಚಯಾಪಚಯ ಮತ್ತು ರಕ್ತ ಪರಿಚಲನೆ ಸುಧಾರಿಸುವುದರ ಜೊತೆಗೆ ಈ ವ್ಯಾಯಾಮದಿಂದ ಬೆವರುವುದರಿಂದ ಚರ್ಮಕ್ಕೆ ತೇಜಸ್ಸು ನೀಡುವುದಲ್ಲದೆ ಆರೋಗ್ಯಕರವಾಗಿರಿಸುತ್ತದೆ. ಇದು ವಯಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಬೆಳಗಿನ ಈ ವ್ಯಾಯಾಮ ದಿನವಿಡೀ ಹೆಚ್ಚಿನ ಶಕ್ತಿ ಮತ್ತು ಆಶಾವಾದವನ್ನು ಹೆಚ್ಚಿಸುವಂತೆ ಮಾಡುತ್ತದೆ. ವ್ಯಾಯಾಮದ ನಂತರ ಆಗಾರ ಸೇವಿಸುವುದರಿಂದ ದಿನವಿಡೀ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ತಾಪ್ಸಿ ಪನ್ನು ಲಾಕ್‌ಡೌನ್ ಸಮಯದಲ್ಲಿ ಶಭಾಶ್ ಮಿಥು ಸಿನಿಮಾಗಾಗಿ ತರಬೇತಿ ಪಡೆಯುತ್ತಿದ್ದರು. ಅದನ್ನೇ ಮುಂದುವರೆಸಿರುವ ಅವರು ಹೊರಗಡೆ ಅಂದರೆ ವಾತಾವರಣಕ್ಕೆ ದೈಹಿಕ ಚಟುವಟಿಕೆಯ ವ್ಯಾಯಾಮ ಮಾಡುವುದು ಬಹಳ ಒಳ್ಳೆಯದು ಎಂದಿದ್ದಾರೆ. ಹೀಗೆ ಮಾಡುವುದರಿಂದ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ ಮತ್ತು ಪಾರ್ಶ್ವಬವಾಯು ಮತ್ತು ಇತರೆ ಹೃದಯ ಸಂಬAಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Vasishta Simha-Haripriya: ಮದ್ವೆಯಾಗಿ 2 ತಿಂಗಳಿಗೇ 'ಗುಡ್​ ನ್ಯೂಸ್'​! ಇನ್​ಸ್ಟಾದಲ್ಲಿ ಶಾಕ್​ ಕೊಟ್ಟ ನಟಿ
 

click me!