ಪ್ರೇಮ್ ಪ್ರತಿಜ್ಞಾ ಶೂಟಿಂಗ್ ಸಮಯದಲ್ಲಿ ಮಾಧುರಿ ದೀಕ್ಷಿತ್ ಅವರು ಆ ದೃಶ್ಯ ಮಾಡಲ್ಲ ಎಂದು ಬಿಕ್ಕಿಬಿಕ್ಕಿ ಅತ್ತು, ಶೂಟಿಂಗ್ ಮುಗಿದ ಬಳಿಕವೂ ಅತ್ತಿದ್ದನ್ನು ನೆನಪಿಸಿಕೊಂಡಿದ್ದಾರೆ ಖಳ ನಟ ರಂಜೀತ್.
1970 ರಿಂದ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ ಹಿರಿಯ ಬಾಲಿವುಡ್ ನಟ ರಂಜೀತ್, 1989 ರ ಪ್ರೇಮ್ ಪ್ರತಿಜ್ಞಾ ಚಿತ್ರದ ಶೂಟಿಂಗ್ನಲ್ಲಿ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ. ಆ ದಿನಗಳಲ್ಲಿ ರಂಜೀತ್ ತಮ್ಮ ಖಳನಾಯಕ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು ಮತ್ತು ಅವರ ವಿವಿಧ ಚಿತ್ರಗಳಲ್ಲಿ ಹೆಚ್ಚಾಗಿ ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಪಾತ್ರಗಳೇ ಇರುತ್ತಿದ್ದವು. ಆದ್ದರಿಂದ ಹೊಸ ನಟಿಯರು ಕೂಡ ಇವರನ್ನು ಕಂಡರೆ ಹೆದರುತ್ತಿದ್ದರು. ಪ್ರೇಮ್ ಪ್ರತಿಜ್ಞಾ ಚಿತ್ರದ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್ ಮೇಲೂ ಇಂಥದ್ದೇ ದೃಶ್ಯವನ್ನು ನಟ ಮಾಡಬೇಕಿತ್ತು. ಆಗ ಮಾಧುರಿ ಅವರು ಬಾಲಿವುಡ್ನಲ್ಲಿ ಐದು ವರ್ಷ ಪೂರ್ಣಗೊಳಿಸಿದ್ದರು. ಅದರ ಹೊರತಾಗಿಯೂ ಮಾಧುರಿ, ರಂಜೀತ್ ಅವರನ್ನು ಕಂಡರೆ ಭಯಬಿದ್ದಿದ್ದರಂತೆ. ಆ ದೃಶ್ಯವನ್ನು ತಾವು ಮಾಡುವುದೇ ಇಲ್ಲ ಎಂದು ಜೋರಾಗಿ ಅತ್ತಿದ್ದರಂತೆ.
ಈ ಕುರಿತು ನಟ ರಂಜೀತ್ ಈಗ ರಿವೀಲ್ ಮಾಡಿದ್ದಾರೆ. ವಿಕಿ ಲಾಲ್ವಾನಿ ಅವರೊಂದಿಗಿನ ಸಂದರ್ಶನವೊಂದರಲ್ಲಿ, ರಂಜೀತ್ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ನನ್ನ ಇಮೇಜ್ ಆ ಸಂದರ್ಭದಲ್ಲಿ ನಿರ್ದಯಿ, ರೇ*ಸ್ಟ್ ಎಂದೆಲ್ಲಾ ಆಗಿಬಿಟ್ಟಿತ್ತು. ಇಂಡಸ್ಟ್ರಿಗೆ ಹೊಸದಾಗಿ ಬರ್ತಿದ್ದ ಹುಡುಗಿಯರು ಮತ್ತು ಹುಡುಗರು ನನಗೆ ಭಯಪಡುತ್ತಿದ್ದರು. ಮಾಧುರಿ ಕೂಡ ನನ್ನ ಬಗ್ಗೆ ತಿಳಿದುಕೊಂಡಿದ್ದರು. ಈ ಚಿತ್ರದಲ್ಲಿ ನಾನು ರೇ* ಮಾಡುವ ದೃಶ್ಯವಿದೆ. ಆದರೆ, ಈ ದೃಶ್ಯ ಮಾಡುವುದೇ ಇಲ್ಲ ಎಂದು ಮಾಧುರಿ ಸಿಕ್ಕಾಪಟ್ಟೆ ಅಳತೊಡಗಿದರು. ಕೊನೆಗೆ ಎಲ್ಲರೂ ಆಕೆಯನ್ನು ಸಮಾಧಾನಪಡಿಸಿದರು. ನಾನು ಒಳ್ಳೆಯ ಮನುಷ್ಯ ಎಂದು ಆಕೆಗೆ ಮನವರಿಕೆ ಮಾಡಿಕೊಡಲಾಯಿತು. ಇದರ ಹೊರತಾಗಿಯೂ ಆಕೆಗೆ ಈ ದೃಶ್ಯ ಮಾಡಲು ಇಷ್ಟವಿರಲಿಲ್ಲ. ಅಳುತ್ತಲೇ ಇದ್ದರು. ಆದರೂ ಅನಿವಾರ್ಯವಾಗಿ ಹೇಗೋ ಸಮಾಧಾನ ಮಾಡಿ ಈ ದೃಶ್ಯ ಮಾಡಿ ಮುಗಿಸಿದ್ವಿ. ಶೂಟಿಂಗ್ ಮುಗಿದ ಮೇಲೂ ಆಕೆ ಅಳುತ್ತಿದ್ದರು ಎಂದಿದ್ದಾರೆ.
ಕಾಣಬಾರದ್ದೆಲ್ಲಾ ಕಂಡೋಯ್ತಮ್ಮಾ, ಈಗೇನ್ ಡ್ರೆಸ್ ಸರಿಮಾಡ್ಕೋತ್ಯಾ? ತುಪ್ಪದ ಬೆಡಗಿ ರಾಗಿಣಿ ಟ್ರೋಲ್- ವಿಡಿಯೋ ವೈರಲ್
ಈ ಶೂಟಿಂಗ್ ಮುಗಿದ ಮೇಲೆ ಅಲ್ಲಿದ್ದವರು ಮಾಧುರಿಯನ್ನು ಹುರಿದುಂಬಿಸಲು ಚಪ್ಪಾಳೆ ತಟ್ಟಿದರು. ಆದರೂ ಆಕೆ ಅಳುವುದನ್ನು ಮುಂದುವರೆಸಿದ್ದರು. ನಿರ್ಮಾಪಕರು ಮತ್ತು ಇತರರು ಅವರ ಬಳಿಗೆ ಧಾವಿಸಿ, 'ನೀವು ಚೆನ್ನಾಗಿದ್ದೀರಾ?' ಎಂದು ಕೇಳಿದರು ಎಂದರು. ಅಷ್ಟಕ್ಕೂ, ನಟಿ ಮಾಧುರಿ ದೀಕ್ಷಿತ್ 90 ರ ದಶಕದಲ್ಲಿ ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಮನರಂಜನಾ ಉದ್ಯಮದಲ್ಲಿ ತಮ್ಮ ಬಹುಮುಖ ಅಭಿನಯದಿಂದ, ಹಾಸ್ಯದಿಂದ, ಭಾವುಕ ದೃಶ್ಯಗಳಿಂದ ಹಾಗೂ ಅಷ್ಟೇ ರೊಮ್ಯಾನ್ಸಿಂಗ್ ಸೀನ್ಗಳಿಂದ ಕೋಟ್ಯಂತರ ಜನರ ಹೃದಯ ಗೆದ್ದ ನಟಿಯೀಕೆ. ತಮ್ಮ ಸಹ-ನಟರೊಂದಿಗೆ ಕೆಲಸ ಮಾಡುವಾಗ ಕೆಲವೊಂದು ಷರತ್ತು ವಿಧಿಸಿ ಮಾಧುರಿ ನಿಷ್ಠೂರರಾಗಿದ್ದೂ ಇದೆ. ಆದಾಗ್ಯೂ, ಈಕೆ ಕೆಲವು ಸನ್ನಿವೇಶಗಳನ್ನು ಹೇಗೆ ಎದುರಿಸಬೇಕಾಯಿತು ಮತ್ತು ಅದು ತಮ್ಮನ್ನು ಹೇಗೆ ಗಾಬರಿಗೊಳಿಸಿತು ಎಂಬ ಬಗ್ಗೆ ನಟಿ ಈ ಹಿಂದೆ ಹೇಳಿದ್ದರು. ಇದೇ ಚಿತ್ರದ ಬಗ್ಗೆ ಹೇಳಿದ್ದ ಅವರು, ರೇ* ಸೀನ್ ಒಂದರಲ್ಲಿ ತಮ್ಮನ್ನು ಹೇಗೆ ಬಲವಂತಗೊಳಿಸಲಾಯಿತು, ವಿಲನ್ ತಮ್ಮ ಮೇಲೆ ಅತ್ಯಾಚಾರ ಮಾಡುವ ದೃಶ್ಯದ ಸಂದರ್ಭದಲ್ಲಿ ತಾವು ಅನುಭವಿಸಿದ್ದ ನೋವನ್ನು ನಟಿ ತೋಡಿಕೊಂಡಿದ್ದರು.
ರಂಜೀತ್ (Ranjeeth) ಮಾಧುರಿಯವರನ್ನು ಈ ಸೀನ್ನಲ್ಲಿ ನಡುಗಿಯೇಬಿಟ್ಟಿದ್ದರಂತೆ. ರೇಪ್ ಸೀನ್ ಬಳಿಕ ಅವರು ಹಿಡಿತವನ್ನು ಬಿಗಿಗೊಳಿಸಿದ್ದ ನಂತರ ನಾನು ಅಕ್ಷರಶಃ ನಲುಗಿ ಹೋಗಿದ್ದೆ ಎಂದಿದ್ದಾರೆ ಮಾಧುರಿ. ಈ ದೃಶ್ಯದ ಸಂದರ್ಭದಲ್ಲಿ ಅವರು ತಮ್ಮ ಹಿಡಿತವನ್ನು ಸಡಿಲಿಸಲು ನಿರಾಕರಿಸಿದ್ದರು. ಎಷ್ಟೇ ಹೇಳಿದರೂ ಬಲವಾಗಿ ಹಿಡಿದುಕೊಂಡಿದ್ದರು. ಇದರಿಂದ ನಾನು ಕೋಪಗೊಂಡಿದ್ದೆ. ಎಲ್ಲರ ಮುಂದೆ ಜೋರಾಗಿ ಕೂಗಿದೆ. ನನ್ನನ್ನು ಮುಟ್ಟಬೇಡ ಎಂದು ಕಿರುಚಿದೆ ಎಂದು ಆ ದಿನಗಳ ನೆನಪಿಸಿಕೊಂಡಿದ್ದರು. ಪ್ರೇಮ್ ಪ್ರತಿಜ್ಞಾ ಚಿತ್ರದಲ್ಲಿ ಮಾಧುರಿ, ಮಿಥುನ್ ಚಕ್ರವರ್ತಿ ಮತ್ತು ವಿನೋದ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸೌತ್ನಲ್ಲಿ ಛಾನ್ಸ್ ಬೇಕಿದ್ರೆ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ, ಅವ್ರ ಜೊತೆನೂ... ಅಂದಿನ ಘಟನೆ ಹೇಳಿದ ನಟಿ