ಮೋಹನ್‌ಲಾಲ್ ಪೃಥ್ವಿರಾಜ್ ಕಾಂಬಿನೇಶನ್‌ನಲ್ಲಿ ಮೂಡಿ ಬಂದ ʼಎಂಪುರಾನ್ʼ ಸಿನಿಮಾ ಈಗಾಗಲೇ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈಗ ಸಿನಿಮಾ ತಂಡವೇ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ.
ತಿರುವನಂತಪುರಂ: ಮೋಹನ್‌ಲಾಲ್- ಪೃಥ್ವಿರಾಜ್ ನಟನೆಯ ಎಂಪುರಾನ್ ಸಿನಿಮಾದಲ್ಲಿ ಬದಲಾವಣೆ ತರಬೇಕು ಎಂಬ ಮಾತು ಕೇಳಿ ಬಂದಿತ್ತು. ಈಗ ಈ ಚಿತ್ರದ ಕೆಲವು ಭಾಗಗಳಲ್ಲಿ ಬದಲಾವಣೆ ತರಲು ಒಪ್ಪಂದವಾಗಿದೆ. ಚಿತ್ರತಂಡವೇ ಸ್ವಯಂಪ್ರೇರಿತವಾಗಿ ಮಾರ್ಪಾಡು ಮಾಡಲು ನಿರ್ಧರಿಸಿದೆ. ಈ ಸಿನಿಮಾ ವಿರುದ್ಧ ಪ್ರತಿಭಟನೆ ತೀವ್ರಗೊಂಡ ನಂತರದಲ್ಲಿ ಅಧಿಕಾರಿಗಳ ಕ್ರಮ ಕೈಗೊಂಡಿದ್ದಾರೆ. ಸೋಮವಾರದ ವೇಳೆಗೆ ಈ ಬದಲಾವಣೆ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೆ ಪ್ರಸ್ತುತ ಸಿನಿಮಾ ಪ್ರದರ್ಶನ ಮುಂದುವರಿಯುತ್ತದೆ.
ಆರೋಪ ಏನು?
ಕೆಲವು ದೃಶ್ಯಗಳನ್ನು ಬದಲಾಯಿಸಲು ಮತ್ತು ಕೆಲವು ಉಲ್ಲೇಖಗಳನ್ನು ಮ್ಯೂಟ್ ಮಾಡಲು ನಿರ್ಧಾರ ಮಾಡಲಾಗಿದೆ. ಈ ಚಿತ್ರದಲ್ಲಿ 17 ಕ್ಕೂ ಹೆಚ್ಚು ಭಾಗಗಳಲ್ಲಿ ಬದಲಾವಣೆ ಆಗಲಿದೆ. ಗಲಭೆಯ ಹೆಚ್ಚಿನ ದೃಶ್ಯಗಳು, ಮಹಿಳೆಯರ ಮೇಲಿನ ದೌರ್ಜನ್ಯದ ದೃಶ್ಯಗಳು ಬದಲಾವಣೆ ಆಗಲಿದೆ. ವಿಲನ್ ಪಾತ್ರದ ಹೆಸರೂ ಕೂಡ ಬದಲಾಗಲಿದೆ. ಆದರೆ ಇದು ಮರು ಸೆನ್ಸರಿಂಗ್ ಅಲ್ಲ, ಮಾರ್ಪಾಡು ಎಂದು ಮಾಹಿತಿಯಿದೆ. ಎಂಪುರಾನ್ ಸಿನಿಮಾ ವಿರುದ್ಧ RSS ಪ್ರಮುಕರು, ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ಮೋಹನ್‌ಲಾಲ್ ಅವರು ತಮ್ಮ ಅಭಿಮಾನಿಗಳಿಗೆ ದ್ರೋಹ ಬಗೆದಿದ್ದಾರೆ. ಪೃಥ್ವಿರಾಜ್ ಹಿಂದೂ ವಿರೋಧಿ ನಿಲುವು ತಳೆದಿದ್ದಾರೆ ಎಂದು ಟೀಕಿಸಲಾಗಿದೆ. ಈ ನಡುವೆ, ಸೆನ್ಸಾರ್ ಮಂಡಳಿ ಸಿನಿಮಾಗೆ ಎರಡು ಕಟ್ ಸೂಚಿಸಿದೆ ಎಂಬ ದಾಖಲೆ ಬಹಿರಂಗವಾಗಿದೆ.
ಮೋಹನ್‌ಲಾಲ್ ಬಳಿ ಇರೋ ಲೇಡಿ ಬೌನ್ಸರ್ ನೋಡಿದಿರಾ?
ಬಹಿರಂಗ ಟೀಕೆ!
ಎರಡು ದಿನಗಳಲ್ಲಿ ನೂರು ಕೋಟಿ ಗಳಿಸಿ ಮುನ್ನುಗ್ಗುತ್ತಿರುವಾಗ ಎಂಪುರಾನ್ ಸಿನಿಮಾ ವಿರುದ್ಧ ರಾಜಕೀಯ ವಿವಾದ ತೀವ್ರಗೊಂಡಿದೆ. RSS ಎಂಪುರಾನ್ ವಿರುದ್ಧ ಕಠಿಣ ನಿಲುವು ತಳೆದಿದೆ. ಸಿನಿಮಾ ಹಿಂದೂ ವಿರೋಧಿ ಎಂದು ಆರೋಪಿಸಲಾಗಿದೆ. ಎ ಜಯಕುಮಾರ್, ಜೆ ನಂದಕುಮಾರ್ ಸೇರಿದಂತೆ RSS ನಾಯಕರು ಬಹಿರಂಗವಾಗಿ ಸಿನಿಮಾವನ್ನು ಟೀಕಿಸುತ್ತಿದ್ದಾರೆ. ಸಿನಿಮಾ ವಿರುದ್ಧ ಪ್ರಚಾರವಿಲ್ಲ ಎಂದು ರಾಜ್ಯ ಬಿಜೆಪಿ ಅಧಿಕೃತ ನಿಲುವು ತಾಳಿದೆ. ಆದರೆ ಪಕ್ಷದಲ್ಲಿನ ಭಿನ್ನ ನಿಲುವನ್ನು ಸೂಚಿಸುವಂತೆ ರಾಷ್ಟ್ರೀಯ ಮಂಡಳಿ ಸದಸ್ಯ ಸಿ ರಘುನಾಥ್ ಪ್ರತಿಕ್ರಿಯಿಸಿದ್ದಾರೆ. ವಿವಾದಗಳ ನಡುವೆಯೇ ಎಂಪುರಾನ್ ಸಿನಿಮಾದ ಸೆನ್ಸಾರ್ ದಾಖಲೆ ಬಿಡುಗಡೆಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ದೃಶ್ಯಗಳ ಅವಧಿಯನ್ನು ಕಡಿಮೆ ಮಾಡಲು, ರಾಷ್ಟ್ರಧ್ವಜದ ಬಗ್ಗೆ ಸಂಭಾಷಣೆಯನ್ನು ತೆಗೆದುಹಾಕಲು ಮಂಡಳಿಯು ಸೂಚಿಸಿದೆ. ಇನ್ನು ಈ ಚಿತ್ರದಲ್ಲಿ ಮಂಜು ವಾರಿಯರ್ ಅವರು ನಟಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರು ನಿರ್ದೇಶನ ಮಾಡಿದ್ದಾರೆ.