ಐಪಿಎಲ್ 2025ರಲ್ಲಿ ಡೇವಿಡ್ ವಾರ್ನರ್ ಕಾಣ್ತಿಲ್ಲ. ಅವರನ್ನು ಯಾವುದೇ ತಂಡ ಖರೀದಿ ಮಾಡಿಲ್ಲ. ಆದ್ರೆ ಡೇವಿಡ್ ವಾರ್ನರ್ ಗಳಿಕೆ ಮಾತ್ರ ಕಡಿಮೆ ಆಗಿಲ್ಲ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಡೇವಿಡ್ ವಾರ್ನರ್ (Australian Former cricketer David Warner) ಈ ವರ್ಷ ಐಪಿಎಲ್ (IPL)ನ ಯಾವುದೇ ತಂಡದಲ್ಲಿ ಆಡ್ತಿಲ್ಲ. ಒಂದ್ಕಾಲದಲ್ಲಿ ಟಿ20 ಲೀಗ್‌ನ ಅತ್ಯಂತ ಸ್ಫೋಟಕ ಆಟಗಾರನಾಗಿದ್ದ ಡೇವಿಡ್ ವಾರ್ನರ್ ಗೆ ಈ ಬಾರಿ ಸೋಲಾಗಿತ್ತು. ಈ ಋತುವಿನಲ್ಲಿ ಅವರು ಮಾರಾಟವಾಗದೆ ಉಳಿದಿದ್ರು. ಯಾವುದೇ ತಂಡ ಅವರನ್ನು ಖರೀದಿಸಲು ಆಸಕ್ತಿ ತೋರಿರಲಿಲ್ಲ. 2 ಕೋಟಿ ಮೂಲ ಬೆಲೆ ಹೊಂದಿದ್ದ ವಾರ್ನರ್ , ಐಪಿಎಲ್ ಮುಗಿಯುವ ಮುನ್ನವೇ ಅದಕ್ಕಿಂತ ದೊಡ್ಡ ಮೊತ್ತವನ್ನು ಸಂಪಾದನೆ ಮಾಡಿದ್ದಾರೆ. ಡೆವಿಡ್ ವಾರ್ನರ್ ಒಂದೇ ಒಂದು ಸಿನಿಮಾ ಮಾಡಿ, ಐಪಿಎಲ್ ಬೇಸ್ ಮೊತ್ತಕ್ಕಿಂತ ಹೆಚ್ಚು ಹಣವನ್ನು ಸಂಪಾದನೆ ಮಾಡಿದ್ದಾರೆ.
ಡೇವಿಡ್ ವಾರ್ನರ್ ತೆಲುಗು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ರಾಬಿನ್ ಹುಡ್ (Robin Hood) ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಡೇವಿಡ್ ವಾರ್ನರ್ ಕಾಣಿಸಿಕೊಂಡಿದ್ದಾರೆ. ರಾಬಿನ್ ಹುಡ್ ಚಿತ್ರ ಮಾರ್ಚ್ 28 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗ್ತಾ ಇದ್ದು, ಸೋಮವಾರ ರಂಜಾನ್ ರಜೆ ಇರುವ ಕಾರಣ, ಗಳಿಕೆ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇದೆ. ಚಿತ್ರ ಕಥೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ರೂ ಡೇವಿಡ್ ವಾರ್ನರ್ ಗಳಿಕೆ ಮಾತ್ರ ಏರಿದೆ. ಈ ಚಿತ್ರದಲ್ಲಿ ಅಭಿನಯಿಸಲು ಡೇವಿಡ್ ವಾರ್ನರ್ ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದಿದ್ದಾರೆ.
ಚೆಪಾಕ್ ಭದ್ರಕೋಟೆ ಭೇದಿಸಿದ ಆರ್‌ಸಿಬಿ; ಬದ್ಧ ಎದುರಾಳಿ ಸಿಎಸ್‌ಕೆ ಸೋಲಿಸಿದ್ದಕ್ಕೆ ವಿಜಯ್ ಮಲ್ಯ ಹೇಳಿದ್ದೇನು?
ರಾಬಿನ್ ಹುಡ್ ಚಿತ್ರವನ್ನು ನಿರ್ದೇಶಕ ವೆಂಕಿ ಕುಡುಮುಲ ನಿರ್ದೇಶಿಸಿದ್ದಾರೆ. ಚಿತ್ರದ ಕಥೆಯನ್ನೂ ವೆಂಕಿ ಕುಡಮುಲ ಬರೆದಿದ್ದಾರೆ. ಈ ಚಿತ್ರದಲ್ಲಿ ನಿತಿನ್ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ದೇವದತ್ ನಾಗೆ, ರಾಜೇಂದ್ರ ಪ್ರಸಾದ್ ಮತ್ತು ಶೈನ್ ಟಾಮ್ ಚಾಕೊ ಅವರಂತಹ ನಟರು ಈ ಚಿತ್ರದಲ್ಲಿದ್ದಾರೆ. ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡೇವಿಡ್ ವಾರ್ನರ್ ಸಂಭಾವನೆ 3 ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ. ವಾರ್ನರ್ಗೆ ಮೊದಲಿನಿಂದಲೂ ಭಾರತೀಯ ಸಿನಿಮಾ ಮೇಲೆ ಹೆಚ್ಚಿನ ಒಲವಿದೆ. ಅವರು ಅನೇಕ ಬಾರಿ ಸಿನಿಮಾ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಬಾಹುಬಲಿ ಅವರ ನೆಚ್ಚಿನ ಸಿನಿಮಾ ಎಂದು ಸಂದರ್ಶನವೊಂದರಲ್ಲಿ ಡೇವಿಡ್ ವಾರ್ನರ್ ಹೇಳಿದ್ದರು. ಡೇವಿಡ್ ವಾರ್ನರ್, ತೆಲುಗು ಸಿನಿಮಾ ಹಾಡುಗಳಿಗೆ ಈ ಹಿಂದೆ ಹೆಜ್ಜೆ ಹಾಕಿದ್ದಿದೆ. ಈಗ ತೆಲುಗು ಸಿನಿಮಾದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ.
ಆರ್‌ಸಿಬಿ ಎದುರು ಸೋಲುತ್ತಿದ್ದಂತೆಯೇ ಧೋನಿಯನ್ನೇ ಟ್ರೋಲ್ ಮಾಡಿದ ಸಿಎಸ್‌ಕೆ ಫ್ಯಾನ್ಸ್!
ಡೇವಿಡ್ ವಾರ್ನರ್ ತಮ್ಮ ನಾಯಕತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗೆ ಐಪಿಎಲ್ ಕಪ್ ತಂದುಕೊಟ್ಟಿದ್ದರು. ಆದ್ರೆ ಕಳಪೆ ಫಾರ್ಮ್‌ನಿಂದಾಗಿ ಅವರನ್ನು 2021 ರ ಐಪಿಎಲ್ ಋತುವಿನ ಮಧ್ಯದಲ್ಲಿ ನಾಯಕತ್ವದಿಂದ ತೆಗೆದುಹಾಕಲಾಗಿತ್ತು. ಆ ನಂತ್ರ ಡೇವಿಡ್ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿತ್ತು. ಕಳೆದ ಎರಡು ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಡೇವಿಡ್ ವಾರ್ನರ್ ಆಡಿದ್ದರು. ಆದ್ರೆ ಈ ಬಾರಿ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲಿಲ್ಲ. ಮಾರಾಟವಾಗದೆ ಉಳಿದ ಆಟಗಾರರಲ್ಲಿ ಒಬ್ಬರಾಗಿದ್ದ ಡೇವಿಡ್ ವಾರ್ನರ್, ಮಾರ್ಗದರ್ಶಕ ಅಥವಾ ತರಬೇತುದಾರನಾಗಿ ಐಪಿಎಲ್ ಜೊತೆ ಸಂಬಂಧ ಮುಂದುವರೆಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಈ ಮಧ್ಯೆ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡು, ಬಣ್ಣದ ಲೋಕಕ್ಕೆ ಡೇವಿಡ್ ವಾರ್ನರ್ ಎಂಟ್ರಿಯಾಗಿದ್ದಾರೆ. ಈಗಾಗಲೇ ಅವರ ಸಿನಿಮಾ ತೆರೆಗೆ ಬಂದಿದ್ದು, ಮೈದಾನದಲ್ಲಿ ಡೇವಿಡ್ ವಾರ್ನರ್ ಆಟ ಮಿಸ್ ಮಾಡಿಕೊಳ್ತಿದ್ದ ಅಭಿಮಾನಿಗಳು ಸಿನಿಮಾ ನೋಡಿ ತೃಪ್ತಿಪಡಬೇಕಾಗಿದೆ.