ರಶ್ಮಿಕಾ ಮಂದಣ್ಣ ಅವರನ್ನು ವೈಯಕ್ತಿಕ ಸಂಗತಿಗಳಿಗೆ ಟ್ರೋಲ್ ಮಾಡುತ್ತಲೇ ಇರುತ್ತಾರೆ, ಸೋಷಿಯಲ್ ಮೀಡಿಯಾಗಳಲ್ಲಿ ಕೆಟ್ಟಕೆಟ್ಟ ಕಾಮೆಂಟ್‌ಗಳು ಬರುತ್ತಲೇ ಇರುತ್ತವೆ. ಆದರೆ, ಅವರು ಕನ್ನಡ ಬಿಟ್ಟು ಬಾಲಿವುಡ್ ಸೇರಿದಂತೆ ಇಡೀ ಭಾರತದ ಲೆವಲ್‌ಗೆ..
ನಟರಾದ ಸಲ್ಮಾನ್ ಖಾನ್ (Salman Khan) ಹಾಗೂ ಆಮೀರ್ ಖಾನ್ (Aamir Khan) ಅವರಿಬ್ಬರೂ ಒಟ್ಟಿಗೇ ಒಂದು ಕಡೆ ಕುಳಿತಿದ್ದಾರೆ. ಅಲ್ಲಿ ಅಮೀರ್ ಖಾನ್ ಅವರು ಸಲ್ಲೂಗೆ 'ನಿಮ್ ಸಿನಿಮಾ ಹೀರೋಯಿನ್ ಯಾರು?' ಅಂತ ಕೇಳಿದ್ದಾರೆ. ಅದಕ್ಕೆ ನಟ ಸಲ್ಮಾನ್ ಖಾನ್ ಹೇಳಲು ಇದೇ ಒಳ್ಳೆಯ ಅವಕಾಶ ಎಂಬಂತೆ, 'ರಶ್ಮಿಕಾ ಮಂದಣ್ಣ, ವೆರಿ ಟ್ಯಾಲೆಟೆಡ್, ವೆರಿ ಹಾರ್ಡ್ ವರ್ಕಿಂಗ್ ಗರ್ಲ್, ನೈಸ್ ಗರ್ಲ್' ಅಮೇಜಿಂಗ್ ಗರ್ಲ್' ಎಂದಿದ್ದಾರೆ ನಟ ಸಲ್ಮಾನ್ ಖಾನ್. ಅಷ್ಟೇ ಅಲ್ಲ, ತಮ್ಮ ಸಿಕಂದರ್ ಸಿನಿಮಾ ಟೈಮಿಂಗ್‌ಗೆ ರಶ್ಮಿಕಾ ಮಂದಣ್ಣ (Rashmika Mandanna) ಅದೆಷ್ಟು ಹಾರ್ಡ್ ವರ್ಕಿಂಗ್ ಮಾಡಿದ್ದಾರೆ ಎಂಬುದನ್ನೂ ಸಹ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಬಗ್ಗೆ ಸಲ್ಮಾನ್ ಖಾನ್ ಅವರು 'ನಮ್ಮ ಸಿಕಂದರ್ ಸಿನಿಮಾ ಶೂಟಿಂಗ್ ಆಗುತ್ತಿರುವ ವೇಳೆ ರಶ್ಮಿಕಾ ಅವರು 'ಪುಷ್ಪಾ-2' ಸಿನಿಮಾದ ಶೂಟಿಂಗ್‌ನಲ್ಲಿ ಸಹ ಭಾಗಿಯಾಗುತ್ತಿದ್ದರು. ಬೆಳಿಗ್ಗೆ 6 ಗಂಟೆಗೆ ಅವರು ಅಲ್ಲಿ ಶೂಟಿಂಗ್‌ಗೆ ಹಾಜರಾಗುತ್ತಿದ್ದರು. ಸಾಯಂಕಾಲ 6 ಗಂಟೆಯವರೆಗೆ ಅಲ್ಲಿ ಶೂಟಿಂಗ್ ಮುಗಿಸಿ, ಬಳಿಕ ನಮ್ಮ ಶೂಟಿಂಗ್‌ಗೆ ಅವರಉ ಬರುತ್ತಿದ್ದರು. ಅಲ್ಲಿಂದ ಇಲ್ಲಿಗೆ ಕಾರಿನಲ್ಲಿ ಬರುವ ಸಮಯವಷ್ಟೇ ಅವರಿಗೆ ದಿನದಲ್ಲಿ ಸೀಗೋದು. ಅವರು ಡಬಲ್ ಶಿಫ್ಟ್‌ನಲ್ಲಿ ಕೆಲಸ ಮಾಡಿದ್ದಾರೆ. 'ಅಮೇಜಿಂಗ್ ಗರ್ಲ್' ಎಂದಿದ್ದಾರೆ.
ಅಷ್ಟೇ ಅಲ್ಲ, ಅಮೀರ್ ಖಾನ್ ಜೊತೆ ಮಾತು ಮುಂದುವರಿಸಿರೋ ಸಲ್ಲೂ ಅವರು 'ನಂಗೆ ರಶ್ಮಿಕಾ ಮಂದಣ್ಣ ಅವರು ಮಾಡುತ್ತಿರುವ ಹಾರ್ಡ್ ವರ್ಕ್ ನೋಡಿದರೆ, ನಾನು ಇನಿಶಿಯಲ್ ಸ್ಟೇಜ್‌ನಲ್ಲಿ ಹಾಗೇ ಮಾಡಿದ್ದು ನೆನಪಾಗುತ್ತಿದೆ. ನಾವೆಲ್ಲಾ ಹಾಗೇ ಮಾಡುತ್ತಿದ್ದೆವು, ಒಟ್ಟಿಗೇ ಎರಡು ಮೂರು ಸಿನಿಮಾಗೆ ಕಾಲ್‌ಶೀಟ್ ಕೊಟ್ಟು ಡಬಲ್ ಶಿಫ್ಟ್‌ನಲ್ಲಿ ಕೆಲಸ ಮಾಡಿದ್ದೇವೆ' ಈಗ ರಶ್ಮಿಕಾ ಕೂಡ ಹಾಗೇ ಮಾಡುತ್ತಿದ್ದಾರೆ, ವೆರಿ ನೈಸ್ ಗರ್ಲ್' ಎಂದಿದ್ದಾರೆ ಸಲ್ಮಾನ್ ಖಾನ್. ಅಲ್ಲಿಗೆ ನಟಿ ರಶ್ಮಿಕಾಗೆ ಒಂದೇ ಚಿತ್ರದಲ್ಲಿ ಜೊತೆಗೆ ನಟಿಸಿದ್ದರೂ ಕೂಡ 'ಅಮೇಜಿಂಗ್' ಅನ್ನೋ ಸರ್ಟಿಫಿಕೇಟ್ ಸಿಕ್ಕಿಬಿಟ್ಟಿದೆ.
ರಶ್ಮಿಕಾ ಮಂದಣ್ಣ ಅವರನ್ನು ಕನ್ನಡಿಗರು ಅವರ ವೈಯಕ್ತಿಕ ಸಂಗತಿಗಳಿಗೆ ಟ್ರೋಲ್ ಮಾಡುತ್ತಲೇ ಇರುತ್ತಾರೆ, ಅವರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಕೆಟ್ಟಕೆಟ್ಟ ಕಾಮೆಂಟ್‌ಗಳು ಬರುತ್ತಲೇ ಇರುತ್ತವೆ. ಆದರೆ, ಅವರು ಕನ್ನಡ ಬಿಟ್ಟು ಬಾಲಿವುಡ್ ಸೇರಿದಂತೆ ಇಡೀ ಭಾರತದ ಲೆವಲ್‌ಗೆ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ, ಹೆಸರು ಮಾಡಿದ್ದಾರೆ. ಅವರು ಸದ್ಯ ಹೈದ್ರಾಬಾದ್‌ನಲ್ಲೆ ಸೆಟಲ್ ಆಗಿದ್ದಾರೆ ಕೂಡ. ಈ ಕಾರಣಕ್ಕೇ ಅವರು ಇತ್ತೀಚೆಗೆ 'ಐ ಆಮ್ ಫ್ರಂ ಹೈದ್ರಾಬಾದ್' ಎಂದಿದ್ದಾರೆ. ಆದರೆ ಅದನ್ನೇ ದೊಡ್ಡದು ಮಾಡಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಆದರೆ, ರಶ್ಮಿಕಾಗೆ ಕನ್ನಡ ಬಿಟ್ಟು ಬೇರೆ ಕಡೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಜೊತೆಗೆ, ಅವರು ನಟಿಸಿರುವ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗುತ್ತಿವೆ. ಹೀಗಾಗಿ ಸದ್ಯ ನಟಿ ರಶ್ಮಿಕಾ ಮಂದಣ್ಣಅವರೇ ಭಾರತದ ನಂಬರ್ ಒನ್ ಹೀರೋಯಿನ್ ಎನ್ನಬಹುದು. ಅವರು ತಮ್ಮ ಬಗ್ಗೆ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ಕೆಟ್ಟ ಕಾಮೆಂಟ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸದ ಬಗ್ಗೆ ಅಷ್ಟೇ ಗಮನ ಹರಿಸುತ್ತಿದ್ದಾರೆ. ಅವರು ಎತ್ತರಕ್ಕೆ ಬೆಳೆಯುತ್ತಿದ್ದಾರೆ. ಅವರ ಬಗ್ಗೆ ಕಾಮೆಂಟ್ ಮಾಡುತ್ತ ಇರುವವರು ಅಲ್ಲೇ ಇದ್ದಾರೆ. ಇದಕ್ಕೆ ಏನು ಹೇಳೋದು?