ಯುಗಾದಿಯಂದು ಶನಿಯು ಮೀನರಾಶಿಗೆ ಕಾಲಿಡಲಿದ್ದಾನೆ. 2025ರಿಂದ 2028ರ ವರೆಗೆ ಶನಿಯು ಮೀನ ರಾಶಿಯಲ್ಲಿ ಸಂಚರಿಸಲಿದ್ದು, ಇದು ಕೆಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಕುಂಭ, ಮೀನ, ಮೇಷ ರಾಶಿಗಳಿಗೆ ತೊಂದರೆಯಾಗಲಿದ್ದು, ಉಳಿದ ರಾಶಿಗಳ ಸ್ಥಿತಿಗತಿ ಹೇಗಿರಲಿದೆ ಎಂಬುದನ್ನು ತಿಳಿಯಿರಿ.
ಯುಗಾದಿಯಂದು, ಅಂದರೆ ಮಾರ್ಚ್ 29, 2025ರ ರಾತ್ರಿ ಶನಿಯು ಮೀನ ರಾಶಿಗೆ ಪ್ರವೇಶಿಸುತ್ತಾನೆ. ಇದು ಗಣನೀಯ ಮಹತ್ವದ ಜ್ಯೋತಿಷ್ಯ ಘಟನೆ. ನಂತರ ಶನಿಯು ಜೂನ್ 3, 2027ರವರೆಗೆ ಮೀನ ರಾಶಿಯಲ್ಲಿ ಇರುತ್ತಾನೆ. ನಂತರ ತಾತ್ಕಾಲಿಕವಾಗಿ ಮೇಷ ರಾಶಿಗೆ ಸ್ಥಳಾಂತರಗೊಳ್ಳುತ್ತಾನೆ. ಅಕ್ಟೋಬರ್ 20, 2027ರಂದು ಮೀನ ರಾಶಿಗೆ ಹಿಂತಿರುಗಿ, ಅಂತಿಮವಾಗಿ ಫೆಬ್ರವರಿ 23, 2028 ರಂದು ಮೀನ ರಾಶಿಯನ್ನು ಬಿಡುತ್ತಾನೆ. ಈ ಎರಡೂವರೆ ವರ್ಷಗಳ ಅವಧಿಯು ಅತ್ಯಂತ ಮಹತ್ವದ್ದು. ಮೀನ ರಾಶಿಯಲ್ಲಿ ಶನಿಯ ಸಂಚಾರವು ಅರ್ಥಪೂರ್ಣ ಸಮಯವಾಗಿದ್ದು, ಈ ಗ್ರಹಗತಿಯು ನಮ್ಮ ಜೀವನವನ್ನು ಆಮೂಲಾಗ್ರವಾಗಿ ಬದಲಾಯಿಸಬಹುದು. ಹಾಗಾದರೆ ಈ ಘಟನೆಯಿಂದ ಅತ್ಯಂತ ಹೆಚ್ಚು ಬಾಧೆಗೊಳಗಾಗುವ ರಾಶಿಗಳು ಯಾವುವು ಅಂತ ನೋಡೋಣ.
ಕುಂಭ ರಾಶಿ
ಇವರಿಗೆ ಸಾಡೇಸಾತಿಯ ಅಂತಿಮ ಹಂತ. ಪರಿಹಾರ ಮತ್ತು ಸಾಧನೆಗೆ ಅರ್ಹವಾದ ಕೊನೆಯ ಹಂತ. ಶನಿಯು ಕುಂಭ ರಾಶಿಯವರ ಅಸ್ತಿತ್ವ ಮತ್ತು ತಾಳ್ಮೆಯನ್ನು ಈಗಾಗಲೇ ಪರೀಕ್ಷಿಸಿದ್ದಾನೆ. ಈ ಅವಧಿಯಲ್ಲಿ ಪಾಠವಾಗಿ ಕಲಿತದ್ದನ್ನು ಈಗ ಬುದ್ಧಿವಂತಿಕೆ ಎಂದು ಒಪ್ಪಿಕೊಳ್ಳಬಹುದು. ಕುಂಭ ರಾಶಿಯವರು ಮುಂಬರುವ ಹಂತಗಳಲ್ಲಿ ಉತ್ತಮ ಅವಕಾಶಗಳಿಗಾಗಿ ತಮ್ಮ ಜಾಣ್ಮೆಯನ್ನು ಬಳಸಲು ಸಹಾಯ ಮಾಡುತ್ತದೆ.
ಮೀನ ರಾಶಿ
ಮೀನ ರಾಶಿಯಲ್ಲಿ ಚಂದ್ರನಿರುವಾಗ ಜನಿಸಿದ ಎಲ್ಲರಿಗೂ ಸಾಡೇಸಾತಿ ಉತ್ತುಂಗವನ್ನು ತಲುಪುತ್ತದೆ. ಈ ಸ್ಥಾನದಿಂದ ಶನಿಯು ಈ ಆತ್ಮಗಳಿಗೆ ಆಳವಾದ ಬಾಧೆ ಕೊಡುತ್ತಾನೆ. ಆತ್ಮಾವಲೋಕನ ಮತ್ತು ವೈಯಕ್ತಿಕ ಬೆಳವಣಿಗೆಗೆ ಒಂದು ನಿರ್ಣಾಯಕ ಅವಕಾಶ. ಮೀನ ರಾಶಿಯವರು ತಮ್ಮ ವಾಸ್ತವವನ್ನು ಪ್ರಜ್ಞಾಪೂರ್ವಕವಾಗಿ ಎದುರಿಸಬೇಕು. ಮಹತ್ವಾಕಾಂಕ್ಷೆಗಳನ್ನು ಮರು ಮೌಲ್ಯಮಾಪನ ಮಾಡಬೇಕು. ಭಾವನಾತ್ಮಕ ಆಳದ ಸವಾಲು ಇರುತ್ತದೆ. ಇವರ ಭಾವನಾತ್ಮಕ ಗಡಿಗಳನ್ನು ಮತ್ತು ಸಾಮರ್ಥ್ಯಗಳನ್ನು ಪರೀಕ್ಷಿಸುತ್ತದೆ.
ಮೇಷ ರಾಶಿ
ಮೇಷ ರಾಶಿಯವರಿಗೆ ಸಾಡೆಸಾತಿಯ ಆರಂಭವು ದೀರ್ಘಾವಧಿಯ ಯೋಜನೆ ಮತ್ತು ಜೀವನ ಉದ್ದೇಶಗಳನ್ನು ಮರುಮೌಲ್ಯಮಾಪನ ಮಾಡುವತ್ತ ಗಮನ ಹರಿಸುತ್ತದೆ. ಮೇಷ ರಾಶಿಯವರು ಜೀವನ, ವೃತ್ತಿ, ಸಂಬಂಧಗಳು ಮತ್ತು ವೈಯಕ್ತಿಕಕ್ಕೆ ಸಂಬಂಧಿಸಿದ ಆಳವಾದ ಪ್ರಶ್ನೆಗಳನ್ನು ಆಲೋಚಿಸಲು ಪ್ರಾರಂಭಿಸುತ್ತಾರೆ. ಶನಿಯು ಅತ್ಯುತ್ತಮ ವೈಯಕ್ತಿಕ ವಿಕಸನಕ್ಕೆ ವೇದಿಕೆಯನ್ನು ಸೃಷ್ಟಿಸುತ್ತಾನೆ.
ಧನು ರಾಶಿ
ಧನು ರಾಶಿಯವರಿಗೆ ಶನಿಯು ನಾಲ್ಕನೇ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಮನೆ ಅಥವಾ ಸುರಕ್ಷತೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತರಲಿದೆ. ಇವರಿಗೆ ಹೆಚ್ಚು ಸ್ಥಿರವಾದ ಭಾವನಾತ್ಮಕ ವಾತಾವರಣವನ್ನು ಸೃಷ್ಟಿಸಲು ಪ್ರೇರೇಪಿಸುತ್ತದೆ. ಇವರ ವಾಸಸ್ಥಳಗಳನ್ನು ಸ್ಥಳಾಂತರಿಸುವುದು, ಮರುವಿನ್ಯಾಸಗೊಳಿಸುವುದು ಸೇರಿದಂತೆ ಅಡಿಪಾಯಗಳನ್ನು ಬಲಪಡಿಸುವ ಸಮಯ.
ಸಿಂಹ ರಾಶಿ
ಈ ವರ್ಷ ಸಿಂಹ ರಾಶಿಯವರಿಗೆ ಅಷ್ಟಮ ಶನಿ. ಇದು ವೃತ್ತಿಪರ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಸಮಯದಲ್ಲಿ ಅವರ ನಾಯಕತ್ವ ಕೌಶಲ್ಯ ಪರೀಕ್ಷೆಗೊಳಗಾಘುತ್ತದೆ. ವೃತ್ತಿ ಸವಾಲುಗಳು ಎದುರಾಗುತ್ತವೆ. ಅನಾರೋಗ್ಯವು ದೇಹದೊಂದಿಗೆ ಆಟವಾಡುತ್ತದೆ. ಕೆಲಸದಲ್ಲಿ ಅಥವಾ ನಡವಳಿಕೆಯಲ್ಲಿ ಹೊಂದಾಣಿಕೆಗಳನ್ನು ಮಾಡಬೇಕಾಗುತ್ತದೆ.
ಮಕರ ರಾಶಿ
ಸಾಡೇಸಾತಿ ಪೂರ್ಣಗೊಳ್ಳುವುದರೊಂದಿಗೆ ಮಕರ ರಾಶಿಯವರು ನಿರಾಳತೆ ಅನುಭವಿಸುತ್ತಾರೆ. ಪ್ರಗತಿ ಸಾಧಿಸಲು ಅವಕಾಶಗಳಿವೆ. ಕಠಿಣ ಪಾಠಗಳು ಮತ್ತು ಕಠಿಣ ಪ್ರಯೋಗಗಳ ಅಂತ್ಯಕಾಲ. ಶನಿಯ ನಿರ್ಬಂಧಿತ ಶಕ್ತಿಯಿಂದ ಮುಕ್ತರಾದ ಮಕರ ರಾಶಿಯವರು ಈಗ ಹೊಸ ಚೈತನ್ಯ ಮತ್ತು ತಿಳುವಳಿಕೆಯೊಂದಿಗೆ ಹೊಸ ಸವಾಲುಗಳನ್ನು ಎದುರಿಸಲು ಮುಂದುವರೆದಿದ್ದಾರೆ.
ಯುಗಾದಿ ದಿನ ಈ ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟ ನಿಮ್ಮದಾಗುತ್ತದೆ!
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇದು ಅವರ ಶಕ್ತಿ ಮತ್ತು ತಾಳ್ಮೆಯ ತೀವ್ರ ಪರೀಕ್ಷೆಯ ಅಂತ್ಯಕಾಲ. ಇದು ಭಾವನೆ ಮತ್ತು ವೃತ್ತಿಯಲ್ಲಿ ಹೆಚ್ಚಿನ ಸ್ವಾತಂತ್ರ್ಯದೊಂದಿಗೆ ಹೊಸ ಹಂತದ ಆರಂಭ. ವೃಶ್ಚಿಕ ರಾಶಿಯವರು ತಮ್ಮ ಪರಿಧಿಯನ್ನು ವಿಸ್ತರಿಸುತ್ತಾರೆ. ತಮ್ಮ ಹೆಗಲ ಮೇಲಿರುವ ಭಾರವಾದ ಹೊರೆಗಳನ್ನು ಇಳಿಸುತ್ತಾರೆ. ಉಸಿರುಗಟ್ಟಿಸುವ ತೊಂದರೆ ಕಡಿಮೆಯಾಗುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿಯ ಹಂತವು ಮುಗಿಯಲಿದೆ. ಈ ಹಂತವು ಬಹುಶಃ ಅವರ ಜೀವನದಲ್ಲಿ ಕೆಲವು ಭಾವನಾತ್ಮಕ ಮತ್ತು ವೃತ್ತಿಪರ ಒತ್ತಡಗಳನ್ನು ನೀಡಿರಬಹುದು. ಈ ಅವಧಿಯ ಅಂತ್ಯದ ವೇಳೆಗೆ ಅಂತಹ ತೀವ್ರ ಒತ್ತಡಗಳಿಂದ ಮುಕ್ತಿ ಮತ್ತು ಪ್ರಯಾಣಕ್ಕೆ ಹೊಸ ಮಾರ್ಗಗಳಿಗೆ ಮುಕ್ತ ಆಯ್ಕೆಗಳಿವೆ. ಕರ್ಕಾಟಕ ರಾಶಿಯವರು ಈಗ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಬಲಪಡಿಸಿಕೊಳ್ಳುತ್ತಾರೆ.
Indian Mythology: ಬ್ರಹ್ಮನಿಗೆ 5 ತಲೆಯಿತ್ತು, ಹಾಗಾದರೆ ಆ ಇನ್ನೊಂದು ತಲೆ ಎಲ್ಲಿ ಹೋಯ್ತು?