Paris Hilton: 15 ವರ್ಷಕ್ಕೇ ವೃದ್ಧನಿಂದ ರೇಪ್​, 20 ವರ್ಷಕ್ಕೆ ಗರ್ಭಿಣಿ: ಖ್ಯಾತ ನಟಿಯ ಭಯಾನಕ ಕಥೆ!

By Suvarna NewsFirst Published Feb 26, 2023, 5:30 PM IST
Highlights

ಹಾಲಿವುಡ್​ ತಾರೆ ಪ್ಯಾರಿಸ್​ ಹಿಲ್ಟನ್​ ಅವರು ತಮ್ಮ ಬಾಲ್ಯದಲ್ಲಿ ನಡೆದಿರುವ ಕಹಿ ಘಟನೆಗಳ ಕುರಿತು ಹೇಳಿಕೊಂಡಿದ್ದು, ಅದೀಗ ಅವರ ಆತ್ಮಚರಿತ್ರೆಯ ಪುಸ್ತಕದಲ್ಲಿ ಪ್ರಕಟಗೊಳ್ಳುತ್ತಿದೆ. ಏನಿದು ಕಥೆ?
 

ಇತ್ತೀಚೆಗೆ ಹಲವು ನಟ ನಟಿಯರು ತಮ್ಮ ಜೀವನದಲ್ಲಿ ಆಗಿರುವ ಭಯಾನಕ ಕಥೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಕಾಸ್ಟ್​ಕೌಚಿಂಗ್​ (Caste Couching) ಕುರಿತು ಅನೇಕ ನಟ ನಟಿಯರು ಮುಕ್ತರಾಗಿ ಮಾತನಾಡಿದ್ದಾರೆ. ಇವೆಲ್ಲಾ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಆಗಿರುವ ಅವಮಾನ ದೌರ್ಜನ್ಯಗಳು. ಸಿನಿಮಾದಲ್ಲಿ ಒಳ್ಳೆಯ ಅವಕಾಶ ಬೇಕೆಂದರೆ  ತಮ್ಮ ಜೊತೆ ಮಂಚ ಹಂಚಿಕೊಳ್ಳಲು ಸಿದ್ಧರಿರಬೇಕು ಎಂದು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಚಿತ್ರರಂಗದ ಗಣ್ಯರು ತಮಗೆ ಆಫರ್​ ನೀಡಿದ್ದುದರ ಕುರಿತು ಇದಾಗಲೇ ಕೆಲ ನಟ- ನಟಿಯರು ಹೇಳಿಕೊಂಡಿದ್ದಾರೆ. ಆದರೆ ಇದೀಗ ಇನ್ನೋರ್ವ ಖ್ಯಾತ ನಟಿ, ಬಾಲ್ಯದಲ್ಲಿಯೇ ತಮ್ಮ ಮೇಲೆ ನಡೆದ ಅತ್ಯಾಚಾರದ (Rape) ಕುರಿತು ಮಾತನಾಡಿದ್ದಾರೆ! ಅಸಲಿಗೆ ಇದಕ್ಕೂ, ಸಿನಿಮಾ ರಂಗದಲ್ಲಿ ಅವಕಾಶ ನೀಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ನಟಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದು, ರೂಪದರ್ಶಿ, ನಟನಾ ಕ್ಷೇತ್ರ ಜನರು ಅಂದುಕೊಂಡಷ್ಟು ಸುಲಭವಲ್ಲ ಎಂಬ ಬಗ್ಗೆ ಹೇಳಿದ್ದಾರೆ.

ಹೀಗೆ ತಾವು ಅನುಭವಿಸಿದ್ದ ಕರಾಳ ದಿನಗಳನ್ನು ನೆನಪಿಸಿಕೊಂಡವರು ಖ್ಯಾತ ಹಾಲಿವುಡ್​ ತಾರೆ ಪ್ಯಾರಿಸ್ ಹಿಲ್ಟನ್ (Paris Hilton) ಉದ್ಯಮಿ, ಮಾಡೆಲ್ ಮತ್ತು  ಟಿವಿ ತಾರೆಯ ಜೊತೆಗೆ ಕೆಲವು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿಓ  ಪ್ಯಾರಿಸ್ ಹಿಲ್ಟನ್ ತಮಗೆ 15 ವರ್ಷದವಳಿರುವಾಗಲೇ ಆಗಿರುವ ಭಯಾನಕ ಕಥೆಯನ್ನು ಹೇಳಿಕೊಂಡಿದ್ದಾರೆ. ಈ ಕುರಿತು ಅವರು  ತಮ್ಮ ಆತ್ಮಚರಿತ್ರೆ 'ಪ್ಯಾರಿಸ್: ದಿ ಮೆಮೊಯಿರ್'ಯಲ್ಲಿ ತಿಳಿಸಿದ್ದಾರೆ. ಇದರ  ಪ್ರಚಾರದಲ್ಲಿ ಸದ್ಯ ನಿರತರಾಗಿರುವ ಪ್ಯಾರಿಸ್​, ಇದರಲ್ಲಿ ತಾವು ಉಲ್ಲೇಖಿಸಿರುವ ಅಂಶಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಈ ಪುಸ್ತಕ ಬರುವ  ಮಾರ್ಚ್ 14 ರಂದು ಬಿಡುಗಡೆಯಾಗಲಿದೆ. ಈ ಪುಸ್ತಕದ ಕುರಿತು ನಡೆದ ಸಂದರ್ಶನವೊಂದರಲ್ಲಿ, (Interview)  ಹದಿಹರೆಯದಲ್ಲಿ ನಡೆದ  ಅತ್ಯಾಚಾರ, ಮೊದಲ ಲೈಂಗಿಕ ಅನುಭವ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Latest Videos

ಬಾಲಿವುಡ್​ನಲ್ಲಿ ಲೈಂಗಿಕ ಕಿರುಕುಳ: ಶಾಕಿಂಗ್​ ಸತ್ಯ ತಿಳಿಸಿದ ನಟಿ Nargis Fakhri

ಪ್ಯಾರಿಸ್ ಚಿಕ್ಕ ವಯಸ್ಸಿನಲ್ಲಿಯೇ ಮಾಡೆಲಿಂಗ್​ (Model) ಜಗತ್ತಿಗೆ ಬಂದವರು. ಆದ್ದರಿಂದ ಸಹಜವಾಗಿ ಎಲ್ಲರ ಕಣ್ಣು ಅವರ ಮೇಲೆ ಇತ್ತು. ಅವರಿಗೆ ಇನ್ನೂ  15 ವರ್ಷವಾಗಿದ್ದಾಗ ನಡೆದಿತ್ತೊಂದು ಭಯಾನಕ ಘಟನೆ.  ಅದರ ಕುರಿತು ಅವರು ಹೇಳಿಕೊಂಡಿದ್ದಾರೆ. 'ನಾನು ಸ್ನೇಹಿತನೊಂದಿಗೆ  ಮಾಲ್‌ಗೆ ಹೋಗಿದ್ದೆ. ಅಲ್ಲೊಬ್ಬ ದೊಡ್ಡ ಶ್ರೀಮಂತ ವೃದ್ಧರಿಬ್ಬರು. ಹೀಗೆ ಸಹಜವಾಗಿ ಎಲ್ಲರ ಜೊತೆ  ಮಾತನಾಡುವಾಗ ಅವರ ಬಳಿಯೂ ಮಾತನಾಡಿದೆ. ಆ ಸಮಯದಲ್ಲಿ ಅವರು  ಅವರ ಪೇಜರ್ ನಂಬರ್‌ ಕೊಟ್ಟರು. ಆಗಾಗ್ಗೆ ನಾನು ಮಾತನಾಡುತ್ತಿದೆ. ಅವರು ವೃದ್ಧರಾಗಿದ್ದರಿಂದ ಅವರ ಮೇಲೆ ಯಾವ ಸಂದೇಹವೂ ನನಗೆ ಬಂದಿರಲಿಲ್ಲ.  ಒಂದು ದಿನ ಅವರು ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದರು. ಆದರೆ ಇದಕ್ಕೆ ಕಾರಣ ತಿಳಿದಿರಲಿಲ್ಲ. ನನಗೆ ವೈನ್​ (wine) ನೀಡಿದರು. ನಾನು ಅದನ್ನು ಸೇವಿಸುವುದಿಲ್ಲ ಎಂದೆ. ಆದರೆ ಖುದ್ದು ಅದನ್ನು ತಯಾರು ಮಾಡಿದ್ದು, ಸ್ವಲ್ಪವಾದರೂ ಕುಡಿ ಎಂದು ಬಲವಂತ ಮಾಡಿದರು. ನಾನು ಕುಡಿದೆ' ಎಂದು ಪ್ಯಾರಿಸ್​ ಹೇಳಿದ್ದಾರೆ.

ನಂತರ ಆದ ಭಯಾನಕತೆಯನ್ನು ಅವರು ವಿವರಿಸಿದ್ದಾರೆ. 'ಅಸಲಿಗೆ ಅದರಲ್ಲಿ ಅವರು  ಮಾದಕ ದ್ರವ್ಯ ಮಿಕ್ಸ್​ ಮಾಡಿದ್ದರು. ನನಗೆ ಅದನ್ನು ಕುಡಿದ ತಕ್ಷಣ  ತಲೆತಿರುಗುವಿಕೆ ಮತ್ತು ನಡುಗುವಿಕೆ ಶುರುವಾಯಿತು. ಮುಂದೆ ಏನು ಆಯಿತೋ ಗೊತ್ತಿಲ್ಲ. ಮೂರ್ಛೆ ಬಂದದ್ದಷ್ಟೇ ಗೊತ್ತು.  ಕೆಲವು ಗಂಟೆಗಳ ನಂತರ ಎಚ್ಚರಗೊಂಡಾಗ ನನ್ನನ್ನು ಆ ವೃದ್ಧ ರೇಪ್​ ಮಾಡಿದ್ದು ತಿಳಿಯಿತು. ಆತ ಇನ್ನೂ ನನ್ನ ಮೈಮೇಲೆ ಇದ್ದ. ಏನಾಯಿತು ಎಂದು ನಿದ್ದೆ ಮಂಪರಿನಲ್ಲಿ ನೋಡುತ್ತಿದ್ದಾಗ ನೀನು ಕನಸು ಕಾಣುತ್ತಿರುವೆ, ನಿನಗೆ ಏನೂ ಆಗಲಿಲ್ಲ ಎಂದು ಹೇಳಿದ. ನನಗೂ ಏನಾಯಿತು ಎಂದೇ ತಿಳಿಯಲಿಲ್ಲ. ಸಂಪೂರ್ಣ ಪ್ರಜ್ಞೆ ಬಂದ ಮೇಲೆ ವಿಷಯ ತಿಳಿಯಿತು' ಎಂದಿದ್ದಾರೆ ಪ್ಯಾರಿಸ್​. ಇದಾದ ಬಳಿಕ  ಹೈಸ್ಕೂಲ್ ಟೀಚರ್ (Highschool Teacher) ಕೂಡ ತನ್ನನ್ನು ಮೋಹಿಸಿ ಅತ್ಯಾಚಾರ ಎಸಗಲು ಪ್ರಯತ್ನಿಸಿರುವ ವಿಷಯವನ್ನು ತಿಳಿಸಿದ್ದಾರೆ.  ಒಮ್ಮೆ ಟೀಚರ್ ನನ್ನನ್ನು ಕಾರಿನಲ್ಲಿ ಕುಳ್ಳರಿಸಿಕೊಂಡರು. ಮನೆಗೆ ಡ್ರಾಪ್​ ಕೊಡುತ್ತಾರೆ ಎಂದು ಹೋದೆ. ಆದರೆ ಮನೆ ಹತ್ತಿರ ಬರುತ್ತಲೇ ಏಕಾಏಕಿ  ಚುಂಬಿಸಲು ಪ್ರಾರಂಭಿಸಿದರು. ಆದರೆ ಆ ಸಮಯದಲ್ಲಿ ನನ್ನ ಹೆತ್ತವರು ಅಲ್ಲಿ ಇದ್ದುದನ್ನು ನೋಡಿ ಹಾಗೆಯೇ ಹೋದರು ಎಂದಿದ್ದಾರೆ.

ಕಾಸ್ಟ್​ ಕೌಚಿಂಗ್ ಭಯಾನಕ ಅನುಭವ ಬಿಚ್ಚಿಟ್ಟ ನಟ Ankit Gupta!
 
ನಂತರ ತಮ್ಮ 20ನೇ ವಯಸ್ಸಿನಲ್ಲಿಯೇ ಗರ್ಭಿಣಿಯಾದ (Pregnant) ಕುರಿತು ಪ್ಯಾರಿಸ್​ ಹೇಳಿಕೊಂಡಿದ್ದಾರೆ. ಇದು ತುಂಬಾ ಅಸಹ್ಯಪಡುವ ವಿಷಯ. ಈ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಆ ಸಮಯದಲ್ಲಿ ನನಗೆ ಮಗು ಬೇಡವಾಗಿತ್ತು. ಅದು ಆದ ಬಗೆ ಕೂಡ ಹೇಳಿಕೊಳ್ಳಲು ಆಗದ್ದು. ಆದ್ದರಿಂದ ಗರ್ಭಪಾತ ಮಾಡಿಸಿದೆ ಎಂದಿದ್ದಾರೆ.

click me!