Ignore ಮಾಡಿದ್ರೂ saif ಕೈ ಹಿಡಿದ ಕರೀನಾ, ಸ್ವೀಟಾಗಿ ಸೇಡು ತೀರಿಸಿಕೊಂಡ ಛೋಟಾ ನವಾಬ್

Published : Oct 04, 2024, 10:42 AM IST
Ignore ಮಾಡಿದ್ರೂ saif ಕೈ ಹಿಡಿದ ಕರೀನಾ, ಸ್ವೀಟಾಗಿ ಸೇಡು ತೀರಿಸಿಕೊಂಡ ಛೋಟಾ ನವಾಬ್

ಸಾರಾಂಶ

ಬಾಲಿವುಡ್ ಬೇಬೋ ಕರೀನಾ ಕೈ ಹಿಡಿದು ಇಬ್ಬರು ಮಕ್ಕಳಿಗೆ ತಂದೆಯಾಗಿದ್ದಾರೆ ಸೈಫ್ ಅಲಿ ಖಾನ್. ಒಂದ್ಕಾಲದಲ್ಲಿ ಕರೀನಾ ಇದೇ ಸೈಫ್ ಇಗ್ನೋರ್ ಮಾಡಿದ್ರು. ವೇದಿಕೆ ಮೇಲೆ ಅವರಿದ್ರೂ, ಮುಖ ನೋಡ್ದೆ, ಇನ್ನೊಬ್ಬ ಹೀರೋಗೆ ಹಗ್ ಮಾಡಿ ಹೋಗಿದ್ರು.  

ಬಾಲಿವುಡ್ ಸೂಪರ್ ಜೋಡಿಗಳ (bollywood super couples) ಪಟ್ಟಿಯಲ್ಲಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ (Saif Ali Khan and Kareena Kapoor Khan ) ಸೇರಿದ್ದಾರೆ. ಸೈಫ್ ಗೆ ಇದು ಎರಡನೇ ಮದುವೆಯಾದ್ರೂ ಕರೀನಾ – ಸೈಫ್ ಜೋಡಿ ಅನೇಕರಿಗೆ ಮಾದರಿಯಾಗಿದೆ. ಆದ್ರೆ ಕರೀನಾ, ಸೈಫ್ ಮದುವೆ ಆಗ್ತಾರೆ ಎಂದಾಗ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು. ಒಂದು ಕಪೂರ್ ಫ್ಯಾಮಿಲಿ (Kapoor Family) ಹುಡುಗಿ ಬೇರೆ ಧರ್ಮದ ಹುಡುಗನನ್ನು ಮದುವೆಯಾಗೋದು , ಇನ್ನೊಂದು ಸೈಫ್ ಗೆ ಇದು ಎರಡನೇ ಮದುವೆ ಅನ್ನೋದು. ಮೂರನೇಯ ಕಾರಣ ಸೈಫ್ ಹಾಗೂ ಕರೀನಾ ಮಧ್ಯೆ ಇರುವ ವಯಸ್ಸಿನ ಅಂತರ. 1991ರಲ್ಲಿ ಸೈಫ್ ಅಲಿ ಖಾನ್, ಅಮೃತಾ ಸಿಂಗ್ ಅವರನ್ನು ಮದುವೆಯಾದಾಗ ಅದಕ್ಕೆ ಕರೀನಾ ಸಾಕ್ಷ್ಯವಾಗಿದ್ದರು. ಅವರ ಮದುವೆ ಫೋಟೋ ಆಗಾಗ ವೈರಲ್ ಆಗ್ತಿರುತ್ತದೆ. ಈಗ ಕರೀನಾ ಹಾಗೂ ಸೈಫ್ ಅಲಿ ಖಾನ್ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಅನೇಕ ಬಾರಿ ನಮ್ಮ ಜೀವನದಲ್ಲಿ ನಮ್ಮ ಊಹೆಗೆ ನಿಲುಕದ ಘಟನೆ ನಡೆದಿರುತ್ತದೆ. ನಾವು ಯಾರನ್ನು ದೂರವಿಡಲು ಪ್ರಯತ್ನಿಸ್ತೇವೋ ಅವರೇ ನಮ್ಮ ಬಾಳಿನ ಮುಖ್ಯ ಭಾಗವಾಗ್ತಾರೆ. ಅದಕ್ಕೆ ಕರೀನಾ – ಸೈಫ್ ಕೂಡ ಸಾಕ್ಷ್ಯ ಎನ್ನಬಹುದು. ಈ ಹಳೆ ವಿಡಿಯೋದಲ್ಲಿ ಕರೀನಾ ಕಪೂರ್, ಸೈಫ್ ಅಲಿ ಖಾನ್ ಅವರನ್ನು ಇಗ್ನೋರ್ ಮಾಡೋದನ್ನು ನೀವು ಕಾಣ್ಬಹುದು. ಆದ್ರೆ ಅದೇ ಸೈಫ್ ಈಗ ಅವರ ಜೀವನ ಸಂಗಾತಿ ಅನ್ನೋದು ವಿಚಿತ್ರ. 

ಜಯಾ ಯಾರ ಜೊತೆ ಶೂಟಿಂಗ್ ಹೋದ್ರೆ ಉರಿದುಕೊಳ್ತಿದ್ರು ಅಮಿತಾಬ್? ಅಮೀರ್ ಖಾನ್ ಪ್ರಶ್ನೆಗೆ ಬಿಗ್ ಬಿ ಶಾಕ್

ಇದೊಂದು ಅವಾರ್ಡ್ ಫಂಕ್ಷನ್ ವಿಡಿಯೋ. ಕರೀನಾ ಕಪೂರ್ ಪ್ರಶಸ್ತಿ ಪಡೆಯಲು ವೇದಿಕೆಗೆ ಬರ್ತಾರೆ.  ಸೈಫ್ ಅಲಿ ಖಾನ್ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ಕರೀನಾ ಕಪೂರ್ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬಂದು, ಅಕ್ಷಯ್ ಖನ್ನಾ ಅವರನ್ನು ತಬ್ಬಿಕೊಳ್ಳುತ್ತಾರೆ. ಆದರೆ ಅಕ್ಷಯ್ ಖನ್ನಾಗಿಂತ ದೊಡ್ಡ ಸ್ಟಾರ್ ಆಗಿದ್ದ ಸೈಫ್ ಅಲಿ ಖಾನ್ ಅವರನ್ನು ಕಡೆಗಣಿಸ್ತಾರೆ.  ಸೈಫ್ ಹಾಯ್ ಎಂದಾಗ ದೂರದಿಂದಲೇ ತಲೆಯಾಡಿಸುವ ಕರೀನಾ, ಸೈಫ್ ಗೆ ಥ್ಯಾಂಕ್ಸ್ ಹೇಳ್ದೆ, ಹಗ್ ಮಾಡದೆ ಅಲ್ಲಿಂದ ಹೋಗ್ತಾರೆ.

ಇನ್ಸ್ಟಾಗ್ರಾಮ್ ನಲ್ಲಿ ಈ ಹಳೆ ವಿಡಿಯೋ ಪೋಸ್ಟ್ ಮಾಡಲಾಗಿದೆ. ವೇದಿಕೆ ಮೇಲೆ ಕರೀನಾ, ಸೈಫ್ ಅವರನ್ನು ಇಗ್ನೋರ್ ಮಾಡಿದ್ರೂ ವಿದಿ ಬೇರೆಯದನ್ನೇ ಬರೆದಿತ್ತು. ಸೈಫ್ ಇದಕ್ಕೆ ಸೇಡುತೀರಿಸಿಕೊಂಡಿದ್ದಾರೆ ಎಂದು ಶೀರ್ಷಿಕೆ ಹಾಕಲಾಗಿದೆ. 

 ಈ ವಿಡಿಯೋ ವೈರಲ್ ಆದ ತಕ್ಷಣ ಜನ ಕಾಮೆಂಟ್ ಶುರು ಮಾಡಿದ್ದಾರೆ. ಕರೀನಾ ಸೈಫ್ ಅವರನ್ನು ನೋಡಿ ತಲೆಯಾಡಿಸಿ ಸ್ವಾಗತಿಸಿದ್ದಾರೆ, ಇಗ್ನೋರ್ ಮಾಡಿಲ್ಲ ಎಂದು ಬರೆದಿದ್ದಾರೆ. ಸೈಫ್ ಅವರ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಅವರಿಗೆ ತಿಳಿದಿರಲಿಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.  ತನ್ನ ಅಕ್ಕ ಕರೀಶ್ಮಾ ಜೀವನದಿಂದ ಕರೀನಾ ಸಾಕಷ್ಟು ಕಲಿತಿದ್ದಾರೆ. ಹಾಗಾಗಿ ಅವರು ಜೀವನದಲ್ಲಿ ಎಡವಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. 

ಸಿದ್ದರಾಮಯ್ಯ ಜೀವನಾಧರಿತ 'ಲೀಡರ್ ರಾಮಯ್ಯ' ಚಿತ್ರದ ಚಿತ್ರೀಕರಣ ವಿಳಂಬ; ತಮಿಳಿನ ಆ ಸ್ಟಾರ್ ನಟನಿಗೆ ಕಾಯುತ್ತಿದೆ ಚಿತ್ರತಂಡ?

ಆ ಟೈಂನಲ್ಲಿ ಕರೀನಾ, ಶಾಹಿದ್ ಕಪೂರ್ ಪ್ರೀತಿಯಲ್ಲಿದ್ರೂ ಅಂದ್ರೆ ಮತ್ತೆ ಕೆಲವರು ಕರೀನಾ ಕಪೂರ್ ವಿರುದ್ಧ ಸೈಫ್, ಸಿಹಿಯಾಗಿ ಸೇಡು ತೀರಿಸಿಕೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಮದುವೆ ಆದ್ಮೇಲೆ ಇಗ್ನೋರ್ ಮಾಡೋ ಸರದಿ ಸೈಫ್ ಅಲಿ ಖಾನ್ ಅವರನ್ನು ಎಂದಿದ್ದಾರೆ. ಸೈಫ್ ಅಲಿ ಖಾನ್ ಗೆ ಈಗ 54 ವರ್ಷ ವಯಸ್ಸು. ಕರೀನಾ ಕಪೂರ್ ಖಾನ್ ಗೆ ಈಗ 44 ವರ್ಷ ವಯಸ್ಸು. ಅವರು 2012ರಲ್ಲಿ ಮದುವೆಯಾಗಿದ್ದು, ಈಗ ಇಬ್ಬರು ಗಂಡು ಮಕ್ಕಳ ಪಾಲಕರಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?