ಮಾಜಿ ವಿಶ್ವಸುಂದರಿ ಹಿಂದೆ ಬಿದ್ದವ್ರು ಒಬ್ಬರಲ್ಲ ಇಬ್ಬರಲ್ಲ, 10 ಬಾಯ್‌ಫ್ರೆಂಡ್ಸ್ ಜೊತೆ ಡೇಟಿಂಗ್..!

By Suvarna NewsFirst Published Jul 17, 2022, 3:25 PM IST
Highlights

46 ರ ವಯಸ್ಸಿನಲ್ಲಿ ಸುಶ್ಮಿತಾ ಸೇನ್ ಡೇಟ್ ಮಾಡ್ತಿದ್ದಾರೆ ಅನ್ನೋದೆ ಸದ್ಯ ಹಾಟ್ ಟಾಪಿಕ್. ಬಾಲಿವುಡ್ ಬ್ಯೂಟಿ, ಮಿಸ್ ಯೂನಿವರ್ಸ್ ಆಗಿದ್ದ ಸುಶ್ಮಿತಾ ಮಾತ್ರ ನಂಗೆ ಮದ್ವೆ ಬೇಡ ಅಂತ ಡಿಸೈಡ್ ಮಾಡಿದ್ರು. ಹಾಗಂತ ಅವರೇನು ಗಂಡಸರಿಂದ ದೂರ ಉಳಿದಿರಲಿಲ್ಲ.

46 ರ ವಯಸ್ಸಿನಲ್ಲಿ ಸುಶ್ಮಿತಾ ಸೇನ್ ಡೇಟ್ ಮಾಡ್ತಿದ್ದಾರೆ ಅನ್ನೋದೆ ಸದ್ಯ ಹಾಟ್ ಟಾಪಿಕ್. ಬಾಲಿವುಡ್ ಬ್ಯೂಟಿ, ಮಿಸ್ ಯೂನಿವರ್ಸ್ ಆಗಿದ್ದ ಸುಶ್ಮಿತಾ ಮಾತ್ರ ನಂಗೆ ಮದ್ವೆ ಬೇಡ ಅಂತ ಡಿಸೈಡ್ ಮಾಡಿದ್ರು. ಹಾಗಂತ ಅವರೇನು ಗಂಡಸರಿಂದ ದೂರ ಉಳಿದಿರಲಿಲ್ಲ..ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಹತ್ತು ಬಾಯ್ ಫ್ರೆಂಡ್ಸ್ ಜೊತೆ ಮಾಜಿ ಭುವನ ಸುಂದರಿ ಡೇಟ್ ಮಾಡಿದ್ದಾರೆ.

ಸುಶ್ಮಿತಾ ಸೇನ್ ಚಿಕ್ಕ ವಯಸ್ಸಿನಲ್ಲೇ ವಿಶ್ವಸುಂದರಿ ಪಟ್ಟ ಪಡೆದುಕೊಂಡವ್ರು. ಭುವನ ಸುಂದರಿಯಾಗಿ ಬಾಲಿವುಡ್ ಗೆ ಎಂಟ್ರಿಕೊಡ್ತಿದ್ದ ಹಾಗೆ ಸ್ಟಾರ್ ಗಿರಿ ಕೂಡ ಸಿಕ್ಕಿತ್ತು..ಇದೇ ಟೈಂ ನಲ್ಲಿ ಸುಶ್ಮಿತಾ ಮೋಹಕ್ಕೆ ಸೆರೆ ಆಗಿದ್ದು ವಿಕ್ರಮ್ ಭಟ್ ..ಸುಶ್ಮಿತಾ ಅಭಿನಯದ ದಸ್ತಕ್ ಚಿತ್ರಕ್ಕೆ ವಿಕ್ರಮ್ ಭಟ್ ಕಥೆ ಬರೆದಿದ್ರು ಹಾಗಾಗಿ ಇಬ್ಬರ ಒಡನಾಟ ಜೋರಾಗಿತ್ತು. ಆನಂತರ ನಟ ರಣದೀಪ್ ಹೂಡ ಹಾಗೂ ಸುಶ್ಮಿತಾ ಸೇನ್ ಕೂಡ ಮೂರು ವರ್ಷಗಳ ಕಾಲ ಲೀವಿಂಗ್ ರಿಲೇಷನ್ ಶಿಪ್ ನಲ್ಲಿದ್ರು. ಆದ್ರೆ ಅದ್ಯಾಕೋ ಏಕಾಏಕಿ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡ್ರು.

ಕೇವಲ ಸಿನಿಮಾ ಇಂಡಸ್ಟ್ರಿಯವರು ಮಾತ್ರವಲ್ಲ ಉದ್ಯಮಿಗಳು ಸುಶ್ಮಿತಾ ಸೌಂದರ್ಯಕ್ಕೆ ಮನಸೋತು ಅವ್ರ ಹಿಂದೆ ಬಿದ್ದಿದ್ರು. ಅದ್ರಲ್ಲಿ ಮೊದಲಿಗರು ಬಂಟಿ ಸಚ್ದೇವ್ ಇವ್ರ ಮಧ್ಯೆ ಲವ್ವಿ ಡವ್ವಿ ಜೋರಾಗಿಯೇ ಇತ್ತು ಆದ್ರೆ ಅದು ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. 2015ರಲ್ಲಿ ಮುಂಬೈ ಮೂಲದ ರಿತಿಕ್ ಭಾಸಿನ್ ಜತೆಗೂ ಸುಶ್ಮಿತಾ ಸೇನ್ ವರ್ಷಗಳ ಕಾಲ ಸುತ್ತಾಡಿದ್ರು ನಂತ್ರ ಅವ್ರಿಗೂ ಗುಡ್ ಬಾಯ್ ಹೇಳಿದ್ರು.

ಇನ್ನು ಪಾಕಿಸ್ತಾನದ ಕ್ರಿಕೆಟರ್ ವಾಸಿಮ್ ಅಕ್ರಮ್ ಜೊತೆಯೂ ತಿಂಗಳುಗಳ ಕಾಲ ಸುಶ್ಮಿತಾ ಕಾಣಿಸಿಕೊಂಡ್ರು..ಆದ್ರೆ ಇವ್ರ ಸಂಬಂಧ ಬಹುಬೇಗ ಹದಗೆಟ್ಟಿತು ಅದಕ್ಕೆ ಕಾರಣ ಪ್ರಸೆಂಟ್ ಸುಶ್ಮಿತಾ ಅವ್ರ ಗೆಳೆಯ ಲಲಿತ್ ಮೋದಿ....

ಹಾಟ್ ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ ಕೂಡ ಸುಶ್ಮಿತಾ ಮೋಡಿಗೆ ಮರುಳಾಗಿದ್ರು. ಸುಶ್ಮಿತಾಗೆ 10.5 ಕ್ಯಾರಟ್ನ ಡೈಮಂಡ್ ನೀಡಿ ಪ್ರೀತಿ ನಿವೇದನೆ ಮಾಡಿದ್ರಂತೆ. ಆದ್ರೆ ಈ ಸಂಬಂಧಕ್ಕೂ ಎಳ್ಳು-ನೀರು ಬಿಟ್ರು ಸುಶ್ಮಿತಾ ...

ಸುಶ್ಮಿತಾ ಸೇನ್ ಗೆ ತನಗಿಂತ ಚಿಕ್ಕವರ ಜೊತೆ ಡೇಟ್ ಮಾಡಿ ಅಭ್ಯಾಸ ಆಗಿ ಹೋಗಿದೆ...ತನಗೆ 36 ವರ್ಷವಿದ್ದಾಗ , 22 ವರ್ಷದ ಉದ್ಯಮಿ ಇಮ್ತಿಯಾಜ್ ಖತ್ರಿ ಜತೆ ಸಂಬಂಧ ಇಟ್ಟುಕೊಂಡಿದ್ದರು, ಇತ್ತೀಚಿಗೆ ಬ್ರೇಕ್ ಅಪ್ ಮಾಡಿಕೊಂಡ ರೋಹ್ಮನ್ ಶಾಲ್ ಕೂಡ ಸುಶ್ಮಿತಾ ಅವ್ರಿಗಿಂತ  15 ವರ್ಷ ಚಿಕ್ಕವನಾಗಿದ್ರು. 

ನಿರ್ದೇಶಕ ಮುದಸ್ಸರ್ ಅಜಿಜ್ ಕೂಡ ಸುಶ್ಮಿತಾ ಬಾಯ್ ಫ್ರೆಂಡ್ ಗಳಲ್ಲೊಬ್ಬರು ಇವ್ರ ಜೊತೆಯೂ ಸುಶ್ಮಿತಾ ಲವ್ ಅಫೇರ್ ಜೋರಾಗಿತ್ತು..ಆದ್ರೆ ಮುದಸ್ಸಾರ್ ಪಾಲಕರು ಈ ವಿಚಾರದಿಂದ ಕಂಗೆಟ್ಟ ಕಾರಣ ಮುದಸ್ಸಾರ್ ಅವ್ರೇ ಸುಶ್ಮಿತಾ ಗೆ ಕೈಕೊಟ್ರು.

ಸುಶ್ಮಿತಾ ಡೇಟ್ ಮಾಡ್ತಿರೋ ಲಲಿತ್ ಮೋಡಿ ಸಾವಿರರು ಕೋಟಿ ಒಡೆಯ..4.555ಕೋಟಿ ಆಸ್ತಿಯ ಮಾಲೀಕರಾಗಿದ್ದಾರೆ ಲಲಿತ್ ಮೋದಿ..ಐಪಿಎಲ್ ಎಂಬ ಕಲ್ಪನೆ ಹುಟ್ಟುಹಾಕಿದ್ದೆ ಲಲಿತ್ ಮೋದಿ..4.555ಕೋಟಿ ಆಸ್ತಿ ಜೊತೆಗೆ ಲಂಡನ್‌ನ ಐಕಾನಿಕ್ 117, ಸ್ಲೋನ್ ಸ್ಟ್ರೀಟ್‌ನಲ್ಲಿ ಐದು ಅಂತಸ್ತಿನ ಮಹಲು ಹೊಂದಿದ್ದಾರೆ, ಇದು 7000 ಚದರ ಅಡಿಗಳಷ್ಟು ವಿಸ್ತೀರ್ಣದಲ್ಲಿದೆ...

ಸುಶ್ಮಿತಾ ನಟಿಯಾಗಿ ಸಿನಿಮಾರಂಗದಿಂದ ದೂರ ಉಳಿದಿದ್ದರೂ ಕೂಡ ಅನೇಕ ಬ್ರ್ಯಾಂಡ್ ಗಳಿಗೆ ರಾಯಭಾರಿ ಆಗಿದ್ದಾರೆ.ಸಾಕಷ್ಟು ಉದ್ಯಮದಲ್ಲಿ ಹೂಡಿಕೆ ಮಾಡಿದ್ದು ತಿಂಗಳಿಗೆ 60 ಲಕ್ಷ ಬರುವಂತೆ ಮಾಡಿಕೊಂಡಿದ್ದಾರೆ. ಮಾಹಿತಿ ಪ್ರಕಾರ ವರ್ಷಕ್ಕೆ 9 ಕೋಟಿ ಗಳಿಸುತ್ತಾರಂತೆ ಸುಶ್ಮಿತಾ.

ಆದಾಯದ ಜೊತೆಗೆ ಸುಶ್ಮಿತಾ ಅವರ ನೆಟ್ವರ್ತ್ 74 ಕೋಟಿಯಂತೆ. ಇದು ಲಲಿತ್ ಮೋದಿ ಅವ್ರ ಆಸ್ತಿಗಿಂತ ಕಮ್ಮಿ ಆದರೂ, ಐಷಾರಾಮಿ ಜೀವನಕ್ಕೆ ಬೇಕಾದಷ್ಟನ್ನ ಗಳಿಸಿದ್ದಾರೆ ಮಾಜಿ ಭುವನ ಸುಂದರಿ..ಇನ್ನು ಕಾರ್ ಕ್ರೇಜ್ ಹೊಂದಿರೋ ಈ ನಟಿ BMW X7 ಕಾರು ಇದೆ. ಇದರ ಬೆಲೆ 1.42 ಕೋಟಿ ರೂಪಾಯಿ. ಇದಲ್ಲದೆ, BMWX6, ಆಡಿ ಕ್ಯೂ 7, ಲೆಕ್ಸಸ್ ಎಲ್ಎಕ್ಸ್ 470 ಮೊದಲಾದ ಕಾರುಗಳೂ ಇವೆ..ಒಟ್ಟಾರೆ 26 ವರ್ಷದಿಂದ ಡೇಟ್ ಮಾಡುತ್ತಲೇ , ಒಳ್ಳೇ ಆಸ್ತಿ ಸಂಫಾದನೆ ಮಾಡುತ್ತಾ ಜೀವನವನ್ನ ಎಂಜಾಯ್ ಮಾಡ್ತಿದ್ದಾರೆ ಸುಷ್ಮಿತಾ.

click me!