ಅಯ್ಯೋ, ಬೀಳ್ತಿದ್ರು ಮಲೈಕಾ! ಕುಡಿದಿದ್ದು ಹೆಚ್ಚಾಯ್ತಾ ಅಂತಿದ್ದಾರೆ ಟ್ರೋಲರ್

By Roopa Hegde  |  First Published Nov 18, 2024, 11:44 AM IST

ಬಾಲಿವುಡ್ ನಟಿ ಮಲೈಕಾ ಅರೋರಾ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಲೈಕಾ, ರೆಸ್ಟೋರೆಂಟ್ ಬಳಿ ಎಡವಿದ್ದಾರೆ. ಸ್ನೇಹಿತನ ಸಹಾಯದಿಂದ ತಮ್ಮನ್ನು ಸಂಭಾಳಿಸಿಕೊಂಡ ನಟಿ ಟ್ರೋಲರ್ ಬಾಯಿಗೆ ಬಿದ್ದಿದ್ದಾರೆ. 
 


ಬಾಲಿವುಡ್ ನಟಿ ಮಲೈಕಾ ಅರೋರಾ (Bollywood actress Malaika Arora) ಸದಾ ಒಂದಲ್ಲ ಒಂದು ವಿಷ್ಯಕ್ಕೆ ಸುದ್ದಿಯಲ್ಲಿರ್ತಾರೆ. ಏನೂ ಸಿಗ್ಲಿಲ್ಲ ಅಂದ್ರೆ ಪಾಪರಾಜಿಗಳು ಅವರು ಜಿಮ್ ಗೆ ಹೋಗುವ ವಿಡಿಯೋ ತೆಗೆದು ಸೋಶಿಯಲ್ ಮೀಡಿಯಾ (Social Media)ದಲ್ಲಿ ಪೋಸ್ಟ್ ಮಾಡ್ತಾರೆ. ವರ್ಷ 50 ಆದ್ರೂ ಫಿಟ್ ಆಗಿರುವ ಮಲೈಕಾ, ತಮ್ಮ ಫಿಟ್ನೆಸ್ ವಿಚಾರಕ್ಕೆ ಇಲ್ಲವೆ ಡೇಟಿಂಗ್ ವಿಷ್ಯಕ್ಕೆ ಚರ್ಚೆಯಲ್ಲಿರ್ತಾರೆ. ಆದ್ರೆ ಈ ಬಾರಿ ಎಡವಿ ಚರ್ಚೆಗೆ ಬಂದಿದ್ದಾರೆ. ಮಲೈಕಾ ಅರೋರಾ, ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ. ಅದ್ರಲ್ಲಿ ಮಲೈಕಾ ಎಡವೋದನ್ನು ಕಾಣ್ಬಹುದು. ಅವರ ಸ್ನೇಹಿತರು ಸಹಾಯ ಮಾಡಿದ್ದರಿಂದ ಮಲೈಕಾ ಅದೃಷ್ಟವಶಾತ್ ಕೆಳಗೆ ಬೀಳಲಿಲ್ಲ.

ಮಲೈಕಾ ಹಾಗೂ ಅವರ ಸ್ನೇಹಿತರು ರೆಸ್ಟೋರೆಂಟ್ ಮುಂದೆ ಸ್ಪಾಟ್ ಆಗಿದ್ದಾರೆ. ಅಲ್ಲಿ ಮಲೈಕಾ ಕಾಲು ಎಡವಿದೆ. ಕೆಳಗೆ ಬೀಳ್ತಿದ್ದ ಅವರನ್ನು ಸ್ನೇಹಿತರು ಹಿಡಿದುಕೊಳ್ತಾರೆ. ಪಾಪರಾಜಿಗಳು ಫೋಟೋ ಕ್ಲಿಕ್ಕಿಸ್ತಿದ್ರೆ ಮಲೈಕೆ ತಲೆ ಬಗ್ಗಿಸಿಕೊಂಡು ಒಳಗೆ ಹೋಗ್ತಿದ್ದಾರೆ. ತುಂಬಾ ಸಿಂಪಲ್ ಡ್ರೆಸ್ ನಲ್ಲಿ ಬಂದಿದ್ದ ಮಲೈಕಾ ಲುಕ್ ಫ್ಯಾನ್ಸ್ ಗೆ ಇಷ್ಟವಾಗಿದೆ. ಖಾಕಿ ಪ್ಯಾಂಟ್‌ನೊಂದಿಗೆ ಬಿಳಿ ಕ್ರಾಪ್ ಟಾಪ್ ಧರಿಸಿದ್ದರು ಮಲೈಕಾ. ಅವರು ತಮ್ಮ ಕೂದಲನ್ನು ಸಿಂಪಲ್ ಆಗಿ ಕಟ್ಟಿದ್ದು, ಕಡಿಮೆ ಮೇಕಪ್ ಮಾಡಿದ್ರು. ಕೈನಲ್ಲೊಂದು ಬ್ಯಾಗ್ ಹಿಡಿದಿದ್ದ ಮಲೈಕಾ, ಸರಳವಾಗಿದ್ರೂ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.  

Tap to resize

Latest Videos

undefined

ಬಿಗ್ ಬಾಸ್ ಮನೆಯಿಂದ ಹೊರಬಂದ ಅನುಷಾ ರೈ ಹೇಳಿದ್ದೇನು?

ಮಲೈಕಾ ಈ ವಿಡಿಯೋ ನೋಡಿದ ಬಳಕೆದಾರರು ತಮ್ಮ ಕಮೆಂಟ್ ಶುರು ಮಾಡಿದ್ದಾರೆ. ಅರ್ಜುನ್ ಕಪೂರ್ ಜೊತೆ ಬ್ರೇಕ್ ಅಪ್ ಆದ್ಮೇಲೆ, ಮಲೈಕಾ ಹೆಚ್ಚು ಡ್ರಿಂಕ್ಸ್ ಮಾಡ್ತಿದ್ದಾರೆ. ಮದ್ಯ ಹೆಚ್ಚಾಗಿ ಹೀಗಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮಲೈಕಾಗೆ, ಅರ್ಜುನ್ ಮರೆಯಲು ಆಗ್ತಿಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ನಟಿ ಎಡವಲು ಆಲ್ಕೋಹಾಲ್ ಕಾರಣ ಎಂಬುದು ಬಹುತೇಕರ ವಾದವಾಗಿದೆ. ಇನ್ನು ಕೆಲವರು ಮಲೈಕಾ ಡ್ರೆಸ್ ನಿಂದ ಇದೆಲ್ಲ ಆಗಿದ್ದು, ಸರಿಯಾಗಿರೋ ಡ್ರೆಸ್ ಹಾಕಿಕೊಂಡು ಬರೋಕೆ ಏನಾಗುತ್ತೆ ಎಂದು  ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಮಲೈಕಾ ಪರ ವಾದ ಮಂಡಿಸಿದ್ದಾರೆ. ಎಲ್ಲರಂತೆ ಅವರೂ ಮನುಷ್ಯರು. ಕಾಲು ಎಡವಿದ್ರೆ ಏನಾಯ್ತು ಎಂದಿದ್ದಾರೆ.

ಅರ್ಜುನ್ ಕಪೂರ್ (Arjun Kapoor) ಜೊತೆ ಬ್ರೇಕ್ ಅಪ್ ಆದ್ಮೇಲೆ ಮಲೈಕಾ ಇನ್ನೊಬ್ಬರ ಜೊತೆ ಕಾಣಿಸಿಕೊಂಡಿದ್ದಾರೆ. ಮಲೈಕಾ ಕೈ ಹಿಡಿದಿರುವ ವ್ಯಕ್ತಿ ಯಾರು? ಇನ್ನೊಬ್ಬರ ಜೊತೆ ಮಲೈಕಾ ಡೇಟ್ ಮಾಡ್ತಿದ್ದಾರಾ ಎಂಬ ಪ್ರಶ್ನೆಯನ್ನೂ ನೆಟ್ಟಿಗರು ಕೇಳಿದ್ದಾರೆ.

ಗೌತಮಿ ಮುಖವಾಡ ನಾನು ಬಯಲು ಮಾಡ್ತೀನಿ; ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಂತೆ ಕಾಯಿ ಹೊಡೆದ ಶೋಭಾ ಶೆಟ್ಟಿ!

ಸಿನಿಮಾಗಳಿಂದ ದೂರವಿರುವ ಮಲೈಕಾ, ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲ ದಿನಗಳ ಹಿಂದೆ ನವೆಂಬರ್ ಚಾಲೆಂಜ್ ಸ್ಟೋರಿ ಹಂಚಿಕೊಂಡಿದ್ದರು. ಅದ್ರಲ್ಲಿ ಮದ್ಯ ಬಿಡೋದನ್ನು ಮಲೈಕಾ ಸೇರಿಸಿದ್ದರು. ಅದಾದ್ಮೇಲೆ ಏಳು ಅತ್ಯುತ್ತಮ ವೈದ್ಯರು ಎಂದು ಸೂರ್ಯ, ನೀರು, ಆರೋಗ್ಯಕರ ಆಹಾರ, ವಿಶ್ರಾಂತಿ, ಗಾಳಿ, ನಗು, ವ್ಯಾಯಾಮ ಹೆಸರನ್ನು ಬರೆದಿದ್ದರು. 

ಮಲೈಕಾ ಅರೋರಾ, ಅರ್ಬಾಜ್ ಖಾನ್ (Arbaaz Khan) ಗೆ ವಿಚ್ಛೇದನ ನೀಡಿದ ನಂತ್ರ 5 ವರ್ಷಗಳ ಕಾಲ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡಿದ್ದರು. ಎಲ್ಲ ಕಡೆ ಒಟ್ಟಿಗೆ ಕಾಣಿಸಿಕೊಳ್ತಿದ್ದ ಜೋಡಿಯ ರೋಮ್ಯಾನ್ಸ್ ಸಾಕಷ್ಟು ಸುದ್ದಿ ಮಾಡಿತ್ತು. ವರ್ಷಗಳ ಹಿಂದೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಶುರುವಾಗಿ, ಕೊನೆಗೆ ದೂರವಾಗಿದ್ದಾರೆ. ಮಲೈಕಾ ಅವರ ಮಲತಂದೆ ಅನಿಲ್ ಮೆಹ್ತಾ ನಿಧನರಾದ ಸಮಯದಲ್ಲಿ ಅರ್ಜುನ್, ಮಲೈಕಾ ಕುಟುಂಬದ ಜೊತೆಗಿದ್ದರು. ಆದ್ರೆ ಮತ್ತೆಲ್ಲೂ ಜೋಡಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಬ್ರೇಕ್ ಅಪ್ ನಂತ್ರ ವಿದೇಶಕ್ಕೆ ಹಾರಿದ್ದ ಮಲೈಕಾ, ಸ್ವಲ್ಪ ರಿಲ್ಯಾಕ್ಸ್ ಆಗಿ ಬಂದಿದ್ದಾರೆ. 

click me!