Mallika Sherawat: 17 ಕಿಸ್​ ಕೊಟ್ಟಾಕೆ ದಿಢೀರನೇ ಮಿಸ್ಸು! ನಟಿ ಮಲ್ಲಿಕಾ ಶೆರಾವತ್​ ಹೋಗಿದ್ದೆಲ್ಲಿ?

By Suvarna NewsFirst Published Feb 26, 2023, 6:10 PM IST
Highlights

ಬಾಲಿವುಡ್​ನ ಹಾಟ್​ ನಟಿಯರಲ್ಲಿ ಒಬ್ಬರೆಂದು ಖ್ಯಾತಿ ಪಡೆದಿರುವ ನಟಿ ಮಲ್ಲಿಕಾ ಶೇರಾವತ್​ ದಿಢೀರ್​ ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆ?
 

ಮಲ್ಲಿಕಾ ಶೆರಾವತ್ (Mallika Sherawat) ಎಂದಾಕ್ಷಣ ನೆನಪಾಗುವುದು ಬಾಲಿವುಡ್​ನ ಹಾಟ್​ ನಟಿ. ಬಾಲಿವುಡ್​ ಮಾತ್ರವಲ್ಲದೇ ಹಾಲಿವುಡ್​ನಲ್ಲಿ ಮೈ ಚಳಿ ಬಿಟ್ಟು ನಟಿಸಿರೋ ಮಲ್ಲಿಕಾ ಈಗ ತೆರೆಮರೆಗೆ ಸರಿದಿದ್ದಾರೆ.  ‘ನೀವು ಒಂದು ಚಿತ್ರದಲ್ಲಿ ನಟಿಸುತ್ತಿದ್ದರೆ ಆ ಚಿತ್ರದ ನಟ ಕರೆದಲ್ಲಿ ಹೋಗಬೇಕು. ಜೊತೆಗೆ ಅವರು ಕರೆ ಮಾಡಿ ಮಧ್ಯರಾತ್ರಿ ಮನೆಗೆ ಬರುವಂತೆ ಹೇಳುತ್ತಾರೆ. ಒಂದು ವೇಳೆ ನೀವು ಆ ವೇಳೆ ಹೋಗದಿದ್ದಲ್ಲಿ ಆ ಸಿನಿಮಾದಿಂದ ನಿಮ್ಮನ್ನು ಹೊರಗೆ ಇಡಲಾಗುತ್ತದೆ ಎಂದು ಬಾಲಿವುಡ್​ನ ಕರಾಳ ಮುಖವನ್ನು ಕಳೆದ ವರ್ಷವಷ್ಟೇ ಬಿಚ್ಚಿಟ್ಟಿದ್ದರು ಮಲ್ಲಿಕಾ. ‘ಯಾವ ನಟಿ ತಮ್ಮೊಂದಿಗೆ ಬೆರೆಯುತ್ತಾರೆ, ಯಾವ ನಟಿಯನ್ನು ತಾವು ಕಂಟ್ರೋಲ್​ ಮಾಡಬಹುದು ಎಂದು ನೋಡುವ ಮೂಲಕ ನಟರು ಆ ರೀತಿಯ ನಟಿಯರನ್ನು (Actress) ಇಷ್ಟಪಡುತ್ತಾರೆ. ಆದರೆ ನಾನು ಅಂಥವಳಲ್ಲ. ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ. ಹೀಗಾಗಿ ನನಗೆ ಟಾಪ್​ ನಟನರುಗಳ ಜೊತೆ ತೆರೆಹಂಚಿಕೊಳ್ಳಲು ಸಾಧ್ಯವಾಗಲಿಲ್ಲ.

ಏಕೆಂದರೆ ನಾನು ಅವರೊಂದಿಗೆ ಕಾಂಪ್ರಮೈಸ್ ಆಗಲಿಲ್ಲ‘ ಎಂದು ಹೇಳುವ ಮೂಲಕ ಬಣ್ಣದ ಲೋಕದ ಕಹಿ ಸತ್ಯವನ್ನು ಅನಾವರಣ ಮಾಡಿದ್ದರು. ಇಂತಿಪ್ಪ  ಮಲ್ಲಿಕಾ ಶೆರಾವತ್​ ಅವರ ಮೂಲ ಹೆಸರು ರೀಮಾ (Reema). ಹರಿಯಾಣದ ಇವರು ಬಾಲಿವುಡ್​ ಪ್ರವೇಶಿಸಿ  ಮಲ್ಲಿಕಾ ಎಂಬ ಹೆಸರಿಗೆ ಬದಲಾಗಿದ್ದಾರೆ. ಮಲ್ಲಿಕಾ  ರಲ್ಲಿ  ಗೋವಿಂದ್ ಮೆನನ್ ನಿರ್ದೇಶನ  'ಖ್ವಾಹಿಶ್' ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದರು. ಮೊದಲ ಚಿತ್ರದಲ್ಲಿಯೇ ಇವರು ಕಿಸ್ಸು (Kiss) ಕೊಟ್ಟ ಪರಿಗೆ ಬಾಲಿವುಡ್​ ಹುಬ್ಬೇರಿಸಿತ್ತು. ಏಕೆಂದರೆ ಬರೋಬ್ಬರಿ 17 ಬಾರಿ ಇವರು ಕಿಸ್​ ಕೊಟ್ಟಿದ್ದರು. ಆದರೆ ಅವರ ದುರಾದೃಷ್ಟ. ಎಷ್ಟೇ ಹಾಟ್​ ಆಗಿ ಕಾಣಿಸಿಕೊಂಡರೂ, ಇಷ್ಟೆಲ್ಲಾ ಕಿಸ್ಸಿನ ಸುರಿಮಳೆಯನ್ನೇಗೈದರೂ, ಈ ಚಿತ್ರ ಅವರಿಗೆ ಹೆಸರು ತಂದುಕೊಡಲಿಲ್ಲ. ನಂತರ  ಅವರಿಗೆ ಭಾರಿ ಯಶಸ್ಸು ಕೊಟ್ಟ ಚಿತ್ರ  2004 ರಲ್ಲಿ ಬಿಡುಗಡೆಯಾದ ಅನುರಾಗ್ ಬಸು ಅವರ  ನಿರ್ದೇಶನದ 'ಮರ್ಡರ್' ಚಿತ್ರ. 

ಇದರಲ್ಲಿ ಬಿಕಿನಿ (Bikini) ಡ್ರೆಸ್​ನಲ್ಲಿ ಮಲ್ಲಿಕಾ ಕಾಣಿಸಿಕೊಂಡಿದ್ದಾಗ ಬಹಳ ಅಪಸ್ವರ ಕೇಳಿಬಂದಿದ್ದವು. ದೀಪಿಕಾ ಪಡುಕೋಣೆ  ‘ಗೆಹರಾಯಿಯಾ’ ಚಿತ್ರದಲ್ಲಿ ದೀಪಿಕಾ ಇದೇ ರೀತಿ ಹಾಟ್​ ಆಗಿ ಕಾಣಿಸಿಕೊಂಡಿದ್ದಾಗ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಮಲ್ಲಿಕಾ  ಶೆರಾವತ್​, ‘ನಾನು ಮರ್ಡರ್ ಸಿನಿಮಾ ಮಾಡಿದಾಗ ಅಪಸ್ವರಗಳು ಕೇಳಿ ಬಂದವು. ಕಿಸ್ ಮತ್ತು ಬಿಕಿನಿ ದೃಶ್ಯಗಳ ಬಗ್ಗೆ ಜನರು ಬಾಯಿಗೆ ಬಂದಂತೆ ಹೇಳಿದರು. ಗೆಹರಾಯಿಯಾ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಮಾಡಿದ್ದನ್ನು ನಾನು 15 ವರ್ಷಗಳ ಹಿಂದೆಯೇ ಮಾಡಿದ್ದೆ. ಆಗ ಜನರು ತುಂಬಾ ಸಂಕುಚಿತ ಮನಸ್ಥಿತಿ ಹೊಂದಿದ್ದರು. ಆಗ ಜನರು ನನ್ನ ದೇಹದ ಮತ್ತು ಗ್ಲಾಮರ್ ಬಗ್ಗೆ ಮಾತ್ರ ಮಾತನಾಡಿದರು. ನನ್ನ ನಟನೆ ಬಗ್ಗೆ ಯಾರೂ ಮಾತನಾಡಲೇ ಇಲ್ಲ. ನನಗೆ ಒಂದು ವರ್ಗದ ಜನರಿಂದ ಕಿರುಕುಳ ಉಂಟಾಯಿತು’ ಎಂದು ಬೇಸರ ತೋಡಿಕೊಂಡಿದ್ದರು.

ಮದುಮಗಳ ಲುಕ್​ನಲ್ಲಿ ಮಿಂಚಿಂಗ್​! ಮೂರನೆ ಮದ್ವೆಯಾಗ್ತಿದ್ದಾರಾ Rakhi Sawant?
ಇವೆಲ್ಲವುಗಳ ನಡುವೆ ನಟಿ ಈಗ ದಿಢೀರ್​ ನಾಪತ್ತೆಯಾಗಿದ್ದಾರೆ.  ಅಷ್ಟಕ್ಕೂ ಇವರ ಹೋದದ್ದು ಎಲ್ಲಿ ಎಂಬ ಬಗ್ಗೆ ಬಿ ಟೌನ್​ನಲ್ಲಿ ಭಾರಿ ಸುದ್ದಿಯಾಗುತ್ತಿದೆ. ಅಂದಹಾಗೆ ಇವರ ದಾಂಪತ್ಯ ಜೀವನದ ಬಗ್ಗೆ ಹೇಳುವುದಾದರೆ, ಇವರು ಚಿತ್ರರಂಗಕ್ಕೆ ಬರುವ ಮುನ್ನವೇ ಮದುವೆಯನ್ನೂ ಆಗಿ ಒಂದೇ ವರ್ಷದಲ್ಲಿ ವಿಚ್ಛೇದನವನ್ನೂ ಪಡೆದವರು. ಅಷ್ಟಕ್ಕೂ ಇವರದ್ದು ಪ್ರೇಮ ವಿವಾಹವಾಗಿತ್ತು.  ಗಗನಸಖಿಯಾಗಿ (Air hostess) ಕೆಲಸ ಮಾಡಿದ್ದ ಮಲ್ಲಿಕಾ,  ಪೈಲಟ್ ಕರಣ್ ಸಿಂಗ್ ಗಿಲ್ ಅವರ ಜೊತೆ ಲವ್​ ಮಾಡಿ ಮದುವೆಯಾಗಿದ್ದರು. ಆದರೆ ದಾಂಪತ್ಯ ಬಹಳ ಕಾಲ ಉಳಿಯಲೇ ಇಲ್ಲ. ಮೊದಲಿನಿಂದಲೂ ಒಂಟಿಯಾಗುವುದನ್ನೇ ಇಷ್ಟಪಟ್ಟಿದ್ದ ಮಲ್ಲಕಾ, ಮನೆಯಲ್ಲಿ ಸಿಟ್ಟು ಮಾಡಿ ಸೂಟ್‌ಕೇಸ್‌ ಕಟ್ಟಿಕೊಂಡು ಬಾಂಬೆಗೆ ಹೊರಟವರು. ಅಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಅಮೆರಿಕಕ್ಕೂ ಹೋಗಿ ಬರಾಕ್​ ಒಬಾಮಾರನ್ನು ಭೇಟಿಯಾಗಿ ಬಂದಿದ್ದರು. ಇವರ ತಂದೆ ಸ್ವಾತಂತ್ರ್ಯ ಹೋರಾಟಗಾರ ಸೇಠ್ ಛಜ್ಜು ರಾಮ್ ಅವರಿಗೆ ಮಗಳು ಐಎಎಸ್​ ಆಗಬೇಕೆಂಬ ಆಸೆ ಇತ್ತು. ಆದರೆ ಎಲ್ಲವನ್ನೂ ಧಿಕ್ಕರಿಸಿ ಮಲ್ಲಿಕಾ ಸಿನಿರಂಗ ಪ್ರವೇಶಿಸಿದವರು. 
 
'ಕಿಸ್ ಕಿಸ್ ಕಿ ಕಿಸ್ಮತ್', 'ಮರ್ಡರ್', 'ಪ್ಯಾರ್ ಕೆ ಸೈಡ್ ಎಫೆಕ್ಟ್ಸ್', 'ಶಾದಿ ಸೆ ಪೆಹ್ಲೆ', 'ವೆಲ್ಕಮ್', 'ಹಿಸ್ಸ್', 'ಡಬಲ್ ಧಮಾಲ್' ಮತ್ತು 'ಬಿನ್ ಬುಲಾಯೆ ಬಾರಾತಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರೋ ಮಲ್ಲಿಕಾ ಕೆಲ ವರ್ಷ ನಾಪತ್ತೆಯಾಗಿದ್ದರು. ನಂತರ  Rk/RKay ಚಿತ್ರದಲ್ಲಿ  ಗುಲಾಬೋ (Gulabo) ಪಾತ್ರ ಮಾಡಿದರು.  ರಜತ್ ಕಪೂರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕುಬ್ರಾ ಸೇಠ್​ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ನಟಿ ಮತ್ತೆ ಕಣ್ಮರೆಯಾಗಿದ್ದಾರೆ. ಮಲ್ಲಿಕಾ ಎಲ್ಲಿಗೆ ಹೋಗಿದ್ದಾರೆ ಎಂಬ ಪ್ರಶ್ನೆಯನ್ನು ಆಕೆಯ ಅಭಿಮಾನಿಗಳು ಕೇಳುತ್ತಿದ್ದಾರೆ. 

ರೇಪ್​ ಕೇಸ್​ನಲ್ಲಿ ಸಿಲುಕಿದ ನಟ ನವಾಜುದ್ದೀನ್ ಸಿದ್ದಿಕಿ: ಪತ್ನಿ ಆಲಿಯಾ ದೂರು
 

click me!